Shiva Rajkumar: 'ಬೈರಾಗಿ' ಹಾಡು ಬಿಡುಗಡೆ ಮಾಡಿದ ದುನಿಯಾ ವಿಜಯ್
ಸ್ಯಾಂಡಲ್‌ವುಡ್‌ನ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ‘ಬೈರಾಗಿ’ ಚಿತ್ರದ ಮೊದಲ ಲಿರಿಕಲ್ ಹಾಡು ‘ನಕರನಕ ನುಗ್ಗಿ ಬಂತೋ ನಾಡ ಹುಲಿ’ ಅನ್ನು ದುನಿಯಾ ವಿಜಯ್ ಬಿಡುಗಡೆ ಮಾಡಿದ್ದಾರೆ.
ಸ್ಯಾಂಡಲ್‌ವುಡ್‌ನ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ನಟನೆಯ ‘ಬೈರಾಗಿ’ (Bairagee) ಚಿತ್ರದ ಮೊದಲ ಲಿರಿಕಲ್ ಹಾಡು ‘ನಕರನಕ ನುಗ್ಗಿ ಬಂತೋ ನಾಡ ಹುಲಿ’ (Nakaranakha) ಅನ್ನು ದುನಿಯಾ ವಿಜಯ್ (Duniya Vijay) ಬಿಡುಗಡೆ ಮಾಡಿದ್ದಾರೆ. ಅನೂಪ್ ಸೀಳಿನ್ ಸಂಗೀತ, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯವಿರುವ ಈ ಹಾಡಿಗೆ ಆ್ಯಂಥೋನಿ ದಾಸನ್ ದನಿಗೂಡಿಸಿದ್ದಾರೆ. ಜೆಪಿ ಮ್ಯೂಸಿಕ್ ಯೂಟ್ಯೂಬ್ ಚಾನಲ್‌ನಲ್ಲಿ ಈ ಹಾಡು ಬಿಡುಗಡೆಯಾಗಿದೆ. ವಿಜಯ್ ಮಿಲ್ಟನ್ ನಿರ್ದೇಶನ, ಕೃಷ್ಣ ಸಾರ್ಥಕ್ ನಿರ್ಮಾಣದ ಚಿತ್ರವಿದು.
‘ಮಾಸ್ ಬೀಟ್, ಕೇಳಿದಾಕ್ಷಣ ಕುಣಿಸುವ ಸಂಗೀತ ಈ ಹಾಡಿನಲ್ಲಿದೆ. ಆ್ಯಂಥೋನಿ ದಾಸ್ ವಾಯ್ಸ್ ಕೇಳಿದಾಕ್ಷಣ ಥ್ರಿಲ್ ಆಗಿಹೋದೆ. ಶಿವಣ್ಣನ ಎನರ್ಜಿಗೆ ಸರಿದೂಗುವಂಥ ಹಾಡಿದು. ನಾನಂತೂ ಸಖತ್ ಎಂಜಾಯ್ ಮಾಡಿದೆ. ಈ ಹಾಡನ್ನು ಕೇಳಿದವರೂ ಇಷ್ಟಪಡುತ್ತಾರೆ ಎಂಬ ಭರವಸೆಯಿದೆ' ಎಂದಿದ್ದಾರೆ ನಟ ದುನಿಯಾ ವಿಜಯ್. ನೂರಾರು ಡಾನ್ಸರ್ಸ್, ಬೃಹತ್ ಸೆಟ್, ಕಲರ್ ಫುಲ್ ಕಾಸ್ಟ್ಯೂಮ್'ನಲ್ಲಿ ಶಿವರಾಜ್ ಕುಮಾರ್ ಈ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಬನೇರುಘಟ್ಟ ಸಮೀಪದ ದೇವಸ್ಥಾನವೊಂದರ ಬಳಿ ಜಾತ್ರೆ ಸೆಟ್ ಹಾಕಲಾಗಿತ್ತು. ದೊಡ್ಡ ಮಟ್ಟದಲ್ಲಿ ಈ ಹಾಡು ಮೂಡಿಬಂದಿದೆ ಎಂದು ನಿರ್ಮಾಪಕ ಕೃಷ್ಣ ಸಾರ್ಥಕ್ ತಿಳಿಸಿದ್ದಾರೆ.
Shiva Rajkumar: ಕರುನಾಡ ಚಕ್ರವರ್ತಿಯ ಹೊಸ ಚಿತ್ರ ಘೋಸ್ಟ್: ಶ್ರೀನಿ ನಿರ್ದೇಶನ
ಚಿತ್ರದ ಟೀಸರ್ (Teaser) ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ವಿಶೇಷವಾಗಿ 'ಟಗರು' (Tagaru) ಸಿನಿಮಾದ ನಂತರ ಮತ್ತೆ ಶಿವರಾಜ್‌ಕುಮಾರ್ ಹಾಗೂ ಡಾಲಿ ಧನಂಜಯ್ (Dhananjay) ಎದುರಾಗಿದ್ದಾರೆ. ವಿಜಯ್ ಮಿಲ್ಟನ್ (Vijay Milton) ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಬೈರಾಗಿ' ಸಿನಿಮಾದಲ್ಲಿ ಸೆಂಚ್ಯುರಿ ಸ್ಟಾರ್ ಮತ್ತು ಡಾಲಿ ಅಬ್ಬರಿಸಲಿದ್ದಾರೆ. ಪ್ರಮುಖವಾಗಿ 'ದಿಯಾ' ಖ್ಯಾತಿಯ ನಟ ಪೃಥ್ವಿ ಅಂಬರ್ (Prithvi Ambaar) ಅವರು ಸಹ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಡುಗಡೆಯಾದ 'ಬೈರಾಗಿ' ಚಿತ್ರದ ಸಣ್ಣ ಟೀಸರ್‌ನಲ್ಲಿ ಶಿವಣ್ಣ ಹುಲಿ ವೇಷದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಬ್ಬರಿಸಿದ್ದಾರೆ. ಜೊತೆಗೆ ಅದ್ದೂರಿ ಆ್ಯಕ್ಷನ್ ದೃಶ್ಯಗಳು ಈ ಸಿನಿಮಾದಲ್ಲಿ ಇರಲಿವೆ ಎಂಬುದಕ್ಕೆ ಟೀಸರ್ ಮೂಲಕ ಕಾಣಬಹುದಾಗಿದೆ. 'ಬೈರಾಗಿ' ಟೀಸರ್ ನೋಡಿ ಅಭಿಮಾನಿಗಳು (Fans) ಸಖತ್ ಖುಷಿ ಆಗಿದ್ದು, ನಾಳೆಯಿಂದ (ಮಾ.17) ಚಿತ್ರಮಂದಿರಗಳಲ್ಲೂ ಸಹ ಈ ಟೀಸರ್ ಬಿಡುಗಡೆಯಾಗಲಿದೆ. ಮಾತ್ರವಲ್ಲದೇ ದೊಡ್ಡ ಪರದೆಯಲ್ಲಿ ನೋಡಿ ಎಂಜಾಯ್ ಮಾಡಲು 'ಸೆಂಚುರಿ ಸ್ಟಾರ್' ಶಿವರಾಜ್‌ಕುಮಾರ್ ಅಭಿಮಾನಿಗಳು ಸಜ್ಜಾಗಿದ್ದಾರೆ. ಜೆಪಿ ಮ್ಯೂಸಿಕ್ (JP Music) ಯೂಟ್ಯೂಬ್ ಚಾನೆಲ್‌ನಲ್ಲಿ ಚಿತ್ರದ ಟೀಸರ್ ರಿಲೀಸ್ ಆಗಿದೆ.
Shiva Rajkumar: ಸಂಕ್ರಾಂತಿ ಹಬ್ಬಕ್ಕೆ 'ಬೈರಾಗಿ' ಚಿತ್ರದ ಪೋಸ್ಟರ್ ರಿಲೀಸ್
'ಬೈರಾಗಿ' ಚಿತ್ರದ ಟೀಸರ್‌ನಲ್ಲಿ ಡೈಲಾಗ್ಗಳು ಗಮನ ಸೆಳೆಯುತ್ತಿದ್ದು, 'ವೇಷ ಹಾಕ್ದಾಗ ಮಾತ್ರ ಅಲ್ಲ, ನಾವು ಯಾವಾಗಲೂ ಹುಲಿನೇ ಅಂತ ಹೇಳಿ ದೊಡ್ಡೋರು ಬೆಳೆಸಿದ್ರು. ನಾನು ಬೆಳೀತಾ ಬೆಳೀತಾ ಆ ಹುಲಿನೂ ನನ್ ಜೊತೆ ಬೆಳೆದುಬಿಡ್ತು' ಎಂಬ ಖಡಕ್ ಡೈಲಾಗ್ ಮೂಲಕ ಟೀಸರ್ ಆರಂಭ ಆಗುತ್ತದೆ. 'ಹುಲಿ ಎಂದರೆ ಯಾವಾಗಲೂ ಕೋಪದಲ್ಲೇ ಇರಬೇಕಾ? ಕಾಯೋದು ಮಲಗೋದು ಕೂಡ ಅದರ ಗುಣ ತಾನೇ? ಮಲಗಿರಲಿ. ಒಂದು ಕಣ್ಣು ತೆಗೆದುಕೊಂಡು ಮಲಗಿರಲಿ. ಯಾವಾಗ ಬೇಕೋ ಆಗ ಎದ್ದೇಳಲಿ' ಎಂಬ ಕೌಂಟರ್ ಸಹ ಗಮನ ಸೆಳೆಯುತ್ತಿದೆ. ಈ ಚಿತ್ರಕ್ಕೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದಾರೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ 'ಬೈರಾಗಿ' ಚಿತ್ರವನ್ನು ನಿರ್ಮಿಸಿದ್ದಾರೆ. ರಾಜ್ಯಾದ್ಯಂತ ಜಗದೀಶ್ ಗೌಡ ಈ ಸಿನಿಮಾವನ್ನು ವಿತರಣೆ ಮಾಡಲಿದ್ದಾರೆ.