ನೇಹಾ ಶೆಟ್ಟಿ ಕನ್ನಡದ ‘ಮುಂಗಾರು ಮಳೆ 2’ ಚಿತ್ರದ ಮೂಲಕ ಪರಿಚಿತರಾದ ನಟಿ. ಸದ್ಯ ಟಾಲಿವುಡ್‌ನಲ್ಲಿ ಕೆಲವೇ ಸಿನಿಮಾಗಳ ಮೂಲಕವೇ ಭಾರೀ ಕ್ರೇಜ್ ಸಂಪಾದಿಸಿದ ನಟಿಯರ ಪೈಕಿ ನೇಹಾ ಶೆಟ್ಟಿ ಕೂಡ ಒಬ್ಬರು.
ಸ್ಯಾಂಡಲ್‌ವುಡ್‌ನ ಸುಂದರಿ ನೇಹಾ ಶೆಟ್ಟಿ ಕನ್ನಡದ ‘ಮುಂಗಾರು ಮಳೆ 2’ ಚಿತ್ರದ ಮೂಲಕ ಪರಿಚಿತರಾದ ನಟಿ. ಸದ್ಯ ಟಾಲಿವುಡ್‌ನಲ್ಲಿ ಕೆಲವೇ ಸಿನಿಮಾಗಳ ಮೂಲಕವೇ ಭಾರೀ ಕ್ರೇಜ್ ಸಂಪಾದಿಸಿದ ನಟಿಯರ ಪೈಕಿ ನೇಹಾ ಶೆಟ್ಟಿ ಕೂಡ ಒಬ್ಬರು. ತೆರೆಮೇಲೆ ತಮ್ಮ ಗ್ಲಾಮರ್ ಹಾಗೂ ಸ್ಟೈಲ್‌ನಿಂದ ಯುವಕರ ಗಮನ ಸೆಳೆದಿರುವ ಈ ಚೆಲುವೆ, ಒಂದೇ ಸಿನಿಮಾದ ಮೂಲಕ ಸೌತ್ ಸಿನಿರಂಗದಲ್ಲಿ ಸದ್ದು ಮಾಡಿದ್ದರು. ಕಡಿಮೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರೂ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ.
‘ಡಿಜೆ ಟಿಲ್ಲು’ ಕೊಟ್ಟ ದೊಡ್ಡ ಬ್ರೇಕ್!
ಯಂಗ್ ಹೀರೋ ಸಿದ್ದು ಜೊನ್ನಲಗಡ್ಡ ಅಭಿನಯದ ‘ಡಿಜೆ ಟಿಲ್ಲು’ ಸಿನಿಮಾ ನೇಹಾ ಶೆಟ್ಟಿ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು. ಈ ಚಿತ್ರದಲ್ಲಿ ಅವರ ಅಭಿನಯ ಹಾಗೂ ಗ್ಲಾಮರ್ ಪ್ರೇಕ್ಷಕರ ಗಮನ ಸೆಳೆಯಿತು. ಸಿನಿಮಾ ಹಿಟ್ ಆಗುತ್ತಿದ್ದಂತೆ ನೇಹಾ ಅವರಿಗೂ ಟಾಲಿವುಡ್‌ನಲ್ಲಿ ಭಾರೀ ಜನಪ್ರಿಯತೆ ದೊರೆಯಿತು. ‘ಡಿಜೆ ಟಿಲ್ಲು’ ಬಳಿಕ ನೇಹಾ ಶೆಟ್ಟಿಗೆ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬಂದವು. ನಂತರ ಅವರು ‘ಬೇದುರುಲಂಕ 2012’ ಚಿತ್ರದಲ್ಲಿ ಕಾರ್ತಿಕೇಯ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡರು. ಬಳಿಕ ಮಾಸ್ ಕಾ ದಾಸ್ ವಿಶ್ವಕ್ ಸೇನ್ ಅಭಿನಯದ ‘ಗ್ಯಾಂಗ್ ಆಫ್ ಗೋದಾವರಿ’ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದರು.
ಗ್ಲಾಮರ್ ಇದೆ... ಕ್ರೇಜ್ ಇದೆ... ಆದರೆ ಸ್ಟಾರ್‌ಡಮ್ ಮಾತ್ರ?
ನೇಹಾ ಶೆಟ್ಟಿಗೆ ಸಿನಿಮಾಗಳು ಕಡಿಮೆಯಾಗಿದ್ದರೂ ಅವರ ಮೇಲಿನ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಗ್ಲಾಮರ್ ವಿಚಾರದಲ್ಲಿ ಯಾವುದೇ ಕೊರತೆಯಿಲ್ಲದ ಈ ನಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ಆದರೆ ನಿರೀಕ್ಷಿಸಿದ ಮಟ್ಟದಲ್ಲಿ ಸಾಲು ಸಾಲು ಸಿನಿಮಾಗಳು ಮಾತ್ರ ಸಿಗುತ್ತಿಲ್ಲ ಎಂಬುದು ಅಭಿಮಾನಿಗಳ ಗಮನ ಸೆಳೆಯುತ್ತಿರುವ ವಿಚಾರ. ಇತ್ತೀಚೆಗೆ ‘ಟಿಲ್ಲು ಸ್ಕ್ವೇರ್’ ಸಿನಿಮಾದಲ್ಲೂ ನೇಹಾ ಶೆಟ್ಟಿ ಕಾಣಿಸಿಕೊಂಡಿದ್ದರು. ಆದರೆ ಆ ಬಳಿಕ ಅವರಿಂದ ಹೊಸ ಸಿನಿಮಾ ಘೋಷಣೆ ಹೊರಬಂದಿಲ್ಲ. ಹೀಗಾಗಿ, ಇಷ್ಟು ಜನಪ್ರಿಯತೆ ಹಾಗೂ ಗ್ಲಾಮರ್ ಇಮೇಜ್ ಇದ್ದರೂ ನೇಹಾಗೆ ದೊಡ್ಡ ಮಟ್ಟದ ಅವಕಾಶಗಳು ಏಕೆ ಸಿಗುತ್ತಿಲ್ಲ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಸಖತ್ ಆ್ಯಕ್ಟಿವ್!
ಸಿನಿಮಾ ಅವಕಾಶಗಳ ವಿಚಾರದಲ್ಲಿ ಕೊಂಚ ಸೈಲೆಂಟ್ ಆಗಿರುವ ನೇಹಾ ಶೆಟ್ಟಿ, ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸಖತ್ ಆ್ಯಕ್ಟಿವ್. ಆಗಾಗ್ಗೆ ತಮ್ಮ ಫೋಟೋಶೂಟ್‌ಗಳ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಇತ್ತೀಚೆಗಷ್ಟೇ ಅವರು ಹಂಚಿಕೊಂಡಿರುವ ಹೊಸ ಫೋಟೋಶೂಟ್ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ನೇಹಾ ಅವರ ಸ್ಟೈಲಿಶ್ ಲುಕ್ ಹಾಗೂ ಗ್ಲಾಮರಸ್ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದು, ಕಾಮೆಂಟ್‌ಗಳ ಮೂಲಕ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಸಿನಿಮಾಗಳ ಸಂಖ್ಯೆ ಕಡಿಮೆಯಾಗಿದ್ದರೂ ನೇಹಾ ಶೆಟ್ಟಿಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಇದೀಗ ಅವರಿಗೆ ಮತ್ತೊಂದು ಬಿಗ್ ಪ್ರಾಜೆಕ್ಟ್ ಯಾವಾಗ ಸಿಗಲಿದೆ ಎಂಬುದೇ ಅಭಿಮಾನಿಗಳ ಕುತೂಹಲವಾಗಿದೆ.


