ಸೈಬರ್ ಕ್ರೈಂ ಕಥೆ, ಥ್ರಿಲ್ಲಿಂಗ್ ಎಲಿಮೆಂಟ್ ಜೊತೆ ಮಾಸ್ ಆ್ಯಕ್ಷನ್ ಚಿತ್ರ ಆ್ಯಂಟಿನಿ ಸಿನಿಮಾ ನಿರ್ದೇಶಕ ರಘು ಶಾಸ್ತ್ರಿಯಿಂದ ಮತ್ತೊಂದು ಚಿತ್ರ ಮನೋಜ್ ಕುಮಾರ್ ನಾಯಕನಾಗಿ ನಟಿಸಿದ ಮೊದಲ ಚಿತ್ರ

ಬೆಂಗಳೂರು(ಮೇ.03): ವಿನಯ್ ರಾಜ್ ಕುಮಾರ್ ಅಭಿನಯದ ರನ್ ಆಂಟನಿ ಸಿನಿಮಾ ಎಲ್ಲರಿಗೂ ನೆನಪಿದೆ. ಈ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ರಘು ಶಾಸ್ತ್ರಿ ಮೊದಲ ಪ್ರಯತ್ನದಲ್ಲೇ ಭರವಸೆ ಮೂಡಿಸಿದ್ರು. ಇದೀಗ ಅವರ ಎರಡನೇ ಸಿನಿಮಾ ಟಕ್ಕರ್ ಬಿಡುಗಡೆಗೆ ಸಿದ್ದವಾಗಿದೆ. ಮೇ 6 ರಂದು ಭಾರಿ ನಿರೀಕ್ಷೆಗಳ ಟಕ್ಕರ್ ಸಿನಿಮಾ ಚಿತ್ರಮಂದಿರಗದ ಅಂಗಳಕ್ಕೆ ಲಗ್ಗೆ ಇಡುವುದು ಖಚಿತವಾಗಿದೆ. 

2018ರಲ್ಲೇ ಸೆಟ್ಟೇರಿದ್ದ ಸಿನಿಮಾ ಬಿಡುಗಡೆಯಾಗುವಷ್ಟರಲ್ಲಿ ಕೊರೋನಾ ಅಲೆಗಳು ಒಂದೊಂದಾಗಿ ಬಂದು ಚಿತ್ರ ಬಿಡುಗಡೆಗೆ ಅಡ್ಡಲಾಗಿ ನಿಂತಿತ್ತು. ಇದೀಗ ಎಲ್ಲವನ್ನು ದಾಟಿ ಪ್ರೇಕ್ಷಕರೆದುರು ಬರಲು ಡೇಟ್ ಕೂಡ ಫಿಕ್ಸ್ ಮಾಡಿಕೊಂಡು ಪ್ರಚಾರ ಆರಂಭಿಸಿದೆ.

'ಟಕ್ಕರ್' ಟ್ರೇಲರ್ ಅನಾವರಣ...ಇದು ಸೈಬರ್ ಲೋಕದ ಥ್ರಿಲ್ಲರ್ ಹೂರಣ

ರಘು ಶಾಸ್ತ್ರಿ ಈ ಚಿತ್ರ್ಕಕೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ರನ್ ಆಂಟನಿಯಲ್ಲಿ ತಮ್ಮ ನಿರ್ದೇಶನದ ಚಾಣಾಕ್ಷತನ ತೋರಿ ಸೈ ಎನಿಸಿಕೊಂಡಿದ್ದ ರಘು ಶಾಸ್ತ್ರಿ ಈ ಬಾರಿ ಸೈಬರ್ ಕ್ರೈಂ ಕಥೆಯನ್ನು ಹೊತ್ತು ಬಂದಿದ್ದಾರೆ. ಥ್ರಿಲ್ಲಿಂಗ್ ಎಲಿಮೆಂಟ್ ಜೊತೆ ಮಾಸ್ ಆಕ್ಷನ್ ಕೂಡ ಇರಲಿದ್ದು, ಪ್ರೇಮ್ ಕಹಾನಿಯೂ ಇದೆ ಎನ್ನುತ್ತಾರೆ ನಿರ್ದೇಶಕರು. ರನ್ ಆಂಟನಿ ಚಿತ್ರೀಕರಣದ ವೇಳೆ ಹೊಳೆದ ಎಳೆಯನ್ನು ಕಮರ್ಶಿಯಲ್ ಟಚ್ ನೊಂದಿಗೆ ಬರೆದು, ನಿರ್ದೇಶನ ಮಾಡಿ ತೆರೆ ಮೇಲೆ ತರ್ತಿದ್ದಾರೆ.

YouTube video player

ಮನೋಜ್ ಕುಮಾರ್ ಗೆ ಇದು ಮೊದಲ ಸಿನಿಮಾ. ಸಾಕಷ್ಟು ಹೋಮ್ ವರ್ಕ್ ನೊಂದಿಗೆ ನಾಯಕ ನಟನಾಗಿ ಹೆಜ್ಜೆ ಇಟ್ಟಿದ್ದಾರೆ. ಈ ಸಿನಿಮಾಗಾಗಿ ಸಾಕಷ್ಟು ದುಡಿದಿದ್ದಾರೆ. ಟೀಸರ್ ತುಣುಕುಗಳನ್ನು ನೋಡಿದ್ರೆ ಅವರ ಎಫರ್ಟ್ ಎದ್ದು ಕಾಣುತ್ತೆ. ಚಿತ್ರದಲ್ಲಿ ಇವರಿಗೆ ಜೋಡಿಯಾಗಿ ಕಿರುತೆರೆಯ ಖ್ಯಾತ ನಟಿ ರಂಜನಿ ರಾಘವನ್ ತೆರೆ ಹಂಚಿಕೊಂಡಿದ್ದಾರೆ.

ಸೋದರಳಿಯನಿಗೆ ‘ಟಕ್ಕರ್’ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್!

ಟಕ್ಕರ್ ತಾರಾಬಳಗ ದೊಡ್ಡದಿದೆ, ಸಾಧುಕೋಕಿಲ, ಜೈಜಗದೀಶ್, ಶ್ರೀಧರ್, ಸುಮಿತ್ರ, ಕುರಿ ಸುನೀಲ್ ಹೀಗೆ ಹಲವು ಸ್ಟಾರ್ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಎಸ್ ಎಲ್ ಎನ್ ಕ್ರಿಯೇಷನ್ಸ್ ಬ್ಯಾನರ್ ನಡಿ ನಾಗೇಶ್ ಕೋಗಿಲು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕದ್ರಿ ಮಣಿಕಾಂತ್ ಸಂಗೀತ, ಕೆ.ಎಂ ಪ್ರಕಾಶ್ ಸಂಕಲನ ವಿಲಿಯಂ ಡೇವಿಡ್ ಸಿನಿಮಾಟೋಗ್ರಫಿ ಟಕ್ಕರ್ ಚಿತ್ರಕ್ಕಿದೆ.