ಮೊದಲು ಈ ಕತೆ ಕೇಳಿ...

ಕ್ಯೂಟ್ ಆಗಿರೋ ಆ ಹುಡುಗ ಮಹಡಿ ಮೇಲೆ ಬಂದು ಕಾಲಿಂಗ್ ಬೆಲ್ ಮಾಡ್ತಾನೆ. ಅವಳು ಬರೋದ್ರೊಳಗೆ ಮೊಬೈಲ್ನಲ್ಲಿ ಮಿರರ್ ಆನ್ ಮಾಡಿ ಕೂದ್ಲು ಸರಿ ಮಾಡಿಕೊಳ್ತಿರುವಾಗಲೇ... ರಪ್ಪಕ್ಕಂತ ಹುಡುಗಿ ಬಾಗ್ಲು ತೆಗೀತಾಳೆ. ಕ್ಷಣ ಹುಡುಗಂಗೆ ಶಾಕ್. ಅಪ್ಪ ಈ ತಿಂಗ್ಳು ಬಾಡಿಗೆ ಬಗ್ಗೆ ಕೇಳ್ತಿದ್ರು..' ಅಂತ ತಡಬಡಿಸುತ್ತಾನೆ. 'ಅಯ್ಯೋ ನಾನ್ ಎಟಿಎಂಗೇ ಹೋಗಕ್ಕಾಗಿಲ್ಲ' ಹುಡುಗಿ ಪೇಚಾಡ್ತಾಳೆ. 'ಅಪ್ಪ ಹೇಳಿದ್ರು, ಪೇಟಿಎಂ ಮಾಡಬಹುದು ಅಂತ.' ಅಂತ ಹುಡುಗ ಹೇಳ್ತಾನೆ. 'ಅಯ್ಯೋ, ನಾನು ಪೇಟಿಎಂ ಕೆವೈಸಿನೂ ಮಾಡಿಸಿಲ್ಲ' ಅಂತಾಳೆ ಹುಡುಗಿ. 'ಪೇಟಿಎಂಗೆ ಕೆವೈಸಿ ವಾಲೆಟ್ ಬೇಕಾಗಿಲ್ಲ ಬ್ಲಾ ಬ್ಲಾ ಬ್ಲಾ' ಅಂತ ಹುಡುಗ ಎಕ್ಸ್ ಪ್ಲೇನ್ ಮಾಡ್ತಾನೆ. ಹುಡುಗಿ ಹಣ ಪೇ ಮಾಡ್ತಾಳೆ. ಕ್ಯಾಶ್ ಬ್ಯಾಕ್ ಆಗುತ್ತೆ. ಹುಡುಗ ಓರೆಯಾಗಿ ಫ್ಲರ್ಟ್ ಮಾಡ್ತಾ ಕಾಫಿ ಕುಡಿಸಿ ಅಂತಾನೆ. 'ಇದನ್ನೂ ಅಪ್ಪನ್ನೇ ಹೇಳ್ಕೊಟ್ರಾ' ಅಂತ ಜಾಣ ಹುಡುಗಿ ಕಣ್ಣರಳಿಸುತ್ತಾಳೆ. ಅವಳ ಕಣ್ಣೋಟಕ್ಕೆ ಫಿದಾ ಆದ ಹುಡುಗ ಕುಣಿಯುತ್ತಾನೆ ಸಹ..

ಹೀಗೆಲ್ಲ ಫ್ಲರ್ಟ್ ಮಾಡಿರೋ ಹುಡುಗ ವಿಜಯ್ ಸೂರ್ಯ. ಹುಡುಗಿ ಪ್ರಣೀತಾ ಸುಭಾಷ್. ಅರೆ, ವಿಜಯ್ ಸೂರ್ಯ ಹಿಂಗೆಲ್ಲ ಮಾಡಿದ್ರಾ ಅಂತ ಕೇಳ್ಬೇಡಿ. ಅದರ ಹಿಂದೆ ಇನ್ನೊಂದು ಕತೆ ಇದೆ.

 

 
 
 
 
 
 
 
 
 
 
 
 
 

Paytm KYC pending? No Worries... Watch this 👀😎 #PaytmKaro @paytmaadu

A post shared by Vijay Suriya (@vijaysuriya_07) on Oct 20, 2020 at 6:43am PDT

 

ವಿಜಯ್ ಸೂರ್ಯ ಎಂಬ ಗುಳಿಕೆನ್ನೆ ಹುಡುಗ ಮೂಲತಃ ಮಾಡೆಲಿಂಗ್ ಮಾಡ್ಕೊಂಡಿದ್ದವರು. ಈತ ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಹೀರೋ ಚಂದನ್ ಗೆಳೆಯನಾಗಿ, ಲಚ್ಚಿಗಾಗಿ ಹಂಬಲಿಸುವ ಹುಡುಗನಾಗಿ ಕಾಣಿಸಿಕೊಂಡಾಗ ಈತನ ಬಗ್ಗೆ ಮರುಕ ಪಟ್ಟವರೇ ಹೆಚ್ಚು. ಆಮೇಲೆ ಅಗ್ನಿಸಾಕ್ಷಿ ಸೀರಿಯಲ್ಗೆ ಸೋಬರ್ ಆಗಿ ಎಂಟ್ರಿ ಕೊಟ್ಟು, ಕ್ರಮೇಣ ಲವಲವಿಕೆ ಹುಡುಗನಾಗಿ ಚಿಗಿತುಕೊಳ್ಳುತ್ತಾ ಸಾಗಿ ಅದ್ಭುತ ರೊಮ್ಯಾಂಟಿಕ್ ಗಂಡನಾಗಿ ಬದಲಾದದ್ದು ಹಳೇ ಕಥೆ. ಒಂದು ಟೈಮ್ ನಂತರ ಈ ಸೀರಿಯಲ್ ಜೊತೆಗೆ ನನ್ನ ಕಾಂಟ್ರಾಕ್ಟ್ ಮುಗೀತು ಅಂತ ಹೇಳಿ ಅದ್ರಿಂದ ರಪಕ್ಕಂತ ಹೊರಬಂದ್ರು. ಆಮೇಲೆ ಏನೇನೋ ಸರ್ಕಸ್ ಮಾಡಿ ಸೀರಿಯಲ್ಲೂ ಮುಗೀತು. ಅದೇನೋ ಗೊತ್ತಿಲ್ಲ, ಈ ಸೀರಿಯಲ್ ಗೆ ಗುಡ್ ಬೈ ಹೇಳಿದ್ದೇ ಸಕ್ಸಸ್ಸೂ ಗುಡ್ ಬೈ ಅಂತು. ನಾಗತಿಹಳ್ಳಿ 'ಇಷ್ಟಕಾಮ್ಯ' ಸಿನಿಮಾನೂ ಅಷ್ಟಾಗಿ ಕೈ ಹಿಡೀಲಿಲ್ಲ. 'ಕದ್ದುಮುಚ್ಚಿ' ಬಂದರೂ ಜನ ಮುಖ ತಿರುಗಿಸಿದ್ರು. 'ಪ್ರೇಮಲೋಕ' ಸೀರಿಯಲ್ ಗೂ ದೂರದಿಂದಲೇ ಕೈ ಮುಗಿದ ಹಾಗಿದೆ.

ಯಾರೂ ನೋಡಿರದ ವಿಜಯ್ ಸೂರ್ಯ ಫ್ಯಾಮಿಲಿ ಫೋಟೋಗಳಿವು! ...

ಹಾಗಂತ ಜನ ಕಂಪ್ಲೀಟ್ ಆಗಿ ವಿಜಯ್ ಸೂರ್ಯ ಅವರನ್ನು ಮರೆತರಾ ಅಂದರೆ ಅದಕ್ಕೆ ನೋ ಅನ್ನೋ ಹಾಗಿಲ್ಲ. ಏಕೆಂದರೆ ವಿಜಯ್ ತಮ್ಮ ಮಗುವಿನ ತುಂಟಾಟ, ಮುದ್ದಾಟದ ವೀಡಿಯೋಗಳನ್ನು ಹಾಕಿದರೆ ಜನ ಮುಗಿಬಿದ್ದು ನೋಡ್ತಾರೆ. ಮಗನ ಫೋಟೋ ಶೇರ್ ಮಾಡಿ ಅಂತ ರಿಕ್ವೆಸ್ಟ್ ಗಳು ಬರ್ತಾನೇ ಇರುತ್ತವೆ. ಮಗ ಹುಟ್ಟಿದ ಮೇಲೆ ಜನ ಅವನ ಬಗ್ಗೆನೇ ಕೇಳ್ತಾರೆ, ನನ್ನ ಬಗ್ಗೆ ಯಾರೂ ಮಾತಾಡಲ್ಲ ಅಂತ ಇತ್ತೀಚೆಗೆ ಈ ವಿಜಯ್ ಸೂರ್ಯ ಕರೀನಾ ಕಪೂರ್ ಸ್ಟೈಲ್ ನಲ್ಲಿ ಹೇಳ್ಕೊಂಡಿದ್ರು. ಇರಲಿ, ಮುದ್ದು ಮುದ್ದಾಗಿರುವ ಪುಟಾಣಿ ಪಾಪು, ಜನರ ಗಮನ ಸೆಳೆಯೋದು ಸಹಜಾನೇ.

ಅಗ್ನಿಸಾಕ್ಷಿ ವಿಜಯ್ ಸೂರ್ಯ 'ಡಿಂಪಲ್' ಪುತ್ರನ ಫೋಟೋ ನೋಡಿ! ...

ಆದ್ರೆ ಮುದ್ದಾದ ಹೆಣ್ಮಗಳ ಗಂಡನಾಗಿ, ಚೆಂದದ ಮಗುವಿನ ತಂದೆಯಾದ ಮೇಲೂ ಬೇರೆ ಹುಡುಗ ಜೊತೆ ಫ್ಲರ್ಟಿಂಗಾ ಅಂತ ಕೇಳ್ಬೇಡಿ. ಇದು ವಿಜಯ್ಗೆ ಸದ್ಯದ ಹೊಟ್ಟೆಪಾಡು. ಪೇಟಿಎಂ ಆ್ಯಡ್‌ನಲ್ಲಿ ಅವರು ಕ್ಯೂಟ್ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಎಷ್ಟು ಕ್ಯೂಟ್ ಆಗಿ ಕಾಣ್ತಾರೆ ಅದ್ರೆ ಹುಡುಗೀರು ಹಂಬಲಿಸೋವಷ್ಟು. ಮದ್ವೆಯಾಗಿ ಅಪ್ಪನಾದ್ರೂ ಸ್ಮಾರ್ಟ್‌ನೆಸ್ ಹೋಗಿಲ್ಲ. ಅವರ ಹಿನ್ನೆಲೆ ಗೊತ್ತಿಲ್ಲದೋರೋ ಯಾರೋ ಕಾಲೇಜ್ ಹುಡ್ಗ ಇರ್ಬೇಕು ಅಂದ್ಕೋಬೇಕು ಅಷ್ಟು ಚೆಂದ ಕಾಣ್ತಾರೆ. ಈ ಜಾಹೀರಾತು ನೋಡಿದ ಮೇಲೆ ಹುಡುಗೀರು ಮತ್ತೆ ರಾಗ ಎಳೆಯೋದಕ್ಕೆ ಶುರು ಮಾಡಿದ್ದಾರೆ. ಇಷ್ಟು ಬೇಗ ಈ ಹುಡುಗಂಗೆ ಮದ್ವೆ ಬೇಕಿತ್ತಾ ಅಂತ.

ಅಯ್ಯೋ! 'ಅಗ್ನಿಸಾಕ್ಷಿ' ಸಿದ್ಧಾರ್ಥ್ ಲಾಕ್‌ಡೌನ್‌ನಲ್ಲಿ ಏನ್‌ ಮಾಡ್ಕೊಂಡಿದ್ದಾರೆ ನೋಡಿ.. ...