ಅಕ್ಷಯ ತೃತೀಯದಂದು ಯುವರಾಜ್ಕುಮಾರ್ ಮತ್ತು ರಿತನ್ಯಾ ವಿಜಯ್‌ಕುಮಾರ್ ಅಭಿನಯದ ಸೂರಿ ನಿರ್ದೇಶನದ ಹೊಸ ಚಿತ್ರಕ್ಕೆ ಚಾಲನೆ ದೊರಕಿದೆ. ಪಿಆರ್‌ಕೆ, ಕೆಆರ್‌ಜಿ ಮತ್ತು ಜಯಣ್ಣ ಫಿಲ್ಮ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ದುನಿಯಾ ವಿಜಯ್ ಕ್ಲಾಪ್ ಮಾಡಿದರೆ, ಧೃತಿ ಪುನೀತ್ ರಾಜ್‌ಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು. ಚಿತ್ರದ ಚಿತ್ರೀಕರಣ ಮೇ ತಿಂಗಳಿನಲ್ಲಿ ಆರಂಭವಾಗಲಿದೆ.

ಅಕ್ಷಯ ತೃತೀಯಕ್ಕೆ ಸೂರಿ ಹೊಸ ಸಿನಿಮಾಗೆ ಚಾಲನೆ..ಯುವ-ರಿತನ್ಯಾ ಚಿತ್ರಕ್ಕೆ ಎಕ್ಕ ನಿರ್ಮಾಪಕರು ಸಾಥ್‌, ಪಿಆರ್‌ಕೆ-ಕೆಆರ್‌ಜಿ-ಜಯಣ್ಣ ಫಿಲ್ಮಂ ಬ್ಯಾನರ್‌ನಡಿ ಮತ್ತೊಂದು ಸಿನಿಮಾ..ಯುವ-ರಿತನ್ಯಾಗೆ ಸೂರಿ ಆಕ್ಷನ್‌ ಕಟ್‌!

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ (Ashwini Puneeth Rajkumar) ಅವರ ಪಿಆರ್‌ಕೆ (PRK), ಕಾರ್ತಿಕ್‌ ಗೌಡ (Karthik Gowda) ಹಾಗೂ ಯೋಗಿ ಜಿ ರಾಜ್‌ (Yogi G Raj) ಒಡೆತನದ ಕೆಆರ್‌ಜಿ ಹಾಗೂ ಜಯಣ್ಣ-ಭೋಗಣ್ಣ ಅವರ ಜಯಣ್ಣ ಫಿಲ್ಮಂಸ್‌ ಬ್ಯಾನರ್‌ನಡಿ ಎಕ್ಕ ಸಿನಿಮಾ ಅದ್ಧೂರಿಯಾಗಿ ತಯಾರಾಗುತ್ತಿದೆ. ಈ ಚಿತ್ರ ಬಿಡುಗಡೆಗೂ ಮುನ್ನವೇ ಈ ಪ್ರೊಡಕ್ಷನ್ಸ್‌ ನಡಿ ಹೊಸ ಸಿನಿಮಾ ಘೋಷಣೆಯಾಗಿದೆ.

ಬಹಳ ದಿನಗಳಿಂದ ಕೇಳಿ ಬರ್ತಿದ್ದ ಯುವರಾಜ್‌ಕುಮಾರ್‌ ಹಾಗೂ ಸುಕ್ಕ ಸೂರಿ ಸಿನಿಮಾಗೆ ಇಂದು ಅಧಿಕೃತ ಚಾಲನೆ ಸಿಕ್ಕಿದೆ. ಅಕ್ಷಯ ತೃತೀಯದಿನವಾದ ಇಂದು ಬೆಂಗಳೂರಿನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ನೆರವೇರಿದೆ. ಸ್ಯಾಂಡಲ್‌ವುಡ್‌ ಸಲಗ ದುನಿಯಾ ವಿಜಯ್‌ಕುಮಾರ್‌ ಕ್ಲ್ಯಾಪ್‌ ಮಾಡಿದ್ದು, ಅಪ್ಪು ಅವರ ಮಗಳು ಧೃತಿ ಪುನೀತ್ ರಾಜ್ಕುಮಾರ್ ಕ್ಯಾಮೆರಾ ಚಾಲನೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಯುವ ಫ್ಯಾಮಿಲಿ, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಕಾರ್ತಿಕ್‌ ಗೌಡ, ಯೋಗಿ ಜಿ ರಾಜ್‌, ನಿರ್ದೇಶಕ ಸೂರಿ ಸೇರಿದಂತೆ ಇಡೀ ಚಿತ್ರತಂಡ ಉಪಸ್ಥಿತರಿದ್ದರು.

ಸುಕ್ಕ ಸೂರಿ ರಾ ಸ್ಟೈಲ್‌ ಮೇಕಿಂಗ್‌ಗೆ ಫೇಮಸ್..ಹೀಗಾಗಿ ಯುವ ಅವರ ಗರಡಿಯಲ್ಲಿ ಯಾವ ರೀತಿ ಕಾಣಿಸಲಿದ್ದಾರೆ ಎಂಬ ಕುತೂಹಲವಿದೆ. ಇನ್ನು, ದುನಿಯಾ ವಿಜಯ್‌ ಮೊದಲ ಪುತ್ರಿ ರಿತನ್ಯಾ ವಿಜಯ್‌ ಕುಮಾರ್‌ ಈ ಚಿತ್ರದ ನಾಯಕಿ. ಈಗಾಗಲೇ ಅಪ್ಪನ ಜೊತೆ ಲ್ಯಾಂಡ್‌ ಲಾರ್ಡ್‌ ಸಿನಿಮಾ ಮೂಲಕ ಇಂಡಸ್ಟ್ರೀಗೆ ಬಲಗಾಲಿಟ್ಟಿರುವ ರಿತನ್ಯಾಗೆ ಇದು ಎರಡನೇ ಸಿನಿಮಾವಾದರೆ, ಯುವರಾಜ್‌ ಕುಮಾರ್ ಗೆ ಇದು ಮೂರನೇ ಚಿತ್ರ..

ಸೂರಿ ಗರಡಿಯಲ್ಲಿ ಖಾಯಂ ಆಗಿ ಕೆಲಸ ಮಾಡುವ ದೀಪು ಎಸ್‌ ಕುಮಾರ್‌ ಸಂಕಲನ, ಚರಣ್‌ ರಾಜ್‌ ಸಂಗೀತ ನಿರ್ದೇಶನ, ಸಂತೋಷ್‌ ಕಲಾ ನಿರ್ದೇಶನ, ಶೇಖರ್‌ ಕ್ಯಾಮೆರಾ ವರ್ಕ್‌ ಈ ಚಿತ್ರಕ್ಕೆ ಇರಲಿದೆ. ಮೇ ತಿಂಗಳಾತ್ಯಂತಕ್ಕೆ ಚಿತ್ರತಂಡ ಶೂಟಿಂಗ್‌ ಅಖಾಡಕ್ಕೆ ಇಳಿಯಲಿದೆ. ಪ್ರತಿಷ್ಠಿತ ಮೂರು ನಿರ್ಮಾಣ ಸಂಸ್ಥೆಯಡಿ ಬರ್ತಿರುವ ಸಿನಿಮಾ ಬಹಳ ದೊಡ್ಡಮಟ್ಟದಲ್ಲಿ ತಯಾರಗಲಿದೆ.

ಜೂನ್‌ಗೆ ಎಕ್ಕ:
ಪಿಆರ್‌ಕೆ-ಕೆಆರ್‌ಜಿ-ಜಯಣ್ಣ ಫಿಲ್ಮಂ ಬ್ಯಾನರ್‌ನಡಿ ಬರ್ತಿರುವ ಯುವರಾಜ್‌ ಕುಮಾರ್‌ ನಾಯಕನಾಗಿ ಹಾಗೂ ರೋಹಿತ್‌ ಪದಕಿ ನಿರ್ದೇಶನದ ಎಕ್ಕ ಸಿನಿಮಾ ಜೂನ್‌ ತಿಂಗಳಲ್ಲಿ ತೆರೆಗೆ ಬರಲಿದೆ. ಸದ್ಯ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈಗಾಗಲೇ ರಿಲೀಸ್‌ ಆಗಿರುವ ಟೀಸರ್‌ ಹಾಗೂ ಟೈಟಲ್‌ ಟ್ರ್ಯಾಕ್‌ ದೊಡ್ಡ ಮಟ್ಟದ ಹಿಟ್‌ ಕಂಡಿದೆ.

ಇನ್ನು, ಇತ್ತೀಚೆಗೆ ನಡೆದ ಪಹಲ್ಗಾಮ್ ದಾಳಿಯ ಬಗ್ಗೆ ಯುವ ರಾಜ್‌ಕುಮಾರ್ ಮಾತನ್ನಾಡಿದ್ದಾರೆ. ಈ ಬಗ್ಗೆ ಅವರು '

'ಉಗ್ರರಿಗೆ ತಕ್ಕ ಶಿಕ್ಷೆ ಆಗ್ಬೇಕು' ಎಂದು ನಟ ಯುವ ರಾಜ್‍ಕುಮಾರ್ ಆಗ್ರಹ ಮಾಡಿದ್ದಾರೆ. ಈ ಬಗ್ಗೆ ಯುವ ರಾಜ್‌ಕುಮಾರ್ 'ಕಾಶ್ಮೀರದ ಪಹಲ್ಗಾಂನಲ್ಲಿ ನಡೆದಿರೋ ದಾಳಿ ಖಂಡನೀಯ. ಈ ರೀತಿ ಮುಗ್ಧ ಜನರನ್ನು ಕೊಲ್ಲೋದು ಸರಿಯಲ್ಲ. ದಾಳಿ ನಡೆಸಿದ ಉಗ್ರರಿಗೆ ತಕ್ಕ ಶಿಕ್ಷೆ ಆಗ್ಬೇಕು.. ಮತ್ತೆ ಮತ್ತೆ ಈ ರೀತಿಯ ದಾಳಿ ಆಗ್ತಿದ್ದು, ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಬೇಕು. ಕಾಶ್ಮೀರದಲ್ಲಿ ಯುವ ಸಾಂಗ್ ಶೂಟ್ ಆಗಿದೆ. ಯುವ ಸಿನಿಮಾದ ಹಾಡೊಂದನ್ನು ನಾವು ಲಡಾಕ್ನಲ್ಲಿ ಚಿತ್ರೀಕರಣ ನಡೆಸಿದ್ವಿ.. ಅಲ್ಲಿ ದಾಳಿಯ ಯಾವುದೇ ಅನುಭವ ಆಗಿರಲಿಲ್ಲ.. ಅಲ್ಲಿ ಸೇನೆಯ ರಕ್ಷಣೆಯಿತ್ತು. ಯಾವುದೇ ಅಹಿತಕರ ಘಟನೆಗಳು ಆಗಿರಲಿಲ್ಲ.' ಎಂದಿದ್ದಾರೆ ಬರ್ತ್‌ಡೇ ಬಾಯ್ ಯುವ ರಾಜ್‌ಕುಮಾರ್. 

ಅಂದಹಾಗೆ, ಕಾರ್ತಿಕ್ ಗೌಡ ನಿರ್ಮಾಣದ 'ಎಕ್ಕ' ಸಿನಿಮಾ ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗಿದೆ. ಟೀಸರ್ ಬಿಡುಗಡೆ ಮಾಡುವ ಮೂಲಕ ಸಿನಿಮಾದ ಪ್ರಚಾರ ಶುರು ಮಾಡುತ್ತಿದೆ ಚಿತ್ರತಂಡ. ಆದರೆ, ಟೀಸರ್ ಬಿಡುಗಡೆಯನ್ನು ಬೆಳಿಗ್ಗೆ ಬದಲು ಸಂಜೆ ಮಾಡುತ್ತಿದೆ ಎಕ್ಕ ಟೀಂ. ಈ ಚಿತ್ರದ ಬಗ್ಗೆ ಕನ್ನಡ ಸಿನಿಪ್ರೇಕ್ಷಕರು ಹಾಗೂ ಕನ್ನಡ ಸಿನಿಉದ್ಯಮದಲ್ಲಿ ಸಾಕಷ್ಟು ನಿರೀಕ್ಷೆ ಮನೆಮಾಡಿದೆ. ಯುವ ಸಿನಿಮಾದ ಬಳಿಕ, ಈ ಚಿತ್ರದ ಬಗ್ಗೆ ನಿರೀಕ್ಷೆ ಮಾಡಿದ್ದು, ಯುವ ನಟನೆಯ ಸಿನಿಮಾ ತೆರೆಗೆ ಬರುವುದನ್ನು ಕಾಯುತ್ತಿದ್ದಾರೆ.