ಡಾ. ರಾಜ್‌ಕುಮಾರ್ 'ದಾರಿ ತಪ್ಪಿದ ಮಗ' ಚಿತ್ರದಲ್ಲಿ ಆರ್.ಎನ್. ಜಯಗೋಪಾಲ್ ಬರೆದ "ಕಣ್ಣಂಚಿನ ಈ ಮಾತಲಿ" ಹಾಡಿನ ನಂತರ, ಸೃಜನಶೀಲ ಸ್ವಾತಂತ್ರ್ಯದ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿ, ಜಯಗೋಪಾಲ್ ರಾಜ್ ಚಿತ್ರಗಳಿಗೆ ಹಾಡು ಬರೆಯಲಿಲ್ಲ. ನಂತರ ರಾಜ್ "ಭಕ್ತ ಅಂಬರೀಷ" ಚಿತ್ರಕ್ಕೆ ಜಯಗೋಪಾಲ್‌ರನ್ನೇ ಆಯ್ಕೆ ಮಾಡಿದರೂ, ಚಿತ್ರ ನಿರ್ಮಾಣವಾಗಲಿಲ್ಲ. ಈ ಘಟನೆ ಕನ್ನಡ ಚಿತ್ರರಂಗದಲ್ಲಿನ ಇಂತಹ ಹಲವು ಕಹಿ ಘಟನೆಗಳಲ್ಲಿ ಒಂದು.
ಡಾ ರಾಜ್‌ಕುಮಾರ್ ( Dr Rajkumar) ಅಭಿನಯದ 'ದಾರಿ ತಪ್ಪಿದ ಮಗ' (Dari Tappida Maga) ಚಿತ್ರಕ್ಕೆ ಜಿಕೆ ವೆಂಕಟೇಶ್ ಅವರು ಸಂಗೀತ ನೀಡಿದ್ದಾರೆ. 'ನಾರಿಯ ಸೀರೆ ಕದ್ದ..' ಹಾಡನ್ನು ಚಿ ಉದಯಶಂಕರ್ ಬರೆದಿದ್ದಾರೆ. ಹಾಗೇ ಇನ್ನೊಂದು ಹಾಡು 'ಕಣ್ಣಂಚಿನ ಈ ಮಾತಲಿ' ಹಾಡನ್ನು ಆರ್‌ಎನ್ ಜಯಗೋಪಾಲ್ (RN Jayagopal) ಬರೆದರು. ಈ ಎರಡೂ ಹಾಡುಗಳು 'ದಾರಿ ತಪ್ಪಿದ ಮಗ' ಚಿತ್ರದಲ್ಲಿ ಬರುವ ಕಳ್ಳ (ದಾರಿ ತಪ್ಪಿದ ಮಗ) ಪಾತ್ರಕ್ಕೆ ಬರುವ ಹಾಡು. ಅದರಲ್ಲೇ ಇನ್ನೊಂದು ಡ್ಯೂಯೆಟ್ ಹಾಡನ್ನು ಆರ್‌ಎನ್ ಜಯಗೋಪಾಲ್ ಅವರು ಬರೆಯುತ್ತಿದ್ದರು. ಆಗ ಅದೊಂದು ದುರ್ಘಟನೆ ನಡೆದುಹೋಯಿತು! ಅಚ್ಚರಿ ಎಂಬಂತೆ, 'ನಿರ್ದೇಶಕರೇ ಚಿತ್ರಕ್ಕೆ ಸೂತ್ರಧಾರ' ಎಂಬ ಮಾತಿಗೆ ಇಲ್ಲಿ ಯಾವುದೇ ಬೆಲೆ ಸಿಕ್ಕಿಲ್ಲ!
ಅದರಲ್ಲೊಂದು ಹಾಡಿನ ಸಾಲಿನಲ್ಲಿ ಬರುವ ಶಬ್ಧದ ಬಗ್ಗೆ ತುಂಬಾ ಚರ್ಚೆ ಆಗುತ್ತಿತ್ತು. ವಾದ-ವಿವಾದ ನಡೆಯುವ ಮಟ್ಟಕ್ಕೆ ಹೊರಟು ಹೋಯ್ತು.
ಅಂದು ಡಾ ರಾಜ್‌ಕುಮಾರ್ ಅವರ ಅವರ ಚಿತ್ರದ ಕೆಲಸಗಳನ್ನು ನೋಡಿಕೊಳ್ಳಲು ಒಂದು ಟೀಮ್ ಇರುತ್ತಿತ್ತು. ಅದು ಆ ಕಾಲದಲ್ಲಿ ಎಲ್ಲರಿಗೂ ಗೊತ್ತಿರುವ ಸಂಗತಿ. ಅದರಂತೆ, ಅಣ್ಣಾವ್ರ ಟೀಮ್‌ನ ಯಾರೋ ಒಬ್ಬರು 'ರೀ ನಾವು ನಿಮ್ಗೆ ದುಡ್ಡು ಕೊಟ್ಟಿದೀವಿ, ನೀವು ನಾವು ಹೇಳಿದ್ದನ್ನು ಬರೆಯಬೇಕು. ನೀವು ಹೀಗೆ ಆರ್ಗೂಮೆಂಟ್ ಎಲ್ಲ ಮಾಡೋದಾದ್ರೆ ನೀವು ಬರೆಯೋದು ಬೇಡ' ಎಂದು ಆರ್‌ಎನ್ ಜಯಗೋಪಾಲ್ ಅವರಿಗೆ ಹೇಳಿದ್ದಾರೆ.
ಅರ್ಧ ದೇಹ ಬಿಟ್ಕುಕೊಳ್ಳುವ ಹುಡ್ಗೀರಿಗೆ ಅಣ್ಣಾವ್ರು ಹೇಳಿದ ಕಿವಿ ಮಾತಿದು!
ಅದಕ್ಕೆ ಅವರು 'ನನ್ನ ಪೆನ್‌ಗೆ ಒಂದು ಸ್ವಾತಂತ್ರ್ಯ ಇದೆ. ನೀವು ದುಡ್ಡ ಕೊಟ್ಟಿದೀರ ಅಂತ ನಾನು ಏನೇನೋ ಬರೆಯೋದಕ್ಕೆ ಆಗೋದಿಲ್ಲ. ನೀವು ದುಡ್ಡ ಕೊಡದೇ ಇದ್ರೂ ಒಳ್ಳೇ ಹಾಡಾದ್ರೆ ಬರಿತೀನಿ. ನೀವು ದುಡ್ಡು ಕೊಟ್ಟರೂ ಕೆಟ್ಟ ಹಾಡು ಬರೆಯಲ್ಲ ನಾನು' ಎಂದು ಹೇಳಿ 'ನಿಮ್ಗೆ ಈ ತರದ ಮನೋಭಾವ ಇದ್ರೆ ನಾನು ಬರೆಯಲ್ಲ ನಿಮ್ಗೆ' ಎಂದು ಹೇಳಿ ಎದ್ದು ಹೋಗಿಬಿಟ್ಟರು. ಅದಕ್ಕೂ ಮುಂದೆ ಆ ಘಟನೆ ಒಂದು ಕಹಿ ನೆನಪಾಗಿ ಉಳಿದುಕೊಂಡು ಹಾಗೇ ಕಂಟಿನ್ಯೂ ಆಯ್ತು. ಮತ್ತೆ ಯಾವತ್ತೂ ಆರ್‌ಎನ್ ಜಯಗೋಪಾಲ್ ಅವರು ಡಾ ರಾಜ್‌ಕುಮಾರ್ ಚಿತ್ರಕ್ಕೆ ಹಾಡು ಬರೆಯಲೇ ಇಲ್ಲ.
ಆದರೆ, ಡಾ ರಾಜ್‌ಕುಮಾರ್ ಹಾಗೂ ಆರ್‌ಎನ್ ಜಯಗೋಪಾಲ್ ಮಧ್ಯೆ ಬಾಂಧವ್ಯ ಚೆನ್ನಾಗಿಯೇ ಇತ್ತು. ಆ ಕಹಿ ಘಟನೆ ಅವರಿಬ್ಬರ ಮಧ್ಯೆ ಹಾಡಿನ ವಿಷಯಕ್ಕೆ ಮಾತ್ರ ಸೀಮಿತವಾಗಿತ್ತು, ಬೇರೆ ಮನಸ್ತಾಪ ಇರಲಿಲ್ಲ. ಮುಂದೆ ಅದೊಂದು ದಿನ ಡಾ ರಾಜ್‌ಕುಮಾರ್ ಅವರು ಜಯಗೋಪಾಲ್ ಅವರಿಗೆ 'ನಿಮ್ ಹತ್ರ ಒಂದು ಸಿನಿಮಾಗೆ ನಾನು ಬರೆಸಬೇಕು, ಆಗಿದ್ದನ್ನೆಲ್ಲಾ ಬಿಟ್ಬಿಡಿ..
ಮೈಸೂರಿನ ಜೋಡಿ ತೆಂಗಿನಮರದ ಬಳಿ ಅಣ್ಣಾವ್ರು ಯಾಕೆ ಬೆಳಿಗ್ಗೆ 4 ಗಂಟಗೆ ಹೋಗ್ತಾ ಇದ್ರು?
ಭಕ್ತ ಅಂಬರೀಷ ಅಂತ ಒಂದು ಸಿನಿಮಾ ಮಾಡ್ತೀನಿ ನಾನು. ಅದು ನಿಮ್ಮಪ್ಪನ ಸಿನಿಮಾ. ರಮಾಕಾಂತನ ಪಾತ್ರವನ್ನು ನಿಮ್ಮಪ್ಪ ಬಹಳ ಅದ್ಭುತವಾಗಿ ಮಾಡೋರು. ನಮ್ಮಿಬ್ಬರ ಮಧ್ಯೆ ಬೇರೆ ಏನಾದ್ರೂ ಇರ್ಲಿ, ಆ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಹಾಡುಗಳನ್ನು ನೀವೇ ಬರೆಯಬೇಕು' ಎಂದಿದ್ದರು. ಅದರಂತೆ ಆರ್‌ಎನ್ ಜಯಗೋಪಾಲ್ ಅವರು ಭಕ್ತ ಅಂಬರೀಷ್ ಚಿತ್ರಕ್ಕೆ ಎಲ್ಲವನ್ನೂ ಸಿದ್ಧಪಡಿಸಿದ್ದರು. ಆದರೆ ಡಾ ರಾಜ್ ಕನಸಾಗಿದ್ದ ಭಕ್ತ ಅಂಬರೀಷ್ ತೆರೆಗೆ ಬರುವ ಮೊದಲೇ ಅಣ್ಣಾವ್ರು ಇಹಲೋಕ ತ್ಯಜಿಸಿದರು.
ಆದರೆ, ಕಾರಣಾಂತರಗಳಿಂದ ಆ ಸಿನಿಮಾ ಆಗಲೆ ಇಲ್ಲ. ಸ್ವತಃ ಡಾ ರಾಜ್‌ಕುಮಾರ್ ಅವರಿಗೆ ಮಾತ್ರವಲ್ಲ, ಅಣ್ಣಾವ್ರ ಅಭಿಮಾನಿಗಳಿಗೂ ಕೂಡ ಆ ಚಿತ್ರ ಡಾ ರಾಜ್ ನಟನೆಯಲ್ಲಿ ಮೂಡಿಬರಲೇ ಇಲ್ಲ ಎಂಬು ಕೊರಗು ಯಾವತ್ತಿಗೂ ಇದೆ. ಹೀಗಾಗಿ, 'ದಾರಿ ತಪ್ಪಿದ ಮಗ' ಚಿತ್ರದ ಕಣ್ಣಂಚಿನ ಈ ಮಾತಲಿ' ಹಾಡಿನ ಬಳಿಕ ಅರ್‌ಎನ್ ಜಯಗೋಪಾಲ್ ಹಾಗೂ ಡಾ ರಾಜ್‌ಕುಮಾರ್ ಅವರಿಬ್ಬರ ಕಾಂಬಿನೇಶನ್‌ನಲ್ಲಿ ಯಾವುದೇ ಹಾಡು ಬರಲಿಲ್ಲ. ಇದು, ಅಂದು ನಡೆದ ಒಂದು ಕಹಿ ಘಟನೆಯ ಪರಿಣಾಮ. ಕೊನೆಗೂ ಅವರಿಬ್ಬರ ಸಂಗಮದ ಹಾಡನ್ನು ಕೇಳುವ ಭಾಗ್ಯ ಕನ್ನಡಿಗರಿಗೆ ಲಭಿಸಲೇ ಇಲ್ಲ.
ಅಣ್ಣಾವ್ರ ಬಗ್ಗೆ ಸುದೀಪ್ ಅಂದು ಹೇಳಿದ್ದ ಮಾತು ಇಂದು ವೈರಲ್, ಕಾಮೆಂಟ್ಸ್ ಸುರಿಮಳೆ!
ಇಂತಹ ಅನೇಕ ಕಹಿ ಘಟನೆಗಳು ಚಿತ್ರರಂಗದಲ್ಲಿ ಬಹಳಷ್ಟು ನಡೆದಿವೆ, ಇದೊಂದೇ ಇಲ್ಲ. ಸಾಕಷ್ಟು ಘಟನೆಗಳು ಹಿಂದೆ ನಡೆದಿವೆ, ಮುಂದೆ ಕೂಡ ಖಂಡಿತ ನಡೆಯುತ್ತವೆ. ಅದಕ್ಕೆ ಮತ್ತೊಂದು ಸಾಕ್ಷಿ ಎಂದರೆ ನಟ ರವಿಚಂದ್ರನ್ ಹಾಗೂ ಹಂಸಲೇಖಾರ ಮಧ್ಯೆ ನಡೆದಿದ್ದ ಸುದೀರ್ಘ ಮನಸ್ತಾಪ. ಇಂತಹ ಘಟನೆಗಳಿಂದ ಆ ಇಬ್ಬರು ವ್ಯಕ್ತಿಗಳಿಗೆ ವೈಯಕ್ತಿಕವಾಗಿ ಅಷ್ಟೇನೂ ನಷ್ಟ ಆಗುವುದಿಲ್ಲ. ಆದರೆ, ಅವರಿಬ್ಬರ ಕಾಂಬಿನೇಶನ್‌ನಲ್ಲಿ ಬರಬೇಕಾಗಿದ್ದ ಒಳ್ಳೆಯ ಪ್ರಾಡಕ್ಟ್ ಕನ್ನಡ ಸಿನಿಪ್ರೇಮಿಗಳ ಪಾಲಿಗೆ ತಪ್ಪಿಹೋಯಿತು. ಹೀಗೆ, ನಡೆಯುವ ಪ್ರತಿಯೊಂದು ಘಟನೆಗಳಿಂದಲೂ ಕೂಡ ಆಗುವ ನಷ್ಟ ಆಬಳಿಕವಷ್ಟೇ ಅರ್ಥವಾಗುವಂಥದು!
