ಅನುಶ್ರೀಗೆ ನಾನೇ ಹುಡುಗ ಹುಡ್ಕಿ ಮದ್ವೆ ಮಾಡಿಸುತ್ತೀನಿ; ಮದುವೆ ಬಗ್ಗೆ ಪ್ರಶ್ನಿಸಿದ ಪತ್ನಿ ಗೀತಾಗೆ ಶಿವಣ್ಣ ಉತ್ತರ

ವೇದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅನುಶ್ರೀ ಬಗ್ಗೆ ಚರ್ಚೆ ಮಾಡಿದ ಹ್ಯಾಟ್ರಿಕ್ ಕಪಲ್...

Geetha Shivarajkumar talks about kannada anchor Anushree marriage vcs

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟಿಸಿರುವ ವೇದ ಸಿನಿಮಾ ಡಿಸೆಂಬರ್ 23ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಶಿವಣ್ಣ ನಟನೆಯ 125ನೇ ಸಿನಿಮಾ ಇದಾಗಿದ್ದು, ಈ ಚಿತ್ರದ ಮೂಲಕ ಪತ್ನಿ ಗೀತಾ ಶಿವರಾಜ್‌ಕುಮಾರ್ ನಿರ್ಮಾಪಕಿಯಾಗಿ ಗೀತಾ ಪಿಕ್ಚರ್ಸ್‌ ಆರಂಭಿಸಿದ್ದಾರೆ. ಗೀತಾ ಶಿವರಾಜ್‌ಕುಮಾರ್ ಹುಟ್ಟುಹಬ್ಬದ ದಿನವೇ ವೇದ ಸಿನಿಮಾ ಅನೌನ್ಸ್‌ ಮಾಡಲಾಗಿತ್ತು ಹಾಗೇ ಗೀತಾ ಪಿಕ್ಚರ್ ಲೋಗೋ ರಿವೀಲ್ ಮಾಡಿದ್ದರು. ಈಗಾಗಲೆ ವೇದ ಚಿತ್ರದ ಮೂರು ಪ್ರೀ- ರಿಲೀಸ್ ಕಾರ್ಯಕ್ರಮಗಳು ನಡೆದಿದೆ. ನಾಲ್ಕನೇ ಕಾರ್ಯಕ್ರಮ ಚಿತ್ರದುರ್ಗದಲ್ಲಿ ನಡೆದಿದ್ದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. 

ಕಾರ್ಯಕ್ರಮದ ಮತ್ತೊಂದು ಹೈಲೈಟ್ ಏನೆಂದರೆ ಶಿವಣ್ಣ ಮತ್ತು ಗೀತಕ್ಕೆ ವೇದಿಕೆ ಮೇಲೆ ನಿಂತು ಒಬ್ಬರನ್ನೊಬ್ಬರು ಪ್ರಶ್ನೆ ಮಾಡಿದ್ದು. ಈ ಕಾರ್ಯಕ್ರಮದ ನಿರೂಪಕಿಯಾಗಿದ್ದ ಅನುಶ್ರೀಗೂ ಪ್ರಶ್ನೆ ಕೇಳಬೇಕು ಎಂದು ಪ್ಲ್ಯಾನ್ ಮಾಡಿಕೊಳ್ಳುತ್ತಾರೆ. ಆಗ ಶಿವಣ್ಣ ಸಣ್ಣ ಪ್ಲ್ಯಾನ್ ಮಾಡಿ ಪ್ರಶ್ನೆಯನ್ನು ಪತ್ನಿ ಕಿವಿಯಲ್ಲಿ ಹೇಳುತ್ತಾರೆ. 'ಅನುಶ್ರೀ ಯಾಕೆ ಮದ್ವೆ ಆಗಿಲ್ಲ ಯಾರನ್ನು ಮದ್ವೆ ಆಗ್ತಾರೆ' ಎಂದು ಗೀತಾ ಶಿವರಾಜ್‌ಕುಮಾರ್ ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆ ಕೇಳಿ ಅನು ನಾಚಿ ನೀರಾಗಿದ್ದಾರೆ.

'ಏನ್ ಶಿವಣ್ಣ ನೀವು ಈ ರೀತಿ ಪ್ರಶ್ನೆ ಕೇಳಿದ್ದೀರಿ. ನಾನು ಯಾವಾಗ ಮದುವೆ ಆಗ್ತೀನಿ? ಯಾವಾಗ ಯೂಟ್ಯೂಬ್‌ ಚಾನೆಲ್‌ಗಳು ನನಗೆ ದಿನಕ್ಕೊಂದು ಅಥವಾ ವಾರಕ್ಕೊಂದು ಮದುವೆ ಮಾಡಿಸುವುದನ್ನು ನಿಲ್ಲಿಸುತ್ತಾರೆ ಆಗ ನಾನು ನಿಜ ಜೀವನದಲ್ಲಿ ಮದುವೆ ಆಗುತ್ತೀನಿ' ಎಂದು ಹೇಳಿದ್ದಾರೆ. ಪಕ್ಕದಲ್ಲಿದ್ದ ಶಿವಣ್ಣ ತಕ್ಷಣವೇ 'ಅನುಶ್ರೀಗೆ ನಾನೇ ಗಂಡು ಹುಡುಕುತ್ತೀನಿ ನಾನೇ ಮದುವೆ ಮಾಡಿಸುತ್ತೀನಿ' ಎಂದು ಹೇಳುತ್ತಾರೆ. 'ಹೌದಾ ಶಿವಣ್ಣ ಖಂಡಿತಾ ಮಾಡಿ' ಎಂದು ಅನು ಗ್ರೀನ್ ಸಿಗ್ನಲ್ ಕೊಡುತ್ತಾರೆ. ಈ ಕಾರ್ಯಕ್ರಮದ ಮೂಲಕ ಅನುಶ್ರೀ ಮದುವೆ ಆಗಲು ರೆಡಿದ್ದಾರೆ ಅನ್ನೋ ಮಾಹಿತಿ ಮಾತ್ರ ಕನ್ಫರ್ಮ್ ಆಗಿದೆ. 

Geetha Shivarajkumar talks about kannada anchor Anushree marriage vcs

ಅನುಶ್ರೀ ಮದುವೆ?

ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಅನುಶ್ರೀ ಮದುವೆ ಯಾವಾಗ? ಯಾರನ್ನು ಪ್ರೀತಿಸುತ್ತಿದ್ದಾರೆ? ಯಾಕೆ ಮದುವೆ ಆಗುತ್ತಿಲ್ಲ? ಯಾರನ್ನು ಮದುವೆ ಮಾಡಿಕೊಳ್ಳುತ್ತಾರೆ? ಮದುವೆ ಆಗಿ ಮಕ್ಕಳಿದ್ದಾರಾ? ಹೀಗೆ ದಿನಕ್ಕೊಂದು ವಿಭಿನ್ನ ಪ್ರಶ್ನೆ ಮೂಲಕ ಯೂಟ್ಯೂಬ್‌ ಚಾನೆಲ್‌ಗಳಲ್ಲಿ ಹೊಸ ವಿಡಿಯೋ ಹುಟ್ಟಿಕೊಳ್ಳುತ್ತದೆ. ಅರಂಭದಲ್ಲಿ ತೆಲೆ ಕೆಡಿಸಿಕೊಂಡು ಸ್ಪಷ್ಟನೆ ಕೊಡುತ್ತಿದ್ದರು ಆನಂತರ ಅಯ್ಯೋ ಸಾಕಪ್ಪ ಎಷ್ಟು ಸಲ ಹೇಳುವುದು ಎಂದು ಜನರ ಕಲ್ಪನೆಗೆ ಬಿಟ್ಟರು. ನಿರೂಪಣೆ ಜೊತೆಗೆ ಅನುಶ್ರೀ ಯೂಟ್ಯೂಬ್ ಚಾನೆಲ್‌ ಕೂಡ ಆರಂಭಿಸಿದ್ದಾರೆ. ತಮ್ಮ ಚಾನೆಲ್‌ಗಳಲ್ಲಿ ಕನ್ನಡ ಸಿನಿಮಾಗಳ ಪ್ರಚಾರ ಮಾಡುತ್ತಾರೆ, ವಿಭಿನ್ನ ಸಂದರ್ಶನಗಳಿಗೆ ಸಿಕ್ಕಾಪಟ್ಟೆ ಫೇಮಸ್. 

ದುಬೈನಲ್ಲಿ ಒಂಟಿಯಾಗಿ ನಿಂತಾಗ ಅಪ್ಪು ಸರ್‌ ಊಟಕ್ಕೆ ಕರೆದುಕೊಂಡು ಹೋಗಿದ್ರು: ಅನುಶ್ರೀ ಭಾವುಕ

ಗೀತಾ ಶಿವರಾಜ್‌ಕುಮಾರ್ ಹೊಸ ಬ್ಯುಸಿನೆಸ್:

ಗೀತಾ ಶಿವರಾಜ್ ಮತ್ತು ಮಗಳು ನಿವೇದಿತಾ ಶಿವರಾಜ್ ಕುಮಾರ್ ಇಬ್ಬರೂ ಸೇರಿ ಶುರು ಮಾಡಿರುವ ಬೇಕಿಂಗ್ ಪ್ರಾಡೆಕ್ಟ್ ಗೆ ಏಂಜೆಲ್ಸ್ ಎಂದು ಹೆಸರಿಟ್ಟಿದ್ದಾರೆ. 'ಏಂಜೆಲ್ಸ್‌; ದಿ ಟೇಸ್ಟ್‌ ಆಫ್‌ ಪ್ಯಾರಡೈಸ್‌' ಎನ್ನುವ ಹೆಸರಿನಲ್ಲಿ ಫುಡ್ ಪ್ರಾಡೆಕ್ಟ್ ಶುರುಮಾಡಿದ್ದಾರೆ. ಈಗಾಗಲೇ ಶಿವರಾಜ್‌ ಕುಮಾರ್‌ ಸಿನಿಮಾ ಸೆಟ್‌ ನಲ್ಲಿ ಕೆಲಸ ಮಾಡೋ ಪ್ರತಿಯೊಬ್ಬರು ಕೂಡ ಗೀತಾ ಶಿವರಾಜ್‌ ಕುಮಾರ್‌ ಅವರು ಕುಕ್‌ ಮಾಡಿರೋ ಬೇಕಿಂಗ್‌ ಫುಡ್‌ ಸವಿದು ನೂರಕ್ಕೆ ನೂರು ಮಾರ್ಕ್ಸ್‌ ಕೊಟ್ಟಿದ್ದಾರೆ. ಇನ್ನೇನ್ನಿದ್ದರೂ ಇದು ದೊಡ್ಡ ಬ್ರ್ಯಾಂಡ್‌ ಆಗಿ ಸಾರ್ವಜನಿಕರಿಗೆ ಸಿಗುವಂತಾಗೋದಷ್ಟೇ ಬಾಕಿ ಇದೆ. 

Latest Videos
Follow Us:
Download App:
  • android
  • ios