Asianet Suvarna News Asianet Suvarna News

Vedha ಶಿವರಾಜ್‌ಕುಮಾರ್ ಜೊತೆ ಆ ಇಬ್ಬರು ಹೆಣ್ಣು ಮಕ್ಕಳಿಗೆ ಹೆಸರು ಬಂದಿದ್ದು ನನಗೆ ಖುಷಿ ಇದೆ: ಗೀತಾ

ಅಭಿಮಾನಿಗಳ ಜೊತೆ ವೇದ ಸಿನಿಮಾ ನೋಡಿ ಫುಲ್ ಖುಷ್ ಆದ ಗೀತಾ ಶಿವರಾಜ್‌ಕುಮಾರ್. 125ನೇ ಸಿನಿಮಾ ಹೇಗೆ ಕೈ ಸೇರಿತ್ತು ಎಂದು ಗೊತ್ತಿಲ್ಲ ಎಂದಿದ್ದಾರೆ....
 

Geetha Shivarajkumar talks about Vedha first day audiance reaction vcs
Author
First Published Dec 23, 2022, 9:53 PM IST

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯಿಸಿರುವ ವೇದ ಸಿನಿಮಾ ಇಂದು ರಾಜ್ಯಾದ್ಯಂತ ಅದ್ಧೂರಿ ಪ್ರದರ್ಶನ ಕಂಡಿದೆ. ಶಿವಣ್ಣ 125ನೇ ಸಿನಿಮಾ ಫಸ್ಟ್‌ ಡೇ ಫಸ್ಟ್‌ ಶೋ ಸೂಪರ್ ಡೂಪರ್ ಆಗಿದೆ. ಡಿಫರೆಂಟ್‌ ಕಥೆ ಶಿವಣ್ಣ ಹೊಸ ಲುಕ್ ಹಾಗೂ ಮಾಸ್ ಅಕ್ಟಿಂಗ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಶಿವಣ್ಣ ಪತ್ನಿ ಗೀತಾ ಶಿವರಾಜ್‌ಕುಮಾರ್ ವೇದ ಸಿನಿಮಾ ನಿರ್ಮಾಣ ಮಾಡುವ ಮೂಲಕ ತಮ್ಮ ನಿರ್ಮಾಣ ಸಂಸ್ಥೆ ಗೀತಾ ಪಿಕ್ಚರ್ ಲಾಂಚ್ ಮಾಡಿದ್ದಾರೆ. ಅಭಿಮಾನಿಗಳ ಜೊತೆ ಫಸ್ಟ್‌ ಡೇ ಫಸ್ಟ್ ಶೋ ನೋಡಿ ಏನ್ ಹೇಳಿದ್ದಾರೆ ನೋಡಿ...

ಗೀತಾ ಮಾತು: 

'ಫಸ್ಟ್‌ ಡೇ ಫಸ್ಟ್‌ ಶೋಗೆ ಒಳ್ಳೆ ರಿಪೋರ್ಟ್‌ಗಳು ಬಂದಿದೆ. ಶಿವರಾಜ್‌ಕುಮಾರ್ ಜೊತೆ ಅದಿತಿ ಸಾಗರ್ ಮತ್ತು ಗಾನವಿ ಇಬ್ಬರಿಗೂ ತುಂಬಾನೇ ಒಳ್ಳೆಯ ಹೆಸರು ಬಂದಿದೆ. ಆ ಇಬ್ಬರು ಹೆಣ್ಣು ಮಕ್ಕಳಿಗೆ ಹೆಸರು ಬಂದಿರುವುದು ತುಂಬಾನೇ ಇಷ್ಟ ಏಕೆಂದರೆ ಶ್ರಮಪಟ್ಟು ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ.ಶಿವರಾಜ್‌ಕುಮಾರ್ ಅವರ ಸಮಕ್ಕೆ ನಿಂತುಕೊಂಡು ಆಕ್ಟ್‌ ಮಾಡಬೇಕು ಅಂದ್ರೆ ಸ್ವಲ್ಪ ಕಷ್ಟನೇ ಆದರೂ ಅವರು ತುಂಬಾ ಚೆನ್ನಾಗಿ ಆಕ್ಟ್‌ ಮಾಡಿದ್ದಾರೆ. ನಾನು ಯಾವತ್ತೂ ಸಿನಿಮಾ ರಿಲೀಸ್‌ಗೆ ಭಯ ಪಟ್ಟಿರಲಿಲ್ಲ ಹೆದರಿಕೊಂಡಿರಲಿಲ್ಲ ಟೆನ್ಶನ್‌ ತೆಗೆದುಕೊಂಡಿರಲಿಲ್ಲ ನನಗೆ ಗೊತ್ತಿತ್ತು ಇದರಲ್ಲಿ ಒಳ್ಳೆ ವಿಮರ್ಶೆ ಬಂದೇ ಬರುತ್ತದೆ ಎಂದು. ಮಕ್ಕಳು ಮತ್ತು ಶಿವರಾಜ್‌ಕುಮಾರ್ ಅವರಿಗೆ ಒಳ್ಳೆಯ ಆಗುತ್ತದೆ ಎಂದು ನನಗೆ ಗೊತ್ತಿತ್ತು ನನ್ನ ಮನಸ್ಸಿಗೆ ಅನಿಸುತ್ತಿತ್ತು ಹೀಗಾಗಿ ಇವತ್ತು ತುಂಬಾ ಖುಷಿಯಾಗಿರುವೆ' ಎಂದು ಮಾತನಾಡಿದ್ದಾರೆ.

Geetha Shivarajkumar talks about Vedha first day audiance reaction vcs

'125ನೇ ಸಿನಿಮಾ ಹೇಗೆ ನಮ್ಮ ಕೈಗೆ ಸೇರಿತು ಅನ್ನೋದು ನಮಗೆ ಗೊತ್ತಿಲ್ಲ ಏಕೆಂದರೆ ಮೊದಲು ಸಿನಿಮಾದ ಮುಹೂರ್ತನೂ ಆಗಿತ್ತು ಬೇರೆ ಯಾವುದೋ ಕಾರಣದಿಂದ ಟೇಕ್ ಆಫ್ ಆಗಲಿಲ್ಲ ಮತ್ತೊಬ್ಬರು ನಿರ್ಮಾಪಕರು ಬಂದರು ಮೂರನೇದಾಗಿ ನಾವೇ ಮಾಡುತ್ತೀವಿ ಎಂದು ಹೇಳಿದಾಗ ಅವರು ಬೇಡ ಎಂದು ಹೇಳಲಿಲ್ಲ. ಇದು ನಮ್ಮ ಅದೃಷ್ಟ ತುಂಬಾ ತುಂಬಾ ಸಂತೋಷ ಆಯ್ತು. ಇಲ್ಲಿಗೆ ಬಂದು ಹೆಣ್ಣು ಮಕ್ಕಳು ಮಡಲಕ್ಕಿ ತುಂಬಿಸಿದ್ದು ಖುಷಿ ಆಯ್ತು ಇದು ನಮ್ಮ ಸಂಪ್ರದಾಯ. ಊರ ಕಡೆ ಇದೆಲ್ಲಾ ಇದೆ ಇಲ್ಲಿ ಮಾಡಿದ್ದು ನನ್ನ ಮನಸ್ಸಿಗೆ ಖುಷಿ ಕೊಟ್ಟಿದೆ' ಎಂದು ಹೇಳಿದ್ದಾರೆ.

Vedha Movie: ಇಂದಿನಿಂದ ಬೆಳ್ಳಿತೆರೆಯಲ್ಲಿ 'ವೇದ'ನ ಘರ್ಜನೆ: ದಾಖಲೆ ಬರೆದ ಶಿವಣ್ಣನ ಅಭಿಮಾನಿಗಳು

ವೇದ ಸಿನಿಮಾ ರಿಲೀಸ್‌ಗೂ ಮುನ್ನ ಮನೆಯಲ್ಲಿ ಒಂದು ಪ್ರೆಸ್‌ಮೀಟ್ ಮಾಡಲಾಗಿತ್ತು. ಆಗ ಮಾತನಾಡಿದ ಗೀತಾ 'ನಿರ್ದೇಶಕ ಎ ಹರ್ಷ ಎಲ್ಲವನ್ನು ಹೇಳಿಕೊಡುತ್ತಿದ್ದರು. ಹೀಗಾಗಿ ನನಗೆ ಸಿನಿಮಾ ನಿರ್ಮಾಣದ ಕಷ್ಟಗಳು ಗೊತ್ತಾಗಲಿಲ್ಲ. ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬರು ನಮ್ಮ ಮನೆಯ ಕುಟುಂಬದವರಂತೆ ಆಗಿದ್ದಾರೆ. ಮನೆಮಂದಿ ಸೇರಿ ಮಾಡಿರುವ ಸಿನಿಮಾ ಇದು’ ಎಂದರು.

ವೇದ ನೆಟ್ಟಿಗರ ವಿಮರ್ಶೆ:

ವೇದ ಚಿತ್ರದಲ್ಲಿ  ಶಿವಣ್ಣ ಜೊತೆಗೆ ನಾಯಕಿಯಾಗಿ ಗಾನವಿ ನಟಿಸಿದ್ದಾರೆ. ಇನ್ನೂ ಶ್ವೇತಾ ಚಂಗಪ್ಪ ಮತ್ತು ಅದಿತಿ ಸಾಗರ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಈ ಸಿನಿಮಾ ನೋಡಿ ಅಭಿಮಾನಿಯೊಬ್ಬ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.  ಮೊದಲ ಅರ್ಥ ಸ್ವಲ್ಪ ನಿಧಾನವಾಗಿದೆ. ಇಂಟರ್‌ವಲ್ ಬೆಂಕಿ. ಎರಡನೇ ಭಾಗ ಸಖತ್ ಕ್ರೂರವಾಗಿದೆ. ಅನಗತ್ಯ ಹಾಡುಗಳು ಮತ್ತು ಕಾಮಿಡಿ ಕಥೆಯ ಗತಿಯನ್ನೇ ಬದಲಾಯಿಸಿದೆ. ಹಳೆಯ ವಿಷಯಕ್ಕೆ ಹೊಸ ಟಚ್ ನೀಡಲಾಗಿದೆ' ಎಂದು ಹೇಳಿದ್ದಾರೆ.'ಎ ಹರ್ಷ ಅವರು ಸಮಾಜಕ್ಕೆ ಬಲವಾದ ಸಂದೇಶವನ್ನು ಬೃಹತ್ ಆಕ್ಷನ್ ರೀತಿಯಲ್ಲಿ ರವಾನಿಸಿದ್ದಾರೆ. ಇದು ಸಂಪೂರ್ಣ ಸಿನಿಮಾ ಅದ್ಭುತವಾಗಿ ಕೆಲಸ ಮಾಡಿದೆ. ಅದ್ಭುತವಾಗಿ ನಟಿಸಿದ್ದಾರೆ' ಎಂದು ಹೇಳಿದ್ದಾರೆ.

Follow Us:
Download App:
  • android
  • ios