ನಿವೇದಿತಾ ಗೌಡ. ಬಿಗ್ ಬಾಸ್ ಮೂಲಕ ತನ್ನ ವಿಶಿಷ್ಟ ಕಂಗ್ಲೀಶ್ ಭಾಷೆಯಿಂದ ಗುರುತಿಸಿಕೊಂಡ ಹುಡುಗಿ. ಬಿಗ್ ಬಾಸ್ ಮನೆಯಲ್ಲೇ ಪರಿಚಯವಾದ ರ್ಯಾಪರ್ ಚಂದನ್ ಶೆಟ್ಟಿ ಜೊತೆಗೆ ಈಕೆಯ ಹೆಸರು ಕೇಳಿ ಬಂದದ್ದು, ಆದರೆ ಆರಂಭದಿಂದಲೂ ಈ ಜೋಡಿಗೆ ಒಂದಲ್ಲ ಒಂದು ತಡೆ ಕಾಡುತ್ತಲೇ ಬಂದದ್ದನ್ನು ನೀವು ಗಮನಿಸಿರಬಹುದು. ದಸರಾ ವೇದಿಕೆಯಲ್ಲಿ ಪ್ರೊಪೋಸ್ ಮಾಡಿದ್ದಕ್ಕೆ ಚಂದನ್ ಶೆಟ್ಟಿ ನಾಡಿನಾದ್ಯಂತ ಟೀಕೆಗೆ ಗುರಿಯಾದರು. ನೀವ್ ಉದ್ಧಾರ ಆಗಲ್ಲ ಕಣ್ರೋ ಅಂತ ದೊಡ್ಡ ದೊಡ್ಡವರೆಲ್ಲ ಬೖದಿದ್ದಕ್ಕೋ ಏನೋ ಈ ಜೋಡಿ ಕೆಲವೇ ತಿಂಗಳಲ್ಲಿ ಸಪ್ತಪದಿ ತುಳಿಯಿತು. ಮದುವೆಯ ವೇಳೆಯಲ್ಲೂ ಸಣ್ಣ ಪುಟ್ಟ ಅಪಸ್ವರ ಕೇಳಿಬಂತು. ಮದುವೆಯಾಗಿ ಈ ಜೋಡಿ ಹನಿಮೂನ್ ಗೆ ಅಂತ ಹೊರಟರೆ ಅಲ್ಲೂ ಕೋವಿಡ್ ಸಮಸ್ಯೆ ಎದುರಾಗಿ ಈ ಜೋಡಿ ಆತಂಕಕ್ಕೆ ಸಿಲುಕಿತ್ತು.

ಅಮ್ಮನದೇ ಹೈಟ್: ಶ್ರೀದೇವಿ ಎರಡನೇ ಮಗಳ ಫ್ಯಾಷನ್ ಸೆನ್ಸ್ ಸೂಪರ್ ...

ಇದರ ನಡುವೆ ಚಂದನ್ ಶೆಟ್ಟಿ ಅವರ ಹೊಸ ಆಲ್ಬಂ ಸಾಕಷ್ಟು ವಿವಾದಕ್ಕೂ ಕಾರಣವಾಯ್ತು. ಕೋಲು ಮಂಡೆ ಹಾಡಿನಲ್ಲಿ ಅವರು ಶರಣೆ ಸಂಕವ್ವನನ್ನು ಕೆಟ್ಟದಾಗಿ ತೋರಿಸಿದ್ದಾರೆ ಅಂತ ಜನ ಛೀಮಾರಿ ಹಾಕಿದ್ರು. ಆದರೆ ಈಗ ಈ ಜೋಡಿಯ ಕಷ್ಟದ ದಿನಗಳೆಲ್ಲ ಕಳೆದು ಒಳ್ಳೆಯ ದಿನಗಳು ಬಂದ ಹಾಗಿದೆ. ಹಾಗೆ ನೋಡಿದರೆ ಈ ಜೋಡಿ ತಮ್ಮ ಯಡವಟ್ಟುಗಳಿಂದ ಜನರ ವಿರೋಧಕ್ಕೆ ಗುರಿಯಾದರೇ ಹೊರತು ಅಹಂಕಾರದಿಂದ ವರ್ತಿಸಿದ್ದಾಗಲೀ, ಕೆಟ್ಟದಾಗಿ ಬಿಹೇವ್ ಮಾಡಿದ್ದಕ್ಕಾಗಲೀ ಅಲ್ಲ. ಬಿಗ್ ಬಾಸ್ ಟೖಮ್ ನಲ್ಲಿ ಇನ್ನೊಬ್ಬ ಸ್ಪರ್ಧಿಗಾಗಿ ನಿವೇದಿತಾ ಗೌಡ ಕಷ್ಟಪಟ್ಟಿದ್ದು ಕಂಡು ಸ್ವತಃ ಸುದೀಪ್ ಅವರೇ ಅಚ್ಚರಿ ಪಟ್ಟಿದ್ದರು.

'ನೋ ಇನ್ನೂ ಲೇಟಾಗಿಲ್ಲ' ಮದುವೆಯಾದ ಮೇಲೆ ಕಾಜಲ್‌ಗೆ ಏನಾಯ್ತು? ...

ಇರಲಿ. ಮದುವೆ ಆದಾಗಿನಿಂದ ಈ ಜೋಡಿ ತಮ್ಮ ಮುದ್ದಾದ ದಾಂಪತ್ಯದ ಫೊಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಲೇ ಇದ್ದಾರೆ. ಅದರಲ್ಲೂ ನಿವೇದಿತಾ ಅಡುಗೆ, ಸುತ್ತಾಟ ಇತ್ಯಾದಿಗಳ ಫೋಟೋ ಪೋಸ್ಟ್ ಮಾಡುತ್ತಿರುತ್ತಾರೆ. ಆದರೆ ಇತ್ತೀಚೆಗೆ ಅವರ ಫೋಟೋ ನೋಡಿದವರು ನಿವೇದಿತಾರಲ್ಲಿ ದೊಡ್ಡ ವ್ಯತ್ಯಾಸ ಗುರುತಿಸಿದ್ದಾರೆ. ಅದು ಮತ್ತೇನೂ ಅಲ್ಲ. ಸ್ಲಿಮ್ ಆಂಡ್ ಸ್ಮಾರ್ಟ್ ಹುಡುಗಿ ನಿವೇದಿತಾ ದಪ್ಪಗಾಗ್ತಿರುವುದು. ಈ ರೀತಿ ಮೖಕೖ ತುಂಬಿಕೊಂಡಿರುವ ನಿವೇದಿತಾ ಅವರನ್ನು ಕಂಡು ಹೆಚ್ಚಿನವರಿಗೆ ಏನಾದ್ರೂ ಗುಡ್ ನ್ಯೂಸ್ ಇರಬಹುದಾ ಅನ್ನುವ ಡೌಟ್ ಬಂದಿದೆ.

ಮದುವೆಗೆ ಸ್ಮರಣೀಯ ಡೇಟ್ ಫಿಕ್ಸ್ ಮಾಡಿಕೊಂಡ ಲವ್ ಮಾಕ್ಟೇಲ್ ಜೋಡಿ ...

ಸೆಲೆಬ್ರಿಟಿ ವಲಯದಲ್ಲಿ ಹೆಚ್ಚಿನವರು ಮದುವೆ ಆಗೋದೇ ಮೂವತ್ತು ಮೂವತ್ತೖದರ ನಂತರ. ಆದರೆ ಈ ಜೋಡಿಯಲ್ಲಿ ನಿವೇದಿತಾ ಬಹಳ ಚಿಕ್ಕವಯಸ್ಸಿಗೇ ತಾಳಿಗೆ ಕೊರಳೊಡ್ಡಿದರು. ತಮಗಿಂತ ಹೆಚ್ಚು ವಯಸ್ಸಿನ ಅಂತರವಿರುವ ಚಂದನ್ ಶೆಟ್ಟಿ ವರಿಸಿದ್ದಕ್ಕೆ ಸದ್ಯಕ್ಕಂತೂ ಈಕೆಗೆ ಬೇಜಾರಿಲ್ಲ. ಆದರೆ ಈಗಲೇ ಪಾಪು ಮಾಡ್ಕೊಂಡರೆ ಮುಂದೆಯೂ ಬೇಜಾರಿರಲ್ಲ ಅಂತ ಇವರ ಫ್ಯಾನ್ಸ್ ಈಗ ಕಾಲೆಳೆಯುತ್ತಿದ್ದಾರೆ. ಆದರೆ ಇಷ್ಟು ಚಿಕ್ಕ ವಯಸ್ಸಲ್ಲಿ ಮಗು ಮಾಡಿಕೊಂಡರೆ ಬದುಕಿನಲ್ಲಿ ಎನ್ ಜಾಯ್ ಮೆಂಟೇ ಇರಲ್ಲ ಅನ್ನೋರೂ ಇದ್ದಾರೆ. ಲಾಕ್ ಡೌನ್ ಟೈಮ್ನಲ್ಲಿ ಹಲವು ಸೆಲೆಬ್ರಿಟಿ ಜೋಡಿಗಳು ಗುಡ್ ನ್ಯೂಸ್ ಕೊಟ್ರು. ಅಂಥಾ ಸುದ್ದಿ ಈ ಜೋಡಿಯಿಂದಲೂ ಬರಲಿ ಅನ್ನುವ ಹಾರೈಕೆ ನಮ್ಮದು.