ಕನ್ನಡ ಚಿತ್ರರಂಗದಲ್ಲಿ  ಪ್ರತಿ ದಿನವು ಉದಯೋನ್ಮುಖ ನಟ, ನಿರ್ದೇಶಕ ಮತ್ತು ನಿರ್ಮಾಪಕ ಹುಟ್ಟಿಕೊಳ್ಳುತ್ತಾರೆ.  ಸ್ಮಾಲ್ ಬಜೆಟ್‌ ಸಿನಿಮಾಗಳು ಗಗನ ಮುಟ್ಟುವಷ್ಟು ಸಂಪಾದನೆ ಮಾಡಿದರೆ ಬಿಗ್‌ ಬಜೆಟ್ ಸಿನಿಮಾಗಳು ಕೆಲವೊಮ್ಮೆ ಮನೆಗೆ ಹೋಗುತ್ತದೆ.  ಇದನ್ನು ಪೂರ್ತಿ ಲಕ್‌ ಎಂದು ಕೆಲವೊಮ್ಮೆ ಹೇಳಲಾಗುತ್ತದೆ.   ಪ್ರೇಕ್ಷಕರು ಕೇವಲ 30 ಲಕ್ಷ ಬಂಡವಾಳದ ಚಿತ್ರವನ್ನು  ಗೆಲ್ಲಿಸಿ 2500 ಕೋಟಿ ಕಲೆಕ್ಷನ್ ಮಾಡಿಸಿದ್ದಾರೆ. 

ಹುಚ್ಚ ವೆಂಕಟ್ ಈ ಸ್ಥಿತಿಗೆ ಬರಲು ಇದೇ ಕಾರಣವಾ?

ಯಾವ ಸಿನಿಮಾ ಇದು? 

2014 ರಲ್ಲಿ  ತೆರೆ ಕಂಡ 'ಹುಚ್ಚ ವೆಂಕಟ್' ಸಿನಿಮಾ ಕೇವಲ 30 ಲಕ್ಷ ಬಜೆಟ್‌ನಲ್ಲಿ ತೆರೆ ಕಂಡಿತ್ತು. ಮತ್ತು ರಿಲೀಸ್ ಆದ ಕೆಲವೇ ದಿನಗಳಲ್ಲಿ  2500 ಕೋಟಿ ಕಲೆಕ್ಷನ್‌ ಮಾಡಿತ್ತು. ಇದನ್ನು ನಾವು ಹೇಳುತ್ತಿಲ್ಲ ಗೂಗಲ್‌ ವಿಕಿಪೀಡಿಯಾ ಮಾಹಿತಿ ನೀಡುತ್ತಿದೆ. ಈ ಚಿತ್ರದಲ್ಲಿ  ವೆಂಕಟ್‌ಗೆ ಜೋಡಿಯಾಗಿ ನಟಿ ಕವಿತಾ ಬಿಸ್ತ್ ಮಿಂಚಿದ್ದಾರೆ.

ಚಿತ್ರದ ಹೆಸರು ಕೇಳಿದಾಕ್ಷಣ ಯಾವುದಪ್ಪಾ ಇದು ಅಂತ ಒಮ್ಮೆ ಮೌನವಾಗುತ್ತಿರಾ? ಆದರೆ ಇದರ ಡೈಲಾಗ್‌ 'ನನ್ನ ಎಕ್ಕಡ', ;ನನ್ ಮಗಂದ್' ಮತ್ತು 'ಸಾಯಿಸಿಬಿಡ್ತಿನಿ' ಕೇಳಿದ್ರೆ ಖಂಡಿತಾ ಜ್ಞಾಪಕ ಬರುತ್ತದೆ.  ಈ ಚಿತ್ರದ ಹಾಡುಗಳನ್ನು ವಿ.ನಾಗೇಂದ್ರ ಪ್ರಸಾದ್ ಮತ್ತು ಕೆ.ಕಲ್ಯಾಣ ಸಂಯೋಜನೆ ಮಾಡಿದ್ರೆ  ರಾಜೇಶ್‌ ಕೃಷ್ಣನ್ ಧ್ವನಿಯಾಗಿದ್ದಾರೆ.

'ಹುಚ್ಚ' ವೆಂಕಟ್‌ಗೆ ನಾನು ಮಾಡಿದ ದೊಡ್ಡ ಉಪಕಾರವಿದು: ಪ್ರಥಮ್

'ಹುಚ್ಚ ವೆಂಕಟ್' ಚಿತ್ರ ರಿಲೀಸ್‌ ಸಮಯದಲ್ಲಿ ಒಂದು ಕಾಂಟ್ರವರ್ಸಿ ಹುಟ್ಟುಕೊಂಡಿತ್ತು.  ಅದುವೇ ವೆಂಕಟ್ ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾರನ್ನು ಮದುವೆ ಆಗಿರುವುದಾಗಿ.  ಈ ವಿವಾದ ನಡುವೆ ಚಿತ್ರ ತೆರೆ ಕಂಡದ್ದೇ ಗೊತ್ತಾಗಿಲ್ಲ!