ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ದಿನೇ ದಿನೇ ಹೆಚ್ಚುತ್ತಲೇಯಿದೆ. ಸಾಮಾಜಿಕ ಜಾಲತಾಣವನ್ನು ಎಲ್ಲರೂ ತುಂಬಾ ಹಗುರವಾಗಿ ತೆಗೆದುಕೊಳ್ಳುತ್ತೇವೆ. ಆದರೆ ಅದರಿಂದ ಆಗಬಹುದಾದ ಆಪತ್ತುಗಳ ಬಗ್ಗೆ ಟಕ್ಕರ್ ಸಿನಿಮಾ ಬೆಳಕು ಚೆಲ್ಲಿದೆ.
ತಂತ್ರಜ್ಞಾನಗಳಿಂದ ಎಷ್ಟು ಉಪಯೋಗವಿದೆಯೋ, ಅದಕ್ಕೂ ಹೆಚ್ಚು ದುರುಪಯೋಗಗಳಿವೆ. ಇಂತಹ ಅದೆಷ್ಟೋ ಘಟನೆಗಳು ಬೆಳಕಿಗೆ ಬರುವುದೇ ಇಲ್ಲ. ಅದರಲ್ಲಂತೂ ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ದಿನೇ ದಿನೇ ಹೆಚ್ಚುತ್ತಲೇಯಿದೆ. ಸಾಮಾಜಿಕ ಜಾಲತಾಣವನ್ನು ಎಲ್ಲರೂ ತುಂಬಾ ಹಗುರವಾಗಿ ತೆಗೆದುಕೊಳ್ಳುತ್ತೇವೆ. ಆದರೆ ಅದರಿಂದ ಆಗಬಹುದಾದ ಆಪತ್ತುಗಳ ಬಗ್ಗೆ ಟಕ್ಕರ್ ಸಿನಿಮಾ ಬೆಳಕು ಚೆಲ್ಲಿದೆ.
ಟ್ರೇಲರ್ ಕಂಟೆಂಟ್ ಏನು?
ನಿರಂತರವಾಗಿ ನಡೆಯುವ ಹೆಣ್ಣುಮಕ್ಕಳ ಕೊಲೆ..ಈ ಕೊಲೆ ಭೇದಿಸಲು ಪೊಲೀಸರಿಗೆ ಸಹಾಯ ಮಾಡಲು ಎಂಟ್ರಿ ಕೊಡುವ ಹೀರೋ. ಹೊಸ ಬಗೆಯ ಸೈಬರ್ ಕ್ರೈಮ್ ನಾಯಕ ಹೇಗೆ ಬೆನ್ನು ಹತ್ತುತ್ತಾನೆ? ವಿಲನ್ ಗೆ ಹೇಗೆ ಟಕ್ಕರ್ ಕೊಡ್ತಾನೆ? ಸೈಬರ್ ಕ್ರೈಮ್ ನಿಂದ ಏನೆಲ್ಲಾ ಅನಾಹುತ ಆಗುತ್ತದೆ ಅನ್ನೋದನ್ನು ಟ್ರೇಲರ್ ನಲ್ಲಿ ಎಳೆಎಳೆಯಾಗಿ ಕಟ್ಟಿಕೊಡಲಾಗಿದೆ.
ಮನೋಜ್ ಕುಮಾರ್ ಹೆಣ್ಣುಮಕ್ಕಳ ರಕ್ಷಣೆಗೆ ಹೋರಾಡುವ ಮೆಡಿಕಲ್ ವಿದ್ಯಾರ್ಥಿಯಾಗಿ ಮಿಂಚಿದ್ದು, ಭರ್ಜರಿ ಫೈಟ್, ಆಕ್ಷನ್ ಸೀನ್ಸ್ ಮೂಲಕ ಗಮನ ಸೆಳೆದಿದ್ದಾರೆ . ಭಜರಂಗಿ ಲೋಕಿ ಖಳನಾಯಕನಾಗಿ ಖದರ್ ತೋರಿಸಿದ್ದಾರೆ. ಜೈಜಗದೀಶ್, ಸುಮಿತ್ರಾ, ರಂಜನಿ ರಾಘವನ್, ಶಂಕರ್ ಅಶ್ವತ್ಥ್ ಮುಂತಾದ ಕಲಾವಿದರು ತಾರಾಬಳಗದಲ್ಲಿದ್ದಾರೆ.
ಗಾಂಧಿ ನಗರಕ್ಕೆ 'ಟಕ್ಕರ್'ಕೊಟ್ಟ ಮನೋಜ್ !
ರೋಚಕ ಟ್ರೇಲರ್ ಕಟ್ಟಿ ಕೊಡುವುದರಲ್ಲಿ ನಿರ್ದೇಶಕ ರಘುಶಾಸ್ತ್ರಿ ಯಶಸ್ವಿಯಾಗಿದ್ದಾರೆ. ಎಸ್ ಎಲ್ ಎನ್ ಕ್ರಿಯೇಷನ್ ಬ್ಯಾನರ್ ನಡಿ ನಾಗೇಶ್ ಕೋಗಿಲು ನಿರ್ಮಾಣ ಮಾಡಿರುವ ಮಣಿಕಾಂತ್ ಕದ್ರಿ ಹಾಡುಗಳಿಗೆ ಸಂಗೀತ ನೀಡಿದ್ದು, ವಿಲಿಯಂ ಡೇವಿಡ್ ಛಾಯಾಗ್ರಹಣ, ಕೆಎಂ ಪ್ರಕಾಶ್ ಸಂಕಲನ ನೀಡಿದ್ದಾರೆ. ತಂತ್ರಜ್ಞಾನದ ಕರಾಳ ರೂಪ ತೆರೆದಿಡುವ ಟಕ್ಕರ್ ಮೇ6ಕ್ಕೆ ರಾಜ್ಯಾದ್ಯಂತ ತೆರೆಗೆ ಬರ್ತಿದೆ.
