Kannada

ಜೀವನಕ್ಕೆ ದಿಢೀರ್ ವಿದಾಯ ಹೇಳಿದ ತಾರೆಯರು

ಕನ್ನಡ ಚಿತ್ರರಂಗದಲ್ಲಿ ಮಿಂಚಿ ಮತ್ತಷ್ಟು ಸಾಧನೆ ಮಾಡುವ ಹಾದಿಯಲ್ಲಿದ್ದ ಕೆಲವು ನಟ ನಟಿಯರು, ಜನಪ್ರಿಯತೆಯ ಉತ್ತುಂಗದಲ್ಲಿರುವಾಗಲೇ ಜೀವನಕ್ಕೆ ವಿದಾಯ ಹೇಳಿದರು.

Kannada

ಕಲ್ಪನಾ

ಮಿನುಗುತಾರೆ ಎಂದೆ ಖ್ಯಾತರಾದ ಕಲ್ಪನಾ ಆ ಕಾಲದ ಖ್ಯಾತ ನಟಿ, ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಕಲ್ಪನಾ 1979ರಲ್ಲಿ ಆತ್ಮಹತ್ಯೆ ಮಾಡಿಕೊಂಡರು, ಆವಾಗ ಅವರ ವಯಸ್ಸು ಕೇವಲ 35.

Image credits: social media
Kannada

ಮಂಜುಳ

ಕನ್ನಡ ಚಿತ್ರರಂಗದ ಖ್ಯಾತ ನಟಿ ಮಂಜುಳಾ ತಮ್ಮ 31ವಯಸ್ಸಿನಲ್ಲಿ 1986ರಲ್ಲಿ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದರು. ಇದು ಆತ್ಮಹತ್ಯೆ ಎಂದು ಹೇಳಲಾಗುತ್ತದೆ.

Image credits: social media
Kannada

ಶಂಕರ್ ನಾಗ್

ಶಂಕರ್ ನಾಗ್ ಹೆಸರು ಅಂದು ಇಂದು ಎಂದೆಂದಿಗೂ ಜೀವಂತ. ಚಿತ್ರರಂಗದ ಉತ್ತುಂಗುದಲ್ಲಿರುವಾಗಲೇ ಅಪಘಾತದಿಂದ ಶಂಕರ್ ನಾಗ್ ಅವರು ತಮ್ಮ 35ನೇ ವಯಸ್ಸಿನಲ್ಲಿ ನಿಧನರಾದರು.

Image credits: social media
Kannada

ಸುನೀಲ್

ಕನ್ನಡ ಚಿತ್ರರಂಗದ ಸುರದ್ರೂಪಿ ನಟ ಸುನೀಲ್. 1994ರಲ್ಲಿ ಸಿನಿಮಾ ಒಂದರ ಶೂಟಿಂಗ್ ಮುಗಿಸಿ ತೆರಳುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಆ ಸಮಯದಲ್ಲಿ ಅವರ ವಯಸ್ಸು ಕೇವಲ 30.

Image credits: social media
Kannada

ನಿವೇದಿತಾ ಜೈನ್

17ನೇ ವರ್ಷಕ್ಕೆ ಸಿನಿಮಾರಂಗಕ್ಕೆ ಎಂಟ್ರಿ, ಎರಡು ವರ್ಷದಲ್ಲಿ ತಮಿಳು, ತೆಲುಗು ಸೇರಿ 10 ಸಿನಿಮಾಗಳಲ್ಲಿ ನಟನೆ, 1998ರಲ್ಲಿ ತಮ್ಮ 19ನೇ ವಯಸ್ಸಿನಲ್ಲಿ ಮಹಡಿಯಿಂದ ಬಿದ್ದು ದುರಂತ ಸಾವು.

Image credits: social media
Kannada

ಸೌಂದರ್ಯ

ಸೌಂದರ್ಯ ಹೆಸರಿಗೆ ತಕ್ಕಂತೆ ಸೌಂದರ್ಯದ ಗಣಿ. ದಕ್ಷಿಣ ಭಾರತದ, ಬಾಲಿವುಡ್ ಸೇರಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ನಟಿ ವಿಮಾನ ಅಪಘಾತದಲ್ಲಿ ತಮ್ಮ 32ನೇ ವಯಸ್ಸಿನಲ್ಲಿ ನಿಧನರಾದರು.

Image credits: social media
Kannada

ರಾಘವ್ ಉದಯ್

ಬಾಡಿ ಬಿಲ್ಡರ್ ಹಾಗೂ ಖಳ ನಾಯಕರಾಗಿದ್ದ ರಾಘವ್ ಉದಯ್ 2017ರಲ್ಲಿ ತಮ್ಮ 30ನೇ ವಯಸ್ಸಿನಲ್ಲಿ ಮಾಸ್ತಿ ಗುಡಿ ಸಿನಿಮಾ ಶೂಟಿಂಗ್ ವೇಳೆ ನೀರಿಗೆ ಬಿದ್ದು ಸಾವನ್ನಪ್ಪಿದರು.

Image credits: social media
Kannada

ಅನಿಲ್ ಕುಮಾರ್

ಕನ್ನಡದಲ್ಲಿ ಸುಮಾರು 25 ಸಿನಿಮಾಗಳಲ್ಲಿ ನಟಿಸಿದ್ದ ಅನಿಲ್ ಕುಮಾರ್ 2017ರಲ್ಲಿ ಮಾಸ್ತಿ ಗುಡಿ ಸಿನಿಮಾ ಶೂಟಿಂಗ್ ವೇಳೆ ನೀರಿಗೆ ಬಿದ್ದು ಸಾವನ್ನಪ್ಪಿದರು.

Image credits: social media
Kannada

ಚಿರಂಜೀವಿ ಸರ್ಜಾ

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಆಗಿ ಮಿಂಚ ಬೇಕಿದ್ದ ನಟ ಚಿರಂಜೀವಿ ಸರ್ಜಾ, 2020ರಲ್ಲಿ ತಮ್ಮ 36ನೇ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಬಲಿಯಾದರು.

Image credits: social media
Kannada

ಪುನೀತ್ ರಾಜಕುಮಾರ್

ಚಿರಂಜೀವಿ ಸರ್ಜಾ ಸಾವಿನ ನೋವು ಮಾಸುವ ಮುನ್ನವೇ 2021ರಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ 45ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತರಾದರು.

Image credits: social media
Kannada

ಸಂಚಾರಿ ವಿಜಯ್

ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಟರಲ್ಲಿ ಒಬ್ಬರಾದ ಸಂಚಾರಿ ವಿಜಯ್ ಅವರು 2021ರಲ್ಲಿ ತಮ್ಮ 38ನೇ ವಯಸ್ಸಿನಲ್ಲಿ, ಬೈಕ್ ಅಪಘಾತವಾಗಿ ತೀವ್ರ ಗಾಯಗೊಂಡು ಸಾವನ್ನಪ್ಪಿದರು.

Image credits: social media
Kannada

ಸಂತೋಷ್ ಬಾಲರಾಜ್

ಕನ್ನಡ ಚಿತ್ರರಂಗದಲ್ಲಿ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದ ಯುವ ನಟ ಸಂತೋಷ್ ಬಾಲರಾಜ್ ತಮ್ಮ 2025ರಲ್ಲಿ ತಮ್ಮ 34ನೇ ವಯಸ್ಸಿನಲ್ಲಿ ಜಾಂಡೀಸ್ ಗೆ ಬಲಿಯಾದರು.

Image credits: social media

ಎಲ್ಲಿದ್ದಾರೆ ಶ್ರೀಮನ್ನಾರಾಯಣನ ಸುಂದರಿ Shanvi Srivastava… ಸಿನಿಮಾದಿಂದ ದೂರಾದ್ರ?

1000ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ ಏಕೈಕ ಕನ್ನಡ ನಟಿ ಯಾರು?

ಕನ್ನಡ ಚಿತ್ರರಂಗದ ಶ್ರೀಮಂತ ನಟಿಯರು… ಇವರ Net Worth ಎಷ್ಟು ಗೊತ್ತಾ?

ಕನ್ನಡಿಗರ ಪುಟ್ಟಿ ರುಕ್ಮಿಣಿ ವಸಂತ್ ಜನವರಿ ತಿಂಗಳು ಹೀಗಿತ್ತು ನೋಡಿ