ವಿಷ್ಣುವರ್ಧನ್ ಸಾವಿನ ಮುನ್ಸೂಚನೆ ಸಾಯಿ ಬಾಬ ನನಗೆ ಮೊದಲೇ ಕೊಟ್ಟಿದ್ದರು: ಎಸ್ ನಾರಾಯಣ್
ಸಾಯಿ ಬಾಬ ಸಿನಿಮಾ ಮಾಡ್ಬೇಕು ಅಂತ ಹೇಳಿ ಶಿರಡಿಗೆ ಎನ್ ನಾರಾಯನ್ ಅವರನ್ನು ಕಳುಹಿಸಿಕೊಟ್ಟ ವಿಷ್ಣುವರ್ಧನ್. ಸಾವಿನ ಮುನ್ಸೂಚನೆ ಅರ್ಥ ಆಗಿಲ್ವಾ?
ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರಿಗೆ ಸಾಯಿ ಬಾಬ ಸಿನಿಮಾ ಮಾಡಬೇಕು ಅನ್ನೋ ಆಸೆ ತುಂಬಾನೇ ಇತ್ತಂತೆ. ಈ ವಿಚಾರವಾಗಿ ಅನೇಕ ಸಲ ನಿರ್ದೇಶಕ ಎಸ್ ನಾರಾಯಣ್ ಬಳಿ ಸಿನಿಮಾ ಮಾಡುವಂತೆ ಒತ್ತಾಯ ಮಾಡುತ್ತಿದ್ದಂತೆ. ಈಗಾಗಲೆ ಎರಡು ಮೂರು ಕಲಾವಿದರು ಸಾಯಿ ಬಾಬ ಬಗ್ಗೆ ಸಿನಿಮಾ ಮಾಡಿದ್ದಾರೆ ಮತ್ತೆ ನಾವು ಮಾಡುವುದರಲ್ಲಿ ವಿಶೇಷತೆ ಇರುವುದಿಲ್ಲ ಬೇಡ ಅಂತ ನಾರಾಯಣ್ ಮುಂದೂಡುತ್ತಿದ್ದರಂತೆ. ಪ್ರತಿ ಸಲ ವಿಷ್ಣು ಮನೆಗೆ ಭೇಟಿ ನೀಡುವಾಗ ಕೈಯಲ್ಲಿ ನಾರಾಯಣ್ ಮನೆಯಿಂದ ತಿಂಡಿ ತಿನಿಸುಗಳನ್ನು ತೆಗದುಕೊಂಡು ಹೋಗಲೇ ಬೇಕು ಇಲ್ಲ ಅಂದ್ರೆ ಯಾಕೆ ಎನೂ ತಂದಿಲ್ಲ ಎಂದು ಕೇಳುತ್ತಿದ್ದರಂತೆ. ಅಂದ್ರೆ ಅಷ್ಟರ ಮಟ್ಟಕ್ಕೆ ನಾರಾಯಣ್ ಮತ್ತು ವಿಷ್ಣು ಕ್ಲೋಸ್ ಆಗಿದ್ದರಂತೆ.
ಒಂದು ದಿನ ವಿಷ್ಣುವರ್ಧನ್ ಎಸ್ ನಾರಾಯಣ್ ಅವರಿಗೆ ಕರೆ ಮಾಡಿ ಸಾಯಿ ಬಾಬ ಸಿನಿಮಾ ಮಾಡಲೇ ಬೇಕು ನಿಮಗೆ ಸಿನಿಮಾ ಮಾಡಲು ಮನಸ್ಸು ಆಗುತ್ತಿಲ್ಲ ಅಂದ್ರೆ ಒಂದು ಕೆಲಸ ಮಾಡಿ ಶಿರಡಿಗೆ ಹೋಗಿ ದರ್ಶನ ಮಾಡಿ ಬನ್ನಿ ಎನ್ನುತ್ತಾರೆ. ಸರಿ ಆಯ್ತು ಎಂದು ಹೇಳಿ ನಾರಾಯಣ್ ಸುಮ್ಮನೆ ಬರುತ್ತಾರೆ ಆದರೆ ಶಿರಡಿಗೆ ಹೋಗುವುದಿಲ್ಲ. ಮರುದಿನ ಮತ್ತೆ ದಾದಾ ಕರೆ ಮಾಡಿ ಎಲ್ಲಿದ್ದೀರಾ ಎಂದು ಪ್ರಶ್ನೆ ಮಾಡುತ್ತಾರಂತೆ ಮನೆಯಲ್ಲಿರುವೆ ಎಂದು ಹೇಳಿದಾಗ ಗರಂ ಆಗಿ ನೀವು ಶಿರಡಿಗೆ ಹೋಗಬೇಕಿತ್ತು ತಕ್ಷಣವೇ ಹೊರಡಿ ಎನ್ನುತ್ತಾರೆ. ಸಿನಿಮಾ ನೆಪ ಕೊಟ್ಟ ಮುಂದಿನ ವಾರ ಹೋಗುವೆ ಎಂದು ನಾರಾಯಣ ಕೇಳಿಕೊಂಡರೂ ಒಪ್ಪದ ವಿಷ್ಣು ಮರು ದಿನವೇ ಹೊರಡುವ ವ್ಯವಸ್ಥೆ ಮಾಡುತ್ತಾರಂತೆ. ವೈಕುಂಠ ಏಕಾದಶಿ ಆಗಿದ್ದ ಕಾರಣ ಶಿರಡಿಯಲ್ಲಿ ಜನ ಸಾಗರವಿತ್ತಂತೆ ಆದರೂ ನಾರಾಯಣ್ ಅವರಿಗೆ ಯಾರೂ ಸಹಾಯಕ್ಕೆ ಬಂದು ಬೆಳಗಿನ ಜಾವ 4 ಗಂಟೆಗೆ ದರ್ಶನ ಮಾಡಿಸಿ 4.30ಕ್ಕೆ ಹೊರ ಬಂದಿದ್ದಾರೆ. ಸಂಜೆಗೆ ವಿಮಾನ ಬುಕ್ ಆಗಿದ್ದ ಕಾರಣ ರೂಮ್‌ನಲ್ಲಿ ಎಲ್ಲರೂ ವಿಶ್ರಾಂತಿ ತೆಗೆದುಕೊಳ್ಳುತ್ತಿರುವಾ ಮತ್ತೊಮ್ಮೆ ವಿಷ್ಣುವರ್ಧನ್ ಕರೆ ಮಾಡಿದ್ದಾರೆ. ಈ ಘಟನೆಯನ್ನು ಕನ್ನಡ ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ನಾರಾಯಣ್ ಹೇಳಿದ್ದಾರೆ.
ಮಗನ ಜೊತೆ ದೇವರಿದ್ದಾನೆ; ವೀಕೆಂಡ್ ವಿತ್ ರಮೇಶ್‌ನಲ್ಲಿ ಅವಿನಾಶ್- ಮಾಳವಿಕಾ ವಿಶೇಷಚೇತನ ಪುತ್ರ
ಎಲ್ಲಿದ್ದೀರಾ? ದರ್ಶನ ಆಯ್ತಾ? ನೀವು ಏನೂ ಮಾತನಾಡಬೇಡಿ. ಅಲ್ಲಿಂದ ಹೊರಟು ನಮ್ಮ ಮನೆ ಕಡೆ ಬನ್ನಿ ಇಲ್ಲಿ ಎಲ್ಲಾ ಮಾತಾಡೋಣ ಅಂತ ಹೇಳಿ ಕಾಲ್ ಕಟ್ ಮಾಡಿದರಂತೆ. ಸಮಯ ಇತ್ತು ಎಂದು ನಾರಾಯಣ್ ಕೂಡ ಕುಳಿತುಕೊಂಡ ಜಾಗದಲ್ಲೇ ಮಲಗಿದ್ದಾರೆ. ಆ ಬಿದ್ದ ಕನಸಿಗೂ ವಿಷ್ಣು ಸಾವಿನ ಮುನ್ಸೂಚನೆ ಎಂದಿದ್ದಾರೆ.
'ಅಂದು ಬೆಳಗಿನಜಾವ ನಾನು ಮಲಗಿಕೊಂಡಾಗ ಒಂದು ಕನಸು ಬಿತ್ತು. ಕನಸನಲ್ಲಿ ಯಾವುದೋ ಮೃತ ದೇಹ ನಮ್ಮ ಮನೆಯಲ್ಲಿ. ತುಂಬಾ ಜನ ಉದ್ಯಮದವರು ಬಂದು ನೋಡಿಕೊಂಡು ಹೋಗುತ್ತಿದ್ದಾರೆ ನನಗೆ ಸಮಾಧಾನ ಮಾಡುತ್ತಿದ್ದಾರೆ. ಸ್ವಲ್ಪ ಹೊತ್ತಿಗೆ ಎಚ್ಚರವಾಗಿ ಸಮಯ ನೋಡಿದೆ ಬೆಳಗ್ಗೆ 6.15 ಆಗಿತ್ತು. ಬೆಳಗಿನಜಾವ ಕನಸು ಬರಬಾರದು ಅಂತಾರೆ ತಕ್ಷಣ ನನ್ನ ಪತ್ನಿಗೆ ಕೇಳಿದೆ ನಮ್ಮ ಕುಟುಂಬದಲ್ಲಿ ವಯಸ್ಸಾದವರು ಯಾರಿದ್ದಾರೆ ಯಾರಿಗಾದರೂ ಆರೋಗ್ಯ ಸಮಸ್ಯೆ ಇದ್ಯಾ ಎಂದು ಕೇಳಿದೆ. ನನ್ನ ಪತ್ನಿ ತಂದೆ ಮತ್ತು ತಾಯಿ ವಯಸ್ಸಾದವರು ಅಷ್ಟೆ. ಬೆಂಗಳೂರಿಗೆ ಬಂದು ತಕ್ಷಣ ಪ್ರಸಾದ ತೆಗೆದುಕೊಂಡು ಒಂದಿಷ್ಟು ತಿಂಡಿ ತಯಾರಿ ಮಾಡಿಕೊಂಡು ಹೋರಟೆ, ಮಾರ್ಗ ನಡುವೆ ಗಾಯಕರಾದ ಸಿ.ಅಶ್ವಥ್ ಅವರು ಅಗಲಿದ್ದಾರೆ ಅಂತ ತಿಳಿಯಿತ್ತು. ತಕ್ಷಣ ವಿಷ್ಣು ಅವರಿಗೆ ಕರೆ ಮಾಡಿ ನಾನು ಬೆಳಗ್ಗೆ ಬರುವೆ ಎಂದು ಹೇಳಿದೆ. ಅದಿಕ್ಕೆ ಅಲ್ಲಿ ಮುಗಿಸಿಕೊಂಡು ಸಂಜೆ ಬನ್ನಿ ರಾತ್ರಿ ಬನ್ನಿ ನಾಳೆ ಬರುವುದು ಬೇಡ ಅಂದ್ರು. ಅದಿಕ್ಕೆ ಡ್ರೈವರ್‌ಗೆ ಬೆಳಗ್ಗೆ ಬರಲು ಹೇಳಿ ಮಲಗಿಕೊಂಡೆ. ಬೆಳಗಿನಜಾವ 3.30ಗೆ ನಾನು ಎದ್ದೇಳುವ ಅಭ್ಯಸವಿದೆ ಆಗ ಸ್ನಾನ ಮಾಡಿಕೊಂಡು ರೆಡಿಯಾಗುತ್ತಿರುವ ಮಧ್ಯಮ ಸ್ನೇಹಿತರೊಬ್ಬರು ಕರೆ ಮಾಡಿ ವಿಷ್ಣು ಹೋಗ್ಬಿಟ್ರು ಅಂತ ಹೇಳಿದರು. ನಾನು ಶಾಕ್ ಆಗ್ಬಿಟ್ಟೆ. ನನಗೆ ಗೊತ್ತಿರುವವರಿಗೆ ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದೆ. ಸ್ವಲ್ಪ ಹೊತ್ತು ಪೋನ್ ಪಕ್ಕ ಇಟ್ಟು ಮೌನವಾಗಿ ಕುಳಿತುಕೊಂಡು ಬಿಟ್ಟೆ' ಎಂದು ನಾರಾಯಣ್ ಹೇಳಿದ್ದಾರೆ.
ರೇಪ್ ಸೀನ್ ಮಾಡಿ ಮನೆಗೆ ಬಂದ್ರೆ ಪ್ರಶ್ನಿಸುತ್ತಿದ್ದೆ: ನಟ ವಜ್ರಮುನಿ ಪತ್ನಿ
'ಬೆಳಗ್ಗೆ 7 ಗಂಟೆ ಅಷ್ಟರಲ್ಲಿ ವಿಷ್ಣು ಅವರನ್ನು ಬೆಂಗಳೂರಿಗೆ ಕರೆದುಕೊಂಡು ಬಂದರು. ನಾನು ಹೋಗಬೇಕಿತ್ತು ವಿಷ್ಣು ಅವರನ್ನು ಮಾತನಾಡಿಸಬೇಕಿತ್ತು ಅಂತ ಅನಿಸಿತ್ತು. ನನ್ನ ಕನಸಿನಲ್ಲಿ ದೇಹ ಹೇಗೆ ಕಾಣಿಸಿತ್ತು ಅದೇ ರೀತಿ ವಿಷ್ಣು ದೇಹವಿತ್ತು. ನನ್ನ ಕನಸಿನಲ್ಲಿ ದೇಹದ ಮುಖ ಕಾಣಿಸಲಿಲ್ಲ ಆದರೆ ಅದೇ ರೀತಿಯಲ್ಲಿ ವಿಷ್ಣು ಮಲಗಿದರು. ಕನಸಿನಲ್ಲಿ ಹಣೆಗೆ ಹಳದಿ ಬಟ್ಟೆ ಕಟ್ಟಿದ್ದರು ..ಇಲ್ಲಿ ವಿಷ್ಣು ಅವರಿಗೂ ಹಳದಿ ಬಟ್ಟೆ ಕಟ್ಟಿದ್ದರು. ಶಿರಡಿಗೆ ಹೋಗಬೇಕು ಎಂದು ವಿಷ್ಣು ಒತ್ತಾಯ ಮಾಡಿದರು...ಬಹುಷ ಬಾಬಾಗೆ ಕೊಟ್ಟ ಸಿಗ್ನಲ್ ಇದಾಗಿತ್ತು ಆದರೆ ನನಗೆ ಗೊತ್ತಾಗಿಲ್ಲ. ಅಲ್ಲಿಂದ ನಮ್ಮ ಮನೆಗೆ ಬಂದು ಹೇಳಿದೆ ಬಿದ್ದ ಕನಸು ಒಂದೇ ರೀತಿ ಇದೆ ನನಗೆ ಬೇಸರ ಅಗುತ್ತದೆ. ಅವರನ್ನು ಭೇಟಿ ಮಾಡಿದ ಕೊನೆ ಕ್ಷಣ ದುರಂತ' ಎಂದಿದ್ದಾರೆ ನಾರಾಯಣ್.