ಡಾಲಿ ಧನಂಜಯ್‌ ನಟನೆಯ ‘ಹೆಡ್‌ ಬುಷ್‌’ ಸಿನಿಮಾ ಅಕ್ಟೋಬರ್‌ 21ಕ್ಕೆ ಬಿಡುಗಡೆ ಆಗುತ್ತಿದೆ. ಬೆಂಗಳೂರಿನ ಭೂಗತ ಲೋಕದ ಡಾನ್‌ ಜಯರಾಜ್‌ ಅವರ ಜೀವ ಆಧರಿತ ಕತೆ ಎಂದು ಹೇಳಲಾಗುತ್ತಿರುವ ಈ ಚಿತ್ರವಿದು.

ಡಾಲಿ ಧನಂಜಯ್‌ ನಟನೆಯ ‘ಹೆಡ್‌ ಬುಷ್‌’ ಸಿನಿಮಾ ಅಕ್ಟೋಬರ್‌ 21ಕ್ಕೆ ಬಿಡುಗಡೆ ಆಗುತ್ತಿದೆ. ಬೆಂಗಳೂರಿನ ಭೂಗತ ಲೋಕದ ಡಾನ್‌ ಜಯರಾಜ್‌ ಅವರ ಜೀವ ಆಧರಿತ ಕತೆ ಎಂದು ಹೇಳಲಾಗುತ್ತಿರುವ ಈ ಚಿತ್ರವಿದು. ದೀಪಾವಳಿ ಹಬ್ಬಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿರುವ ಈ ಚಿತ್ರಕ್ಕೆ ಅಗ್ನಿ ಶ್ರೀಧರ್‌ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಶೂನ್ಯ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದ ನಾಯಕಿಯಾಗಿ ಪಾಯಲ್‌ ರಜಪೂತ್‌ ನಟಿಸಿದ್ದಾರೆ. ಡಾಲಿ ಧನಂಜಯ್‌ ಇಲ್ಲಿ ಜಯರಾಜ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

ಉಳಿದಂತೆ ಕ್ರೇಜಿಸ್ಟಾರ್‌ ರವಿಚಂದ್ರನ್‌, ಲೂಸ್‌ಮಾದ ಯೋಗಿ, ವಸಿಷ್ಠ ಸಿಂಹ, ದೇವರಾಜ್‌, ಶೃತಿ ಹರಿಹರನ್‌, ರಘು ಮುಖರ್ಜಿ, ಬಾಲು ನಾಗೇಂದ್ರ ಹೀಗೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ನಿರ್ದೇಶಕ ಶೂನ್ಯ ಅವರು ಈ ಮೊದಲು ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿಅವರ ಬಳಿ ಅಸೋಸಿಯೇಟ್‌ ಆಗಿದ್ದರು. ಅಲ್ಲದೆ ಫಿಲಂ ಮೇಕಿಂಗ್‌ ಕುರಿತು ಎಂಎಸ್ಸಿ , ಸಂಶೋಧನೆ ಕೂಡ ಮಾಡಿದ್ದಾರೆ. ಹೆಡ್‌ ಬುಷ್‌ ಅವರ ಮೊದಲ ನಿರ್ದೇಶನದ ಚಿತ್ರವಾಗಿದೆ. ಚಿತ್ರದ ಹಾಡುಗಳಿಗೆ ಚರಣ್‌ ರಾಜ್‌ ಸಂಗೀತ ನಿರ್ದೇಶನವಿದೆ. ಸುನೊಜ್‌ ವೇಲಾಯಧನ್‌ ಕ್ಯಾಮೆರಾ, ಬಾದಲ್‌ ನಂಜುಂಡಸ್ವಾಮಿ ಕಲೆ ಚಿತ್ರಕ್ಕಿದೆ. ಡಾಲಿ ಪಿಕ್ಚರ್ಸ್‌ ಹಾಗೂ ಸೋಮಣ್ಣ ಟಾಕೀಸ್‌ ಮೂಲಕ ಈ ಚಿತ್ರ ನಿರ್ಮಾಣ ಆಗಿದೆ.

ನಟ ಧನಂಜಯ್ ಸಿನಿಮಾ ವಿರುದ್ಧ ಡಾನ್ ಜಯರಾಜ್‌ ಮಗ ಅಜಿತ್ ದೂರು!

ಕೆ ಕೆ ರಾಜಾ ಪಾತ್ರದಲ್ಲಿ ರೋಶನ್‌: ಅಂದಹಾಗೆ ಈ ಚಿತ್ರದಲ್ಲಿ ಬಚ್ಚನ್‌ ಅಲಿಯಾಸ್‌ ಸೈಯಾದ್‌ ಅಮಾನ್‌ ಬಚ್ಚನ್‌ ಅವರ ಪುತ್ರ ರೋಶನ್‌ ಕೆ ಕೆ ರಾಜಾ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಈಗಾಗಲೇ ಇಂಡಿಯನ್‌ ಅಥ್ಲೆಟಿಕ್‌ ಅಕಾಡೆಮಿ ಸ್ಥಾಪಿಸಿ ಮಕ್ಕಳಿಗೆ ಕ್ರೀಡಾ ತರಬೇತಿ ನೀಡುತ್ತಿದ್ದಾರೆ. ಕ್ರೀಡೆ ಜತೆಗೆ ಸಿನಿಮಾದಲ್ಲೂ ಆಸಕ್ತಿ ಬೆಳೆಸಿಕೊಂಡಿದ್ದ ರೋಶನ್‌, ತಮ್ಮ ತಂದೆಯ ದಿನಗಳ ಕತೆಯಲ್ಲಿ ಪ್ರಮುಖ ಪಾತ್ರ ಮಾಡುವ ಮೂಲಕ ನಟನೆಯತ್ತಲೂ ಮುಖ ಮಾಡಿದ್ದಾರೆ.

Scroll to load tweet…


ಹೆಡ್‌ಬುಷ್‌ ಚಿತ್ರಕ್ಕೆ ಶುರುವಾಗಿದೆ ಹೊಸ ತಲೆನೋವು: ಸ್ಯಾಂಡಲ್‌ವುಡ್‌ನ ನಟ ಭಯಂಕರ ಡಾಲಿ ಧನಂಜಯ್ ಹೆಡ್ಬುಷ್ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಇದೆ. ಯಾಕಂದ್ರೆ ಹೆಡ್‌ಬುಷ್‌ ಬೆಂಗಳೂರು ಭೂಗತ ಲೋಕದ ಮೊದಲ ಡಾನ್ ಅಂತ ಕರೆಸಿಕೊಳ್ಳೊ ಜೈರಾಜ್ ಅವರ ಜೀವನ ಕಥೆಯ ಚಿತ್ರ ಅಂತ ಚಿತ್ರತಂಡ ಹೇಳಿಕೊಂಡಿದೆ. ಆದರೆ ಈಗ ಈ ಹೆಡ್‌ಬುಷ್‌ಗೆ ದೊಡ್ಡ ಹೆಡೇಕ್ ಶುರುವಾಗಿದೆ. ಯಾಕಂದ್ರೆ ಜೈರಾಜ್ ಬಗ್ಗೆ ಸಿನಿಮಾದಲ್ಲಿ ಏನು ತೋರಿಸ್ತಾರೆ ಅಂತ ಗೊತ್ತಿಲ್ಲ. ನಮ್ಮ ಬಳಿ ಅನುಮತಿ ಪಡೆಯದೇ ಸಿನಿಮಾ ಮಾಡ್ತಿದ್ದಾರೆ ಅಂತ ಜೈರಾಜ್ ಪುತ್ರ ಅಜಿತ್ ಜೈರಾಜ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ದಾಖಲಿಸಿದ್ದಾರೆ. 

ಹೆಡ್‌ಬುಷ್‌ ಸಿನಿಮಾಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು ಅಗ್ನಿ ಶ್ರೀಧರ್. ಅಗ್ನಿ ಶ್ರೀಧರ್ ಅವರೇ ಬರೆದಿರೋ ದಾದಾಗಿರಿಯ ದಿನಗಳು ಅನ್ನೋ ಪುಸ್ತಕವನ್ನ ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಜೈರಾಜ್ ಪಾತ್ರದಲ್ಲಿ ಡಾಲಿ ಧನಂಜಯ್ ನಟಿಸುತ್ತಿರೋದಾಗಿ ಅನೌನ್ಸ್ ಮಾಡಿದ್ದು, ಸಿನಿಮಾವನ್ನ ಧನಂಜಯ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದೆ. ಆದ್ರೆ ಇಷ್ಟು ದಿನ ಸುಮ್ಮನಿದ್ದು ಈಗ ವಿವಾದ ಮಾಡುತ್ತಿರೋದು ಯಾಕೆ ಅಂತ ಗೊತ್ತಿಲ್ಲ. ಈ ವಿಚಾರವಾಗಿ ಮೆ 13ಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದು ಮಾತಾಡ್ತೇನೆ ಎಂದಿದ್ದಾರೆ ಟಗರು ವಿಲನ್ ಡಾಲಿ ಧನಂಜಯ್. 

ನನ್ನೊಳಗಿನ ನಟನನ್ನು ಇಷ್ಟಪಡುವವರ ಸಿನಿಮಾ ಟ್ವೆಂಟಿ ಒನ್‌ ಅವರ್ಸ್‌: ಧನಂಜಯ್

ಹೆಡ್‌ಬುಷ್‌ ಸಿನಿಮಾ ಶುರುವಾದಾಗ ಡಾಲಿ ಧನಂಜಯ್ರನ್ನ ಭೇಟಿಯಾಗಿದ್ದ ಜೈರಾಯ್ ಪುತ್ರ ಅಜಿತ್ ಸಿನಿಮಾವನ್ನ ಚೆನ್ನಾಗಿ ಮಾಡಿ ಅಂದಿದ್ರಂತೆ. ಅಷ್ಟೆ ಅಲ್ಲ ಡಾಲಿ ಧನಂಜಯ್ ಕುರಿತು ಅಜಿತ್ ಒಂದು ಪೋಸ್ಟ್ ಹಾಕಿದ್ರು. ಆ ಪೋಸ್ಟ್ನಲ್ಲಿ ಧನಂಜಯ್ ನನ್ನ ಬ್ರದರ್ ಇದ್ದ ಹಾಗೆ ಅಂತಿದ್ರು. ಆದ್ರೆ ಈಗ ದಿಢೀರ್ ಅಂತ ಅಪ್ಪನ ಕುರಿತು ಯಾರು ಸಿನಿಮಾ ಮಾಡಬೇಡಿ ಹಾಗೇನಾದ್ರು ಮಾಡಿದ್ರೆ ಕಾನೂನು ಹೊರಾಟಕ್ಕೆ ಹೋಗುತ್ತೇನೆ ಅಂತ ಹೆಡ್‌ಬುಷ್‌ ಚಿತ್ರತಂಡದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದು ಈಗ ಡಾಲಿ ಟೀಂಗೆ ಹೊಸ ತಲೆ ನೋವಿಗೆ ಕಾರಣ ಆಗಿದೆ.