- Home
- Entertainment
- Cine World
- Rashmika Mandanna About Pushpa: ಪುಷ್ಪಾ 2 ಇನ್ನೂ ಚೆನ್ನಾಗಿ ಮಾಡ್ತೀವಿ ಎಂದ ರಶ್ಮಿಕಾ
Rashmika Mandanna About Pushpa: ಪುಷ್ಪಾ 2 ಇನ್ನೂ ಚೆನ್ನಾಗಿ ಮಾಡ್ತೀವಿ ಎಂದ ರಶ್ಮಿಕಾ
Pushpa Success: ಸಿನಿಮಾ ಸಕ್ಸಸ್ ಬಗ್ಗೆ ರಶ್ಮಿಕಾ ಮಂದಣ್ಣ ಮಾತು ಪಾರ್ಟ್ 2 ಇನ್ನೂ ಚೆನ್ನಾಗಿ ಮಾಡ್ತೀವಿ ಎಂದ ಕಿರಿಕ್ ಚೆಲುವೆ

2016 ರ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ ರಶ್ಮಿಕಾ ಮಂದಣ್ಣ ಪ್ರಸ್ತುತ ತಮ್ಮ ಇತ್ತೀಚಿನ ಚಿತ್ರ ಪುಷ್ಪ: ದಿ ರೈಸ್‌ನ ಯಶಸ್ಸನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಟ ಅಲ್ಲು ಅರ್ಜುನ್ ಜೊತೆ ನಟಿಸಿರುವ ರಶ್ಮಿಕಾ ತಮ್ಮ ಅಭಿನಯಕ್ಕೆ ಭಾರೀ ಪ್ರಶಂಸೆ ಗಳಿಸುತ್ತಿದ್ದಾರೆ.
ಪ್ರೇಕ್ಷಕರಿಂದ ಸಾಕಷ್ಟು ಪ್ರಶಂಸೆ ಗಳಿಸುತ್ತಿರುವ ನಟಿ ಬಾಲಿವುಡ್‌ಗೂ ಹೆಜ್ಜೆ ಇಟ್ಟಿದ್ದಾರೆ. ಪುಷ್ಪ ಚಿತ್ರವು ಅರ್ಜುನ್ ಕಪೂರ್, ಜಾನ್ವಿ ಕಪೂರ್, ಮಹೇಶ್ ಬಾಬು, ರವೀಂದ್ರ ಜಡೇಜಾ ಸೇರಿದಂತೆ ಖ್ಯಾತನಾಮರಿಂದಲೂ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದೆ.
ಪುಷ್ಪಾ: ದಿ ರೈಸ್‌ನ ಹೈ ಸ್ಟಾಕ್ ಕಥೆ ಎಲ್ಲಾ ಅಭಿಮಾನಿಗಳನ್ನು ರಂಜಿಸುವಲ್ಲಿ ಸಕ್ಸಸ್ ಆಗಿದೆ. ಕೃತಜ್ಞತೆಗಳೊಂದಿಗೆ, ರಶ್ಮಿಕಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರದ ಯಶಸ್ಸಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಪೋಸ್ಟ್ ಮಾಡಿದ್ದಾರೆ.
ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ರಶ್ಮಿಕಾ ತಮ್ಮ ನಗುತ್ತಿರುವ ಮುದ್ದಾದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಕಪ್ಪು ಡ್ರೆಸ್ ಧರಿಸಿದ್ದರು. ಕೂದಲನ್ನು ಸಡಿಲವಾಗಿ ಬಿಟ್ಟಿದ್ದರು. ಪುಷ್ಪಾ ಮೇಲಿನ ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು.. ನಾವು ಹೆಚ್ಚು ಕಷ್ಟಪಟ್ಟು ಕೆಲಸ ಮಾಡಲು ಬಯಸುತ್ತೇವೆ. ಪುಷ್ಪಾ 2 ಇನ್ನಷ್ಟು ಉತ್ತಮ ಮತ್ತು ದೊಡ್ಡದಾಗಿರುತ್ತದೆ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ ಎಂದಿದ್ದಾರೆ.
ಈ ಪೋಸ್ಟ್‌ಗೆ ಬಾಲಿವುಡ್ ನಟ ಸಿದ್ಧಾಂತ್ ಚತುರ್ವೇದಿ ಕೂಡ ಪ್ರತಿಕ್ರಿಯಿಸಿದ್ದಾರೆ. ಎಮೋಜಿಯನ್ನು ಕಮೆಂಟ್ ಮಾಡಿದ್ದಾರೆ. ಅವರ ಪೋಸ್ಟ್‌ಗೆ ಅಭಿಮಾನಿಗಳು ಕೂಡ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ. ಅಭಿಮಾನಿಯೊಬ್ಬರು ಸೂಪರ್ ಕ್ಯೂಟ್ ಎಂದು ಬರೆದಿದ್ದಾರೆ. ಮತ್ತೊಬ್ಬ ಅಭಿಮಾನಿ ಕಾಮೆಂಟ್‌ಗಳಲ್ಲಿ ಪುಷ್ಪಾ 2 ಗಾಗಿ ನಟಿಗೆ ಶುಭ ಹಾರೈಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.