ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ 99 ಟ್ರೇಲರ್ ರಿಲೀಸಾಗಿದೆ. ಗಣೇಶ್ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ನೋಡಿ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. 

ನಿರ್ಮಾಪಕರು ರೆಡಿ ಇದ್ರೂ ಈ ತಾರೆಯರಿಗೆ ಪುರುಸೊತ್ತಿಲ್ಲ!

99 ಸಿನಿಮಾ ಅಪ್ಪಟ ಲವ್ ಓರಿಯೆಂಟೆಡ್ ಸಿನಿಮಾ. ಇದು ತಮಿಳಿನ 96 ಸಿನಿಮಾದ ರಿಮೇಕ್. ಅಲ್ಲಿ ವಿಜಯ್ ಸೇತುಪತಿ ಮತ್ತು ತ್ರಿಷಾ ನಟಿಸಿದ್ದಾರೆ. ಇಲ್ಲಿ ಗಣೇಶ್ ಹಾಗೂ ಭಾವನಾ ನಟಿಸಿದ್ದಾರೆ. 

ಪ್ರೀತಂ ಗುಬ್ಬಿ ಈ ಚಿತ್ರವನ್ನು ನಿರ್ದೇಶಿಸಿದ್ದು ರಾಮು ಫಿಲಂಸ್ ನಿರ್ಮಾಣ ಮಾಡಿದೆ. ಈ ಚಿತ್ರದಲ್ಲಿ ಏಳು ಹಾಡುಗಳಿದ್ದು ಕವಿರಾಜ್ ಸಾಹಿತ್ಯವಿದೆ. ಅರ್ಜುನ್ ಜನ್ಯ ಸಂಗೀತದ ಮೋಡಿಯಿದೆ. 

 

 

ಕಿಚ್ಚ ಸುದೀಪ್ ವಿಶ್ 

ಈ ಚಿತ್ರದ ಟ್ರೇಲರ್ ನೋಡಿ ಕಿಚ್ಚ ಸುದೀಪ್ ಫುಲ್ ಖುಷ್ ಆಗಿದ್ದಾರೆ. ಈ ಟ್ರೇಲರ್ ನೋಡಿದಾಗ ನನಗೆ ಮೈ ಆಟೋಗ್ರಾಫ್ ಸಿನಿಮಾ ನೆನಪಾಯಿತು. ನಿರ್ದೆಶಕ ಪ್ರೀತಂ ಗುಬ್ಬಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಗಣೇಶ್ ಈ ಸಿನಿಮಾದಲ್ಲಿ ತುಂಬಾ ಇಷ್ಟವಾಗುತ್ತಾರೆ. ನನಗೆ ಈ ಟ್ರೇಲರ್ ನಲ್ಲಿ ಎಲ್ಲವೂ ಇಷ್ಟವಾಗಿದೆ. ಸಿನಿಮಾ ನೋಡಲು ಕಾತರನಾಗಿ ಕಾಯುತ್ತಿದ್ದೇನೆ’ ಎಂದು ಹೇಳಿದ್ದಾರೆ.