2005 ರಲ್ಲಿ ‘ಮೆಂಟಲ್ ಮಂಜ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ವೆಂಕಟರಾಮ್ ಲಕ್ಷ್ಮಣ್ ಅಲಿಯಾಸ್ ಹುಚ್ಚ ವೆಂಕಟ್ ನಂತರ ಕಾಣಿಸಿಕೊಳ್ಳುವುದು ‘ಸ್ವತಂತ್ರ ಪಾಳ್ಯ’ ಚಿತ್ರದಲ್ಲಿ. ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಹೆಸರ ಮಾಡಬೇಕೆಂದು ‘ಹುಚ್ಚ ವೆಂಕಟ್’ ಚಿತ್ರದ ಮೂಲಕ ನಟನಾಗಿ ಹಾಗೂ ನಿರ್ದೇಶನಕ್ಕೂ ಇಳಿಯುತ್ತಾರೆ.

ಮಡಿಕೇರಿ,ಮೈಸೂರು ಆಯ್ತು ಮಂಡ್ಯದಲ್ಲೂ ಹುಚ್ಚ ವೆಂಕಟ್ ಹುಚ್ಚಾಟ

ಸಿನಿಮಾ ತೆರೆಕಂಡು ಕೆಲ ದಿನಗಳಾದರೂ ಯಾರೊಬ್ಬನೂ ಸಿನಿಮಾ ವೀಕ್ಷಿಸಲು ಬರುವುದಿಲ್ಲ. ಇದರಿಂದ ಮನನೊಂದ ವೆಂಕಟ್ ಕನ್ನಡ ಚಿತ್ರರಂಗದ ಅಭಿಮಾನಿಗಳಿಗೆ ಬೈಯುತ್ತಾರೆ. ಆ ಬೈಗುಳದ ಮಾತುಗಳು ವೈರಲ್ ಆಗಿದ್ದು ಅಲ್ಲಿಂದ ಅಭಿಮಾನಿಗಳಿಗೆ ‘ಹುಚ್ಚ ವೆಂಕಟ್’ ಚಿತ್ರದ ಹೀರೋ ಯಾರೆಂದು ಕುತೂಹಲ ಹುಟ್ಟಿಕೊಳ್ಳುತ್ತದೆ.

'ಹುಚ್ಚ' ವೆಂಕಟ್‌ಗೆ ನಾನು ಮಾಡಿದ ದೊಡ್ಡ ಉಪಕಾರವಿದು: ಪ್ರಥಮ್

ಆಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟ ವೆಂಕಟ್ ಮಾತು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತದೆ. ಮಾಧ್ಯಮಗಳು ವೆಂಕಟ್ ಬೆನ್ನಹಿಂದೆ ಬಿದ್ದವು. ಅಲ್ಲಿಗೆ ನಿಲ್ಲದೇ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಾಲಿಟ್ಟರು. ಆನಂತರ ಮತ್ತೊಂದು ಸೀಸನ್ ಮೂಲಕ ಎಂಟ್ರಿ ಕೊಟ್ಟ ಸ್ಪರ್ಧಿಗೆ ಒದೆಯುವ ವಿಡಿಯೋ ಅವರ ಹೆಸರಿಗೆ ಇನ್ನಷ್ಟು ಧಕ್ಕೆ ತಂದಿತ್ತು. ಹೀಗೆ ಒಂದಾದ ಮೇಲೊಂದು ಕಾರಣಗಳು ಸೇರುತ್ತಾ ಸೇರುತ್ತಾ ಮಾಧ್ಯಮಗಳು ಹಾಗೂ ಜನರ ಮಾತುಗಳು ಇವರ ಮನಸ್ಸಿನ ಮೇಲೆ ಪರಿಣಾಮ ಬಿದ್ದಿರುವ ಸಾಧ್ಯತೆ ಇದೆ. ಈ ಒತ್ತಡದಿಂದಲೇ ಇಂತಹ ಪರಿಸ್ಥಿತಿಗೆ ಬಂದಿದ್ದಾರೆ ಎಂದು ಹೇಳಲಾಗಿದೆ.