ಅಂಥದ್ದರಲ್ಲಿ ತಮ್ಮ ಸಿನಿಮಾ 50ನೇ ದಿನದ ಪ್ರದರ್ಶನ ಕಂಡ ಸಂದರ್ಭದಲ್ಲಿ ಒಂದು ಕಾರ್ಯಕ್ರಮ ಮಾಡಿ ಚಿತ್ರತಂಡಕ್ಕೆ ನೆನಪಿನ ಕಾಣಿಕೆ ಕೊಟ್ಟು ಗೌರವಿಸಿದ ಕೀರ್ತಿ ನಿರ್ಮಾಪಕ ಎಸ್‌ವಿ ಬಾಬು ಅವರಿಗೆ ಸಲ್ಲುತ್ತದೆ. ಅವರ ಸಿನಿಮಾ ಹೆಸರು ‘ಮನೆ ಮಾರಾಟಕ್ಕಿದೆ’.

ಚಿತ್ರ ವಿಮರ್ಶೆ: ಮನೆ ಮಾರಾಟಕ್ಕಿದೆ

ಮಂಜು ಸ್ವರಾಜ್‌ ನಿರ್ದೇಶನದ ಈ ಸಿನಿಮಾದಲ್ಲಿ ಮಹಾ ಕಲಾವಿದರ ಸಂಗಮವಾಗಿತ್ತು. ಚಿಕ್ಕಣ್ಣ, ರವಿಶಂಕರ್‌ ಗೌಡ, ರಾಜೇಶ್‌ ನಟರಂಗ, ಶಿವರಾಮ್‌, ಗಿರಿ, ಕಾರುಣ್ಯ ರಾಮ್‌, ತಬಲಾ ನಾಣಿ, ಕರಿಸುಬ್ಬು ಹೀಗೆ ಬಹಳ ಮಂದಿ. ಅವರೆಲ್ಲರಿಗೂ ಎಸ್‌ವಿ ಬಾಬು, ಮಂಜು ಸ್ವರಾಜ್‌ ನೆನಪಿನ ಕಾಣಿಕೆ ಕೊಟ್ಟು ಗೌರವಿಸಿದರು. ಅದನ್ನು ಸ್ವೀಕರಿಸಿದವರೆಲ್ಲರೂ ಹೇಳಿದ್ದು ಒಂದೇ ಮಾತು- ಇಂಥದ್ದೊಂದು ನೆನಪಿನ ಕಾಣಿಕೆ ಪಡೆಯುವುದು ತುಂಬಾ ಅಪರೂಪವಾಗಿತ್ತು, ಈಗ ಈ ಮೊಮೆಂಟೋ ಸ್ವೀಕರಿಸಿ ಬಹಳ ಸಂತೋಷವಾಗಿದೆ. ಎಷ್ಟುಖುಷಿ ಅಂದ್ರೆ, ಕಾರುಣ್ಯಾ ರಾಮ್‌ ಅವರಂತೂ ಫಲಕ ಸ್ವೀಕರಿಸಿ ಭಾವುಕರಾದರು.

ಚಿತ್ರ ವಿಮರ್ಶೆ: ಶ್ರೀ ಭರತ ಬಾಹುಬಲಿ

ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು, ವಾಣಿಜ್ಯ ಮಂಡಳಿ ಕಾರ್ಯಕಾರಿ ಸಮಿತಿ ಸದಸ್ಯ ಭಾಮಾ ಹರೀಶ್‌, ನಿರ್ದೇಶಕ ರಿಷಬ್‌ ಶೆಟ್ಟಿ, ನಟಿ ಅಮೃತಾ ಅಯ್ಯರ್‌ ಉಪಸ್ಥಿತಿ ಈ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು. ಇಂಥಾ ಕಾರ್ಯಕ್ರಮಗಳು ಪ್ರತಿಯೊಂದು ಚಿತ್ರಕ್ಕೂ ನಡೆದರೆ ಎಷ್ಟುಸೊಗಸು.