ನಾನು ಅನ್ವೇಷಣೆ, ಹೋರಾಟ ಮಾಡೋಕೆ ಬಂದವ್ನು, ಮ್ಯಾನೇಜ್ಮೆಂಟ್ ನನ್ನ ಕೆಲಸವಲ್ಲ ಅಂದ್ರು ಯಶ್!
ನಟ ಯಶ್ ಸದ್ಯ ಎರಡು ಪ್ರಾಜೆಕ್ಟ್‌ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗೀತೂ ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾಕ್ಕೆ ನಾಯಕರಾಗಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಯಶ್, ಇನ್ನೊಂದು ಕಡೆ ಹಿಂದಿಯ 'ರಾಮಾಯಣ' ಸಿನಿಮಾದಲ್ಲಿ ರಾವಣನ ಪಾತ್ರವನ್ನು ಮಾಡಲಿದ್ದಾರೆ ಎನ್ನಲಾಗಿದೆ.
ಕನ್ನಡದ ನಟ, ಪ್ಯಾನ್ ಇಂಡಿಯಾ ಫೇಮ್ ರಾಕಿಂಗ್ ಸ್ಟಾರ್ ಯಶ್ (Rocking Star Yash)ದೊಡ್ಡದೊಂದು ವೇದಿಕೆಯಲ್ಲಿ ಮಾತನಾಡಿದ್ದಾರೆ. ಯಶ್ ಮಾತನ್ನು ಆಲಿಸುತ್ತಿದ್ದ ಅಲ್ಲಿ ಸೇರಿದ್ದ ಜನರಲ್ಲಿ ಕುತೂಹಲವಿತ್ತು, ಅಭಿಮಾನವಿತ್ತು. ಅದಕ್ಕಿಂತ ಹೆಚ್ಚಾಗಿ 'ಯಶ್ ಒಬ್ಬರು ರೋಲ್ ಮಾಡೆಲ್' ಎನ್ನುವ ಹೆಮ್ಮೆ ಇತ್ತು. ಅಲ್ಲಿ ಮಾತನಾಡುತ್ತ ಯಶ್ ತಮ್ಮ ಬಳಿ ಜನರು, ಫ್ರೆಂಡ್ಸ್ ಹಾಗೂ ಆಪ್ತರು ಸದ್ಯ ಏನು ಮಾತನಾಡುತ್ತಾರೆ, ಎಂಥ ಪ್ರಶ್ನೆ ಕೇಳುತ್ತಾರೆ ಎಂಬ ಬಗ್ಗೆ ಮಾತನಾಡಿದ್ದಾರೆ. ಯಶ್ ಹೇಳಿರುವ ಸಂಗತಿಗಳು ಮೇಲ್ನೋಟಕ್ಕೆ ತಮಾಷೆ ಎನಿಸಿದರೂ, ಅದರಲ್ಲಿ ಬಹಳಷ್ಟು ಗೂಡಾರ್ಥಗಳಿವೆ.
ಈ ಬಗ್ಗೆ ಯಶ್ 'ನೀವ್ಯಾಕೆ ಟೈಮ್ ತಗೋತಾ ಇದೀರಾ ಅಂತ ಜನ್ರು ಕೇಳ್ತಾನೇ ಇರ್ತಾರೆ. ನಮ್ ಪ್ರಕಾರ ನೀವು ಕೆಜಿಎಫ್ 3 (KGF Movie)ಸಿನಿಮಾ ಮಾಡಬಹುದು' ಅಂತಾರೆ. ಕೆಲವರು ನಿಮ್ಮ ಬಿಯರ್ಡ್ ಅನ್ನು ಜನರು ಹೇಗೆ ಒಪ್ಪಿಕೊಂಡಿದಾರೆ ಗೊತ್ತಾಗ್ತಾ ಇಲ್ಲ. ಅದನ್ನ ತೆಗೆದ್ರೆ ಒಳ್ಳೇದು ಅಂತ ಕೆಲವರು ಹೇಳ್ತಾರೆ. ಈ ಥರದ ಪ್ರಶ್ನೆಗಳು ಮತ್ತು ಸಲಹೆಗಳು ನನ್ನ ಫ್ರೆಂಡ್ಸ್ ಕಡೆಯಿಂದ್ಲೇ ಬರ್ತಾವೆ. ನನಗೆ ತುಂಬಾ ಮಂದಿ ಅದೇ ತರದಲ್ಲಿ ಪ್ರಶ್ನೆಗಳನ್ನು ಕೇಳ್ತಾನೇ ಇರ್ತಾರೆ. ಈಗ ನೀವೇನು ಮಾಡ್ತೀರಾ? ಇನ್ಮುಂದೆ ನೀವು ಇನ್ನೂ ಹೆಚ್ಚು ಏನು ಮಾಡೋಕೆ ಸಾಧ್ಯ? 'ಎಂದು ಕೇಳ್ತಾರೆ, ಹೇಳ್ತಾರೆ.
ಮಹಿಳೆಯರು ಇನ್ನೂರು ಫೌಂಡ್ ಭಾರವನ್ನು ಇನ್ನೊಬ್ಬರ ಮೇಲೆ ಎಸೆಯಲಾರರು; ನಟಿ ಪ್ರಿಯಾಂಕಾ ಚೋಪ್ರಾ!
ಅದಕ್ಕೆ ನಾನು, ನಿಮ್ಮ ದೃಷ್ಟಿಯಲ್ಲಿ ಇರಬಹುದು, ನಾನೇನೂ ಮಾಡೋಕಾಗಲ್ಲ ಇನ್ನೂ ಮುಂದೆ ಅಂತ.., ಆದರೆ ನನ್ನ ಪ್ರಕಾರ ಅಲ್ಲ. ನಾನು ಒಂದು ಲೆವಲ್‌ಗೆ ಬಂದು ನಿಂತ್ಬಿಟ್ಟಿದೀನಿ, ಇನ್ನೇನಿದ್ದರೂ ಈ ಖ್ಯಾತಿಯನ್ನು ಎನ್‌ಕ್ಯಾಶ್ ಮಾಡಿಕೊಳ್ಳಬೇಕು' ಎನ್ನುವ ಮೆಂಟಲಿಟಿ ನನ್ನದಲ್ಲ. ನಾನು ಸಾಧಿಸಿಬಿಟ್ಟಿದೀನಿ, ನಾನು ನನ್ನನ್ನು ಎಷ್ಟಾಬ್ಲಿಶ್ ಮಾಡಿಕೊಳ್ಳಬೇಕು ಎಂದು ನಾನು ಯಾವತ್ತೂ ಯೋಚಿಸುವುದಿಲ್ಲ. ಏಕೆಂದರೆ, ನಾನು ಅಡ್ಮಿನಿಷ್ಟ್ರೇಶನ್‌ಗೆ ಫೀಟ್ ಅಗುವಂಥವಲ್ಲ, ನಾನು ಆಡಳಿತ ನಡೆಸಲು ಬಂದಿಲ್ಲ. ನಾನು ಕಾಂಕರ್, ಅಂದರೆ ಹೊಸದನ್ನು ಹುಡುಕಲು ಬಂದವನು.
ಫ್ಯಾನ್ಸ್‌ಗಳೇ ನನ್ನ ಶಕ್ತಿ & ಸಾಮರ್ಥ್ಯ ಎಂದ್ಬಿಟ್ರು ವಿಜಯ್ ದೇವರಕೊಂಡ; ಜ್ಞಾನೋದಯ ಆಗಿದ್ಹೇಗೆ?
ನಾನು ನನ್ನ ಸೇಫರ್ ಜೋನರ್‌ನಿಂದ ಹೊರಗೆ ಹೋಗುತ್ತೇನೆ, ಏನಾದ್ರೂ ಹೊಸದನ್ನುಮಾಡುತ್ತೇನೆ, ನಾನು ನನಗೆ ಎಕ್ಸೈಟ್‌ಮೆಂಟ್ ಆಗುವಂಥದನ್ನು ಮಾಡಲು ಹುಟ್ಟಿದವನು. ನಾನು ಹೋರಾಟ ಮಾಡುತ್ತಿರುವಾಗಲೇ ಸತ್ತರೂ ಸರಿಯೇ, ನಾನು ಫೈಟಿಂಗ್ ಮಾಡುತ್ತಲೇ ಇರುತ್ತೇನೆ. ನಾನು ಜೀವಂತ ಇರುವುದೇ ಅದಕ್ಕಾಗಿ, ಹೋರಾಟ ಮಾಡಲಿಕ್ಕಾಗಿಯೇ' ಎಂದಿದ್ದಾರೆ ಪ್ಯಾನ್ ಇಂಡಿಯಾ ನಟ, ರಾಕಿಂಗ್ ಸ್ಟಾರ್ ಯಶ್. ನಟ ಯಶ್ ಮಾತನ್ನು ಕೇಳಿದವರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಚಪ್ಪಾಳೆ ಮೂಲಕ ಯಶ್ ಅವರನ್ನು ಬೆಂಬಲಿಸಿದ್ದಾರೆ.
ಪುಟ್ಟಣ್ಣ-ವಿಷ್ಣುವರ್ಧನ್ ಜೋಡಿ ಸೂಪರ್ ಹಿಟ್ ಚಿತ್ರಕ್ಕೆ 'ನಾಗರಹಾವು' ಹೆಸರಿಡಲು ಕಾರಣವೇನು?
ಅಂದಹಾಗೆ, ನಟ ಯಶ್ ಸದ್ಯ ಎರಡು ಪ್ರಾಜೆಕ್ಟ್‌ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗೀತೂ ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್ (Toxic)'ಸಿನಿಮಾಕ್ಕೆ ನಾಯಕರಾಗಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಯಶ್, ಇನ್ನೊಂದು ಕಡೆ ಹಿಂದಿಯ' ರಾಮಾಯಣ (Ramayana)'ಸಿನಿಮಾದಲ್ಲಿ ರಾವಣನ ಪಾತ್ರವನ್ನು ಮಾಡಲಿದ್ದಾರೆ ಎನ್ನಲಾಗಿದೆ. ರಣಬೀರ್ ಕಪೂರ್ ರಾಮ, ಸಾಯಿ ಪಲ್ಲವಿ ಸೀತೆ ಹಾಗು ಯಶ್ ರಾವಣರಾಗಿ ತೆರೆಯ ಮೇಲೆ ಕಾಣಿಸಿಕಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಪಾರ್ಟ್ನರ್ ಅಗಿ ಬಂಡವಾಳವನ್ನೂ ಹೂಡುವ ಮೂಲಕ ನಟ ಯಶ್, ಮೊದಲ ಬಾರಿಗೆ ನಿರ್ಮಾಪಕರಾಗಿಯೂ ಉದ್ಯಮಕ್ಕೆ ಕಾಲಿಟ್ಟಂತಾಗಿದೆ.
ನಟನಟಿಯರೆಲ್ಲ ಶ್ರೀಮಂತರಲ್ಲ, ಸ್ಟಾರ್‌ಗಳ ಬಗ್ಗೆ ನನಗೆ ಗೊತ್ತಿಲ್ಲ; ಹೀಗ್ ಹೇಳ್ಬಿಟ್ರು ರಂಜನಿ ರಾಘವನ್!