ಮೋಹಕ ತಾರೆ ನಿರ್ಮಾಣ ಮಾಡುತ್ತಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಫಸ್ಟ್‌ ಲುಕ್‌ ರಿಲೀಸ್..

ಕನ್ನಡ ಚಿತ್ರರಂಗದ ರೂಲರ್ ಮೋಹಕ ತಾರೆ ರಮ್ಯಾ ನಿರ್ಮಾಣ ಮಾಡುತ್ತಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ಫಸ್ಟ್‌ ಲುಕ್ ಬಿಡುಗಡೆಯಾಗಿದೆ. ಸಿರಿ ರವಿಕುಮಾರ್ ನಾಯಕಿಯಾಗಿ ನಟಿಸಿರುವ ಈ ಚಿತ್ರಕ್ಕೆ ರಾಜ್‌ ಬಿ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿರಿ ಲುಕ್‌ಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ ಆದರೆ ರಾಜ್‌ ನಿರ್ದೇಶನ ಆಗಿರುವ ಕಾರಣ ನಿರೀಕ್ಷೆ ಕಡಿಮೆ ಅಗಿಲ್ಲ. 

ಪ್ರೇರಣಾ ಪಾತ್ರದಲ್ಲಿ ಸಿರಿ ಕಾಣಿಸಿಕೊಳ್ಳಲಿದ್ದಾರೆ. ರಿಲೀಸ್ ಅಗಿರುವ ಫಸ್ಟ್‌ ಲುಕ್‌ನಲ್ಲಿ ಪೀಚ್ ಮತ್ತು ಬಿಳಿ ಬಣ್ಣದ ಕಾಟನ್ ಸೀರೆ ಧರಿಸಿ ಕಾಡಿನ ನಡುವೆ ಕೈಯಲ್ಲಿ ಪುಸ್ತಕ ಹಿಡಿದು ನಿಂತಿದ್ದಾರೆ. ನ್ಯೂಡ್ ಅಥವಾ ಡಲ್ ಶೇಡ್‌ನಲ್ಲಿ ಸಿರಿ ಕಾಣಿಸಿಕೊಂಡಿದ್ದು ನೆಟ್ಟಿಗರು ಬೇಸರ ವ್ಯಕ್ತ ಪಡಿಸಿದ್ದಾರೆ. ಸಿರಿ ಸೂಪರ್ ಆಗಿ ಕಾಣಿಸುತ್ತಿದ್ದೀರಿ ಆದರೆ ಈ ಲುಕ್ ರಮ್ಯಾಗೆ ಸೂಟ್ ಆಗುವುದಿಲ್ಲ, ರಮ್ಯಾ ನಮಗೆ ಗ್ಲಾಮರ್‌ ನಟಿ...ಡೀ-ಗ್ಲಾಮ್‌ ಬೇಡವೇ ಬೇಡ' ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ರಮ್ಯಾ ನಟನೆಯಿಂದ ಹಿಂದೆ ಬಂದಿದ್ದು ಬೆಸ್ಟ್‌. 

ರಮ್ಯಾ ಕೈ ಬಿಟ್ಟಿದ್ದು ಯಾಕೆ?

'ರಾಜ್ ಬಿ ಶೆಟ್ಟಿ ಮತ್ತು ನಾನು ಕೈ ಜೋಡಿಸಿ ಕೆಲಸ ಮಾಡಲು ನಿರ್ಧಾರ ಮಾಡಿದೆವು. ನಾನು ನಿರ್ಮಾಪಕಿಯಾಗಿದೆ ರಾಜ್ ನಿರ್ದೇಶಕನಾಗಿದೆ. ಆರಂಭದಲ್ಲಿ ನಾನೇ ನಟಿಸುವುದಾಗಿ ತೀರ್ಮಾನ ಮಾಡಲಾಗಿತ್ತು ಆದರೆ ಫೈನಲ್‌ ಹಂತದಲ್ಲಿ ಚಿತ್ರಕಥೆಯನ್ನು ಓದಿದಾಗ ನನಗಿಂತ ಹೊಸ ಮುಖಗಳಿಗೆ ಕಥೆ ಸೂಕ್ತ ಅನಿಸಿತ್ತು. ಈ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗಿತ್ತು, ಮೂರ್ನಾಲ್ಕು ಸಲ ಕಥೆ ಓದಿ ತೀರ್ಮಾನ ಮಾಡಿದ್ದು, ಒಳ್ಳೆ ಪಾತ್ರವಿರುವ ಕಥೆ ಇದು ಎನ್ನಬಹುದು. ಕೊನೆಯಲ್ಲಿ ನಟನೆಗಿಂತ ನನಗೆ ಸಿನಿಮಾನೇ ಮುಖ್ಯವಾಗಿತ್ತು. ಸ್ವಾರ್ತಿಯಾಗಿ ನಾನೇ ನಟಿಸಬೇಕು ಎನ್ನುಲು ಆಗುವುದಿಲ್ಲ. ಯಾಕೆ ನಾನು ನಟಿಸಬಾರದು ಎನ್ನುವಕ್ಕೆ ಇರುವ ಕಾರಣಗಳನ್ನು ಲಿಸ್ಟ್ ಮಾಡಿದೆ ಈ ವಿಚಾರಗಳನ್ನು ರಾಜ್‌ಗೆ ತಿಳಿಸಿದ ನಂತರ ನನ್ನ ಮಾತಿಗೆ ಒಪ್ಪಿಕೊಂಡು ಹೊಸ ಕಲಾವಿದರಿಗೆ ಅವಕಾಶ ನೀಡಲು ಮುಂದಾದ್ದರು. ಆಗ ಸಿರಿ ರವಿಕುಮಾರ್‌ನ ರಾಜ್‌ ಮಾಡಬೇಕು ಎಂದು ಸಲಹೆ ಕೊಟ್ಟರು' ಎಂದು ಓಟಿಟಿಪ್ಲೇ ಸಂದರ್ಶನದಲ್ಲಿ ರಮ್ಯಾ ಹೇಳಿದ್ದಾರೆ.

40ನೇ ವಯಸ್ಸಿಗೆ 40ನೇ ಸಿನಿಮಾ ಸಹಿ ಮಾಡಿದ ರಮ್ಯಾ; ಮಿಸ್ ಮಾಡ್ದೆ ನೋಡಲೇ ಬೇಕಾದ ಚಿತ್ರಗಳಿವು

ಪ್ರೇರಣಾ ಅಂದ್ರೆ ಸಂಸ್ಕೃತಿಯಲ್ಲಿ ಸ್ಫೂರ್ತಿ ಎಂದು. ನಿಮಗೆ ಸ್ಪೂರ್ತಿ ಏನೆಂದು ತಿಳಿಸಿ' ಎಂದು ನಿರ್ಮಾಣ ಸಂಸ್ಥೆ ಪೋಸ್ಟ್‌ ಮಾಡಿತ್ತು. ಒಂದು ಮೊಟ್ಟೆಯ ಕತೆ, ಗರುಡ ಗಮನ ವೃಷಭ ವಾಹನ ಸಿನಿಮಾ ನಂತರ ರಾಜ್‌ ನಿರ್ದೇಶನ ಮಾಡುತ್ತಿರುವ ಮೂರನೇ ಸಿನಿಮಾ ಸ್ವಾತಿ ಮುತ್ತಿನ ಮಳೆ ಹನಿಯೇ...ಕೇವಲ 18 ದಿನಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಿ ಮುಗಿಸಿದ್ದಾರಂತೆ.

ಊಟಿ ಮತ್ತು ಮೈಸೂರಿನಲ್ಲಿ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಚಿತ್ರೀಕರಣ ನಡೆದಿರುವುದರ ಬಗ್ಗೆ ರಾಜ್ ಮಾತನಾಡಿದ್ದಾರೆ. 'ನಾವು ಚಿತ್ರಕ್ಕೆ ಸಿಂಪಲ್ ಸ್ಥಳಗಳನ್ನು ಆಯ್ಕೆ ಮಾಡಿಕೊಂಡಿರುವುದು ಹೀಗಾಗಿ ಕಡಿಮೆ ಸಮಯದಲ್ಲಿ ಸಿನಿಮಾ ಚಿತ್ರೀಕರಣ ಮುಗಿಸಲು ಸಾಧ್ಯವಾಗಿದೆ. ಈ ಚಿತ್ರದ ಬೆಸ್ಟ್‌ ಪಾರ್ಟ್‌ ಏನೆಂದರೆ ನನ್ನ ಮನಸ್ಸಿಗೆ ತುಂಬಾ ಹತ್ತಿರವಾಗ ವಿಚಾರಗಳನ್ನು ತೋರಿಸಿರುವೆ' ಎಂದಿದ್ದಾರೆ ರಾಜ್.

View post on Instagram