ಕಾಲೇಜು ದಿನಗಳಲ್ಲೇ ಅವರು ಮೆಹಂದಿ ಹಾಕುವ ಮೂಲಕ ಪಾಕೆಟ್ ಮನಿ ಗಳಿಸುತ್ತಿದ್ದರು.. ನಟಿ ತನಿಷಾ ಅವರು ಬಿಗ್ ಬಾಸ್ ಮೂಲಕ ಕರ್ನಾಟಕದ ಮನೆಮನೆಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರಿಗೆ ಅಭಿಮಾನಿಗಳು 'ಬೆಂಕಿ ತನಿಷಾ'..
ಸ್ಯಾಂಡಲ್‌ವುಡ್ ನಟಿ, ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ (Tanisha Kuppanda) ಯಾರಿಗೆ ಗೊತ್ತಿಲ್ಲ? ಬಿಗ್ ಬಾಸ್ ಕನ್ನಡ ಮನೆಯಲ್ಲಿ ಬೆಂಕಿ ಎಂದೇ ಕರೆಸಿಕೊಂಡಿದ್ದ ನಟಿ ತನಿಷಾ, ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ತನಿಷಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್. ಅವರು ತಮ್ಮ ಅಂದಚೆಂದದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ.

ನಟಿ ತನಿಷಾ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಪೋಸ್ಟ್ ಹಾಗೂ ಫೋಟೋಗಳಿಗೆ ಸಾಕಷ್ಟು ಲೈಕ್ಸ್ ಹಾಗೂ ಕಾಮೆಂಟ್‌ಗಳು ಸದಾ ಬರುತ್ತಲೇ ಇರುತ್ತವೆ. ಸದ್ಯ ನಟಿ ತನಿಷಾ ಅವರು ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮದೇ ನಿರ್ಮಾಣದ 'ಕೋಣ' ಸಿನಿಮಾದಲ್ಲಿ ಅವರು ನಟ ಕೋಮಲ್ ಕುಮಾರ್ ಅವರಿಗೆ ಜೋಡಿ ಆಗಿದ್ದಾರೆ.
ಅರೇ.. 'ಕೋಣ'ಕ್ಕೆ ಕೈ ಹಾಕಿದ್ದೇಕೆ ನಟಿ ತನಿಷಾ..? ಬೆಂಕಿ ಅಂದ್ರೆ ಸುಮ್ನೆ ಅಲ್ಲಾರೀ ಅಂದ್ರೂ ಇದು..
ನಟ ಕೋಮಲ್ ಎದುರು ನಾಯಕಿಯಾಗಿ, ಅವರ ಪತ್ನಿ ರೋಲ್‌ನಲ್ಲಿ ನಟಿ ಹಾಗೂ ನಿರ್ಮಾಪಕಿ ತನಿಷಾ ಕಾಣಿಸಿಕೊಂಡಿದ್ದಾರೆ. ಆದರೆ, ಈ ಚಿತ್ರದ ಶೂಟಿಂಗ್ ಬಗ್ಗೆ ಸದ್ಯಕ್ಕೆ ಅಪ್‌ಡೇಟ್ ಸಿಕ್ಕಿಲ್ಲ. ಕೋಮಲ್ ಕುಮಾರ್ ಹಾಗೂ ತನಿಷಾ ಜೋಡಿ ಮೂಲಕ ಕನ್ನಡದಲ್ಲಿ ಕೋಣ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ. ಮೊಟ್ಟಮೊದಲ ಬಾರಿಗೆ ನಟಿ ತನಿಷಾ ಅವರು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

ಆದರೆ, ನಟಿ ತನಿಷಾ ಅವರಿಗೆ ಬಿಸಿನೆಸ್ ಹೊಸದೇನೂ ಅಲ್ಲ. ಏಕೆಂದರೆ, ಅವರು ಈಗಾಗಲೇ ಜ್ಯವೆಲ್ಲರಿ ಶಾಪ್ ನಡೆಸುತ್ತಿದ್ದಾರೆ. ತಮ್ಮ ಕಾಲೇಜು ದಿನಗಳಲ್ಲೇ ಅವರು ಮೆಹಂದಿ ಹಾಕುವ ಮೂಲಕ ಪಾಕೆಟ್ ಮನಿ ಗಳಿಸುತ್ತಿದ್ದರು. ನಟಿ ತನಿಷಾ ಅವರು ಬಿಗ್ ಬಾಸ್ ಮೂಲಕ ಕರ್ನಾಟಕದ ಮನೆಮನೆಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರಿಗೆ ಅಭಿಮಾನಿಗಳು 'ಬೆಂಕಿ ತನಿಷಾ' ಅಂತಲೇ ಕರೆಯುತ್ತಾರೆ ಎಂಬ ಸಂಗತಿ ಹಲವರಿಗೆ ಗೊತ್ತು.
ಅಪ್ಪು-ಅಣ್ಣಾವ್ರ ಬಗ್ಗೆ ಲಕ್ಷ್ಮೀ ಹೀಗ್ ಹೇಳೋದಾ? ಮಹಾನ್ ನಟಿ ಹೇಳದ್ಮೇಲೆ ನಿಜ ಆಗಿರ್ಬಹುದು ಅಲ್ವಾ!
ಇಂಥ ನಟಿ ತನಿಷಾ ಅವರಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಹಲವರು ಅವರಿಗೆ ಆನ್‌ಲೈನ್‌ನಲ್ಲಿ ತಮ್ಮ ಪ್ರಾಡಕ್ಟ್‌ಗಳನ್ನು ತನಿಷಾಗೆ ಕಳುಹಿಸುತ್ತಾರೆ. ಅದನ್ನು ಸವಿದು ನಟಿ ತನಿಷಾ ಅದನ್ನು ಸೊಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ಅಪ್‌ಲೋಡ್ ಮಾಡುತ್ತಾರೆ. ಇದೇನೂ ಪ್ರಮೋಶನ್ ಅಂತೇನಲ್ಲ..

ಅವರು ಪ್ರೀತಿಯಿಂದ ತಾವು ಮಾಡಿರುವ, ತಮ್ಮ ಅಂಗಡಿಯ ಸ್ವೀಟ್, ಐಸ್‌ಕ್ರಿಂ ಅಥವಾ ಬೇರೆ ಏನೋ ಕಳುಹಿಸಿಕೊಡುತ್ತಾರೆ. ಅದರ ಬಗ್ಗೆ ನಟಿ ತನಿಷಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯಿಂದ ಮಾತನ್ನಾಡುತ್ತಾರೆ. ಇದೊಂಥರಾ 'ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ ಅನ್ನೋ ಥರ.. ಅವರು ಕೊಟ್ಟ ಪ್ರೀತಿಗೆ ಆ ಮೂಲಕ ಪ್ರೀತಿಯನ್ನು ವಾಪಸ್ ತೋರಿಸುತ್ತಿದ್ದಾರೆ ನಟಿ ತನಿಷಾ.
ಅಪ್ಪು-ಅಪ್ಪಾಜಿ ಸೀಕ್ರೆಟ್ ಬಿಚ್ಚಿಟ್ಟ ರಾಘಣ್ಣ: ಅದೆಷ್ಟೋ ಗುಟ್ಟು ಜಗತ್ತಿಗೆ ಗೊತ್ತೇ ಇಲ್ಲ! ಇಲ್ನೋಡಿ..
ಒಟ್ಟಿನಲ್ಲಿ, ನಟಿ ತನಿಷಾ ಕುಪ್ಪಂಡ ಅವರು 'ಕೋಣ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ನಿರ್ಮಾಪಕಿಯಾಗಿ ಕಾಲಿಡುತ್ತಿದ್ದಾರೆ. ಸದ್ಯಕ್ಕೆ ತನಿಷಾ ಫ್ಯಾನ್ಸ್ ಈ ಸಿನಿಮಾಗೆ ಕಾಯುತ್ತಿದ್ದಾರೆ. ಬೆಂಕಿ ತನಿಷಾ ನೋಡಲು ನೀವೂ ರೆಡಿಯಾಗಿ...!

