ನಿಟ್ಟೂರು-ಸಂಪಿಗೆ ರಸ್ತೆ ರೈಲ್ವೆ ನಿಲ್ದಾಣ ನಡುವಿನ ಲೇವಲ್‌ ಕ್ರಾಸಿಂಗ್‌ನಲ್ಲಿ ಗರ್ಡರ್‌ ಅಳವಡಿಕೆ ಸಂಬಂಧಿತ ಕಾಮಗಾರಿ ಹಿನ್ನೆಲೆಯಲ್ಲಿ ಜೂ.27ರಿಂದ ಜು.4ರವರೆಗೆ ಈ ಮಾರ್ಗದ 8 ರೈಲು ರದ್ದಾಗಲಿದೆ.

ಬೆಂಗಳೂರು (ಜೂ.25): ನಿಟ್ಟೂರು-ಸಂಪಿಗೆ ರಸ್ತೆ ರೈಲ್ವೆ ನಿಲ್ದಾಣ ನಡುವಿನ ಲೇವಲ್‌ ಕ್ರಾಸಿಂಗ್‌ನಲ್ಲಿ ಗರ್ಡರ್‌ ಅಳವಡಿಕೆ ಸಂಬಂಧಿತ ಕಾಮಗಾರಿ ಹಿನ್ನೆಲೆಯಲ್ಲಿ ಜೂ.27ರಿಂದ ಜು.4ರವರೆಗೆ ಈ ಮಾರ್ಗದ ಎಂಟು ರೈಲುಗಳ ಸಂಚಾರ ರದ್ದಾಗಿದ್ದು, ಐದು ರೈಲುಗಳನ್ನು ಭಾಗಶಃ ರದ್ದಾಗಲಿದೆ. ಇದರಿಂದ ಉತ್ತರ ಕರ್ನಾಟಕ, ತುಮಕೂರು ಭಾಗದ ಪ್ರಯಾಣಿಕರ ಪರದಾಟ ಅನಿವಾರ್ಯಯವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ, ವಂದೇ ಭಾರತ ರೈಲು ಬೆಳಗಾವಿಗೆ ವಿಸ್ತರಿಸಲು ಚರ್ಚೆ

ತುಮಕೂರು-ಚಾಮರಾಜನಗರ (07346), ಚಾಮರಾಜನಗರ-ಮೈಸೂರು (07328), ಚಾಮರಾಜನಗರ-ಯಶವಂತಪುರ (16239), ಯಶವಂತಪುರ-ಚಾಮರಾಜನಗರ (16240), ತುಮಕೂರು-ಕೆಎಸ್‌ಆರ್ ಬೆಂಗಳೂರು (06576), ಕೆಎಸ್‌ಆರ್ ಬೆಂಗಳೂರು-ತುಮಕೂರು (06575), ಯಶವಂತಪುರ-ಶಿವಮೊಗ್ಗ (16579), ಶಿವಮೊಗ್ಗ-ಯಶವಂತಪುರ (16580) ರೈಲುಗಳನ್ನು ರದ್ದು ಮಾಡಲಾಗಿದೆ.

ಭಾಗಶಃ ರದ್ದು: ಇನ್ನು ಕೆಎಸ್‌ಆರ್ ಬೆಂಗಳೂರು-ತುಮಕೂರು-ಕೆಎಸ್‌ಆ‌ರ್ ಬೆಂಗಳೂರು (06571) ರೈಲುಗಳನ್ನು ಹಿರೇಹಳ್ಳಿ-ತುಮಕೂರು ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ತಾಳಗುಪ್ಪ-ಕೆಎಸ್‌ಆರ್ ಬೆಂಗಳೂರು ರೈಲು (06572) , ತಾಳಗುಪ್ಪ ಕೆಎಸ್‌ಆರ್‌ ಬೆಂಗಳೂರು (20652), ಕೆಎಸ್‌ಆರ್ ಬೆಂಗಳೂರು-ಧಾರವಾಡ (ಇಂಟರ್‌ಸಿಟಿ) (12725/6), ರೈಲುಗಳು ಅರಸೀಕರೆ-ಬೆಂಗಳೂರು ನಡುವೆ ಭಾಗಶಃ ರದ್ದು ಮಾಡಲಾಗಿದೆ.

ಕೊಲೆ ಆರೋಪಿ ಪವಿತ್ರಾ ಗೌಡಗೆ ಮೇಕಪ್ ಮಾಡಿಕೊಳ್ಳಲು ಅವಕಾಶ ಕೊಟ್ಟ ಎಸ್‌ಐ ನೇತ್ರಾವತಿಗೆ ನೋಟಿಸ್

ಮಾರ್ಗ ಬದಲು: ವಾಸ್ಕೊಡ ಗಾಮ-ಯಶವಂತಪುರ ರೈಲು (17310), ಮೈಸೂರು- ವಾರಾಣಸಿ (22687), ಯಶವಂತಪುರ-ಜೈಪುರ (82653), ವಿಶ್ವಮಾನವ ಮೈಸೂರು-ಬೆಳಗಾವಿ (17326) ರೈಲು ಅರಸಿಕೆರೆ, ಹಾಸನ, ನೆಲಮಂಗಲ ಮೂಲಕ ಯಶವಂತಪುರಕ್ಕೆ ಬರಲಿವೆ. ಮೈಸೂರು-ಉದಯಪುರ ರೈಲು (19668) ಎಸ್‌ಆ‌ರ್ ಬೆಂಗಳೂರು, ಯಶವಂತಪುರ, ನೆಲಮಂಗಲ, ಹಾಸನ, ಅರಸಿಕೆರೆ, ದಾವಣಗೆರೆಗೆ ತೆರಳಲಿದೆ.

ಬಿಕಾನೀರ್‌-ಯಶವಂತಪುರ ರೈಲು ಜೂ.25ರಿಂದ ಜು.2ರವರೆಗೆ ಸುಮಾರು 2.30ಗಂಟೆ ತಡವಾಗಿ ಸಂಚರಿಸಲಿದೆ. ಉಳಿದಂತೆ ಯಶವಂತಪುರ- ಎಚ್. ನಿಜಾಮುದ್ದೀನ್, ಕೆಎಸ್‌ಆರ್ ಬೆಂಗಳೂರು-ತಾಳಗುಪ್ಪ, ಬೆಳಗಾವಿ-ಮೈಸೂರು, ಚಾಮರಾಜನಗರ-ತುಮಕೂರು, ಯಶವಂತಪುರ-ವಾಸ್ಕೊ ಡ ಗಾಮ, ತುಮಕೂರು-ಶಿವಮೊಗ್ಗ ರೈಲುಗಳ ಸಮಯವನ್ನು 10-55ನಿಮಿಷದವರೆಗೆ ನಿಯಂತ್ರಣ ಆಗಲಿದೆ.

ಇನ್ನು, ಯಶವಂತಪುರ - ವಾಸ್ಕೋಡಿ ಗಾಮ (17309) ರೈಲು 60 ನಿಮಿಷ ವಿಳಂಬವಾಗಲಿದೆ. ತುಮಕೂರು - ಶಿವಮೊಗ್ಗ ನಗರ (06513) ಸುಮಾರು ಒಂದೂವರೆ ಗಂಟೆ ವಿಳಂಬವಾಗಿ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಅಧಿಕಾರಿ ಮಂಜುನಾಥ್ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.