ಅಪ್ಪು ಅಭಿನಯದ ಕೊನೆಯ ಚಿತ್ರ 'ಜೇಮ್ಸ್‌'. ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿರುವ ನಡುವೆಯೆ ಪುನೀತ್ ನಿಧನ ಬೇಸರ ತರಿಸಿತ್ತು. ನಿರ್ದೇಶಕ ಚೇತನ್ ಕುಮಾರ್ ಇದೇ ಮೊದಲ ಬಾರಿಗೆ ಪುನೀತ್‍ಗೆ ಆ್ಯಕ್ಷನ್ ಕಟ್ ಹೇಳಿದ್ದರು. 

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ (Puneeth Rajkumar)​ ನಿಧನರಾಗಿದ್ದು, ಇಡೀ ಭಾರತ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದ್ದು, ಕೋಟ್ಯಂತರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಅಪ್ಪು ಅಭಿನಯದ ಕೊನೆಯ ಚಿತ್ರ 'ಜೇಮ್ಸ್‌' (James). ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿರುವ ನಡುವೆಯೆ ಪುನೀತ್ ನಿಧನ ಬೇಸರ ತರಿಸಿತ್ತು. ನಿರ್ದೇಶಕ ಚೇತನ್ ಕುಮಾರ್ (Chetan Kumar) 'ಜೇಮ್ಸ್ ಸಿನಿಮಾ' ಮೂಲಕ ಇದೇ ಮೊದಲ ಬಾರಿಗೆ ಪುನೀತ್‍ಗೆ ಆ್ಯಕ್ಷನ್ ಕಟ್ ಹೇಳಿದ್ದರು. ಈ ಚಿತ್ರದಲ್ಲಿ ಪುನೀತ್‌ ವಿಶೇಷ ಸ್ಟಂಟ್ಸ್‌, ಹೈವೋಲ್ಟೇಜ್‌ ಆ್ಯಕ್ಷನ್‌ ಜೊತೆಗೆ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದರು. 

ಇದೀಗ 'ಜೇಮ್ಸ್‌' ಚಿತ್ರದ ಚಿತ್ರೀಕರಣ ಮತ್ತೆ ಆರಂಭವಾಗಿದೆ. ಹೌದು! ಚಿತ್ರದ ಟಾಕಿ ಪೋಷನ್ ಶೂಟಿಂಗ್ ಬಾಕಿ ಇತ್ತು. ಹಾಗಾಗಿ ಪುನೀತ್‌ ಇಲ್ಲದೇ ಚಿತ್ರೀಕರಣವನ್ನು ಇಂದಿನಿಂದ ಚಿತ್ರತಂಡ ಶುರು ಮಾಡಿದ್ದಾರೆ. ಅಪ್ಪು ಇಲ್ಲದೆ ಚಿತ್ರೀಕರಣ ಶುರು ಮಾಡಿದ್ದಕ್ಕೆ ಕಥೆಯಲ್ಲಿ ಏನಾದರೂ ಬದಲಾವಣೆ ಇರಬಹುದಾ ಅನ್ನುವ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿಯನ್ನು ನೀಡಿಲ್ಲ. ವಿಶೇಷವಾಗಿ ಪುನೀತ್ ಹುಟ್ಟುಹಬ್ಬದ ದಿನ ಮಾರ್ಚ್ 17ಕ್ಕೆ 'ಜೇಮ್ಸ್‌' ಸಿನಿಮಾ‌ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಚಿತ್ರದ ಸ್ಯಾಟಲೈಟ್ ಹಕ್ಕುಗಳು ಈಗಾಗಲೇ 15 ಕೋಟಿಗೆ ಮಾರಾಟವಾಗಿದೆ. 

'ಜೇಮ್ಸ್' ಚಿತ್ರಕ್ಕೆ ಪುನೀತ್‌ ಅವರದ್ದೇ ವಾಯ್ಸ್: ಚಿತ್ರತಂಡ ನಿರ್ಧಾರ

ಇನ್ನು, ಈ ಹಿಂದೆ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಪುನೀತ್ ಜೊತೆಗಿನ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಶೇರ್ ಮಾಡಿಕೊಂಡಿದ್ದು, ಸಖತ್ ವೈರಲ್ ಆಗಿತ್ತು. 'ಪುನೀತ್ ಬಾಸ್ ಅವರ ಮನೆಯಲ್ಲಿ 'ಜೇಮ್ಸ್' ಚಿತ್ರದ ಕೊನೆಯ ಶಾಟ್, 3ಡಿ ಲಿರಿಕಲ್ ವಿಡಿಯೋ ಇಂಟ್ರೋ ಟ್ರ್ಯಾಕ್‌ ಅನ್ನು ಚಿತ್ರೀಕರಿಸಿದ್ದೇವೆ. ಹಾಗೂ ಈ ವಿಡಿಯೋದಲ್ಲಿ ಪುನೀತ್ ರಾಜ್‌ಕುಮಾರ್ ಭರ್ಜರಿಯಾಗಿ ಪೋಸ್ ಕೊಟ್ಟಿದ್ದಾರೆ. ಜೊತೆಗೆ 'ಜನುಮಕ್ಕಾಗುವಷ್ಟು ನೆನಪುಗಳನ್ನು ಕೊಟ್ಟಿದ್ದೀರಿ. ಪ್ರೋತ್ಸಾಹಿಸಿ ಬೆನ್ನು ತಟ್ಟಿದ್ದೀರಿ. ನೀವಿಲ್ಲ ಎಂದು ಊಹಿಸಿಕೊಳ್ಳುವುದು ಅಸಾಧ್ಯ. ಕನ್ನಡದ ರಾಯಭಾರಿಯಾಗಿ, ಅಗೋಚರ ಶಕ್ತಿಯಾಗಿ ನೀವು ನಮ್ಮನ್ನ ಹರಸುತ್ತೀರಿ, ಮುನ್ನಡೆಸುತ್ತಿರಿ. ನಿಮ್ಮ ನೆನಪುಗಳು ನನ್ನೊಳಗೆ ಸದಾ ಜೀವಂತ. ಜನುಮ ಜನುಮಕ್ಕೂ ಸದಾ ಚಿರ ಋಣಿ'ಎಂದು ಚೇತನ್ ಕುಮಾರ್ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಮಾಡಿದ್ದರು. 



'ಜೇಮ್ಸ್'​ನಲ್ಲಿ ನಾಯಕಿಯಾಗಿ ಕಾಲಿವುಡ್‌ ನಟಿ ಪ್ರಿಯಾ ಆನಂದ್ (Priya Anand) ನಟಿಸುತ್ತಿದ್ದಾರೆ. 'ರಾಜಕುಮಾರ' ಚಿತ್ರದಲ್ಲಿ ಪುನೀತ್ ತಂದೆಯಾಗಿ ಅಭಿನಯಿಸಿದ್ದ, ಹಿರಿಯ ತಮಿಳು ನಟ ಶರತ್ ಕುಮಾರ್ (Sarathkumar) ಈ ಚಿತ್ರದಲ್ಲಿ ಸ್ಟೈಲಿಶ್ ವಿಲನ್ (Vilain) ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಕ್ರಮಣಕಾರ ಸ್ವಭಾವದ ಪಾತ್ರ ಎನ್ನಲಾಗಿದೆ. ಚಿತ್ರಕ್ಕೆ ಎ. ಹರ್ಷ ಕೊರಿಯೋಗ್ರಫಿ, ಸ್ಟಂಟ್ ಮಾಸ್ಟರ್ ವಿಜಯ್ ಫೈಟಿಂಗ್ ದೃಶ್ಯಾವಳಿಗಳನ್ನು ನಿರ್ದೇಶಿಸಿದ್ದಾರೆ ಹಾಗೂ ನಿರ್ಮಾಪಕ ಕಿಶೋರ್ ಪತಿಕೊಂಡ (Kishor Patikonda) ಬಂಡವಾಳ ಹೂಡಿದ್ದಾರೆ.

'ಯುವರತ್ನ'ನಾಗಿಯೇ ಅಗಲಿದ ಅಪ್ಪು, 'ಜೇಮ್ಸ್‌'ಗೆ ವಿಧಿ ಕೊಟ್ಟಿಲ್ಲ ಚಾನ್ಸ್

'ಟಗರು' ಖ್ಯಾತಿಯ ಚರಣ್ ರಾಜ್ ಸಂಗೀತ ಸಂಯೋಜನೆ, ಶ್ರೀಷ ಛಾಯಾಗ್ರಹಣ, ರವಿಸಂತೆ ಹೈಕ್ಲು ಕಲಾ ನಿರ್ದೇಶನ ಸೇರಿದಂತೆ ದೀಪು ಎಸ್‌.ಕುಮಾರ್‌ ಸಂಕಲನ ಇರುವ ಈ ಚಿತ್ರದಲ್ಲಿ ತೆಲುಗು ನಟ ಶ್ರೀಕಾಂತ್, ಆದಿತ್ಯ ಮೆನನ್, ಅನು ಪ್ರಭಾಕರ್, ರಂಗಾಯಣ ರಘು ಮತ್ತು ಮುಕೇಶ್ ರಿಷಿ ಸೇರಿದಂತೆ ದೊಡ್ಡ ತಾರಾಗಣವಿದೆ. ಇನ್ನು ಪುನೀತ್ ಅವರ ಡ್ರೀಮ್ ಪಾಜೆಕ್ಟ್ 'ಗಂಧದ ಗುಡಿ' (Gandhada Gudi) ಡಾಕ್ಯುಮೆಂಟರಿಯ ಟೈಟಲ್ ಟೀಸರ್ ಡಿಸೆಂಬರ್ 6ರಂದು ಬೆಳಗ್ಗೆ 10 ಗಂಟೆಗೆ 'ಪಿಆರ್‌ಕೆ ಆಡಿಯೋ'ದ (PRK Audio) ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ.