‘ಮೊಗ್ಗಿನ ಮನಸ್ಸು’ ಚಿತ್ರ ನೋಡಿ, ಹುಡುಗೀರ ಮನಸ್ಸನ್ನು ಅದೆಷ್ಟು ಚೆನ್ನಾಗಿ ತಿಳ್ಕೊಂಡಿದ್ದೀರಾ ಅಂದರು ಆ ಕಾಲದ ಹುಡುಗಿಯರು. ಈ ಕಾಲದ ಹುಡುಗಿಯರ ಕತೆ ಹೇಳಬೇಕಿದೆ. ‘ಮೊಗ್ಗಿನ ಮನಸ್ಸು 2’ ಕಥೆ ತಲೆಯಲ್ಲಿದೆ. ಅದಕ್ಕೆ ಹೆಚ್ಚು ಬಜೆಟ್ ಬೇಕಾಗುತ್ತೆ.
‘ಮೊಗ್ಗಿನ ಮನಸ್ಸು’ ಚಿತ್ರ ಬಿಡುಗಡೆಯಾಗಿ 14 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ‘ಮೊಗ್ಗಿನ ಮನಸ್ಸು 2’ ಚಿತ್ರದ ಕತೆ ರೆಡಿ ಮಾಡಿದ್ದಾರೆ ನಿರ್ದೇಶಕ ಶಶಾಂಕ್. ಜೊತೆಗೆ ಬಿಡುಗಡೆಗೆ ರೆಡಿ ಇರುವ ಲವ್ 360 ಚಿತ್ರದ ‘ಭೋರ್ಗರೆದು ಕೇಳಿದೆ ಕಡಲು’ ಹಾಡು ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಶಶಾಂಕ್ ಮಾತುಗಳು ಇಲ್ಲಿವೆ.
* ‘ಮೊಗ್ಗಿನ ಮನಸ್ಸು’ ಚಿತ್ರ ನೋಡಿ, ಹುಡುಗೀರ ಮನಸ್ಸನ್ನು ಅದೆಷ್ಟು ಚೆನ್ನಾಗಿ ತಿಳ್ಕೊಂಡಿದ್ದೀರಾ ಅಂದರು ಆ ಕಾಲದ ಹುಡುಗಿಯರು. ಈ ಕಾಲದ ಹುಡುಗಿಯರ ಕತೆ ಹೇಳಬೇಕಿದೆ. ‘ಮೊಗ್ಗಿನ ಮನಸ್ಸು 2’ ಕಥೆ ತಲೆಯಲ್ಲಿದೆ. ಅದಕ್ಕೆ ಹೆಚ್ಚು ಬಜೆಟ್ ಬೇಕಾಗುತ್ತೆ. ತಾರಾಗಣದಲ್ಲಿ ಹೊಸಬರೇ ಇರ್ತಾರೆ. ಹೊಸಬರನ್ನು ನಂಬಿ ಅಷ್ಟು ದುಡ್ಡು ಹಾಕೋಕೆ ನಿರ್ಮಾಪಕರೂ ಯೋಚಿಸ್ತಾರೆ. ಮೊಗ್ಗಿನ ಮನಸ್ಸು ಸಿನಿಮಾವನ್ನು ಆಗಿನ ಕಾಲದಲ್ಲೇ ಹೊಸ ತಂತ್ರಜ್ಞಾನ ಬಳಸಿಕೊಂಡು ಅದ್ದೂರಿ ವೆಚ್ಚದಲ್ಲಿ ಮಾಡಿದ್ದೆವು. ಕೃಷ್ಣಪ್ಪ ಅವರು ಆ ಧೈರ್ಯ ಮಾಡಿದ ಕಾರಣ ಆ ಸಿನಿಮಾ ಸ್ಟಾರ್ ಸಿನಿಮಾ ಲೆವೆಲ್‌ಗೆ ಬಂತು. ಸೂಪರ್ ಹಿಟ್ ಆಯಿತು. ಇಂದು ಕೃಷ್ಣಪ್ಪ ಥರದವರು ಸಿಕ್ಕರೆ ‘ಮೊಗ್ಗಿನ ಮನಸ್ಸು 2’ ಸಿನಿಮಾ ಮಾಡಬಹುದು.
Love 360 ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಡಾಲಿ ಧನಂಜಯ್
* ಇವತ್ತು ಬರೀ ಕಂಟೆಂಟ್ ನಂಬಿ ಸಿನಿಮಾ ಮಾಡೋದಕ್ಕಾಗಲ್ಲ. ಮಾರ್ಕೆಟಿಂಗ್ ಟೆಕ್ನಿಕ್‌ಗಳೂ ಬಹಳ ಮುಖ್ಯ. ಹೀಗಾಗಿ ನಮ್ಮ ಲವ್ 360 ಚಿತ್ರವನ್ನು ಸರಿಯಾದ ಪ್ರಚಾರದೊಂದಿಗೆ ಬಿಡುಗಡೆ ಮಾಡಬೇಕು. ಸ್ಟಾರ್ ಸಿನಿಮಾಗಳ ಮುಂದೆ, ಹಿಂದೆ ಬರುವ ಧೈರ್ಯ ಇಲ್ಲ. ಆಗಸ್ಟ್‌ನಲ್ಲಿ ಚಿತ್ರ ಬಿಡುಗಡೆ ಯೋಚನೆ ಇದೆ.
* ಲವ್ 360 ಚಿತ್ರದ ‘ಜಗವೇ ನೀನು’ ಹಾಡು 8 ಮಿಲಿಯನ್‌ಗೂ ಅಧಿಕ ವೀಕ್ಷಣೆ ದಾಖಲಿವೆ. ಸಾವಿರಾರು ರೀಲ್ಸ್ ಆಗಿವೆ. ಚಿತ್ರದ ಟಿವಿ, ಓಟಿಟಿ ಹಕ್ಕುಗಳು ಉತ್ತಮ ಮೊತ್ತಕ್ಕೆ ಮಾರಾಟವಾಗಿವೆ. ಆದರೆ ಹಾಕಿದ ದುಡ್ಡು ಬರಬೇಕು ಅಂದರೆ ಜನ ಥಿಯೇಟರ್‌ಗೆ ಬಂದು ಸಿನಿಮಾ ನೋಡಬೇಕು. ಇದು ಕ್ರೈಮ್ ಬೆರೆತಿರುವ ಲವ್ ಸ್ಟೋರಿ. ಹೊಸ ಕಥೆ, ಹೊಸ ಬಗೆಯ ನಿರೂಪಣೆ. ಯಂಗ್ ಅಡಲ್ಟ್‌ಗಾಗಿ ಮಾಡಿರುವ ಚಿತ್ರ. ಗೋಕರ್ಣದಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.
* ಈ ಸಿನಿಮಾ ಆದ ಮೇಲೆ ಡಾರ್ಲಿಂಗ್ ಕೃಷ್ಣ ಜೊತೆಗೆ ಹೊಸ ಚಿತ್ರ. ಅದರ ನಿರ್ಮಾಣವೂ ನಮ್ಮದೇ. ಇದಾಗಿ ಮುಂದಿನ ವರ್ಷ ಉಪೇಂದ್ರ ಸಿನಿಮಾ. ಇದಕ್ಕಾಗಿ ಮೂರು ಕತೆ ರೆಡಿ ಮಾಡಿದ್ದೆ. ಉಪೇಂದ್ರ ರೆಡಿ ಆಗುವ ಹೊತ್ತಿಗೆ ನಾಲ್ಕನೇ ಕಥೆ ರೆಡಿ ಮಾಡಬೇಕಾಗಿ ಬರಬಹುದೇನೋ.
ಲವ್ 360 ಪಾತ್ರ ಸಖತ್ ಚಾಲೆಂಜಿಂಗ್ ಎಂದ ಲವ್ ಮಾಕ್ಟೇಲ್ ಚೆಲುವೆ
ಭೋರ್ಗರೆದು ಕೇಳಿದೆ ಕಡಲು ಹಾಡು ಬಿಡುಗಡೆ: ‘ಲವ್ 360’ ಚಿತ್ರದ ‘ಭೋರ್ಗರೆದು ಕೇಳಿದೆ ಕಡಲು’ ಹಾಡು ಆನಂದ್ ಆಡಿಯೋ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ನಾಯಕ ಪ್ರವೀಣ್, ನಾಯಕಿ ರಚನಾ ಇಂದರ್, ನಿರ್ದೇಶಕ ಶಶಾಂಕ್, ಆನಂದ್ ಆಡಿಯೋದ ಶ್ಯಾಮ್, ಮೊಗ್ಗಿನ ಮನಸ್ಸು ಸಹ ನಿರ್ಮಾಪಕ ಗಂಗಾಧರ್ ಹಾಜರಿದ್ದರು.

