ಮಂತ್ರಮುಗ್ಧಗೊಳಿಸುವ ಚರಣ್‌ರಾಜ್‌ ಸಂಗೀತ ಈ ಹಾಡಿನ ಹೆಗ್ಗಳಿಕೆ. ಸಂಚಿತ್‌ ಹೆಗ್ಡೆಯ ಧ್ವನಿಯೂ ಈ ಹಾಡನ್ನು ಮತ್ತಷ್ಟುಇಂಪಾಗಿಸಿದೆ. ಒಬ್ಬ ಸೃಜನಶೀಲ ಅನುಭವಿ ನಿರ್ದೇಶಕನಿಗೆ ಕ್ರಿಯಾಶೀಲ ಹುಡುಗರ ತಂಡವೊಂದು ಸಿಕ್ಕಾಗ ಅದರ ಫಲಿತಾಂಶ ಏನಾಗಬಹುದು ಅನ್ನುವುದಕ್ಕೆ ಈ ಮಾದೇವ ಹಾಡು ಒಂದು ನಿದರ್ಶನ.

ಋುತ್ವಿಕ್‌ ಕಾಯ್ಕಿಣಿ ಅಮೆರಿಕಾದಲ್ಲಿ ಓದಿ ಬಂದವರು. ಆರ್ಟ್‌್ಸ ಮತ್ತು ತಂತ್ರಜ್ಞಾನದಲ್ಲಿ ಪದವೀಧರ. ಸೌಂಡ್‌ ಇಂಜಿನಿಯರಿಂಗ್‌ ಕ್ಷೇತ್ರದಲ್ಲೂ ಇವರ ತಿಳಿವಳಿಕೆ ಅಪಾರ. ಇಂಥಾ ಪ್ರತಿಭೆ ಈಗ ಚಿತ್ರರಂಗಕ್ಕೆ ಬಂದಿದೆ ಮತ್ತು ಸೂರಿ ಗರಡಿಯಲ್ಲಿ ಕೆಲಸ ಮಾಡುತ್ತಿದೆ ಎಂದರೆ ಇವರಿಂದ ಇನ್ನೂ ಬಹಳಷ್ಟುನಿರೀಕ್ಷಿಸಬಹುದಾಗಿದೆ.

ಡಾಲಿ ಧನಂಜಯ್‌ಗೆ ಹೊಸ ಅವತಾರ ಕೊಟ್ಟ ಸುನಿಯಾ ಸೂರಿ...ಮಂಕಿ ಟೈಗರ್!

‘ಈ ಹುಡುಗರು ಮೊದಲಿನಿಂದಲೂ ಸಿನಿಮಾದ ಜೊತೆ ಇದ್ದಾರೆ. ಚಿತ್ರೀಕರಿಸಿದ ದೃಶ್ಯಗಳನ್ನು ನೋಡಿದ್ದಾರೆ. ಅದನ್ನು ಗಮನಿಸಿ ಈ ಹಾಡು ರಚಿಸಿದ್ದಾರೆ. ನಾವು ಮೊದಲು ಯೋಜಿಸಿದ ಹಾಗೆ ಚಿತ್ರದಲ್ಲಿ ಹಾಡುಗಳು ಇರಲಿಲ್ಲ. ಆದರೆ ಈಗ ಹಾಡು ಸೇರಿಕೊಂಡಿದೆ. ಇದು ಪ್ಲಾನ್‌ ಮಾಡಿ ಆಗಿದ್ದಲ್ಲ. ಹಾಗಾಗಿಯೇ ವಿಶೇಷವಾಗಿದ್ದು ಘಟಿಸಿದೆ’ ಎನ್ನುತ್ತಾರೆ ಸೂರಿ.

ಚಿತ್ರೀಕರಣ ಮುಗಿದಿದೆ. ಸಿನಿಮಾ ಇನ್ನೇನು ಸೆನ್ಸಾರ್‌ ಅಂಗಳ ತಲುಪಲಿದೆ. ಫೆಬ್ರವರಿ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.