Asianet Suvarna News Asianet Suvarna News

ಡಿಸ್ಕೋ ಶಾಂತಿ ತಂಗಿಯನ್ನು ಡಿವೋರ್ಸ್ ಮಾಡಿದ್ಯಾಕೆ ನಟ ಪ್ರಕಾಶ್ ರಾಜ್? ಹೊಸ ಪತ್ನಿ ಜೊತೆಗಿದ್ದಾರಾ?

ಅದೊಂದು ದಿನ ಆಟವಾಡುತ್ತಿದ್ದ ಪ್ರಕಾಶ್ ರಾಜ್ ಮಗ ಗಾಳಿಪಟ ಹಿಡಿಯಲು ಹೋಗಿ, ಮಹಡಿ ಮೇಲಿಂದ ಬಿದ್ದು ದುರಂತ ಸಾವು ಕಂಡ. ಅಂದಿನಿಂದ ಮಾನಸಿಕವಾಗಿ ತುಂಬಾ ನೋವು ಅನುಭವಿಸುತ್ತಿದ್ದರು ಪ್ರಕಾಶ್ ರಾಜ್.

Actor Prakash Raj divorced Disco Shanti Sister Lalitha Kumari and married Pony Verma srb
Author
First Published May 18, 2024, 4:10 PM IST

ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಮೊದಲ ಪತ್ನಿ ಲಲಿತಾ ಅವರು ನಟಿ ಡಿಸ್ಕೋ ಶಾಂತಿ ಅವರ ಸಹೋದರಿ. ಬೇರೆ ರಾಜ್ಯಗಳಿಂದ ಬರುವ ಜನರಿಗೆ ಉಳಿದುಕೊಳ್ಳಲು ನಟಿ ಡಿಸ್ಕೋ ಶಾಂತಿ ತಮ್ಮ ಮನೆಯಲ್ಲಿ ಮನೆಗಳನ್ನು ಕೊಡುತ್ತಿದ್ದರಂತೆ. ಆಗ ನಟ ಪ್ರಕಾಶ್ ರಾಜ್ (ಪ್ರಕಾಶ್ ರೈ) ಅವರು ಶೂಟಿಂಗ್‌ಗಾಗಿ ಕರ್ನಾಟಕದಿಂದ ತಮಿಳುನಾಡಿಗೆ ಹೋಗಿ ಅಲ್ಲಿ ಡಿಸ್ಕೋ ಶಾಂತಿ ಮನೆಯಲ್ಲಿ ಮನೆ ಮಾಡಿಕೊಂಡು ಇರುತ್ತಿದ್ದರಂತೆ. ಆಗ ಪರಿಚಯವಾದವರೇ ಡಿಸ್ಕೋ ಶಾಂತಿ ತಂಗಿ ಲಲಿತಾ ಕುಮಾರಿ. 

ಮೊದಲು ಲಲಿತಾ ಜತೆ ಪ್ರಕಾಶ್ ರಾಜ್ ಅವರಿಗೆ ಸ್ನೇಹವಾಯ್ತು. ಬಳಿಕ ಅದೇ ಸ್ನೇಹ ಪ್ರೀತಿಯಾಯ್ತು ಎನ್ನಲಾಗಿದೆ. ಬಳಿಕ ನಟ ಪ್ರಕಾಶ್ ರಾಜ್ ಮನೆಯವರನ್ನೆಲ್ಲ ಒಪ್ಪಿಸಿ ಲಲಿತಾರನ್ನು ಮದುವೆಯಾಗಿ ತಮ್ಮ ಬಾಳ ಸಂಗಾತಿಯನ್ನಾಗಿ ಮಾಡಿಕೊಂಡರು. ಪ್ರಕಾಶ್‌ ರಾಜ್-ಲಲಿತಾ ದಂಪತಿಗೆ ಮೂರು ಮಕ್ಕಳು ಕೂಡ ಜನಿಸಿದರು. ಅವರಲ್ಲಿ ಒಬ್ಬ ಗಂಡು ಹಾಗೂ ಇಬ್ಬರು ಹೆಣ್ಣುಮಕ್ಕಳು. ಲಲಿತಾ ಜತೆಗಿನ ಪ್ರಕಾಶ್ ರಾಜ್ ಸಂಬಂಧ ಬಹಳ ಚೆನ್ನಾಗಿಯೇ ಇತ್ತು. 

ಆದರೆ, ಅದೊಂದು ದಿನ ಆಟವಾಡುತ್ತಿದ್ದ ಪ್ರಕಾಶ್ ರಾಜ್ ಮಗ ಗಾಳಿಪಟ ಹಿಡಿಯಲು ಹೋಗಿ, ಮಹಡಿ ಮೇಲಿಂದ ಬಿದ್ದು ದುರಂತ ಸಾವು ಕಂಡ. ಅಂದಿನಿಂದ ಮಾನಸಿಕವಾಗಿ ತುಂಬಾ ನೋವು ಅನುಭವಿಸುತ್ತಿದ್ದರು ಪ್ರಕಾಶ್ ರಾಜ್. ಅದೇ ನೋವಿನಲ್ಲಿ ಸಿನಿಮಾ ಶೂಟಿಂಗ್‌ಗೆ ಹೋಗುತ್ತಿದ್ದ ನಟ ಪ್ರಕಾಶ್ ರಾಜ್ ಅವರಿಗೆ ಅಲ್ಲಿ ಪರಿಚಯವಾದ ಇನ್ನೊಬ್ಬರು ಹುಡುಗಿ, ಪೋನಿ ವರ್ಮಾ (Pony verma) ಜೊತೆ ಸ್ನೇಹವಾಯ್ತು. ಅದು ಪ್ರೇಮವಾಗಿ ಮಾರ್ಪಟ್ಟು, ಕೊನೆಗೆ ಹೆಂಡತಿ ಲಲಿತಾರಿಗೆ ಡಿವೋರ್ಸ್ ಕೊಟ್ಟು ಹೊಸಬರ ಜೊತೆ 2010ರಲ್ಲಿ ಎರಡನೇ ಮದುವೆಯಾದರು ಪ್ರಕಾಶ್ ರಾಜ್. 

ಈಗ ಎರಡನೇ ಹೆಂಡತಿ ಜೊತೆ ಸಂಸಾರ ಮಾಡಿಕೊಂಡಿದ್ದಾರೆ ಪ್ರಕಾಶ್ ರಾಜ್. ಸ್ವತಃ ಮಗನನ್ನು ಕಳೆದುಕೊಂಡ ನೋವಿನಲ್ಲಿದ್ದಾಗ, ತಮ್ಮ ಹೆಂಡತಿ ಕೂಡ ಅದೇ ನೋವನ್ನು ಅನುಭವಿಸುತ್ತಿದ್ದಾಗ, ಅದು ಹೇಗೆ ಇನ್ನೊಬ್ಬರ ಜೊತೆಯಲ್ಲಿ ಲವ್‌ಗೆ ಬಿದ್ದು, ಹೆಂಡತಿಗೆ ಡಿವೋರ್ಸ್‌ ಮಾಡಿ ಬೇರೊಬ್ಬರನ್ನು ಮದುವೆಯಾಗಲು ಸಾಧ್ಯ ಎಂದು ಹಲವರು ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಸ್ವತಃ ಅವರೇ ಉತ್ತರ ಕೊಡಬಲ್ಲರೇ ಹೊರತೂ ಬೇರೆ ಯಾರಾದರೂ ಹೇಗೆ ಉತ್ತರಿಸಲು ಸಾಧ್ಯ? ಸದ್ಯ ಪ್ರಕಾಶ್ ರಾಜ್ ಅವರು ಎರಡನೇ ಪತ್ನಿ ಪೋನಿ ವರ್ಮಾ ಜೊತೆಗಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ, ನಟ ಪ್ರಕಾಶ್ ರಾಜ್ ಅವರ ಮೊದಲ ಪತ್ನಿ ದುರಂತ ಜೀವಾಂತ್ಯ ಕಂಡಿರುವ ನಟಿ ಡಿಸ್ಕೋ ಶಾಂತಿ ಅವರ ತಂಗಿ ಲಲಿತಾ ಎಂಬುದಷ್ಟೇ ಈ ಸ್ಟೋರಿಯಲ್ಲಿ ಬರೆಯಲಾದ ಮುಖ್ಯ ಕಂಟೆಂಟ್. ಅಕ್ಕ ಡಿಸ್ಕೋ ಶಾಂತಿಯ ಬಾಳು ದುರಂತ್ಯದಲ್ಲಿ ಅಂತ್ಯ ಕಂಡಿದ್ದರೆ, ತಂಗಿ ಲಲಿತಾರ ದಾಂಪತ್ಯ ಜೀವನ ಇನ್ನೊಂದು ರೀತಿಯಲ್ಲಿ ದುರಂತ್ಯ ಅಂತ್ಯ ಕಂಡಿದೆ. ನಟನಟಿಯರ ಬಣ್ಣದ ಬದುಕು ತೆರೆಯ ಮೇಲಷ್ಟೇ ನೋಡಲು ಚೆಂದ, ನಿಜ ಜೀವನದಲ್ಲಿ ಹಲವರು ಅನುಭಿಸುವ ನರಕಯಾತನೆ ಯಾವುದೇ ಸಿನಿಮಾ, ಸೀರಿಯಲ್‌ಗಳಿಗಿಂತಲೂ ಘೋರವಾಗಿರುತ್ತದೆ ಎನ್ನಲಾಗುತ್ತಿದೆ. ಈ ಮಾತನ್ನು ನಿಜವನ್ನಾಗಿಸಿದ ಸಾಕಷ್ಟು ಉದಾಹರಣೆಗಳು ನಮ್ಮಲ್ಲಿವೆ. 

Latest Videos
Follow Us:
Download App:
  • android
  • ios