ವಿವಾದದಲ್ಲಿ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರ; ರಮ್ಯಾ ಸಿನಿಮಾದ ವಿರುದ್ಧ ರಾಜೇಂದ್ರ ಸಿಂಗ್ ಬಾಬು ದೂರು
ರಮ್ಯಾ ನಿರ್ಮಾಣದ ಮೊದಲ ಸಿನಿಮಾ 'ಸ್ವಾತಿ ಮುತ್ತಿನ ಮಳೆಹನಿಯೇ' ವಿವಾದದಲ್ಲಿ ಸಿಲುಕಿದೆ. ಈ ಚಿತ್ರದ ವಿರುದ್ಧ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಫಿಲ್ಮ್ ಚೇಂಬರ್ ಗೆ ದೂರುನೀಡಿದ್ದಾರೆ.

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿರ್ಮಾಣದ 'ಸ್ವಾತಿ ಮುತ್ತಿನ ಮಳೆಹನಿಯೇ' ಸಿನಿಮಾ ಈಗ ವಿವಾದದಲ್ಲಿ ಸಿಲುಕಿದೆ. ಅನೇಕ ವರ್ಷಗಳ ಬಳಿಕ ರಮ್ಯಾ ಸಿನಿಮಾರಂಗಕ್ಕೆ ಪಾವಾಸ್ ಆಗಿದ್ದು 'ಸ್ವಾತಿ ಮುತ್ತಿನ ಮಳೆಹನಿಯೇ' ಮೂಲಕ ನಿರ್ಮಾಣಕ್ಕೆ ಇಳಿದಿದ್ದರು. ಆದರೀಗ ರಮ್ಯಾ ಸಿನಿಮಾದ ವಿರುದ್ಧ ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬ್ ದೂರು ನೀಡಿದ್ದಾರೆ. ಈ ಶೀರ್ಷಿಕೆ ಬಳಸದಂತೆ ರಾಜೇಂದ್ರ ಸಿಂಗ್ ಬಾಬು ಅಕ್ಷೇಪ ಎತ್ತಿದ್ದಾರೆ. ಈ ಕುರಿತು ಸಿಂಗ್ ಬಾಬು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ. ಈ ಶೀರ್ಷಿಕೆಯನ್ನು ಯಾರಿಗೂ ಕೊಡಬಾರದು ಎಂದು ಅವರು ಪತ್ರದಲ್ಲಿ ಖಡಕ್ ಆಗಿ ತಿಳಿಸಿದ್ದಾರೆ.
ತನ್ನ ವಕೀಲರ ಮೂಲಕ ರಾಜೇಂದ್ರ ಸಿಂಗ್ ಬಾಬು ಫಿಲಂ ಚೇಂಬರ್ ಅಧ್ಯಕ್ಷರಿಗೆ ನೋಟಿಸ್ ನೀಡಿದ್ದಾರೆ.
ಸ್ವಾತಿ ಮುತ್ತಿನ ಮಳೆ ಹನಿಯೇ ಟೈಟಲ್ ಯಾರಿಗೂ ಸಹ ನೀಡಬಾರದು ಎಂದು ತಾಕೀತು ಮಾಡಿದ್ದಾರೆ. ಒಂದು ವೇಳೆ ನೀಡಿದ್ದೇ ಆದರೆ ಕೃತಿಚೌರ್ಯವಾಗುತ್ತೆ ಎಂದು ಉಲ್ಲೇಖಿಸಿದ್ದಾರೆ. ರಾಜೇಂದ್ರ ಸಿಂಗ್ ಬಾಬು ಅವರು ಈ ಶೀರ್ಷಿಕೆಯನ್ನು ಈಗಾಗಲೇ ನೋಂದಾಯಿಸಿರುವುದಾಗಿ ತಿಳಿಸಿದ್ದಾರೆ. 'ಸ್ವಾತಿ ಮುತ್ತಿನ ಮಳೆಹನಿಯೇ' ಸಿನಿಮಾ ರಮ್ಯಾ ನಿರ್ಮಾಣದಲ್ಲಿ ಮೂಡಿಬರುತ್ತಿದೆ. ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡಿ ನಟಿಸಿದ್ದಾರೆ.
ಸ್ವಾತಿ ಮುತ್ತಿನ ಮಳೆ ಹನಿಯೇ ಫಸ್ಟ್ ಲುಕ್ ವೈರಲ್; ಮೋಹಕ ತಾರೆ ರಮ್ಯಾ ಸೂಟ್ ಆಗಲ್ಲ ಬಿಡಿ ಎಂದ ನೆಟ್ಟಿಗರು
'ಸ್ವಾತಿ ಮುತ್ತಿನ ಮಳೆಹನಿಯೇ' 1990ರಲ್ಲಿ ಬಂದ ಬಣ್ಣದ ಗೆಜ್ಜೆ ಸಿನಿಮಾದ ಫೇಮಸ್ ಹಾಡಿನ ಸಾಲು ಇದಾಗಿದೆ. ಆ ಸಿನಿಮಾವನ್ನು ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಿದ್ದರು. ಆ ಹಾಡು ಇಂದಿಗೂ ಅಷ್ಟೆ ಫೇಮಸ್. ಅದೇ ಹಾಡಿನ ಸಾಲನ್ನು ಇಟ್ಟುಕೊಂಡು ರಮ್ಯಾ ತನ್ನ ಮೊದಲ ನಿರ್ಮಾಣದ ಸಿನಿಮಾಗೆ ಟೈಟಲ್ ಇಟ್ಟಿದ್ದರು. ಆದರೀಗ ರಾಜೇಂದ್ರ ಸಿಂಗ್ ಬಾಬು ತಕರಾರು ತೆಗೆದಿದ್ದಾರೆ.
ನಟಿ ರಮ್ಯಾ ಮತ್ತೆ ಸಿನಿಮಾರಂಗಕ್ಕೆ ವಾಪಾಸ್ ಆಗಿದ್ದು ಆಪಲ್ ಬಾಕ್ಸ್ ಎನ್ನುವ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದಾರೆ. ಈ ಬ್ಯಾನರ್ ಮೂಲಕ ಬರ್ತಿರುವ ಮೊದಲ ಸಿನಿಮಾ ಇದಾಗಿದೆ. ಈಗಾಗಲೇ ಶೂಟಿಂಗ್ ಕೂಡ ಮುಕ್ತಾಯವಾಗಿದೆ. ಸಿನಿಮಾ ಅನೌನ್ಸ್ ಮಾಡಿ ಕೆಲವೇ ದಿನಗಳಲ್ಲಿ ಶೂಟಿಂಗ್ ಮುಗಿಸಿರುವ ಮೂಲಕ ಅಚ್ಚರಿ ಮೂಡಿಸಿತ್ತು ಸಿನಿಮಾತಂಡ. ಅಂದಹಾಗೆ ಈ ಸಿನಿಮಾದಲ್ಲಿ ರಮ್ಯಾ ನಟಿಸುವುದಾಗಿ ಹೇಳಿದ್ದರು. ಆದರೆ ಕೆಲವೇ ದಿನಗಳಲ್ಲಿ ಸಿನಿಮಾದಿಂದ ಹೊರಬಂದು ಅವರ ಜಾಗಕ್ಕೆ ರಿಸಿ ರವಿಕುಮಾರ್ ಅವರನ್ನುಆಯ್ಕೆ ಮಾಡಲಾಗಿತ್ತು. ಈಗಾಗಲೇ ಸಿರಿ ಅವರ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ.
Ramya ಜಪಾನ್‌ನಲ್ಲಿ 40ನೇ ಹುಟ್ಟುಹಬ್ಬ ಆಚರಿಸಿಕೊಂಡ ಮೋಹಕ ತಾರೆ!
ರಮ್ಯಾ ಮೊದಲ ನಿರ್ಮಾಣದ ಸಿನಿಮಾ ಆಗಿದ್ದರಿಂದ ಭಾರಿ ನಿರೀಕ್ಷೆ ಮತ್ತು ಕತುಹೂಲ ಹೆಚ್ಚಾಗಿದೆ. ಇದೀಗ ರಿಲೀಸ್‌ಗೂ ಮೊದಲೇ ಮೊದಲ ನಿರ್ಮಾಣದ ಸಿನಿಮಾ ವಿವಾದಕ್ಕೆ ಸಿಲುಕಿದೆ. ಸದ್ಯ ರಮ್ಯಾ ಈ ಸಿನಿಮಾದ ಹೆಸರು ಬದಲಾಯಿಸುತ್ತಾರಾ ಅಥವಾ ರಾಜೇಂದ್ರ ಸಿಂಗ್ ಬಾಬು ಜೊತೆ ರಾಜಿ ಮಾಡಿಕೊಳ್ಳುತ್ತಾರಾ ಕಾದ ನೋಡಬೇಕಿದೆ.