ಮಹಿಷನ ಅವತಾರ ಎತ್ತಿದ ಡೈನಾಮಿಕ್ ಪ್ರಿನ್ಸ್: ಕೋಣನ ಮೇಲೇರಿ ಬಂದ ಪ್ರಜ್ವಲ್ ದೇವರಾಜ್!
ಒಂದ್ ಟೈಂ ಇತ್ತು ಮಂಡ್ಯ ಅಂದ್ರೆ ಸಿನಿಮಾ ರಂಗಕ್ಕೆ ಆಸ್ಥಾನದಂತಿತ್ತು. ಮಂಡ್ಯ ಮಣ್ಣಲ್ಲಿ ಹುಟ್ಟಿದ್ದ ಅದೆಷ್ಟೋ ಸಿನಿಮಾಗಳು ಸೂಪರ್ ಹಿಟ್ ಆಗ್ತಿದ್ವು. ಆದ್ರೆ ಈಗ ಆ ಕಾಲ ಕರಾವಳಿ ಕಡೆ ತಿರುಗಿದೆ. ಈಗ ಸ್ಯಾಂಡಲ್‌ವುಡ್ ಸಿನಿಮಾಗಳ ಕತೆಗೆ ಮೂಲ ಕರಾವಳಿ ಆಗಿದೆ.
ಒಂದ್ ಟೈಂ ಇತ್ತು ಮಂಡ್ಯ ಅಂದ್ರೆ ಸಿನಿಮಾ ರಂಗಕ್ಕೆ ಆಸ್ಥಾನದಂತಿತ್ತು. ಮಂಡ್ಯ ಮಣ್ಣಲ್ಲಿ ಹುಟ್ಟಿದ್ದ ಅದೆಷ್ಟೋ ಸಿನಿಮಾಗಳು ಸೂಪರ್ ಹಿಟ್ ಆಗ್ತಿದ್ವು. ಆದ್ರೆ ಈಗ ಆ ಕಾಲ ಕರಾವಳಿ ಕಡೆ ತಿರುಗಿದೆ. ಈಗ ಸ್ಯಾಂಡಲ್‌ವುಡ್ ಸಿನಿಮಾಗಳ ಕತೆಗೆ ಮೂಲ ಕರಾವಳಿ ಆಗಿದೆ. ಕಡಲ ಅಲೆಯಲ್ಲಿ ಹುದುಗಿ ಹೋಗಿದ್ದ ಒಂದೊಂದೇ ಸ್ಟೋರಿಗಳು ಸಿನಿಮಾ ಆಗ್ತಿವೆ. ಆ ಲೀಸ್ಟ್ಗೆ ಸೇರಿದ ಮತ್ತೊಂದು ಸಿನಿಮಾ ಕರಾವಳಿ. ಇದು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಕರಾವಳಿ ಸಿನಿಮಾ ಟೀಸರ್.
ರಕ್ತ ಸಿಕ್ತ ಕೈಗಳು, ಕೋಣ, ಮೈಹಿಷಾಸುರನ ಅವತಾರ, ಸತ್ತ ಕೋಣದ ತಲೆ.. ಅಬ್ಬಬ್ಬ..! ಈ ಟೀಸರ್ ನೋಡ್ತಿದ್ರೆ ರಿಷಬ್ ಶೆಟ್ಟಿಯ ಕಾಂತಾರ ಸಿನಿಮಾದಂತೆ ಈ ಕರಾವಳಿ ಸಿನಿಮಾ ಕೂಡ ಕುತೂಹಲ ಮೂಡಿಸುತ್ತೆ. ನಟ ಪ್ರಜ್ವಲ್ ದೇವರಾಜ್ ಮಹಿಷಾಸುರನಂತೆ ಕೋಣನ ಮೇಲೇರಿ ಬಂದಿದ್ದಾರೆ. ಕರಾವಳಿ ಭಾಗದ ಸಂಸ್ಕೃತಿ ಸಾರುವ ಮತ್ತೊಂದು ಸಿನಿಮಾ ಕರಾವಳಿ. ಮಂಗಳೂರಿನಲ್ಲಿ ಅದ್ದೂರಿ ಕಾರ್ಯಕ್ರಮ ಮಾಡಿ ಕರಾವಳಿ ಟೈಟಲ್ ಟೀಸರ್ ಲಾಂಚ್ ಮಾಡಲಾಗಿದೆ. ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದ ಡೈರೆಕ್ಟರ್ ಗುರುದತ್ ಗಾಣಿಗ ಈ ಕ್ರೈಂ ಕರಾವಳಿ ಕಥೆಯ ಜನಕ.
ಸದ್ಯ ರಿಲೀಸ್ ಆಗಿರೋ ಟೀಸರ್‌ನಲ್ಲಿ ಜಗತ್ತಿಗೆ ಎಂಟ್ರಿ ಕೊಡುವ ಎರಡು ಹೊಸ ಜೀವಗಳನ್ನು ನೋಡಬಹುದು. ತಾಯಿ ಮಗುವಿಗೆ ಜನ್ಮ ನೀಡಿದ್ರೆ ಎಮ್ಮೆ ಕೂಡ ತನ್ನ ಮಗುವಿಗೆ ಜನ್ಮ ನೀಡುತ್ತೆ. ಈ ಟೀಸರ್ ನೋಡ್ತಿದ್ರೆ ಮನುಷ್ಯ ಮತ್ತು ಪ್ರಾಣಿ ನಡುವಿನ ಸಂಘರ್ಷದ ಕತೆ ಅಂತ ಗೊತ್ತಾಗುತ್ತೆ.. ಬ್ಯಾಗ್ರೌಂಡ್‌ನಲ್ಲಿ ಬರುವ ಯಕ್ಷಗಾನದ ಧ್ವನಿ ಕರಾವಳಿಯ ಹೈಲೆಟ್. ಪ್ರಜ್ವಲ್ ದೇವರಾಜ್ ನಟನೆಯ 40ನೇ ಸಿನಿಮಾ ಕರಾವಳಿ. ಸಧ್ಯ ಟೀಸರ್ನಿಂದ ಕುತೂಹಲ ಮೂಡಿಸಿರೋ ಕರಾವಳಿ ಶೂಟಿಂಗ್ ಮುಂದಿನ ವರ್ಷ ಜನವರಿಯಿಂದ ಆರಂಭ ಆಗುತ್ತೆ. ಹೈಫೆ್ ಪಿಕ್ಚರ್ಸ್ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣ ಆಗ್ತಿದೆ.
ಚಿತ್ರದ ಪರಿಕಲ್ಪನೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ನಿರ್ದೇಶಕ ಗುರುದತ್, ಮೂಲ ಕಥಾವಸ್ತುವು ಚಂದ್ರಶೇಖರ್ ಬಂಡಿಯಪ್ಪ ಅವರದು. ಇದು ನನಗೆ ಒಂದು ವಿಶಿಷ್ಟವಾದ ಕಥೆಯಾಗಿದೆ. ಇದು ನನ್ನ ಊರಿನಲ್ಲಿ ನಡೆದ ಘಟನೆಯನ್ನು ಆಧರಿಸಿದ ಕಾರಣ ವಿಶೇಷ ಮಹತ್ವವನ್ನು ಹೊಂದಿದೆ. ನಾನು ಈ ಚಿತ್ರವನ್ನು ತೆರೆಗೆ ತರಲು ಬಹಳ ದಿನಗಳಿಂದ ಬಯಸಿದ್ದೆ ಆದರೆ ಪ್ರೇಕ್ಷಕರು ಅದನ್ನು ಸ್ವೀಕರಿಸುತ್ತಾರೆ ಎಂದು ಖಚಿತವಾಗಿಲ್ಲ. ಆದಾಗ್ಯೂ, ಇಂದಿನ ಪ್ರೇಕ್ಷಕರು, ಕೋವಿಡ್ ನಂತರ ವಿಕಸನಗೊಂಡಿದ್ದಾರೆ ಎಂದು ನಾವು ಅರಿತುಕೊಂಡಿದ್ದೇವೆ.
ಸಲಾರ್‌ನಲ್ಲಿ ಯಶ್.. ಮತ್ತೆ ಬಂತು ಮರುಜೀವ: ಪ್ರಭಾಸ್ ಚಿತ್ರದಲ್ಲಿ ರಾಕಿ ಭಾಯಿ ಅನ್ನೋ ವಿಷಯ ಹೇಳಿದ್ಯಾರು?
ಅವರು ಕಥೆಯುಳ್ಳ ಚಿತ್ರಗಳನ್ನು ಹುಡುಕುತ್ತಿದ್ದಾರೆ. ಈ ರೀತಿಯ ವಿಷಯವನ್ನು ಪೂರ್ಣ ಹೃದಯದಿಂದ ಸ್ವೀಕರಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ. ಅದು ಕನ್ನಡ ಪ್ರೇಕ್ಷಕರಿಂದ ನಮಗೆ ಸಿಕ್ಕಿರುವ ಶಕ್ತಿ. ನಾನು ಸುಮಾರು 9 ಜನರಿಗೆ ಈ ಕಥಾವಸ್ತುವನ್ನು ಹೇಳಿದ್ದರೂ ಸಹ, ಅವರು ಈ ಹಿಂದೆ ಇದೇ ರೀತಿಯ ಕಥೆಯನ್ನು ಕೇಳಲಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ, ಇದು ಕರಾವಳಿಯಿಂದ ಕಾಸರಗೋಡಿನಿಂದ ಭಟ್ಕಳದವರೆಗೆ ವ್ಯಾಪಿಸಿರುವ ಸಂಸ್ಕೃತಿಯಲ್ಲಿ ಬೇರೂರಿದೆ. ಕರಾವಳಿ ಬೆಲ್ಟ್‌ನಿಂದ ಅನ್ವೇಷಿಸಲು ಹಲವಾರು ಕಥೆಗಳಿವೆ. ಇದು ಈ ರೀತಿಯ ಮೊದಲನೆಯದು ಅವರು ಹೇಳಿದರು.