‘ಮೊಗ್ಗಿನ ಮನಸು’ ಖ್ಯಾತಿಯ ಶಶಾಂಕ್‌ ನಿರ್ದೇಶನದ ಹೊಸ ಚಿತ್ರ ‘ಲವ್‌ 360’ ಟ್ರೇಲರ್‌ ಅನ್ನು ಡಾಲಿ ಧನಂಜಯ ಬಿಡುಗಡೆ ಮಾಡಿದ್ದಾರೆ. ‘ಶುದ್ಧ ಪ್ರೀತಿಯ ಪಯಣ ಎಂದೂ ಸುಗಮವಾಗಿ ಸಾಗಿಲ್ಲ’ ಎಂಬ ಷೇಕ್ಸ್‌ಪಿಯರ್‌ ಸಾಲುಗಳನ್ನು ಉಲ್ಲೇಖಿಸಿ ಧನಂಜಯ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. 

‘ಮೊಗ್ಗಿನ ಮನಸು’ ಖ್ಯಾತಿಯ ಶಶಾಂಕ್‌ (Shashank) ನಿರ್ದೇಶನದ ಹೊಸ ಚಿತ್ರ ‘ಲವ್‌ 360’ (Love 360) ಟ್ರೇಲರ್‌ (Trailer) ಅನ್ನು ಡಾಲಿ ಧನಂಜಯ (Dolly Dhananjay) ಬಿಡುಗಡೆ ಮಾಡಿದ್ದಾರೆ. ‘ಶುದ್ಧ ಪ್ರೀತಿಯ ಪಯಣ ಎಂದೂ ಸುಗಮವಾಗಿ ಸಾಗಿಲ್ಲ’ ಎಂಬ ಷೇಕ್ಸ್‌ಪಿಯರ್‌ ಸಾಲುಗಳನ್ನು ಉಲ್ಲೇಖಿಸಿ ಧನಂಜಯ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಟ್ರೇಲರ್‌ ಅನ್ನು ಆನಂದ್‌ ಆಡಿಯೋ ಯೂಟ್ಯೂಬ್‌ನಲ್ಲಿ ನೋಡಬಹುದು. ನವ ಪ್ರತಿಭೆ ಪ್ರವೀಣ್‌ (Praveen) ನಾಯಕ ನಟನಾಗಿ 'ಲವ್‌ 360′ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದು, ರಚನಾ ಇಂದರ್‌ (Rachana Inder) ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 

'ಮನುಷ್ಯ ಹುಟ್ಟಿರೋದೆ ಹೋರಾಡೋಕೆ ಅಂತಾರೆ… ದುಡ್ಡಿಗೋಸ್ಕರ, ಆಸೆಗೋಸ್ಕರ, ಅಧಿಕಾರಕ್ಕೋಸ್ಕರ ಹೋರಾಟ ನಡಿತಾನೇ ಇದೆ. ಆದ್ರೆ ನನ್‌ ಹೋರಾಟ ನನ್‌ ಜಾನುಗೋಸ್ಕರ' ಎಂಬ ಡೈಲಾಗ್ಸ್‌ ಟ್ರೇಲರ್‌ನಲ್ಲಿ ಗಮನ ಸೆಳೆಯುವಂತಿದ್ದು, ನಿರ್ದೇಶಕ ಶಶಾಂಕ್‌ 'ಲವ್‌ 360' ಮೂಲಕ ಮತ್ತೂಂದು ಲವ್‌ ಕಂ ಕ್ರೈಂ-ಥ್ರಿಲ್ಲರ್‌ ಸ್ಟೋರಿಯನ್ನು ತೆರೆಮೇಲೆ ಹೇಳುವ ಸುಳಿವನ್ನು ಟ್ರೇಲರ್‌ನಲ್ಲಿ ಬಿಟ್ಟುಕೊಟ್ಟಿದ್ದಾರೆ. 'ಶಶಾಂಕ್‌ ಸಿನಿಮಾಸ್‌' ಬ್ಯಾನರ್‌ನಲ್ಲಿ ಶಶಾಂಕ್‌ ಮತ್ತು ಡಾ. ಮಂಜುಳಾ ಮೂರ್ತಿ ನಿರ್ಮಿಸಿರುವ 'ಲವ್‌ 360' ಚಿತ್ರದ ಹಾಡುಗಳಿಗೆ ಅರ್ಜುನ್‌ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಸಿದ್ಧ್ ಶ್ರೀರಾಮ್‌, ಸಂಚಿತ್‌ ಹೆಗ್ಡೆ ಮೊದಲಾದ ಗಾಯಕರು ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. 

Avatara Purusha: ಎಲ್ಲಾ ಅಭಿಮಾನಿಗಳು ಎಲ್ಲರ ಸಿನಿಮಾ ನೋಡಬೇಕು: ಧ್ರುವ ಸರ್ಜಾ

ಚಿತ್ರಕ್ಕೆ ಅಭಿಲಾಶ್‌ ಕಲಾತಿ ಛಾಯಾಗ್ರಹಣ, ಗಿರಿ ಮಹೇಶ್‌ ಸಂಕಲನವಿದೆ. ಸದ್ಯ ಬಿಡುಗಡೆಯಾಗಿರುವ 'ಲವ್‌ 360' ಟ್ರೇಲರ್‌ ಸೋಶಿಯಲ್‌ ಮೀಡಿಯಾದಲ್ಲಿ ನಿಧಾನವಾಗಿ ನೋಡುಗರ ಗಮನ ಸೆಳೆಯುತ್ತಿದೆ. ಈ ಹಿಂದೆ ಹಿಂದೆ ಸಿದ್ಧ್ ಶ್ರೀರಾಮ್‌ ದನಿಯಲ್ಲಿ ಮೂಡಿಬಂದ ಈ ಚಿತ್ರದ ‘ಜಗವೇ ನೀನು ಗೆಳತಿಯೇ’ ಹಾಡು 2.7 ಮಿಲಿಯನ್‌ ವೀಕ್ಷಣೆ ದಾಖಲಿಸಿತ್ತು. ಈ ಚಿತ್ರಕ್ಕೆ 'ಲವ್‌ 360' ಎಂಬ ಟೈಟಲ್‌ ಇಡಲು ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಸ್ಫೂರ್ತಿ. 'ಬೆಂಗಳೂರು ಆರ್‌ಸಿಬಿಗೆ ಆಡುವ ಎಬಿ ಡಿವಿಲಿಯರ್ಸ್‌ಗೆ ಮಿಸ್ಟರ್‌ 360 ಎಂದು ಕರೆಯುತ್ತಾರೆ. ಅವರು ಬ್ಯಾಟಿಂಗ್‌ ಮಾಡುವಾಗ ಗ್ರೌಂಡ್‌ನಲ್ಲಿಎಲ್ಲಾ ಕಾರ್ನರ್‌ಗೆ ಬಾಲನ್ನು ಬೀಸುತ್ತಾರೆ. ಅದೇ ಈ ಸಿನಿಮಾದ ಟೈಟಲ್‌ಗೆ ಸ್ಫೂರ್ತಿ' ಚಿತ್ರದ ನಿರ್ದೇಶಕ ಶಶಾಂಕ್ ಈ ಮೊದಲು ತಿಳಿಸಿದ್ದರು.

Kabza Movie: ಶ್ರೀಯಾ ಶರಣ್‌ ದಂಪತಿ ಜೊತೆ ಉಪ್ಪಿ ಸೆಲ್ಫಿ

ಟೈಟಲ್‌ ಹೇಳುವಂತೆ ಚಿತ್ರದಲ್ಲಿ ಲವ್‌ ಸ್ಟೋರಿ ಇರಲಿದೆ. ಕಂಪ್ಲೀಟ್‌ ಲವ್‌. ಸಿನಿಮಾದಲ್ಲಿ ಲವ್‌ ಬಿಟ್ಟು ಬೇರೇನೂ ಇರೋಲ್ಲ. ಚಿತ್ರದ ಹೀರೋ ಯಾವ ರೀತಿಯ ಹುಡುಗಿಯನ್ನು ಪ್ರೀತಿಸುತ್ತಾನೆ ಎನ್ನುವುದು ಸಿನಿಮಾದಲ್ಲಿ ಇರಲಿದೆ. ಪುಟ್ಟ ಪಟ್ಟಣದಲ್ಲಿಇರುವ ಹುಡುಗ ಹುಡುಗಿಯ ನಡುವಿನ ಪ್ರೇಮ ಕಥೆ ಇದು. ಚಿತ್ರದ ಟೈಟಲ್‌ಗೆ ಬಹಳ ಹುಡುಕಾಡಿದೆವು. ನಮಗೆ ಯೂನಿವರ್ಸಲ್‌ ಆಗಿರುವ ಟೈಟಲ್‌ ಬೇಕಿತ್ತು. ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ಸಿನಿಮಾ ತೆರೆಕಾಣಲಿರುವುದರಿಂದ ಒಂದೊಂದು ಭಾಷೆಗೆ ಒಂದೊಂದು ಹೆಸರನ್ನಿಡುವುದು ನಮಗೆ ಇಷ್ಟವಿರಲಿಲ್ಲ. ಈ ಹುಡುಕಾಟದಲ್ಲಿಸಿಕ್ಕ ಟೈಟಲ್‌ ಇದು. 360 ಡಿಗ್ರಿಯಲ್ಲಿ ಹುಡುಗ ಹೇಗೆ ಲವ್‌ ಮಾಡ್ತಾನೆ ಎಂಬುದು ಸಿನಿಮಾದಲ್ಲಿರಲಿದೆ' ಎಂದಿದ್ದಾರೆ ಶಶಾಂಕ್‌.

YouTube video player