ನೀನೇ ರಾಜಕುಮಾರ್ ಬಯೋಗ್ರಫಿ ನಾಲ್ಕನೇ ಆವೃತ್ತಿಯನ್ನು ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

ಪತ್ರಕರ್ತ ಡಾ.ಶರಣು ಹುಲ್ಲೂರು (Dr Sharanu Hullur) ಬರೆದ ಪುನೀತ್ ರಾಜ್ ಕುಮಾರ್ ಅವರ ಬಯೋಗ್ರಫಿ ‘ನೀನೇ ರಾಜಕುಮಾರ’ ಹನ್ನೊಂದು ತಿಂಗಳಲ್ಲಿ ನಾಲ್ಕನೇ ಮರುಮುದ್ರಣ ಕಂಡಿದ್ದು, ಈ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth Rajkumar) ಅವರು ನಾಲ್ಕನೇ ಆವೃತ್ತಿಯನ್ನು ಇಂದು ಬೆಂಗಳೂರಿನ ಪಿ.ಆರ್.ಕೆ ಕಚೇರಿಯಲ್ಲಿ ಬಿಡುಗಡೆ ಮಾಡಿದರು. ಪುಸ್ತಕದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಲೇಖಕ ಡಾ.ಶರಣು ಹುಲ್ಲೂರು, ಪ್ರಕಾಶಕ ಜಮೀಲ್ ಸಾವಣ್ಣ ಮತ್ತು ಪಿ.ಆರ್.ಕೆಯ ಸತೀಶ್ ಅವರು ಕೂಡ ಹಾಜರಿದ್ದರು. 

Add Asianetnews Kannada as a Preferred SourcegooglePreferred

15 ಮಾರ್ಚ್ 2022ರಂದು ಮೊದಲ ಬಾರಿಗೆ ಈ ಪುಸ್ತಕವನ್ನು ಕಿಚ್ಚ ಸುದೀಪ್ (Kiccha Sudeep) ಅವರು ಬಿಡುಗಡೆ ಮಾಡಿದ್ದರು. ಆನಂತರ ಈ ಪುಸ್ತಕವು ಅಮೆಜಾನ್ (Amazon), ಸಪ್ನಾ (Sapna book house) ಸೇರಿದಂತೆ ಹಲವು ಕಡೆ ಟಾಪ್ ಪಟ್ಟಿಯಲ್ಲಿ ದಾಖಲಾಗಿತ್ತು. ಅಲ್ಲಿಂದ ಈವರೆಗೂ ಸತತ ನಾಲ್ಕು ಮುದ್ರಣಗಳನ್ನು ಕಂಡು ಇನ್ನೂ ದಾಖಲೆ ರೀತಿಯಲ್ಲೇ ಮಾರಾಟವಾಗುತ್ತಿದೆ. ಅಲ್ಲದೇ, ಈ ಪುಸ್ತಕದೊಂದಿಗೆ ಪುನೀತ್ ಅವರ ಸಹಿ ಇರುವಂತಹ ಫೋಟೋ ಮತ್ತು ಬುಕ್ ಮಾರ್ಕ್ ಕೂಡ ಉಚಿತವಾಗಿ ಕೊಡಲಾಗುತ್ತಿದೆ.

ಈ ವರ್ಷದಲ್ಲಿ ಕನ್ನಡದಲ್ಲಿ ಬಂದ ಬಯೋಗ್ರಫಿಯಲ್ಲಿ ಹೆಚ್ಚು ಮಾರಾಟಕಂಡ ಪುಸ್ತಕ ಎನ್ನುವ ಹೆಗ್ಗಳಿಕೆ ‘ನೀನೇ ರಾಜಕುಮಾರ್’ ಪುಸ್ತಕದ್ದು. ಪುನೀತ್ ಅವರ ಬಾಲ್ಯದಿಂದ ಅವರ ನಿಧನದವರೆಗೂ ಅವರ ಬದುಕನ್ನು ಲೇಖಕರು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಪುನೀತ್ ಅವರ ಸಿನಿಮಾ, ಅವರ ಸಮಾಜಸೇವೆ, ಅವರ ಜೀವನದಲ್ಲಿ ನಡೆದ ಘಟನೆಗಳು ಮತ್ತು ಪುನೀತ್ ಅವರ ಜೀವನದ ಜೊತೆಗೆ ಕನ್ನಡ ಸಿನಿಮಾ ರಂಗದ ಸಂಕ್ಷಿಪ್ತ ಚರಿತ್ರೆ ಕೂಡ ಈ ಪುಸ್ತಕದಲ್ಲಿದೆ. ಅಲ್ಲದೇ, ಅಪರೂಪದ ಫೋಟೋಗಳನ್ನು ನೋಡಬಹುದಾಗಿದೆ. 

Kantara ಶಿವನ ಪಾತ್ರದಲ್ಲಿ ಪುನೀತ್ ರಾಜ್‌ಕುಮಾರ್; ಫ್ಯಾನ್ ಮೇಡ್ ಪೋಸ್ಟರ್ ವೈರಲ್

ಪುನೀತ್ ಅವರ ಸಾಕಷ್ಟು ಸಂದರ್ಶನಗಳನ್ನು ಮಾಡಿದ್ದ ಪತ್ರಕರ್ತ ಶರಣು ಹುಲ್ಲೂರು, ಪುನೀತ್ ಅವರ ಕುರಿತಾಗಿ ಅನೇಕ ಅಪರೂಪದ ಸಂಗತಿಗಳನ್ನು ಈ ಪುಸ್ತಕದಲ್ಲಿ ಬರೆಯುತ್ತಾ ಹೋಗಿದ್ದಾರೆ. ಖ್ಯಾತ ಪತ್ರಕರ್ತರಾದ ಮುರಳಿಧರ ಖಜಾನೆ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದರೆ, ಜೋಗಿ ಅವರು ಹಿನ್ನುಡಿ ಬರೆದಿದ್ದಾರೆ.

ಅಪ್ಪು ಬಗ್ಗೆ ಮಾತನಾಡಿದ ಅಮಿತಾಭ್ ಬಚ್ಚನ್:

ಪುನೀತ್‌ ರಾಜ್‌ಕುಮಾರ್ ಅವರ ಬಗ್ಗೆ ಬಾಲಿವುಡ್‌ ಬಿಗ್‌ಬಿ ಅಮಿತಾಭ್ ಬಚ್ಚನ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು, ಅಪ್ಪು ಇಲ್ಲ ಎಂಬುದನ್ನು ಅಂದುಕೊಂಡು ಮಾತನಾಡಲು ಕಷ್ಟ ಆಗುತ್ತದೆ. ಅಪ್ಪು ಮಗುವಾಗಿದ್ದಾಗಲೇ ನಾನು ಅವರನ್ನು ಮೊದಲು ನೋಡಿದ್ದು. ಅಪ್ಪುವಿನಲ್ಲಿ ಸದಾ ಸೆಳೆಯುವ ಸಂಗತಿ ಅಂದ್ರೆ ಅವರ ನಗು. ಎಲ್ಲಾ ಕಡೆ, ಎಲ್ಲಾ ಸಂದರ್ಭದಲ್ಲೂ, ಯಾವಾಗಲೂ ಅವರ ಮುಖದಲ್ಲಿ ನಗು ಇರುತ್ತದೆ. ಅಪ್ಪು ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಕೊನೆಯ ಚಿತ್ರ ಗಂಧದಗುಡಿಯಲ್ಲಿ ಅವರು ಅಭಿನಯಿಸಿಲ್ಲ. ಅವರು ಅವರಾಗಿಯೇ ಕಾಣಿಸಿಕೊಂಡಿದ್ದಾರೆ ಅಂತ ಬರೆದುಕೊಂಡಿದ್ದರು. ಇತ್ತೀಚೆಗೆ ತೆರೆಕಂಡ ಗಂಧದ ಗುಡಿ ಚಿತ್ರದ ಬಗ್ಗೆಯೂ ಬಗ್ಗೆ ಮಾತನಾಡಿರುವ ಅಮಿತಾಭ್ ಬಚ್ಚನ್ ಅವರು ‘ಗಂಧದ ಗುಡಿಯಲ್ಲಿ ಕರ್ನಾಟಕ ವೈಭವದ ವನ್ಯ ಸಂಪತ್ತನ್ನು ತೆರೆದಿಟ್ಟಿದ್ದಾರೆ. ಅಪ್ಪು ಜೊತೆಗಿನ ಗಂಧದ ಗುಡಿ ಪಯಣ ಮಿಸ್ ಮಾಡಕೋಬೇ. ಕಡ್ಡಾಯವಾಗಿ ಮಕ್ಕಳು ನೋಡಲೇಬೇಕಾದ ಚಿತ್ರ. ವನ್ಯ ಸಂಪತ್ತಿನ ಕುರಿತು ಅರಿಯ ಬೇಕಾದ ಚಿತ್ರ. ಅಪ್ಪು ನಮ್ಮ ಜೊತೆ ನಮ ನೆನಪಿನಲ್ಲಿ ಸದಾ ಜೀವಂತ’ ಎಂದು ಬರೆದುಕೊಂಡಿದ್ದರು.