ನಟಿ ದೀಪಿಕಾ ಪಡುಕೋಣೆ ಕನ್ನಡದ 'ಐಶ್ವರ್ಯ' ಸಿನಿಮಾದಲ್ಲೇ ಮೊದಲು ಬಣ್ಣ ಹಚ್ಚಿ ಕ್ಯಾಮೆರಾ ಮುಂದೆ ನಿಂತಿದ್ದು. ಬಳಿಕ ಶಾರುಖ್ ಖಾನ್ ನಟನೆಯ 'ಓಂ ಶಾಂತಿ ಓಂ' ಸಿನಿಮಾ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು. 

ನಟಿ ದೀಪಿಕಾ ಪಡುಕೋಣೆ (Deepika Padukone) ಕನ್ನಡದ ನಟ ಕಿಚ್ಚ ಸುದೀಪ್ (Kichcha Sudeep) ಬಾಡಿಗಾರ್ಡ್‌ ಜತೆ ಕನ್ನಡದಲ್ಲಿ ಮಾತನಾಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ಈ ಸುದ್ದಿಗೆ ಹಲವರು ಅಚ್ಚರಿಯ ಕಾಮೆಂಟ್ ಹಾಕಿದ್ದಾರೆ. ನಿಜವಾಗಿ ಹೇಳಬೇಕು ಎಂದರೆ, ನಟಿ ದೀಪಿಕಾ ಪಡುಕೋಣೆಗೆ ಕನ್ನಡ ಬರುತ್ತೆ, ಅವರಿಗೆ ಬಾಲ್ಯದಿಂದಲೂ ಕರ್ನಾಟಕದ ನಂಟಿದೆ. ಅಷ್ಟೇ ಅಲ್ಲ, ದೀಪಿಕಾ ಪಡುಕೋಣೆ ಓದಿದ್ದು, ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿಯೇ ಎನ್ನಲಾಗಿದೆ. ದೀಪಿಕಾ ಪಡುಕೋಣೆ ತಂದೆ ಪ್ರಕಾಶ್ ಪಡುಕೋಣೆ ಅವರೂ ಕೂಡ ಆಗಾಗ ಕರ್ನಾಟಕಕ್ಕೆ ಬರುತ್ತಲೇ ಇರುತ್ತಾರೆ. 

ನಟಿ ದೀಪಿಕಾ ಪಡುಕೋಣೆ ನಟಿಸಿರುವ ಮೊದಲ ಸಿನಿಮಾ ಕೂಡ ಕನ್ನಡದ್ದೇ ಆಗಿದೆ. ರಿಯಲ್ ಸ್ಟಾರ್ ಉಪೇಂದ್ರ ನಾಯಕತ್ವದ 'ಐಶ್ವರ್ಯ' ಸಿನಿಮಾದಲ್ಲೆ ದೀಪಿಕಾ ಪಡುಕೋಣೆ ಮೊದಲು ಬಣ್ಣ ಹಚ್ಚಿ ಕ್ಯಾಮೆರಾ ಮುಂದೆ ನಿಂತಿದ್ದು. ಬಳಿಕ ಶಾರುಖ್ ಖಾನ್ ನಟನೆಯ 'ಓಂ ಶಾಂತಿ ಓಂ' ಸಿನಿಮಾ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು. ಅಚ್ಚರಿ ಎಂಬಂತೆ, ನಟಿ ದೀಪಿಕಾ ಪಡುಕೋಣೆ ಅವರ ವಿಕಿಪೀಡಿಯಾ ನೋಡಿದರೆ ಅಲ್ಲಿ 'ಓಂ ಶಾಂತಿ ಓಂ' ಅವರ ಮೊಟ್ಟಮೊದಲ ಸಿನಿಮಾ ಎಂಬ ಮಾಹಿತಿ ಸಿಗುತ್ತದೆ. ಆದರೆ ಅದು ಸತ್ಯಕ್ಕೆ ದೂರ ಎನ್ನಬಹುದು. 

ನಾನು ಅನ್ವೇಷಣೆ, ಹೋರಾಟ ಮಾಡೋಕೆ ಬಂದವ್ನು, ಮ್ಯಾನೇಜ್ಮೆಂಟ್ ನನ್ನ ಕೆಲಸವಲ್ಲ ಅಂದ್ರು ಯಶ್!

ಸದ್ಯ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ನಟಿ ದೀಪಿಕಾ ಪಡುಕೋಣೆ ಕಿಚ್ಚ ಸುದೀಪ್ ಬಾಡಿಗಾರ್ಡ್‌ ಕಿರಣ್ (Kichcha Sudeep Bodyguard Kiccha Kiran) ಅವರೊಂದಿಗೆ ವೀಡಿಯೋ ಕಾಲ್‌ನಲ್ಲಿ ಮಾತನಾಡಿದ್ದಾರೆ. ನಟ ಹಾಗೂ ದೀಪಿಕಾ ಪತಿ ರಣವೀರ್ ಸಿಂಗ್ (Ranveer Singh) ಅವರೊಂದಿಗೆ ಕಿಚ್ಚ ಸುದೀಪ್ ಹಾಗು ಅವರ ಬಾಡಿ ಗಾರ್ಡ್ ಕಿರಣ್ ಅವರಿಬ್ಬರ ಭೇಟಿ ಆಗಿದೆ. ಆಗ ರಣವೀರ್ ಸಿಂಗ್ ತಮ್ಮ ಹೆಂಡತಿ ದೀಪಿಕಾಗೆ ವೀಡಿಯೋ ಕಾಲ್ ಮಾಡಿ, ಕಿರಣ್ ಅವರೊಂದಿಗೆ ಮಾತನಾಡಿಸಿದ್ದಾರೆ. ಆಗ ದೀಪಿಕಾ 'ನಿಮ್ ಹೆಸ್ರು ಏನು?' ಅಂತ ಕೇಳಿದ್ದಾರೆ. ಅದಕ್ಕೆ ಕಿರಣ್ ಅವರು 'ನನ್ ಹೆಸರು ಕಿರಣ್ ಅಂತ, ಆದ್ರೆ ಎಲ್ಲರೂ ನನ್ನ ಕಿಚ್ಚ ಕಿರಣ್ ಅಂತ್ಲೇ ಕರೀತಾರೆ' ಎಂದಿದ್ದಾರೆ. 

ಫ್ಯಾನ್ಸ್‌ಗಳೇ ನನ್ನ ಶಕ್ತಿ & ಸಾಮರ್ಥ್ಯ ಎಂದ್ಬಿಟ್ರು ವಿಜಯ್ ದೇವರಕೊಂಡ; ಜ್ಞಾನೋದಯ ಆಗಿದ್ಹೇಗೆ?

ಅದಕ್ಕೆ ನಟಿ ದೀಪಿಕಾ 'ಓ ಹೌದಾ, ಅಂದ್ರೆ ಕಿಚ್ಚ ಸುದೀಪ, ಕಿಚ್ಚ ಕಿರಣ್ ಅಲ್ಲಾ..' ಅಂದಿದ್ದಾರೆ. ಅದಕ್ಕೆ ಕಿರಣ್, ಹೌದು ಮೇಡಂ, ನಿಮ್ಮನ್ನು ನೋಡಿ ನಿಮ್ ಜೊತೆ ಮಾತಾಡಿದ್ದು ತುಂಬಾ ಖುಷಿಯಾಯ್ತು, ನಿಮ್ಮನ್ನು ಒಮ್ಮೆ ಮೀಟ್ ಮಾದ್ಬೇಕು' ಎಂದ ಕಿರಣ್‌ಗೆ 'ಖಂಡಿತ, ನೆಕ್ಸ್ಟ್‌ ಟೈಮ್' ಎಂದಿದ್ದಾರೆ ನಟಿ ದೀಪಿಕಾ ಪಡುಕೋಣೆ. ಅಲ್ಲೇ ಇದ್ದ ಕಿಚ್ಚ ಸುದೀಪ್ ಅವರಿಬ್ಬರ ಸಂಭಾಷಣೆ ಕೇಳಿಸಿಕೊಂಡು ಖುಷಿಯಿಂದ ನಗುತ್ತ ರೆಸ್ಪಾನ್ಸ್ ಮಾಡಿದ್ದಾರೆ. ಒಟ್ಟಿನಲ್ಲಿ, ಕರ್ನಾಟಕದ ನಂಟು ಹೊಂದಿರುವ ನಟಿ ದೀಪಿಕಾ ಪಡುಕೋಣೆ, ಕನ್ನಡಿಗರು ಅಂತ ಗೊತ್ತಾದ ತಕ್ಷಣ ಅವರೊಂದಿಗೆ ಕನ್ನಡದಲ್ಲೇ ಮಾತನಾಡಿ, ಅಭಿಮಾನ ಮೆರೆದಿದ್ದಾರೆ. 

ಮಹಿಳೆಯರು ಇನ್ನೂರು ಫೌಂಡ್ ಭಾರವನ್ನು ಇನ್ನೊಬ್ಬರ ಮೇಲೆ ಎಸೆಯಲಾರರು; ನಟಿ ಪ್ರಿಯಾಂಕಾ ಚೋಪ್ರಾ!