ಮಕ್ಕಳಿಗಾಗಿ ಅಪ್ಪು ಅಭಿಮಾನಿಗಳಿಂದ 'ಗಂಧದಗುಡಿ' ಉಚಿತ ಪ್ರದರ್ಶನ

ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಪುನೀತ್ ರಾಜಕುಮಾರ್ ಅಭಿಮಾನ ಕಡಿಮೆ ಆಗಿಲ್ಲ ಎನ್ನುವುದಕ್ಕೆ ಅವರ ಅಭಿಮಾನಿಗಳು ವಿದ್ಯಾರ್ಥಿಗಳಿಗೆ ಗಂಧದಗುಡಿ ಚಿತ್ರವನ್ನು ಉಚಿತವಾಗಿ ತೋರಿಸುವ ಮೂಲಕ ಅಪ್ಪು ಮೇಲಿನ ತಮ್ಮ ಅಭಿಮಾನ ಮೆರೆದರು.

free show  of Gandhadagudi by Appu fans for children at koppal rav

ವರದಿ- ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ನ.6) : ಕರ್ನಾಟಕ ರತ್ನ ಡಾ. ಪುನೀತ್ ರಾಜ್‍ಕುಮಾರ್ ನಮ್ಮನ್ನೆಲ್ಲ ಅಗಲಿ ಒಂದು ವರ್ಷ ಕಳೆದಿದೆ. ಆದರೆ ಅವರ ನೆನಪು ಮಾತ್ರ ಸದಾ ಇದ್ದೇ ಇರುತ್ತದೆ. ಈ ಹಿನ್ನಲೆಯಲ್ಲಿ ಪುನೀತ್ ರಾಜಕುಮಾರ್ ನೆನಪಿಗಾಗಿ ಅವರ ಕೊನೆಯ ಚಿತ್ರವಾದ ಗಂಧದ ಗುಡಿ ಅವರ ಅಭಿಮಾನಿಗಳು ವಿದ್ಯಾರ್ಥಿಗಳಿಗೆ ಉಚಿತವಾಗಿ ತೋರಿಸುತ್ತಿದ್ದಾರೆ. ಅಷ್ಟಕ್ಕೂ ಎಲ್ಲಿ ವಿದ್ಯಾರ್ಥಿಗಳಿಗೆ ಗಂಧದಗುಡಿ ಚಿತ್ರವನ್ನು ಉಚಿತವಾಗಿ ತೋರಿಸುತ್ತಿದ್ದಾರೆ. 

ಕಾರಟಗಿಯಲ್ಲಿ ಶಾಲಾ ಮಕ್ಕಳಿಗೆ 'ಗಂಧದ ಗುಡಿ' ಉಚಿತ ಪ್ರದರ್ಶನ

ಗಂಧದಗುಡಿ ಉಚಿತ ಪ್ರದರ್ಶನ ಎಲ್ಲಿ?

 ಕೊಪ್ಪಳ ಜಿಲ್ಲೆ ಅಂದರೆ ಸಾಕು ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ಅವರಿಗೆ ಎಲ್ಲಿಲ್ಲದ ಅಚ್ಚುಮೆಚ್ಚು. ಜೊತೆಗೆ ಈ ಜಿಲ್ಲೆಯಲ್ಲಿ ಅವರಿಗಿರುವಷ್ಟು ಅಭಿಮಾನಿಗಳು ಬೇರೆ ಯಾವ ನಾಯಕ‌ ನಟನಿಗೂ ಇಲ್ಲ ಎಂದು ಹೇಳಬಹುದು. ಹೀಗಾಗಿ ಕೊಪ್ಪಳ ಜಿಲ್ಲೆಯ ಭತ್ತದ ಕಣಜ ಎಂದು ಕರೆಯಲ್ಪಡುವ ಕಾರಟಗಿ ಪಟ್ಟಣದಲ್ಲಿ ಇರುವ ಅವರ ಅಭಿಮಾನಿಗಳು ಲಕ್ಷ್ಮೀ ಚಿತ್ರಮಂದಿರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ  ಗಂಧದಗುಡಿ ಚಿತ್ರವನ್ನು ಉಚಿತ ಪ್ರದರ್ಶನ ಏರ್ಪಡಿಸಿದ್ದಾರೆ.

ಗಂಧದಗುಡಿ ನೋಡಿ ವಿದ್ಯಾರ್ಥಿಗಳು ಫುಲ್ ಖುಷ್:

ಇನ್ನು ಕಾಡು,ಕಾಡು ಪ್ರಾಣಿಗಳು ಅಂದರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಅದರಲ್ಲಂತೂ ಮಕ್ಕಳಿಗೆ ಕೇಳಬೇಕೆ, ಗಂಧದಗುಡಿ ಚಿತ್ರ ಪೂರ್ತಿಯಾಗಿ ಕಾಡು ಹಾಗೂ ಕಾಡು ಪ್ರಾಣಿಗಳ ಬಗ್ಗೆಯೇ ಇದೆ. ಹೀಗಾಗಿ ಮಕ್ಕಳು ಗಂಧದಗುಡಿ ಚಿತ್ರ ನೋಡಿದ ಮಕ್ಕಳು ಫುಲ್ ಖುಷ್ ಆಗಿದ್ದಾರೆ.

ಗಂಧದಗುಡಿ ಸಿನಿಮಾ ವೀಕ್ಷಿಸಿದ ಮಾಜಿ ಸಿಎಂ ಯಡಿಯೂರಪ್ಪ: ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು

ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಪುನೀತ್ ರಾಜಕುಮಾರ್ ಅಭಿಮಾನ ಕಡಿಮೆ ಆಗಿಲ್ಲ ಎನ್ನುವುದಕ್ಕೆ ಅವರ ಅಭಿಮಾನಿಗಳು ವಿದ್ಯಾರ್ಥಿಗಳಿಗೆ ಗಂಧದಗುಡಿ ಚಿತ್ರವನ್ನು ಉಚಿತವಾಗಿ ತೋರಿಸುತ್ತಿರುವುದೇ ಸಾಕ್ಷಿ. ಇನ್ನೂ ಎಷ್ಟೇ ಜನ ವಿದ್ಯಾರ್ಥಿಗಳು ಬಂದರೂ ಸಹ ಅವರಿಗೆ ಗಂಧದಗುಡಿ ಚಿತ್ರ ತೋರಿಸುವ ಭರವಸೆಯನ್ನು 'ಪುಣ್ಯಕೋಟಿ' ಗ್ರೂಪ್ ನೀಡಿದೆ. ಒಟ್ಟಿನಲ್ಲಿ ಪುನೀತ್ ಅವರ ಮೇಲಿನ ಪ್ರೀತಿಯನ್ನು ಅವರ ಅಭಿಮಾನವನ್ನು ಗಂಧದಗುಡಿ ಚಿತ್ರವನ್ನು ಉಚಿತವಾಗಿ ತೋರಿಸುತ್ತಿರುವುದಕ್ಕೂ ನಿಜಕ್ಕೂ ಶ್ಲಾಘನಿಯವೇ ಸರಿ.

Latest Videos
Follow Us:
Download App:
  • android
  • ios