ಟ್ಯೂನ್ ಕದ್ದ ಆರೋಪಕ್ಕೆ ಚಂದನ್ ಶೆಟ್ಟಿ ಕಿಡಿ, ಮಾನನಷ್ಟ ಮೊಕದ್ದಮೆಗೆ ಮೊರೆ?
ಸಾಮಾನ್ಯವಾಗಿ ಯಾರೇ ಆದರೂ ಜಗತ್ತಿನಲ್ಲಿ, ಗೆದ್ದ ಹಾಡಿನ ಟ್ಯೂನ್ ಕದ್ದ ಉದಾಹರಣೆ ಇದೆ. ಆದರೆ ಅಷ್ಟೇನೂ ಹಿಟ್ ಆಗದೇ ಇರುವ ಹಾಡಿನ ಟ್ಯೂನ್ ಕದ್ದು ಮತ್ತೆ ಅದನ್ನು ಹೊರತರುವ ಸಾಹಸವನ್ನು ಯಾರೂ ಮಾಡುವುದಿಲ್ಲ. ಜಗತ್ತಿನಲ್ಲಿ ಇಬ್ಬರು ಸಂಗೀತ ನಿರ್ದೇಶಕರು ಒಂದೇ ರೀತಿಯ ಟ್ಯೂನ್ ಮಾಡುವ ಚಾನ್ಸ್ ಇದೆ ಎಂಬುದು..
ಗಾಯಕ, ಸಂಗೀತ ನಿರ್ದೇಶಕ ಹಾಗು ರಾಪರ್ ಚಂದನ್ ಶೆಟ್ಟಿ (Chandan Shetty) ಅವರೀಗ ಟ್ಯೂನ್ ಕದ್ದ ಆರೋಪ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆ ಅಗಿರುವ 'ಕಾಟನ್ ಕ್ಯಾಂಡಿ' ಮ್ಯೂಸಿಕ್ ಆಲ್ಬಂ ಬಗ್ಗೆ ಟ್ಯೂನ್ ಕದ್ದ ಆರೋಪ ಮಾಡಲಾಗಿದೆ. ಈ ಆರೋಪವನ್ನು ವೈ ಬುಲ್ ರಾಕ್‌ಸ್ಟಾರ್ ಯುವರಾಜ್ ಮಾಡಿದ್ದಾರೆ. 6 ವರ್ಷಗಳ ಹಿಂದೆಯೇ 'ವೈ ಬುಲ್ ಪಾರ್ಟಿ (Y Bull Party)' ಅನ್ನೋ ಸಾಂಗ್ ಮಾಡಿದ್ದ ಯುವರಾಜ್ (Rock Star Yuvaraj) ಇದೀಗ ಈ ಆರೋಪ ಮಾಡಿದ್ದಾರೆ. ಈ ಬಗ್ಗೆ ರಾಕ್‌ಸ್ಟಾರ್ ಯುವರಾಜ್ 'ಈ ಕಾಟನ್ ಕ್ಯಾಂಡಿ ಟ್ಯೂನ್ ನನ್ನ ಈ ಹಿಂದಿನ ಪಾರ್ಟಿ ಸಾಂಗ್ ನಕಲಿನಂತೆಯೇ ಇದೆ. ಆದ್ದರಿಂದ ನಾನು ಈ ಬಗ್ಗೆ ದೂರು ನೀಡಲು ನಿರ್ಧಾರ ಮಾಡಿದ್ದಾರೆ' ಎಂದಿದ್ದಾರೆ.
ಈ ಬಗ್ಗೆ ಸುದ್ದಿ 'ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್' ಜೊತೆ ಮಾತನಾಡಿರುವ ವೈ ಬುಲ್ ರಾಕ್‌ಸ್ಟಾರ್ ಯುವರಾಜ್ ಅವರು 'ನಾನು ಆರು ವರ್ಷಗಳ ಹಿಂದೆ 'ವೈ ಬುಲ್' ಸಾಂಗ್ ಮಾಡಿದ್ದೆ. ಅದೇ ಟ್ಯೂನ್ ಬಳಸಿ ಚಂದನ್ ಶೆಟ್ಟಿ ಅವರು ಈಗ ಕಾಟನ್ ಕ್ಯಾಂಡಿ ಮಾಡಿದ್ದಾರೆ. ಆದ್ದರಿಂದ ನಾನು ಈಗ ದೂರು ನೀಡಲು ಸಜ್ಜಾಗಿದ್ದೇನೆ' ಎಂದಿದ್ದಾರೆ. ಜೊತೆಗೆ, 'ಸುದ್ದಿ ವಾಹಿನಿಗಳಲ್ಲಿ ಚಂದನ್ ಶೆಟ್ಟಿ ಅವರು ಆ ಬಗ್ಗೆ 'ಹೌದು, ನನಗೂ ಅಚ್ಚರಿ ಆಗ್ತಿದೆ. ನನ್ನ ಸಾಂಗ್ ಆ ಹಾಡಿಗೆ ಸಿಮಿಲರ್ ಇದೆ. ಆದರೆ ಅದು ಆಕಸ್ಮಿಕ' ಎಂದಿದ್ದಾರೆ. ಆದರೆ, 'ಅವರ ಸಾಂಗ್ ನನ್ನ ಹಾಡನ್ನು ಹೋಲುತ್ತದೆ ಎಂದು ಒಪ್ಪಿಕೊಂಡಿದ್ದಾರೆ' ಎಂದಿದ್ದಾರೆ ಯುವರಾಜ್.
ಚಂದನ್ ಶೆಟ್ಟಿ ಮೇಲೆ ಟ್ಯೂನ್ ಕದ್ದ ಆರೋಪ, 'ಕಾಟನ್ ಕ್ಯಾಂಡಿ' ಪಾರ್ಟಿ ಸಾಂಗ್ ಇನ್ ಟ್ರಬಲ್!
ಈ ಬಗ್ಗೆ 'ಕಾಟನ್ ಕ್ಯಾಂಡಿ; ಸೃಷ್ಟಿಕರ್ತ ಚಂದನ್ ಶೆಟ್ಟಿಯವರು 'ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್' ಜೊತೆ ಮಾತನಾಡಿದ್ದಾರೆ. ಅವರು ಈ ಬಗ್ಗೆ 'ಹೌದು, 'ವೈ ಬುಲ್' ರಾಕ್‌ಸ್ಟಾರ್ ಯುವರಾಜ್ ಅವರ 6 ವರ್ಷಗಳ ಹಿಂದಿನ ಸಾಂಗ್‌ಅನ್ನು ನಾನು ಈಗ ಕೇಳಿದೆ.. ನನ್ನ ಕಾಟನ್ ಕ್ಯಾಂಡಿ ಹಾಗೂ ವೈ ಬುಲ್ ಆ ಹಾಡಿನ ಟ್ಯೂನ್‌ನಲ್ಲಿ ಸಿಮಿಲಾರಿಟಿ ಇದೆ. ಆದರೆ ಅದು ಆಕಸ್ಮಿಕವಷ್ಟೇ. 6 ವರ್ಷಗಳ ಹಿಂದೆ ಲಾಂಚ್ ಆಗಿದ್ದ ಆ ಹಾಡು ಸೂಪರ್ ಹಿಟ್ ಆಗಿರಲಿಲ್ಲ. ಹೀಗಾಗಿ ನಾನು ಆ ಟ್ಯೂನ್ ಅನ್ನು ಕದ್ದು ಮಾಡುವ ಅಗತ್ಯವೇ ಇಲ್ಲ.
ಸಾಮಾನ್ಯವಾಗಿ ಯಾರೇ ಆದರೂ ಜಗತ್ತಿನಲ್ಲಿ, ಗೆದ್ದ ಟ್ಯೂನ್ ಕದ್ದ ಉದಾಹರಣೆ ಇದೆ. ಆದರೆ ಅಷ್ಟೇನೂ ಹಿಟ್ ಆಗದೇ ಇರುವ ಹಾಡಿನ ಟ್ಯೂನ್ ಕದ್ದು ಮತ್ತೆ ಅದನ್ನು ಹೊರತರುವ ಸಾಹಸವನ್ನು ಯಾರೂ ಮಾಡುವುದಿಲ್ಲ. ಜಗತ್ತಿನಲ್ಲಿ ಇಬ್ಬರು ಸಂಗೀತ ನಿರ್ದೇಶಕರು ಒಂದೇ ರೀತಿಯ ಟ್ಯೂನ್ ಮಾಡುವ ಚಾನ್ಸ್ ಇದೆ ಎಂಬುದು ಗೂಗಲ್ ಕೂಡ ಹೇಳುತ್ತದೆ. ಹೀಗಾಗಿ, ನನ್ನ ಹಾಡು ವೈ ಬುಲ್ ಹಾಡಿನ ಟ್ಯೂನ್‌ಗೆ ಹೋಲಿಕೆ ಆಗುತ್ತಿರುವುದು 'ಬೈ ಚಾನ್ಸ್' ಅಷ್ಟೇ. ಸಂಗೀತಗಾರರು ಪ್ರತಿಯೊಬ್ಬರೂ ಕೆಲವು ಟ್ಯೂನ್‌ಗಳಿಂದ ಪ್ರೇರಣೆ ಪಡೆದೇ ಇರುತ್ತಾರೆ.
ವೈರಾಗ್ಯಕ್ಕೆ ಒಳಗಾದ್ರಾ ನಿತ್ಯಾ ಮೆನನ್, ಸನ್ಯಾಸಿನಿ ಆಗೋದು ಪಕ್ಕಾ ಆಗೋಯ್ತಾ?
ಹೀಗೆ ಪ್ರೇರಣೆ ಪಡೆದ ಮೂಲ ಟ್ಯೂನ್‌ಗಳಿಂದ ಹಲವಾರು ಹಾಡುಗಳು ಹುಟ್ಟಿರುತ್ತವೆ. ಸಂಗೀತದ ಸ್ವರಗಳು ಲಿಮಿಟೆಡ್ ಇರೋದ್ರಿಂದ ಟ್ಯೂನ್‌ಗಳು ಕೂಡ ಲಿಮಿಟೆಡ್ ಆಗಿರುತ್ತವೆ. ಅವುಗಳಿಂದ ಹಲವಾರು ಹಾಡುಗಳು ಹುಟ್ಟಿಕೊಳ್ಳುತ್ತವೆ. ಈ ಕಾಟನ್ ಕ್ಯಾಂಡಿ ಕೂಡ ಅದೇ ರೀತಿ ವೈ ಬುಲ್ ಹಾಡಿಗೆ ಹೋಲಿಕೆ ಆಗುತ್ತಿದೆ ಅಷ್ಟೇ. ಇದು ಕದ್ದ ಟ್ಯೂನ್ ಅಲ್ಲ, ಕದಿಯುವ ಅಗತ್ಯವೂ ನನಗಿಲ್ಲ. ಆರೋಪ ಮಾಡಿರುವವರು ಕೇಸ್-ಕೋರ್ಟ್ ಅನ್ನೊದಾದರೆ ನಾನೂ ಕೂಡ ಮಾನನಷ್ಟ ಮೊಕದ್ದಮೆ ಹೂಡಲು ರೆಡಿಯಾಗಿದ್ದೇನೆ' ಎಂದಿದ್ದಾರೆ. ಒಟ್ಟಿನಲ್ಲಿ, ಕಾಟನ್ ಕ್ಯಾಂಡಿ ಈಗ ಬಿಸಿ ಆಗುತ್ತಿದೆ!