Asianet Suvarna News Asianet Suvarna News

ಡಾ ರಾಜ್‌ಕುಮಾರ್ 'ಯಾರಿವನು' ಶೂಟಿಂಗ್‌ ಬಳಿಕ ಮತ್ತೆಂದೂ ಊಟಿಗೆ ಕಾಲಿಡಲಿಲ್ಲ ಯಾಕೆ?

ಡಾ ರಾಜ್‌ ಹಾಗೂ ರೂಪಾದೇವಿ ಜೋಡಿಯ ನಟನೆಯ 'ಯಾರಿವನು' ಚಿತ್ರದ ಶೂಟಿಂಗ್ ತಮಿಳುನಾಡಿನ ಊಟಿಯಲ್ಲಿ ನಡೆಯುತ್ತಿತ್ತು. ಚಿತ್ರದ ಇಡೀ ಯುನಿಟ್ ಊಟಿಯಲ್ಲಿ ಬೀಡುಬಿಟ್ಟಿತ್ತು. ಎಲ್ಲರೂ ಸೇರಿದರೆ ಹೆಚ್ಚುಕಡಿಮೆ 100 ಜನರ ಆಸುಪಾಸಿನಲ್ಲಿ ಅಲ್ಲಿದ್ದರು.

Dr Rajkumar did not go to ooty after Yarivanu cinema shooting srb
Author
First Published May 19, 2024, 11:31 AM IST

ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ (Dr Rajkumar) ಕರ್ನಾಟಕದ ಆಸ್ತಿ ಎಂದೇ ಪ್ರಖ್ಯಾತಿ ಪಡೆದವರು. ಕನ್ನಡಿಗರು ಅವರನ್ನು ಪ್ರೀತಿ-ಗೌರವಗಳಿಂದ ಅಣ್ಣಾವ್ರು, ಅಪ್ಪಾಜಿ ಎಂದೆಲ್ಲ ಕರೆಯುತ್ತಾರೆ. ಅಂಥ ರಾಜ್‌ಕುಮಾರ್ 1980ರ ಗೋಕಾಕ್ ಚಳುವಳಿಯ ನೇತೃತ್ವ ವಹಿಸಿದ್ದರಿಂದ ಅವರಿಗೆ ತಮಿಳು ವಿರೋಧಿ ಎಂಬ ಪಟ್ಟ ಕಟ್ಟಲಾಯಿತು. ಕನ್ನಡವನ್ನು ಉಳಿಸಿ ಬೆಳೆಸಲು ಪಣತೊಟ್ಟವರೊಂದಿಗೆ ಡಾ ರಾಜ್‌ಕುಮಾರ್ ಕೈ ಜೋಡಿಸಿದ್ದೇ ತಡ, ಅವರ ವಿರುದ್ಧ ಕೆಲವು ತಮಿಳು ಕಿಡಿಗೇಡಿಗಳು ಉಪಟಳ ಕೊಡಲು ಶುರುಮಾಡಿಕೊಂಡರು. ಅಂಥ ಒಂದು ಘಟನೆ ಇಲ್ಲಿದೆ, ನೋಡಿ..

ಡಾ ರಾಜ್‌ ಹಾಗೂ ರೂಪಾದೇವಿ ಜೋಡಿಯ ನಟನೆಯ 'ಯಾರಿವನು' ಚಿತ್ರದ ಶೂಟಿಂಗ್ ತಮಿಳುನಾಡಿನ ಊಟಿಯಲ್ಲಿ ನಡೆಯುತ್ತಿತ್ತು. ಚಿತ್ರದ ಇಡೀ ಯುನಿಟ್ ಊಟಿಯಲ್ಲಿ ಬೀಡುಬಿಟ್ಟಿತ್ತು. ಎಲ್ಲರೂ ಸೇರಿದರೆ ಹೆಚ್ಚುಕಡಿಮೆ 100 ಜನರ ಆಸುಪಾಸಿನಲ್ಲಿ ಅಲ್ಲಿದ್ದರು. ಅದೊಂದು ದಿನ, ಯಾರಿವನು ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಇನ್ನೇನು ಪ್ಯಾಕಪ್ ಆಗಬೇಕು ಎನ್ನುವಷ್ಟರಲ್ಲಿ ಬಹಳಷ್ಟು ಜನರು ಗುಂಪುಗುಂಪಾಗಿ ಜೋರಾಗಿ ಕೂಗಿಕೊಳ್ಳುತ್ತ ಶೂಟಿಂಗ್ ನಡೆಯುತ್ತಿದ್ದ ಸ್ಥಳಕ್ಕೆ ಬಂದರು. ಅವರಲ್ಲಿ ಕೆಲವರು ಕೋಲು, ಕಲ್ಲುಗಳನ್ನು ಕೂಡ ಹಿಡಿದುಕೊಂಡಿದ್ದರು. 

ಮುಂಬರುವ ಮೋದಿ ಬಯೋಪಿಕ್‌ನಲ್ಲಿ 'ಕಟ್ಟಪ್ಪ' ಸತ್ಯರಾಜ್ ನಟನೆ, ಅಧಿಕೃತ ಘೋಷಣೆಯಷ್ಟೇ ಬಾಕಿ!

ನೋಡನೋಡುತ್ತಿದ್ದಂತೆ ಶೂಟಿಂಗ್ ಸ್ಥಳಕ್ಕೆ ಬಂದ ಅವರೆಲ್ಲರೂ ಡಾ ರಾಜ್‌ಕುಮಾರ್ ಅವರಿಗೆ ಹೊಡೆಯಲು ಬಂದರು. ಡಾ ರಾಜ್‌ ಅವರಿಗೆ ಒಂದೇಟು ಬೀಳುತ್ತಿದ್ದಂತೆ ಅಲ್ಲಿದ್ದ ಎಲ್ಲರೂ ಅಲರ್ಟ್ ಆಗಿ ಡಾ ರಾಜ್‌ ಹಾಗೂ ರೂಪಾದೇವಿಯವರ ಸುತ್ತಲೂ ಸರ್ಕಲ್ ರೀತಿಯಲ್ಲಿ ಸುತ್ತವರೆದು ಅವರಿಗೆ ಏನೂ ಅಪಾಯ ಆಗದಂತೆ ನಿಂತುಕೊಂಡು ರಕ್ಷಣೆ ಮಾಡಿದ್ದರು. ಆದರೆ, ಹಾಗೆ ಡಾ ರಾಜ್‌ಕುಮಾರ್ ರಕ್ಷಣೆಗೆ ನಿಂತಿದ್ದ ಅವರಿಗೆಲ್ಲ ಸಾಕಷ್ಟು ಏಟುಗಳು ಬಿದ್ದಿದ್ದವು. ಅವರಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿ ಅಸ್ಪತ್ರೆಯನ್ನು ಸಹ ಸೇರಿಕೊಂಡು ಬಳಿಕ ಗುಣಮುಖರಾಗಿ ಬಂದರು. 

ಅಯ್ಯೋ, ಚಂದ್ರಕಾಂತ್ ಜೀವ ಉಳಿಸಲು ಪತ್ನಿ ಶಿಲ್ಪಾಗೆ ಸಾಧ್ಯವಿತ್ತು; ಹೀಗಂತಾರೆ ಘಟನೆ ಬಲ್ಲವರು!

ಹಾಗಿದ್ದರೆ, ಯಾಕೆ ಅವರೆಲ್ಲ ಡಾ ರಾಜ್‌ ಅವರಿಗೆ ಹೊಡೆಯಲು ಬಂದಿದ್ದರು? ಅವರೆಲ್ಲರೂ ಯಾರು? ಎಂಬ ಪ್ರಶ್ನೆಗಳಿಗೆ ನಿಖರವಾದ ಉತ್ತರ ಇಂದಿಗೂ ಸಿಕ್ಕಿಲ್ಲವಂತೆ. ಆದರೆ, ಗೋಕಾಕ್ ಚಳುವಳಿ ಬಳಿಕ ಡಾ ರಾಜ್‌ಕುಮಾರ್ ಮೇಲೆ ಹಲ್ಲೆ, ವಿರೋಧಗಳು, ತಮಿಳುನಾಡಿನಲ್ಲಿ ಅವರ ಚಿತ್ರಗಳ ಶೂಟಿಂಗ್ ನಡೆಯುತ್ತಿದ್ದರೆ ತೊಂದರೆ ಕೊಡುವುದು ಇವೆಲ್ಲವೂ ಮಾಮೂಲಿ ಎಂಬಂತೆ ನಡೆಯುತ್ತಿದ್ದವು ಎನ್ನಲಾಗಿದೆ. ಆದರೆ, ಡಾ ರಾಜ್‌ ಅವರು 'ಯಾವುದನ್ನೂ ಮುಂದಕ್ಕೆ ಬೆಳೆಸುವುದು ಬೇಡ, ಅದು ಆಗುತ್ತಿರಲಿ, ನಿಂತು ಹೋಗುತ್ತಿರಲಿ. ಅದನ್ನೆಲ್ಲ ನಾವು ನಮ್ಮ ಕಂಟ್ರೋಲ್‌ಗೆ ತೆಗೆದುಕೊಳ್ಳುವುದು ಬೇಡ' ಎನ್ನುತ್ತಿದ್ದರಂತೆ. 

ಡಿಸ್ಕೋ ಶಾಂತಿ ತಂಗಿಯನ್ನು ಡಿವೋರ್ಸ್ ಮಾಡಿದ್ಯಾಕೆ ನಟ ಪ್ರಕಾಶ್ ರಾಜ್? ಹೊಸ ಪತ್ನಿ ಜೊತೆಗಿದ್ದಾರಾ?

ಯಾರಿವನು ಚಿತ್ರದ ಶೂಟಿಂಗ್‌ನಲ್ಲಿ ನಡೆದ ಆ ಘಟನೆ ಬಳಿಕ ಡಾ ರಾಜ್‌ಕುಮಾರ್ ಅವರು ತಮ್ಮ ಜೀವಿತಾವಧಿಯಲ್ಲಿ ಮತ್ತೆಂದೂ ಊಟಿಗೆ ಕಾಲಿಡಲಿಲ್ಲ ಎನ್ನಲಾಗಿದೆ. ಹಾಗೆ, ಅಂದು ಅವರ ಜೊತೆಯಲ್ಲಿದ್ದ ಹಲವರು ಕೂಡ ಮತ್ತೆ ಊಟಿಗೆ ಹೋಗಲಿಲ್ಲವಂತೆ. ಅಂದು ಅಂತಹ ಕಹಿಯಾದ ಘಟನೆ ನಡೆದಿತ್ತು. ಆದರೆ, ನಿಜವಾದ ಕಾರಣ ಇಂದಿಗೂ ಬಹಿರಂಗವಾಗಲಿಲ್ಲ ಎಂಬುದು ಮಾತ್ರ ಇನ್ನೊಂದು ದುರಂತವೇ ಸರಿ!

Latest Videos
Follow Us:
Download App:
  • android
  • ios