Asianet Suvarna News Asianet Suvarna News

ಪುನೀತ್ ಆತ್ಮದ ಜೊತೆಗೆ ರಾಮಚಂದ್ರ ಗುರೂಜಿ ಮಾತುಕತೆ, ಮಗಳ ಹೊಟ್ಟೆಯಲ್ಲಿ ಹುಟ್ಟಿ ಬರುವೆ ಎಂದ ಅಪ್ಪು

ಅಪ್ಪು ಚಿಕ್ಕ ವಯಸ್ಸಿನಲ್ಲಿ ನಮ್ಮನ್ನಗಲಿದಾಗ  ಎಲ್ಲರಿಗೂ ಶಾಕ್ ಆಗಿತ್ತು. ಇದೀಗ ಆಧ್ಯಾತ್ಮ ಗುರು ಶ್ರೀ ರಾಮಚಂದ್ರ ಗುರೂಜಿ ಅವರು ಅಪ್ಪು ಆತ್ಮದ ಜೊತೆಗೆ  ಮಾತನಾಡಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ.

Dr  Sri Ramachandra Guruji revealed puneeth rajkumar soul talk gow
Author
First Published Jun 25, 2024, 4:48 PM IST

ಕನ್ನಡದ ಸ್ಟಾರ್ ನಟ ಪುನೀತ್ ರಾಜಕುಮಾರ್  ಅವರು ನಮ್ಮನಗಲಿ 2 ವರ್ಷಗಳೇ ಕಳೆದಿದೆ. ಆದರೂ ಅವರು ಕರ್ನಾಟಕದ ಮನೆ ಮನದಲ್ಲಿ ಅಜರಾಮರವಾಗಿದ್ದಾರೆ. ಇದೀಗ ವಿಷ್ಯ ಅದಲ್ಲ ಅಪ್ಪು ಚಿಕ್ಕ ವಯಸ್ಸಿನಲ್ಲಿ ನಮ್ಮನ್ನಗಲಿದಾಗ ಅವರ ಆತ್ಮದ ಜೊತೆಗೆ ಮಾತುಕತೆ ನಡೆಸಿದ್ದೇವೆ ಎಂದೆಲ್ಲ ಹಲವು ಸುದ್ದಿಗಳಾಗಿತ್ತು. ವಿದೇಶದಲ್ಲಿ ಆತ್ಮದ ಜೊತೆಗೆ ಮಾತನಾಡಿರುವ ಬಗ್ಗೆ ಸುದ್ದಿಯಾಯ್ತು.

ನಿರ್ದೇಶಕ ತರುಣ್ ಸುಧೀರ್ ಹೃದಯದಲ್ಲಿ ಬೆಳಕಿನ ಕವಿತೆ ಬರೆದ ಬ್ಯೂಟಿಫುಲ್ ನಟಿ!, ಮದುವೆ ಬಗ್ಗೆ ಏನಂದ್ರು?

ಇದೀಗ ಪ್ರಸಿದ್ಧ ಆಧ್ಯಾತ್ಮೀಕ ಗುರುಗಳು, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಡಾ. ಶ್ರೀ ರಾಮಚಂದ್ರ ಗುರೂಜಿ ಅವರು ಈ ಬಗ್ಗೆ ರಾಜೇಶ್ ಗೌಡ ಅವರ ಪಾಡ್‌ಕಾಸ್ಟ್ ನಲ್ಲಿ ಆತ್ಮದ ಬಗ್ಗೆ ಮಾತನಾಡಿದ್ದಾರೆ. ಸಾವಿನ ನಂತರ ದೇಹದಿಂದ ಹೊರಬಂದಿರುವುದು ಆತ್ಮಕ್ಕೆ ಎಲ್ಲಾ ತಿಳಿಯುತ್ತದೆ. ತಂದೆ ತಾಯಿ ಕುಟುಂಬದವರು ಅಳುವುದು ಗೊತ್ತಾಗುತ್ತೆ. ಅದು ದೇಹ ಬೇಕೆಂದು ಹುಡುಕುತ್ತಿರುತ್ತದೆ. ಅದಕ್ಕಾಗಿಯೇ ಆತ್ಮಕ್ಕೆ ತಿಳಿಯಲಿ ಎಂದೇ ನಾವು ಸಂಸ್ಕಾರಗಳನ್ನು ಮಾಡುತ್ತೇವೆ. ಆತ್ಮದ ಸಮಯ ಮುಗಿದಿದೆ. ಬಂದ ಕೆಲಸ ಮುಗಿದಿದೆ. ನೀನು ಇನ್ನೊಂದು ದೇಹಕ್ಕೆ ಹೋಗಬೇಕು ಎಂದು  ತಿಳಿಸಲು ನಾವು ಸಂಸ್ಕಾರಗಳನ್ನು ಮಾಡುತ್ತೇವೆ ಎಂದಿದ್ದಾರೆ.

ಉತ್ತರ ಕರ್ನಾಟಕ, ತುಮಕೂರು ಭಾಗದ ಪ್ರಯಾಣಿಕರಿಗೆ ಸಂಕಷ್ಟ, 8 ರೈಲುಗಳ ಸಂ ...

ಸತ್ತ ವ್ಯಕ್ತಿಯ ಆತ್ಮದ ಜೊತೆ ಸಂಭಾಷಣೆ ಮಾಡಲು ಸಾಧ್ಯವಿದೆ. ಆತ್ಮ ಸಂಭಾಷಣೆ ಅದೊಂದು ವಿದ್ಯೆ. ಎಂದಿರುವ ಅವರು ಅಪ್ಪು ಆತ್ಮದ ಜೊತೆಗೆ ಸತ್ತ ಕೆಲವೇ ದಿನಗಳಲ್ಲಿ ಮಾತನಾಡಿದ್ದೆ,  ಈ ಸಂಭಾಷಣೆಯನ್ನು ನಾನು ಸಾಮಾಜಿಕವಾಗಿ ಬಹಿರಂಗವಾಗಿ ಮಾಡಿಲ್ಲ. ನನ್ನ ವೈಯಕ್ತಿಕ ಮಾಹಿತಿಗೋಸ್ಕರ ನಾನು ಮಾಡಿದ್ದೆ. ಯಾಕಂದ್ರೆ ಅವರ ಅಭಿಮಾನಿಗಳು ಕೋಟ್ಯಾಂತರ ಲೆಕ್ಕದಲ್ಲಿ ಇದ್ದಾರೆ. ಪಬ್ಲಿಕ್ ಪ್ಲಾಟ್‌ಫಾರ್ಮ್‌ನಲ್ಲಿ ಮಾಡಿದರೆ, ಬರುವ ಪ್ರಶ್ನೆಗಳು, ಅದನ್ನು ತಡೆದುಕೊಳ್ಳುವ ಶಕ್ತಿ ನಮಗೆ ಇರಲಿಲ್ಲ.

ನನ್ನ ಮೊದಲ ಪ್ರಶ್ನೆ ಅಪ್ಪು ಅವರೇ ನಿಮ್ಮ ಸಾವಿನ ಬಗ್ಗೆ ಅನೇಕ ಅಪೋಹಳಿವೆ ಇದು ನಿಜನಾ? ಈ ಪ್ರಶ್ನೆಗೆ ಇಲ್ಲ ನಾನು ಹೃದಯ ಸಂಬಂಧಿ ಖಾಯಿಲೆಯಿಂದ ಮೃತಪಟ್ಟಿದ್ದೇನೆ ಎಂದರು. ಎರಡನೇ ಪ್ರಶ್ನೆ ದೇಹದಿಂದ ಬಿಟ್ಟು ಹೋದ್ರಲ್ಲ ಈಗ ಎಲ್ಲಿದ್ದೀರಿ ಎಂದು ಕೇಳಿದ್ದೆ. ಅದಕ್ಕೆ ಅವರು ಅಪ್ಪ-ಅಮ್ಮನ ಹುಡುಕಾಟದಲ್ಲಿ ಇದ್ದೇನೆ ಎಂದಿದ್ದರು. ಮೂರನೇ ಪ್ರಶ್ನೆ ಕೇಳಿದ್ದು, ಮತ್ತೆ ಹುಟ್ಟಿ ಬರ್ತಿರಾ ಅಂತ. ಅದರ ಬಗ್ಗೆ ಯೋಚನೆ ಮಾಡಿಲ್ಲ. ಒಂದೊಮ್ಮೆ ಹುಟ್ಟಿಬರುವುದಾದರೆ ನಾನು ನನ್ನ ಮಗಳ ಹೊಟ್ಟೆಯಲ್ಲಿ ಹುಟ್ಟಿ ಬರುತ್ತೇನೆ. ಇದಿಷ್ಟು ಆತ್ಮದ ಜತೆ ಸಂಭಾಷಣೆ ಮಾಡಿ ತಿಳಿದುಕೊಂಡಿದ್ದು ಎಂದಿದ್ದಾರೆ.

ಅವರ ಸಾವಿನ ಬಗ್ಗೆ ಸಾಕಷ್ಟು ಕುತೂಹಲ ವ್ಯಕ್ತವಾಗುದ್ದರಿಂದ, ನಾವು ನಮ್ಮ ಸಂಶೋಧನೆಗಾಗಿ. ಖಾಸಗಿ ಭಂಡಾರಕ್ಕಾಗಿ ಮಾಡಿದ್ದು ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಅಪ್ಪು ಅಂತಹ ಸುಂದರ ವ್ಯಕ್ತಿತ್ವದ  ಆತ್ಮಗಳಿಗೆ ಸದ್ಗತಿ ಕೂಡ ಆಗಬಹುದು. ಅಥವಾ ಮರುಹುಟ್ಟು ಆಗಬಹುದು ಎಂದಿದ್ದಾರೆ.

Latest Videos
Follow Us:
Download App:
  • android
  • ios