Asianet Suvarna News Asianet Suvarna News

ಅರ್ಧಬೆಂದ ಮೊಟ್ಟೆಗಳ ಹೊಟ್ಟೆಪಾಡು- 'ನಾವೆಲ್ಲರು'!

ಈ ಚಿತ್ರಕ್ಕೆ ಹೆಸರಿಗಿಂತ ಹೆಚ್ಚಾಗಿ ಅದರ ಉಪಶೀರ್ಷಿಕೆಯೇ ಕುತೂಹಲಕಾರಿಯಾಗಿದೆ. ‘ಹಾಫ್‌ ಬಾಯಲ್ಡ್‌’ ಎಂಬುದು ಸಬ್‌ ಟೈಟಲ್‌. ಅಂದಹಾಗೆ ಚಿತ್ರದ ಹೆಸರು ‘ನಾವೆಲ್ಲರು’. 

Director Shivarja kannada movie  Navellaru
Author
Bangalore, First Published Jan 18, 2020, 9:58 AM IST
  • Facebook
  • Twitter
  • Whatsapp

ನಾವೆಲ್ಲರು ಹಾಫ್‌ ಬಾಯಲ್ಡ್‌ ಎಂದು ಚಿತ್ರದ ಹೆಸರನ್ನು ಓದಿಕೊಂಡರೂ ಪರ್ವಾಗಿಲ್ಲ. ಈ ಹೆಸರಿನಲ್ಲಿ ಸಿನಿಮಾ ನಿರ್ದೇಶಿಸುತ್ತಿರುವುದು ಶಿವರಾಜ್‌ ವೆಂಕಟಾಚಲ. ದೀಪಕ್‌, ಹಂಪೇಶ್‌ ಅರಸೂರು, ಮಂಜು ಬದ್ರಿ, ಸುನೀಲ್‌ ಕುಮಾರ್‌, ಮಾತಂಗಿ ಪ್ರಸನ್ನ, ವಿನ್ಯಾ ಶೆಟ್ಟಿ, ತಬಲ ನಾಣಿ ಮುಂತಾದವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಲ್ಕು ಮಂದಿ ಹುಡುಗರ ಜೀವನದಲ್ಲಿ ಏನೆಲ್ಲ ಘಟನೆಗಳು ಆಗುತ್ತವೆ, ಬುದ್ದಿ ಹೇಳಿ ಸರಿ ದಾರಿಗೆ ತರದೆ ಹೋದರೆ ಏನಾಗುತ್ತದೆ, ನಮ್ಮ ದುಡಿಮೆ ಯಾರಿಗೆ ಸಲ್ಲುತ್ತದೆ ಎಂಬಿತ್ಯಾದಿ ವಿಚಾರಗಳನ್ನು ಒಳಗೊಂಡ ಸಿನಿಮಾ ಇದು. ತೆಲುಗಿನ ‘ಬಾಹುಬಲಿ’ ಚಿತ್ರಕ್ಕೆ ಕೆಲಸ ಮಾಡಿದ ಕುಶೇಂದ್ರ ರೆಡ್ಡಿ ಹಾಗೂ ನೃತ್ಯ ನಿರ್ದೇಶಕ ಪ್ರೇಮ್‌ ರಕ್ಷಿತ್‌ ಅವರು ಈ ಚಿತ್ರಕ್ಕೂ ಕೆಲಸ ಮಾಡಿರುವುದು ಹೈಲೈಟ್‌.

ಹಾಫ್‌ ಸೆಂಚುರಿ ಸಂಭ್ರಮದಲ್ಲಿ 'ಮನೆ ಮಾರಾಟಕ್ಕಿದೆ'!

ಹಾಸ್ಯದ ಮೂಲಕ ಏನಾದರು ಹೇಳುವುದಕ್ಕೆ ಪ್ರಯತ್ನ ಮಾಡಿರುವ ಸಿನಿಮಾ ಇದು. ಹದಿಹರೆಯದ ಮನಸ್ಸುಗಳು ಒಂದು ರೀತಿಯಲ್ಲಿ ಹಾಫ್‌ ಬಾಯಲ್ಡ್‌ನಂತೆ ಇರುತ್ತವೆ. ಈಗಿನ ಯುವ ತಲೆಮಾರಿನ ಜೀವನ ಕ್ರಮವನ್ನು ಗಮನದಲ್ಲಿಟ್ಟುಕೊಂಡು ಈ ಚಿತ್ರಕ್ಕೆ ಕತೆ ಮಾಡಿದ್ದೇನೆ. ವಿಶೇಷವಾಗಿ ಮೂಡಿ ಬಂದಿದೆ... ಇದು ನಿರ್ದೇಶಕರ ಮಾತು. ಇನ್ನೂ ಈ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡುವ ಜತೆಗೆ ಚಿತ್ರಕ್ಕೆ ಸಂಭಾಷಣೆ ಬರೆದಿರುವುದು ತಬಲನಾಣಿ ಅವರು. ‘ಹಾಸ್ಯವೇ ಈ ಚಿತ್ರದ ಪ್ರಧಾನ. ಮನರಂಜನೆ ಮೂಲಕ ಕತೆ ಹೇಳುವ ಹೊಸತನ ತೋರಿದ್ದೇವೆ. ನಿರ್ದೇಶಕರು ಒಂದು ಒಳ್ಳೆಯ ಕತೆ ಮಾಡಿಕೊಂಡು ಬಂದಿದ್ದರು. ಅದನ್ನು ಪಾತ್ರಧಾರಿಗಳಾಗಿ ನಾವು ಜಾಣತನದಿಂದ ನಿಭಾಯಿಸಿದ್ದೇವೆ ಎಂಬ ನಂಬಿಕೆ ಇದೆ’ ಎಂದರು ತಬಲನಾಣಿ. ದಾವಣಗೆರೆ ಮೂಲದ ಕೆ ಅಮೀರ್‌ ಅಹಮದ್‌ ಅವರು ಈ ಚಿತ್ರವನ್ನು ಮೂರು ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ‘ಇದೇ ತಿಂಗಳು 24ರಂದು ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಎಲ್ಲರು ನೋಡಿ ನಮ್ಮ ಚಿತ್ರವನ್ನು ಗೆಲ್ಲಿಸಿ’ ಎಂದು ನಿರ್ಮಾಪಕರು ಮನವಿ ಮಾಡಿಕೊಂಡರು.

'ಪಾಪ್‌ಕಾರ್ನ್‌ ಮಂಕಿ ಟೈಗರ್' ಮಾದೇವ ಹಾಡು ಸಿಕ್ಕಾಪಟ್ಟೆ ವೈರಲ್‌! ಕೇಳಿದ್ದೀರಾ?

ಪವನ್‌ ಕುಮಾರ್‌, ದೇವರಾಜ್‌ ಕಾಪಿಕಾಡ್‌, ಅನಂತ್‌ ಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚೇತನ್‌ ಕುಮಾರ್‌ ಸಾಹಿತ್ಯದ ನಾಲ್ಕು ಹಾಡುಗಳಿಗೆ ವಿಜೇತ್‌ ಕೃಷ್ಣ ಸಂಗೀತವಿದೆ.

Follow Us:
Download App:
  • android
  • ios