Asianet Suvarna News Asianet Suvarna News

ಹುಡ್ಗೀರು ಅಣ್ಣ ಅಂದ್ರೆ ಕೋಪ ಬರಲ್ಲ; ಪತ್ನಿ ಗೀತಾ ಕೇಳಿದ ಪ್ರಶ್ನೆಗೆ ಶಿವಣ್ಣ ಕಕ್ಕಾಬಿಕ್ಕಿ

ಲಕ್ಷಾಂತರ ಜನರ ನಡುವೆ ಪಟಪಟ ಪ್ರಶ್ನೆ ಕೇಳಿದ ಗೀತಾ ಶಿವರಾಜ್‌ಕುಮಾರ್. ವೇದಿಕೆಯ ಮೇಲೆ ನಾಚಿಕೊಂಡ ಶಿವಣ್ಣ

Geetha Shivarajkumar rapid fire with husband actor shivarajkumar in geetha film promotion vcs
Author
First Published Dec 17, 2022, 4:32 PM IST

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ 125ನೇ ಸಿನಿಮಾ ವೇದ ಡಿಸೆಂಬರ್ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸಿನಿಮಾ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದ್ದು, ಚಿತ್ರದುರ್ಗದಲ್ಲಿ ನಾಲ್ಕನೇ ಪ್ರಚಾರ ಕಾರ್ಯಕ್ರಮ ನಡೆದಿದೆ. ಚಿತ್ರದುರ್ಗದ ಕಾರ್ಯಕ್ರಮಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷ ಅತಿಥಿಯಾಗಿ ಆಮಿಸಿದ್ದರು. ಕಾರ್ಯಕ್ರಮದ ಪ್ರಮುಕ ಹೈಲೈಟ್ ರ್ಯಾಪಿಡ್ ಫಯರ್. ಪತ್ನಿ ಗೀತಾ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಶಿವಣ್ಣ...

'ಎಲ್ಲರಿಗೂ ನಮಸ್ಕಾರ  ಸಿನಿ ಜನತೆಗೆ ನಮಸ್ಕಾರ. ನನಗೆ ಚಿತ್ರದುರ್ಗ ಹೊಸದಲ್ಲ ಏಕೆಂದರೆ ಇಲ್ಲಿ ನಡೆಯುತ್ತಿರುವ ನಾಲ್ಕನೇ  ಫಂಕ್ಷನ್ ನಮ್ದು. ಚಿತ್ರ ದುರ್ಗದಲ್ಲಿ ನಡೆಯುವ ಎಲ್ಲಾ ಸಿನಿಮಾ ಕಾರ್ಯಕ್ರಮಗಳು ಹಿಟ್ ಆಗಿದೆ. ನಮ್ಮ 125ನೇ ಸಿನಿಮಾ ಹಿಡಿದು ನಿಮ್ಮ ಮುಂದೆ ಬಂದಿದ್ದೀವಿ ಎಲ್ಲರೂ ಹರಿಸಬೇಕು' ಎಂದು ಗೀತಾ ಶಿವರಾಜ್‌ಕುಮಾರ್ ಮಾತನಾಡಿದ್ದಾರೆ. 

ಗೀತಾ: ನಾನು ಕೇಳಿದ ಪ್ರಶ್ನೆಗಳಿಗೆ ತಕ್ಷಣ ಉತ್ತರ ಕೊಡಬೇಕು ತಡ ಮಾಡುವಂತಿಲ್ಲ. ಇಂಟರ್ವ್ಯೂ ಅಂದ್ರೆ ನಿಮಗೆ ಯಾವಾಗಲೂ ಎನರ್ಜಿ ಇರುತ್ತದೆ ಆದರೆ ಇವತ್ತು ಯಾಕೆ ನರ್ವಸ್ ಆಗುತ್ತಿದ್ದೀರಾ 

ಶಿವಣ್ಣ: ಬೇರೆ ಅವರು ಪ್ರಶ್ನೆ ಕೇಳಿದಾಗ ಉತ್ತರ ಕೊಡಬಹುದು ಆದರೆ ನೀವು ಕೇಳಿದಾಗ ಸ್ವಲ್ಪ ಭಯ ಆಗುತ್ತೆ.

ಅನುಶ್ರೀಗೆ ನಾನೇ ಹುಡುಗ ಹುಡ್ಕಿ ಮದ್ವೆ ಮಾಡಿಸುತ್ತೀನಿ; ಮದುವೆ ಬಗ್ಗೆ ಪ್ರಶ್ನಿಸಿದ ಪತ್ನಿ ಗೀತಾಗೆ ಶಿವಣ್ಣ ಉತ್ತರ

ಗೀತಾ: ನಾನು ನಿಮ್ಮನ್ನು ಬಿರುದು ಸಮೇತ ಕರೆಯಬೇಕು ಅಂದ್ರೆ ಏನೆಂದು ಕರೆಯಬೇಕು? ಹ್ಯಾಟ್ರಿಕ್ ಹೀರೋ ಅಥವಾ ಕರುನಾಡ ಚಕ್ರವರ್ತಿ ಬಿಟ್ಟು ಬೇರೆ ಹೇಳಿ 

ಶಿವಣ್ಣ: ಡಾಡ.....ನನ್ನ ದೊಡ್ಡ ಮಗಳು ಡ್ಯಾಡಿ ಎಂದು ಕರೆಯುತ್ತಿರಲಿಲ್ಲ. ನನ್ನ ಹೆಂಡತಿ ಡಾರ್ಲಿಂಗ್ ಎಂದು ಹೇಳುತ್ತಿದ್ದರು ಅದರಿಂದ ಡಾಡ ಅಂತಾರೆ.

ಗೀತಾ: ನಿರ್ಮಾಪಕರ ಜೊತೆ ನೀವು ಸಾಮಾನ್ಯವಾಗಿ ಏನು ಸುಳ್ಳು ಹೇಳುತ್ತೀರಾ?

ಶಿವಣ್ಣ: ಇದುವರೆಗೂ ನಾನು ಸುಳ್ಳು ಹೇಳಿಲ್ಲ ಏನೇ ಇದ್ದರೂ ಫ್ರ್ಯಾಂಕ್ ಆಗಿ ಹೇಳುತ್ತೀನಿ. ನಾನು ಯಾವತ್ತೂ ಯಾರಿಗೂ ಸುಳ್ಳು ಹೇಳಿಲ್ಲ. ನಿರ್ಮಾಪಕರಿಗೆ ನಿಜ ಹೇಳಿನೇ ಶೂಟಿಂಗ್‌ನಿಂದ ತಪ್ಪಿಸಿಕೊಳ್ಳುತ್ತೀನಿ ಬೇಕಿದ್ದರೆ ಎರಡು ಮೂರು ಗಂಟೆ ಹೆಚ್ಚಿಗೆ ಕೆಲಸ ಮಾಡುತ್ತೀನಿ ಆದರೆ ಸುಳ್ಳು ಹೇಳುವುದಿಲ್ಲ.

ಗೀತಾ: ಸಂದರ್ಶನ ಅಥವಾ ಸ್ಟೇಜ್‌ ಮೇಲೆ ಜನರು ಪದೇ ಪದೇ ಕೇಳುವ ಯಾವ ಪ್ರಶ್ನೆ ಸುಸ್ತು ಮಾಡಿಸುತ್ತದೆ?

ಶಿವಣ್ಣ:  ಯಾವುದು ಸುಸ್ತು ಅನಿಸಲ್ಲ ತೀರಾ ವಿವರ ಕೇಳಿದ್ದರೆ ಬೇಸರ ಆಗುತ್ತೆ.

Geetha Shivarajkumar rapid fire with husband actor shivarajkumar in geetha film promotion vcs

ಗೀತಾ:  ಹುಡುಗಿಯರು ನಿಮಗೆ ಏನೆಲ್ಲಾ ಕಾಂಪ್ಲೀಮೆಂಟ್‌ ಕೊಡುತ್ತಾರೆ, 5 ಹೇಳಿ....

ಶಿವಣ್ಣ: ನನಗೆ ಈ ಪ್ರಶ್ನೆ ಸರಿಯಾಗಿ ಕೇಳಿಸಿಲ್ಲ...ನನಗೆ ಯಾವುದೂ ನೆನಪಿಲ್ಲ..ಮುಂದಿನ ಪ್ರಶ್ನೆಗೆ ಹೋಗೋಣ

ಗೀತಾ: ಹೆಣ್ಣು ಮಕ್ಕಳು ನಿಮ್ಮನ್ನು ಅಣ್ಣ ಅಂತ ಕರೆದರೆ ಬೇಸರ ಆಗುತ್ತೆ...ನಿಮಗಿಂತ ದೊಡ್ಡವರು ಕರೆದರೆ ಕೋಪ ಬರುತ್ತಾ?

ಶಿವಣ್ಣ: ನನಗಿಂತ ದೊಡ್ಡವರು ಕರೆದರೆ ಕೋಪ ಬರುತ್ತದೆ ಏಕೆಂದರೆ ಅವರಿಗೆ ನಾನು ತಮ್ಮ. ಶಿವಣ್ಣ ಅಂತ ಕರೆದರೆ ಕೋಪ ಬರಲ್ಲ ಅಣ್ಣ ಅಂತ ಸ್ಥಾನ ಪಡೆಯುವುದಕ್ಕೆ ನಾನು ಲಕ್ಕಿ.

Follow Us:
Download App:
  • android
  • ios