Asianet Suvarna News Asianet Suvarna News

ನಾನು ದೂರ ಹೋಗುವವರೆಗೆ ನನ್ನನ್ನ ನೋಡಿದ್ದರು: ಮೊದಲ ಬಾರಿಗೆ ಲೀಲಾವತಿ ಬಗ್ಗೆ ಮೊಮ್ಮಗ ಯುವರಾಜ್ ಪ್ರತಿಕ್ರಿಯೆ!

ನಮ್ಮ ಅಜ್ಜಿ ಆತ್ಮಕ್ಕೆ ಶಾಂತಿ ಸಿಗಲಿ. ಕೊನೆಯದಾಗಿ ಕೆಲ ದಿನಗಳ ಹಿಂದೆ ಮನೆಗೆ ಬಂದಾಗ ಅಜ್ಜಿಯನ್ನ ನೋಡಿದ್ದೆ. ನಾನು ದೂರ ಹೋಗುವವರೆಗೆ ನನ್ನನ್ನ ನೋಡಿದ್ದರು ಎಂದು ಕಡೆಯ ಭೇಟಿಯ ಬಗ್ಗೆ ಮೊಮ್ಮಗ ಯುವರಾಜ್ ಸ್ಮರಿಸಿದ್ದಾರೆ. 

grandson yuvaraj reacts about sandalwood veteran actress leelavathi gvd
Author
First Published Dec 9, 2023, 8:12 PM IST

ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಲೀಲಾವತಿ ಸೋಲದೇವನಹಳ್ಳಿಯ ತೋಟದಲ್ಲಿ ಇಂದು (ಡಿ.9) ಲೀಲಾವತಿ ಅಂತ್ಯಸಂಸ್ಕಾರ ನೆರವೇರಿದೆ. ಈ ಬೆನ್ನಲ್ಲೇ, ಅಜ್ಜಿ ಲೀಲಾವತಿ ಜೊತೆಗಿನ ಬಾಂಧವ್ಯದ ಬಗ್ಗೆ ಮೊಮ್ಮಗ ಯುವರಾಜ್ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಜ್ಜಿಯ ಜೊತೆ ಒಡನಾಟ ಚೆನ್ನಾಗಿತ್ತು. ನಮ್ಮ ಅಜ್ಜಿ ಆತ್ಮಕ್ಕೆ ಶಾಂತಿ ಸಿಗಲಿ. ಕೊನೆಯದಾಗಿ ಕೆಲ ದಿನಗಳ ಹಿಂದೆ ಮನೆಗೆ ಬಂದಾಗ ಅಜ್ಜಿಯನ್ನ ನೋಡಿದ್ದೆ. ನಾನು ದೂರ ಹೋಗುವವರೆಗೆ ನನ್ನನ್ನ ನೋಡಿದ್ದರು ಎಂದು ಕಡೆಯ ಭೇಟಿಯ ಬಗ್ಗೆ ಮೊಮ್ಮಗ ಯುವರಾಜ್ ಸ್ಮರಿಸಿದ್ದಾರೆ. ಅಂತ್ಯಕ್ರಿಯೆ ಮುಕ್ತಾಯದ ಬಳಿಕ ವಿನೋದ್ ರಾಜ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮುಗಿದಿದೆ. ನಾಳೆ ಹಾಲು ತುಪ್ಪ ಇರಲಿದೆ. 

11 ದಿನದ ಕಾರ್ಯ ಬಗ್ಗೆ ತೀರ್ಮಾನ ಮಾಡಿ ಹೇಳುತ್ತೇವೆ. ಇಡೀ ರಾಜ್ಯದ ಜನತೆಗೆ ಸರ್ಕಾರಕ್ಕೆ ನಮನ ಸಲ್ಲಿಸುತ್ತೇವೆ ಎಂದು ಮಾತನಾಡಿದ್ದಾರೆ. ನಟಿ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ (ಡಿ.8) ನಿಧನರಾಗಿದ್ದಾರೆ. ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಡಿಸೆಂಬರ್ 8ರಂದು ಮಧ್ಯಾಹ್ನ ದಿಢೀರ್ ಅಂತ ಲೋ ಬಿಪಿ ಸಮಸ್ಯೆ ಶುರುವಾಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ಇಹಲೋಕ ತ್ಯಜಿಸಿದ್ದರು.

ನಾಟಕದ ಚಂಚಲಕುಮಾರಿ, ಸಿನಿಮಾದ ಬಿಂಕದ ಸಿಂಗಾರಿ ಲೀಲಾವತಿ: 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ

ಲೀಲಾವತಿ ಕೃಷಿ ಕಾಯಕಕ್ಕೆ ಪ್ರಶಸ್ತಿಯೇ ಸಿಗಲಿಲ್ಲ: ನಟಿ ಲೀಲಾವತಿಯವರು ಕೇವಲ ನಟಿಯಾಗಿ ಮಾತ್ರ ಗುರುತಿಸಿಕೊಂಡಿರಲಿಲ್ಲ. ಅವರ ವ್ಯಕ್ತಿತ್ವಕ್ಕೆ ಇನ್ನೊಂದು ಮುಖವಿತ್ತು. ಆದರೆ, ಹಲವು ಜನರಿಗೆ ಲೀಲಾವತಿಯವರ ಇನ್ನೊಂದು ಮುಖದ ಪರಿಚಯವೇ ಇಲ್ಲ. ನಟಿ ಲೀಲಾವತಿಯವರು ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಮಲಯಾಳಂ ಹಾಗೂ ತುಳು ಭಾಷೆಗಳಲ್ಲಿ ಕೂಡ ನಟಿಸಿ ಅಂದಿನ ಕಾಲಕ್ಕೆ ಸಾಕಷ್ಟು ಹಣ ಸಂಪಾದನೆ ಮಾಡಿದವರು. ಬಹುಭಾಷಾ ನಟಿಯಾಗಿದ್ದ ಲೀಲಾವತಿಯವರು ತಾವು ಸಿನಿಮಾದಿಂದ ಗಳಿಸಿದ ಹಣದಲ್ಲಿ ಚೆನ್ನೈನಲ್ಲಿ ಜಮೀನು ಖರೀದಿಸಿ ಹಣ್ಣು-ತರಕಾರಿ ತೋಟ ಮಾಡಿಕೊಂಡಿದ್ದರು. 

1980 ರಲ್ಲಿ ಲೀಲಾವತಿಯವರು ತಮ್ಮ ಚೆನ್ನೈನ ತೋಟದಲ್ಲಿ ಬೆಳೆದ ತರಕಾರಿ-ಹಣ್ಣುಗಳ ಮಾರಾಟದಿಂದ ದಿನಕ್ಕೆ 12,000 ರೂ. ಗಳಿಸುತ್ತಿದ್ದರಂತೆ. 1980ರಲ್ಲಿ 12 ಸಾವಿರ ರೂಪಾಯಿ ಎಂದರೆ ಇಂದು ಅದು 25 ಲಕ್ಷಕ್ಕೂ ಮೀರಿದ್ದು. ಲೀಲಾವತಿಯವರು ತಾವು ಬೆಳೆದ ಹಣ್ಣು-ತರಕಾರಿಗಳಲ್ಲಿ ಸ್ವಲ್ಪ ಭಾಗ ಮಾತ್ರ ಮಾರಾಟ ಮಾಡಿ ಮಿಕ್ಕಿದ್ದನ್ನು ತಾವು ಹೋಗುತ್ತಿದ್ದ ಶೂಟಿಂಗ್ ಜಾಗಕ್ಕೆ ತೆಗೆದುಕೊಂಡು ಹೋಗಿ ಅಲ್ಲಿದ್ದವರಿಗೆ ಹಂಚುತ್ತಿದ್ದರಂತೆ. ಅಷ್ಟೇ ಅಲ್ಲ, ತಮ್ಮ ಅಕ್ಕಪಕ್ಕದ ಮನೆಗಳಲ್ಲಿ ಅಗತ್ಯ ಇರುವವರಿಗೆ ಹಂಚಿಬಿಡುತ್ತಿದ್ದರಂತೆ. ನಟಿ ಲೀಲಾವತಿಯವರದ್ದು ಚಿಕ್ಕಂದಿನಿಂದಲೂ ತುಂಬಾ ಮಾನವೀಯತೆ ತುಂಬಿದ್ದ ಮನಸ್ಸು ಎನ್ನಲಾಗುತ್ತದೆ. 

Vinod Raj​ಗೆ ಧೈರ್ಯ ತುಂಬಿದ ಆರ್​.ಅಶೋಕ್: ಲೀಲಾವತಿ ಅಪರೂಪದ ಕಲಾವಿದೆ ಎಂದ ಬಿಜೆಪಿ ವಿಪಕ್ಷ ನಾಯಕ

ನಟಿಯಾಗಿ ಲೀಲಾವತಿಯವರು ಎರಡು ರಾಷ್ಟ್ರೀಯ ಪ್ರಶಸ್ತಿ, 6 ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹಲವಾರು ಸಂಘ-ಸಂಸ್ಥೆಗಳಿಂದ ಅವರಿಗೆ ನೂರಾರು ಪ್ರಶಸ್ತಿ-ಪುರಸ್ಕಾರಗಳು ಸಂದಿವೆ. ಆದರೆ, ಸ್ಟಾರ್ ನಟಿಯಾಗಿದ್ದ ಕಾಲದಲ್ಲೇ ಅವರು ಸ್ವತಃ ಮೈಕೈಗೆ ಮಣ್ಣು ತಾಗಿಸಿಕೊಂಡು ಕೃಷಿ ಮಾಡುತ್ತಿದ್ದರೂ ಅವರು ಮಾಡುತ್ತಿರುವ ಕೃಷಿ ವೃತ್ತಿಗೆ, ನಿನ್ನೆ ನಟಿ ಲೀಲಾವತಿಯವರು ಸಾಯುವವರೆಗೂ ಯಾವ ಪ್ರಶಸ್ತಿಯೂ ಸಿಗಲೇ ಇಲ್ಲ. ರೈತರೇ ಇಂದು ಕೃಷಿಯನ್ನು ಮಾಡಲು ಹಿಂದೆಮುಂದೆ ಯೋಚಿಸುತ್ತಿರುವ ಕಾಲದಲ್ಲಿ ನಟಿಯಾಗಿ ಲೀಲಾವತಿ ಕೃಷಿ ಮಾಡಿ ಸಮಾಜಕ್ಕೇ ಮಾದರಿಯಾಗಿದ್ದಾರೆ. 

Follow Us:
Download App:
  • android
  • ios