ಗಂಡ ಹೆಸರು ಯಶ್ ಬದಲು ನವೀನ್‌ ಎಂದು ಕರೆದಿದ್ದಕ್ಕೆ ಗರಂ ಆದ ರಾಧಿಕಾ ಪಂಡಿತ್;ವಿಡಿಯೋ ವೈರಲ್

ಗಂಡನ ಹೆಸರು ನವೀನ್ ಅಲ್ಲ ಯಶ್ ಎಂದು ಅಭಿಮಾನಿಗಳಿಗೆ ತಿಳಿಸಿದ ರಾಧಿಕಾ ಪಂಡಿತ್. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್.....

Not Naveen Yash has legally changed his name says wife radhika pandit vcs

ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್ ಬೆಂಗಳೂರಿನ ಪ್ರತಿಷ್ಠಿತ ಏರಿಯಾದಲ್ಲಿ ಆಭರಣ ಮಳಿಗೆ ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಅಭಿಮಾನಿಗಳ ಜೊತೆ ಸಮಯ ಕಳೆದು, ಆಭರಣದ ಮಹತ್ವ ಮತ್ತು ಯಾವ ರೀತಿಯಲ್ಲಿ ಆಭರಣ ಖರೀದಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಈ ವೇಳೆ ಪ್ಯಾಪರಾಜಿಗಳು ಕೇಳಿದ ಪ್ರಶ್ನೆಗೆ ಕೋಪ ಬಂದರೂ ತಮ್ಮ ಸ್ಟೈಲ್‌ನಲ್ಲಿ ನಗು ನಗುತ್ತಾ ಉತ್ತರಿಸಿದ್ದಾರೆ. 

ಆಭರಣದ ಅಂಗಡಿಯೊಳಗೆ ರಾಧಿಕಾ ಪಂಡಿತ್ ನಡೆದು ಬರುವಾಗ ಪ್ಯಾಪರಾಜಿಗಳು ನವೀನ್ ಸರ್ ಎಲ್ಲಿ ನವೀನ್ ಸರ್ ಎಲ್ಲಿ ಎಂದು ಪ್ರಶ್ನೆ ಮಾಡಿದ್ದಾರೆ. 

ರಾಧಿಕಾ ಪಂಡಿತ್: 'ಯಾರು ನವೀನ್?......ಅವರು ಲೀಗಲಿ ಹೆಸರು ಚೇಂಜ್ ಮಾಡಿಕೊಂಡಿದ್ದಾರೆ ಯಶ್ ಅಂತ'
ಪ್ಯಾಪರಾಜಿ: ನಿಮಗೆ ನವೀನ್ ಅಲ್ವಾ?
ರಾಧಿಕಾ ಪಂಡಿತ್: ಇಲ್ಲ ನನಗೂ ಯಶ್

ಗೀತಕ್ಕನ ಜಾಗದಲ್ಲಿ ಬೇರೆ ಯಾರೇ ಇದ್ದರೂ ಈ ಧೈರ್ಯ ಮಾಡ್ತಾ ಇರ್ಲಿಲ್ಲ; ಶಿವಣ್ಣನ ಬಗ್ಗೆ ಅರ್ಜುನ್ ಜನ್ಯ ಭಾವುಕ

ಈ ಮಾತುಕತೆಯ ಸಣ್ಣ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಹೆಣ್ಣು ಮಕ್ಕಳು ನಿಮಷ್ಟು ಬೋಲ್ಡ್ ಆಂಡ್ ಬ್ಯೂಟಿಫುಲ್ ಆಗಿದ್ದ ಪತಿ ಜೀವನ ಗೆದ್ದ ಎಂದು ಲೆಕ್ಕ, ಯಶ್ ಮನೆಯ ಮಹಾಲಕ್ಷ್ಮಿ, ನವೀನ್ ಯಶ್ ಆಗಿ ಬದಲಾಗುವುದಕ್ಕೆ ನಿಮ್ಮ ಸಾಥ್ ತುಂಬಾನೇ ಇದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

ಕಾಲು ಎಳೆಯುವವರು ಇದ್ದಾಗಲೇ ಬೆಳೆಯೋದು, ಒಳ್ಳೆಯವರು ಜೊತೆಗಿದ್ದರೆ ಒಳ್ಳೆಯದ್ದೇ ಆಗೋದು: ಸುದೀಪ್

ಯಶ್ ಮೊದಲ ಹೆಸರು ನವೀನ್:

ಕನ್ನಡ ಚಿತ್ರರಂಗಕ್ಕೆ ಕಾಲಿಡುವ ಮುನ್ನ ರಂಗಭೂಮಿ ಮತ್ತು ಸೀರಿಯಲ್‌ಗಳಲ್ಲಿ ಯಶ್ ನಟಿಸುತ್ತಿದ್ದರು. ಆಗ ಪ್ರತಿಯೊಬ್ಬರಿಗೂ ತಮ್ಮ ಹುಟ್ಟು ಹೆಸರು ಅಥವಾ ನಿಜವಾದ ಹೆಸರು ನವೀನ್ ಕುಮಾರ್ ಗೌಡ ಎಂದು ಪರಿಚಯವಾಗಿದ್ದರು. ಆದರೆ ತಾಯಿ ಮನೆ ಕಡೆಯಿಂದ ಯಶ್ವಂತ್ ಎಂದು ನಾಮಕರಣ ಮಾಡಿದ್ದರು. ಇಂಡಸ್ಟ್ರಿಗೆ ಕಾಲಿಡುವ ಸಮಯದಲ್ಲಿ ಜನರು ಗುರುತಿಸಬೇಕು ಎಂದು ಯಶ್ವಂತ್‌ ಹೆಸರನ್ನು ಯಶ್ ಆಗಿ ಮಾಡಿಕೊಂಡರು. ಅಂದಿನಿಂದ ನವೀನ್/ ಯಶ್ವಂತ್ ಬದಲು ಹೆಸರನ್ನು ಯಶ್ ಮಾಡಿಕೊಂಡರು. 

ಸ್ಮಿಮ್‌ ಸೂಟ್‌ ಹಾಕು ಎಂದು ಡೈರೆಕ್ಟರ್‌ ಹೇಳ್ದಾಗ, ಲಂಗಾ ಎತ್ತಿ ತೊಡೆ ತೋರಿಸಿದ್ರು ನಟಿ ಲಕ್ಷ್ಮೀ!

 

Latest Videos
Follow Us:
Download App:
  • android
  • ios