- Home
- Entertainment
- Sandalwood
- ಅರೇ.. 'ಕೋಣ'ಕ್ಕೆ ಕೈ ಹಾಕಿದ್ದೇಕೆ ನಟಿ ತನಿಷಾ..? ಬೆಂಕಿ ಅಂದ್ರೆ ಸುಮ್ನೆ ಅಲ್ಲಾರೀ ಅಂದ್ರೂ ಇದು...
ಅರೇ.. 'ಕೋಣ'ಕ್ಕೆ ಕೈ ಹಾಕಿದ್ದೇಕೆ ನಟಿ ತನಿಷಾ..? ಬೆಂಕಿ ಅಂದ್ರೆ ಸುಮ್ನೆ ಅಲ್ಲಾರೀ ಅಂದ್ರೂ ಇದು...
Sandalwood actress and kona movie producer Tanisha Kuppanada beautiful photos to see here for you. ಕನ್ನಡದ ನಟಿ ತನಿಷಾ ಕುಪ್ಪಂಡ ಅವರ ಚೆಂದದ ಫೋಟೋಗಳು ಇಲ್ಲಿವೆ ನೋಡಿ...

ಸ್ಯಾಂಡಲ್‌ವುಡ್ ನಟಿ ತನಿಷಾ ಕುಪ್ಪಂಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್. ಅವರು ತಮ್ಮ ಅಂದಚೆಂದದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ.
ನಟಿ ತನಿಷಾ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಪೋಸ್ಟ್ ಹಾಘೂ ಫೋಟೋಗಳಿಗೆ ಸಾಕಷ್ಟು ಲೈಕ್ಸ್ ಹಾಗೂ ಕಾಮೆಂಟ್‌ಗಳು ಸದಾ ಬರುತ್ತಲೇ ಇರುತ್ತವೆ.
ಸದ್ಯ ನಟಿ ತನಿಷಾ ಅವರು ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮದೇ ನಿರ್ಮಾಣದ ಸಿನಿಮಾಕ್ಕೆ ಅವರು ನಟ ಕೋಮಲ್ ಕುಮಾರ್ ಅವರನ್ನು ಹೀರೋ ಆಗಿ ಮಾಡಿದ್ದಾರೆ.
ನಟ ಕೋಮಲ್ ಎದುರು ನಾಯಕಿಯಾಗಿ, ಅವರ ಪತ್ನಿ ರೋಲ್‌ನಲ್ಲಿ ನಟಿ ಹಾಗೂ ನಿರ್ಮಾಪಕಿ ತನಿಷಾ ಕಾಣಿಸಿಕೊಂಡಿದ್ದಾರೆ. ಆದರೆ, ಈ ಚಿತ್ರದ ಶೂಟಿಂಗ್ ಬಗ್ಗೆ ಸದ್ಯಕ್ಕೆ ಅಪ್‌ಡೇಟ್ ಸಿಕ್ಕಿಲ್ಲ.
ನಟಿ ತನಿಷಾ ಕುಪ್ಪಂಡ ನಿರ್ಮಾಣದ ಈ ಚಿತ್ರಕ್ಕೆ 'ಕೋಣ' ಎಂದು ಹೆಸರಿಡಲಾಗಿದೆ. ಕೋಮಲ್ ಕುಮಾರ್ ಕೋಣ ಆಗಿದಾರಾ ಅಂತೆಲ್ಲಾ ಯೋಚಿಸ್ಬೇಡಿ..! ಅದು ಸಿನಿಮಾದ ಹೆಸರು.. ಅದರಲ್ಲಿ ಕೋಣಕ್ಕೆ ಏನೋ ಒಂದು ಪ್ರಾಮುಖ್ಯತೆ ಇದ್ದಿರುತ್ತೆ..
ಕೋಮಲ್ ಕುಮಾರ್ ಹಾಗೂ ತನಿಷಾ ಜೋಡಿ ಮೂಲಕ ಕನ್ನಡದಲ್ಲಿ ಕೋಣ ಸಿನಿಮಾ ತೆರೆಗೆ ಬರಲಿದೆ. ಮೊಟ್ಟಮೊದಲ ಬಾರಿಗೆ ನಟಿ ತನಿಷಾ ಅವರು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.
ಆದರೆ, ನಟಿ ತನಿಷಾ ಅವರಿಗೆ ಬಿಸಿನೆಸ್ ಹೊಸದೇನೂ ಅಲ್ಲ. ಏಕೆಂದರೆ, ಅವರು ಈಗಾಗಲೇ ಜ್ಯವೆಲ್ಲರಿ ಶಾಪ್ ನಡೆಸುತ್ತಿದ್ದಾರೆ. ತಮ್ಮ ಕಾಲೇಜು ದಿನಗಳಲ್ಲೇ ಅವರು ಮೆಹಂದಿ ಹಾಕುವ ಮೂಲಕ ಪಾಕೆಟ್ ಮನಿ ಗಳಿಸುತ್ತಿದ್ದರು.
ನಟಿ ತನಿಷಾ ಅವರು ಬಿಗ್ ಬಾಸ್ ಮೂಲಕ ಕರ್ನಾಟಕದ ಮನೆಮನೆಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರಿಗೆ ಅಭಿಮಾನಿಗಳು 'ಬೆಂಕಿ ತನಿಷಾ' ಅಂತಲೇ ಕರೆಯುತ್ತಾರೆ.
ನಟಿ ತನಿಷಾ ಕುಪ್ಪಂಡ ಅವರು ಬಿಗ್ ಬಾಸ್ ಶೋನಲ್ಲಿ ಗೆಲ್ಲುವ ಫೇವರೆಟ್ ಎನ್ನಿಸಿದ್ದರು. ಅದಕ್ಕೋ ಮೊದಲು ಅವರು ಭಾಗಿಯಾಗಿದ್ದ 'ಹಳ್ಳಿ ದುನಿಯಾ' ರಿಯಾಲಿಟಿ ಶೋದಲ್ಲಿ ಅವರೇ ವಿನ್ನರ್ ಆಗಿದ್ದರು. ಆದರೆ, ಅದ್ಯಾಕೋ ಬಿಗ್ ಬಾಸ್‌ನಲ್ಲಿ ತನಿಷಾ ಜಾದೂ ನಡೆಯಲಿಲ್ಲ..
ಒಟ್ಟಿನಲ್ಲಿ, ನಟಿ ತನಿಷಾ ಕುಪ್ಪಂಡ ಅವರು ಕೊಣ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ನಿರ್ಮಾಪಕಿಯಾಗಿ ಕಾಲಿಡುತ್ತಿದ್ದಾರೆ. ಸದ್ಯಕ್ಕೆ ತನಿಷಾ ಫ್ಯಾನ್ಸ್ ಈ ಸಿನಿಮಾಗೆ ಕಾಯುತ್ತಿದ್ದಾರೆ. ಬೆಂಕಿ ತನಿಷಾ ನೋಡಲು ನೀವೂ ರೆಡಿಯಾಗಿ...!