Asianet Suvarna News Asianet Suvarna News

ಧ್ರುವ ಸರ್ಜಾ ನೀವಂದುಕೊಂಡ ಹಾಗಲ್ಲ..!

ಕಳೆದೊಂದು ತಿಂಗಳಿನಿಂದ ಒಂದಲ್ಲ ಒಂದು ಕಾರಣಕ್ಕೆ ಧ್ರುವ ಸರ್ಜಾ ಸುದ್ದಿ ಆಗುತ್ತಲೇ ಇದ್ದಾರೆ. ಸಿನಿಮಾಕ್ಕಿಂತಲೂ ವೖಯುಕ್ತಿಕ ವಿಚಾರಕ್ಕೆ ಹೆಚ್ಚು ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಧ್ರುವ ಸರ್ಜಾ ಇನ್ನೊಂದು ಮುಖ ಹೆಚ್ಚಿನವರಿಗೆ ಗೊತ್ತಿಲ್ಲ.

Do you know these faces of Dhruva sarja?
Author
Bengaluru, First Published Oct 26, 2020, 4:05 PM IST

 ಧ್ರುವ ಮಾಸ್ ಹೀರೋ. ಅಭಿಮಾನಿಗಳು ಅವರನ್ನು ಎಷ್ಟು ಹಚ್ಚಿಕೊಂಡಿದ್ದಾರೋ ಅಷ್ಟೇ ಧ್ರುವ ಸರ್ಜಾನೂ ಅಭಿಮಾನಿಗಳನ್ನು ಹಚ್ಚಿಕೊಂಡಿದ್ದಾರೆ. ತಮ್ಮ ಮದುವೆ ಸಂದರ್ಭದಲ್ಲೂ ಬ್ಯಾರಿಕೇಡ್ ಹಾರಿ ಅಭಿಮಾನಿಗಳ ಜೊತೆ ಸೇರಿದ್ದೇ ಅವರ ಜನಪ್ರೀತಿಗೆ ಸಾಕ್ಷಿ.

ಹಾಗೆ ನೋಡಿದರೆ ಆ ಅಭಿಯಾನಿಗಳು ಯಾರು, ಎಲ್ಲಿಂದ ಬಂದವರು ಅನ್ನೋದೆಲ್ಲ ಗೊತ್ತಿರೋದೇ ಇಲ್ಲ. ಆದರೆ ಅದನ್ನೂ ಮೀರಿದ ಅಭಿಮಾನ ಹೀರೋವನ್ನೂ, ಅಭಿಮಾನಿಗಳನ್ನೂ ಒಂದು ಮಾಡುತ್ತೆ. ಹೆಚ್ಚಿನೆಲ್ಲಾ ಸ್ಟಾರ್ ಗಳು ಅಭಿಮಾನಿಗಳನ್ನು ಕಡೆಗಣಿಸೋದಿಲ್ಲ. ಆದರೆ ಅವರೆಲ್ಲರಿಗಿಂತ ತುಸು ಹೆಚ್ಚೇ ತನ್ನ ಫ್ಯಾನ್ ಗಳನ್ನು ಎತ್ತರಕ್ಕಿಟ್ಟವರು ಧ್ರುವ.

ಮೊಮ್ಮಗನಲ್ಲಿ ಮಗನನ್ನು ನೋಡುತ್ತಿದ್ದೇವೆ, ಸ್ವಲ್ಪ ಸಮಾಧಾನವಾಗಿದೆ: ಚಿರು ತಾಯಿ ...

ಮದುವೆಯಂಥಾ ಖುಷಿಯ ಸಂದರ್ಭದಲ್ಲಿ ತಮ್ಮನ್ನು ಕಾಣಲು ಬಂದ ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ. ಅವರ ಖುಷಿ ಹೆಚ್ಚಿಸಿದರು. ತನ್ನ ಖುಷಿಯನ್ನು ಅಭಿಮಾನಗಳ ಜೊತೆಗೆ ಹಂಚಿಕೊಂಡರು. ಅದೇ ರೀತಿ ತನ್ನ ಅಣ್ಣನ ಅಂತ್ಯಕ್ರಿಯೆಯಂಥಾ ಸಂದರ್ಭದಲ್ಲೂ ಅಭಿಮಾನಿಗಳನ್ನು ಕಡೆಗಣಿಸಲಿಲ್ಲ. ಕೋವಿಡ್ ಭೀತಿಯ ನಡುವೆಯೂ ಚಿರು ಸರ್ಜಾ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಟ್ಟರು. ಹೆಚ್ಚಾಗಿ ನಮ್ಮ ಖುಷಿಯನ್ನು ಎಲ್ಲರ ಬಳಿ ಹಂಚಿಕೊಳ್ಳುತ್ತೇವೆ, ಆದರೆ ಬೇಸರವನ್ನು ಆಪ್ತರ ಬಳಿ ಮಾತ್ರ ತೋಡಿಕೊಳ್ಳುತ್ತೇವೆ.

ಧ್ರುವ ತನ್ನ ಫ್ಯಾನ್ ಗಳನ್ನು ನಡೆಸಿಕೊಳ್ಳುವ ರೀತಿ ನೋಡಿದರೆ ಅವರು ಅಭಿಮಾನಿಗಳನ್ನು ಮನೆಯವರ ಹಾಗೇ ನೋಡೋದು ಸ್ಪಷ್ಟ. ಅಭಿಮಾನಿಗಳ ಬಳಿ ಏನನ್ನೂ ಧ್ರುವ ಮುಚ್ಚಿಡೋದಿಲ್ಲ. ಆದರೆ ಹೆಚ್ಚಿನವರಿಗೆ ಗೊತ್ತಿರದ ಧ್ರುವ ಅವರ ಮತ್ತೊಂದು ಮುಖ ಡೆಡಿಕೇಶನ್. ಅವರೊಂದು ಕೆಲಸ ಒಪ್ಪಿಕೊಂಡರೆ ಅದಕ್ಕೆ ತಮ್ಮನ್ನು ಸಂಪೂರ್ಣ ಕೊಟ್ಟುಕೊಳ್ಳುತ್ತಾರೆ. ಒಂದು ಸಿನಿಮಾಕ್ಕಾಗಿ ಅವರು ತಮ್ಮ ಅಮೂಲ್ಯ ಎರಡು ಮೂರು ವರ್ಷಗಳನ್ನೇ ವ್ಯಯ ಮಾಡುತ್ತಾರೆ.

ಜೂನಿಯರ್ ಚಿರುಗೆ ಏನೆಂದು ಹೆಸರು ಇಟ್ಟಿದ್ದಾರೆ ಗೊತ್ತಾ? 

ಒಂದು ಸಿನಿಮಾದ ಸಂಪೂರ್ಣ ಕೆಲಸ ಮುಗಿದ ಮೇಲೇ ಇನ್ನೊಂದು ಸಿನಿಮಾ. ಹೀಗಾಗಿ ಅವರು ಬೆರಳೆಣಿಕೆಯ ಸಿನಿಮಾಗಳನ್ನಷ್ಟೇ ಮಾಡೋದಕ್ಕೆ ಸಾಧ್ಯವಾಯಿತು. ಆದರೆ ಧ್ರುವ ತನ್ನ ಶೇ.100 ಸಾಮರ್ಥ್ಯವನ್ನೆಲ್ಲ ಅದಕ್ಕೆ ವ್ಯಯಿಸಿದ ಕಾರಣ ಸಿನಿಮಾ ಸೋಲಲಿಲ್ಲ. ತನ್ನ ದೇಹವನ್ನು ಸಿನಿಮಾಕ್ಕೋಸ್ಕರ ಬೆಳೆಸೋದೂ ಧ್ರುವ ಸರ್ಜಾಗೆ ಗೊತ್ತು, ಅದೇ ರೀತಿ ಇಳಿಸೋದಕ್ಕೂ ಅವರಿಂದ ಸಾಧ್ಯವಾಗುತ್ತೆ. ಹೆಚ್ಚಿನ ಹೀರೋಗಳು ಬಾಡಿ ಬಿಲ್ಡ್ ಮಾಡ್ತಾರೆ, ಆದರೆ ಇಳಿಸೋದಕ್ಕೆ ಅವರಿಂದ ಕಷ್ಟಸಾಧ್ಯವಾಗುತ್ತೆ. ಆದರೆ ಧ್ರುವ ಒಂದು ಸಿನಿಮಾದಲ್ಲಿ ಯುವಕನ ಪಾತ್ರವನ್ನೂ, ಆತನ ಬಾಲ್ಯದ ಪಾತ್ರವನ್ನೂ ಮಾಡಬೇಕಿರುತ್ತದೆ. ಯುವಕನ ಪಾತ್ರಕ್ಕೋಸ್ಕರ ಬಾಡಿ ಬಿಲ್ಡ್ ಮಾಡಿದ ಧ್ರುವ ನಂತರ ಬಾಲ್ಯದ ಹುಡುಗನ ಪಾತ್ರಕ್ಕಾಗಿ ಬರೀ ೨ ತಿಂಗಳಲ್ಲಿ ಹಲವು ಕೆಜಿ ತೂಕ ಇಳಿಸಿಕೊಳ್ಳುತ್ತಾರೆ.

ಚಿರು ಸರ್ಜಾ ಮಗುವಿನ ಬಗ್ಗೆ ಜ್ಯೋತಿಷಿ ಮಾತು; ಮೇಘನಾಗೆ ಖುಷಿಯಾಗೋದು ಖಂಡಿತ! ...

 ಕೊಟ್ಟ ಮಾತಿಗೆ ತಪ್ಪದೇ ಇರುವುದು ಧ್ರುವ ವಿಶೇಷ ಗುಣ. ಅವರು ಬಹಳ ಇಮೋಶನಲ್ ಅಂತಲೇ ಫೇಮಸ್. ಅಣ್ಣನ ಅಗಲಿಕೆ ಅವರನ್ನು ಬಹಳ ಕಾಡಿತ್ತು. ಅಣ್ಣ ತನ್ನ ಜೊತೆಗೇ ಇರಬೇಕು ಅಂತ ತಮ್ಮ ಫಾರ್ಮ್ ಹೌಸ್ ನಲ್ಲೇ ಚಿರು ಅಂತ್ಯಕ್ರಿಯೆ ಮಾಡಿದರು. ಮೇಘನಾ ಸೀಮಂತದಲ್ಲಿ ಅಣ್ಣನನ್ನು ನೆನೆಸಿ ಕಣ್ಣೀರು ಹಾಕಿದ ಅವರು ಅಣ್ಣನಿಗೆ ಮುದ್ದಾದ ಮಗುವಾದಾಗ ಸ್ವತಃ ಅಣ್ಣನನ್ನೇ ಕಂಡ ಹಾಗೆ ಸಂತೋಷಪಟ್ಟರು. ಮಗುವಿಗೋಸ್ಕರ ಬೆಳ್ಳಿಯ ತೊಟ್ಟಿಲು ಮಾಡಿಸಿದರು.

ಸ್ಕ್ರೀನ್ ಮೇಲೆ ಹೀರೋ ಆಗಿ ಮೆರೆಯೋದು ದೊಡ್ಡದಲ್ಲ. ಆದರೆ ರಿಯಲ್ ಲೖಫ್ ನಲ್ಲೂ ಅದನ್ನು ಮೖಂಟೇನ್ ಮಾಡೋದು ಸವಾಲು. ಧ್ರುವ ಅವರ ಭಾವುಕ, ಒಳ್ಳೆಯ ಗುಣಗಳೇ ಅವರನ್ನು ರಿಯಲ್ ಲೖಫ್ ನ ಹೀರೋನನ್ನಾಗಿ ಮಾಡಿವೆ. ಅವರ ಸಿನಿಮಾಗಳ ಗೆಲುವಿಗೂ ಇನ್ ಡೖರೆಕ್ಟ್ ಆಗಿ ಕಾರಣವಾಗ್ತಿವೆ. ಧ್ರುವ ಕೖಯಲ್ಲಿ ಈಗ ಪೊಗರು ರಿಲೀಸ್ ಗೆ ಮುನ್ನವೇ ನಾಲ್ಕು ಚಿತ್ರಗಳು ಕೖಯಲ್ಲಿವೆ. ಅವರು ಸಿನಿಮಾ ರಂಗದಲ್ಲಿ ಬಹಳ ಎತ್ತರಕ್ಕೇರುವ ಸಾಧ್ಯತೆ ದಟ್ಟವಾಗಿವೆ. ಆಲ್ ದಿ ಬೆಸ್ಟ್ ಧ್ರುವ ಸರ್ಜಾ.

Follow Us:
Download App:
  • android
  • ios