ಯೋಗರಾಜ್ ಭಟ್ಟರು ಬರೆದ 'ಹೆಣ್ಮಕ್ಳೇ ಸ್ಟ್ರಾಂಗು ಗುರೂ' ಡೈಲಾಗ್‌ ಸಹಜವಾಗಿಯೇ ಹೆಣ್ಮಕ್ಕಳಿಗೆ ತುಂಬಾ ಪ್ರಿಯ. ಅದನ್ನು ಹೇಳಿಕೊಂಡು ಎಂಜಾಯ್ ಮಾಡುವ ಹುಡುಗರ ಸಂಖ್ಯೆಯೇನೂ ಕಮ್ಮಿಯಿಲ್ಲ...

ಸ್ಯಾಂಡಲ್‌ವುಡ್ ನಿರ್ದೇಶಕ ಯೋಗರಾಜ್ ಭಟ್ (Yogaraj Bhat)ಅವರು ತಮ್ಮದೇ ಹಳೆಯ ಡೈಲಾಗ್ ಒಂದರ ಬಗ್ಗೆ ಮಾತನಾಡಿರುವ ವೀಡಿಯೋ ವೈರಲ್ ಆಗುತ್ತಿದೆ. ಹೆಣ್ಮಕ್ಳೇ ಸ್ಟ್ರಾಂಗು ಗುರೂ ಎಂಬ ಯೋಗರಾಜ್ ಭಟ್ ಅವರ 'ಪರಮಾತ್ಮ' ಚಿತ್ರದ ಡೈಲಾಗ್ ಅಂದು ತುಂಬಾನೇ ಫೇಮಸ್ ಆಗಿತ್ತು. ಅಂದು ಮಾತ್ರವಲ್ಲ, ಅಂದಿನಿಂದ ಇಂದಿನವೆರೆಗೂ ಅದು ಆಗಾಗ ಚಾಲ್ತಿಗೆ ಬರುತ್ತಲೇ ಇದ್ದ ಡೈಲಾಗ್ ಆಗಿ ಉಳಿದಿತ್ತು. ಇತ್ತೀಚೆಗೆ ಮಹಿಳಾ ಆರ್‌ಸಿಬಿ (RCB)ತಂಡ ಕ್ರಿಕೆಟ್ ಕಪ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದು ಗೊತ್ತೇ ಇದೆ. ಈ ವೇಳೆ ಭಟ್ಟರ ಈ ಡೈಲಾಗ್ ಮತ್ತೆ ಬಹಳಷ್ಟು ಜನಪ್ರಿಯತೆ ಪಡೆಯಿತು. 

ಯೋಗರಾಜ್ ಭಟ್ಟರು ಬರೆದ 'ಹೆಣ್ಮಕ್ಳೇ ಸ್ಟ್ರಾಂಗು ಗುರೂ' ಡೈಲಾಗ್‌ ಸಹಜವಾಗಿಯೇ ಹೆಣ್ಮಕ್ಕಳಿಗೆ ತುಂಬಾ ಪ್ರಿಯ. ಅದನ್ನು ಹೇಳಿಕೊಂಡು ಎಂಜಾಯ್ ಮಾಡುವ ಹುಡುಗರ ಸಂಖ್ಯೆಯೇನೂ ಕಮ್ಮಿಯಿಲ್ಲ. ಯಾವುದೇ ಒಂದು ಸಂದರ್ಭದಲ್ಲಿ ಗಂಡು ಮಕ್ಕಳ ಎದುರು ಅಥವಾ ಹಾಗೇನೂ ಮಹಿಳೆಯರು ಗೆದ್ದರೆ ಈ ಡೈಲಾಗ್ ಅನೇಕರ ಬಾಯಲ್ಲಿ ಬರುವುದು ಕಾಮನ್. ಅದೊಂಥರಾ ಭಟ್ಟರ ಭಾವಗೀತೆ ಎಂಬಂತಾಗಿಬಿಟ್ಟಿದೆ ಎನ್ನಬಹುದು. 

ಬಹುನಿರೀಕ್ಷಿತ ಚಿತ್ರ 'ಉತ್ತರಕಾಂಡ'ದ ಶೂಟಿಂಗ್ ಶುರು; ಮೋಹಕತಾರೆ ರಮ್ಯಾ ಜಾಗದಲ್ಲಿ ಯಾರು ಗುರೂ?

ಹಾಗಿದ್ದರೆ, ಆರ್‌ಸಿಬಿ (RCB)ತಂಡ ಕ್ರಿಕೆಟ್ ಕಪ್ ಗೆದ್ದ ಸಮಯದಲ್ಲಿ ಭಟ್ಟರಿಗೆ ಈ ಡೈಲಾಗ್ ಕೇಳಿದಾಗ ಭಟ್ಟರು ಹೇಳಿದ್ದೇನು? 'ನಿಜವಾಗಿಯೂ ನೋಡಿದರೆ ಪುರುಷರಿಗಿಂತ ಮಹಿಳೆಯರೇ ತುಂಬಾ ಸ್ಟ್ರಾಂಗು. ಪುರುಷರು ಕೇವಲ ಇನ್ಫಾರ್ಮೇಶನ್ ಅಷ್ಟೇ. ಗಂಡ್‌ಮಕ್ಳು ಕೇವಲ ಬೀಜ ಅಷ್ಟೇ, ಅದ್ರಲ್ಲಿ ಇರೋದು ಮಾಹಿತಿಗಳು. ಆದ್ರೆ ಹೆಣ್ಣಕ್ಳು ಭೂಮಿ ಥರ. ಆ ಬೀಜದಿಂದ ಹುಟ್ಟುವ ಮರವನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡು ದೊಡ್ಡ ಮರವಾಗಿ ಬೆಳೆಯಲು ಆಧಾರವಾಗಿದ್ದು, ಮತ್ತೆ ಮತ್ತೆ ಬೀಜವಾಗಿ ಭೂಮಿಯನ್ನು ಸೇರಿಕೊಳ್ಳುವಂತೆ ಮಾಡುವ ಗುಣದವರು ಮಹಿಳೆಯರು' ಎಂದಿದ್ದಾರೆ ಯೋಗರಾಜ್ ಭಟ್ಟರು. 

ವೀಡಿಯೋ ಕಾಲ್‌ನಲ್ಲಿ ಕಿಚ್ಚ ಸುದೀಪ್ ಬಾಡಿಗಾರ್ಡ್‌ ಜತೆ ದೀಪಿಕಾ ಪಡುಕೋಣೆ ಮಾತನಾಡಿದ್ದು ಯಾಕೆ?

ಅಂದಹಾಗೆ, ಯೋಗರಾಜ್‌ ಭಟ್ಟರ ನಿರ್ದೇಶನದ 'ಕರಟಕ ದಮನಕ' ಹಾಗೂ 'ಗರಡಿ' ಚಿತ್ರಗಳು ಭಾರೀ ನಿರೀಕ್ಷೆ ಮೂಡಿಸಿದ್ದವು. ಸೂರ್ಯ ನಾಯಕತ್ವ, ಬಿಸಿ ಪಾಟೀಲ್ ಮುಖ್ಯಪಾತ್ರದ ಮೂಲಕ ಮೂಡಿ ಬಂದಿದ್ದ ಗರಡಿ ಚಿತ್ರದ ಬಳಿಕ, ಶಿವರಾಜ್‌ಕುಮಾರ್ ಹಾಗೂ ಪ್ರಭುದೇವ ಜೋಡಿಯ 'ಕರಟಕ ದಮನಕ' ಸಿನಿಮಾ ತೆರೆಗೆ ಬಂದಿತ್ತು. ಸದ್ಯ ಹೊಸದೊಂದು ಸಿನಿಮಾ ಪ್ಲಾನ್‌ನಲ್ಲಿ ನರತರಾಗಿರುವ ಭಟ್ಟರು, ಸ್ಯಾಂಡಲ್‌ವುಡ್‌ ಪ್ರೇಕ್ಷಕರ ಪಾಲಿಗೆ ಹೊಸ ನಿರೀಕ್ಷೆ ಮೂಡಿಸಿದ್ದಾರೆ. 

ನಾನು ಅನ್ವೇಷಣೆ, ಹೋರಾಟ ಮಾಡೋಕೆ ಬಂದವ್ನು, ಮ್ಯಾನೇಜ್ಮೆಂಟ್ ನನ್ನ ಕೆಲಸವಲ್ಲ ಅಂದ್ರು ಯಶ್!