Asianet Suvarna News Asianet Suvarna News

ಕಾಸರಗೋಡಿನ ವಿದ್ಯಾರ್ಥಿಗಳಿಗೆ '777 ಚಾರ್ಲಿ' ಸಿನಿಮಾ ತೋರಿಸಲು ಮುಂದಾದ ನಿರ್ದೇಶಕ ಕಿರಣ್ ರಾಜ್

ಇತ್ತೀಚೆಗೆ ತೆರೆಕಂಡು, ವಿಶ್ವದಾದ್ಯಂತ ಜನಪ್ರಿಯವಾಗುತ್ತಿರುವ ಚಿತ್ರ '777 ಚಾರ್ಲಿ'. ಈ ಚಿತ್ರದ ನಿರ್ದೇಶಕ ಕಿರಣ್ ರಾಜ್ ಕಾಸರಗೋಡಿನವರು. ತಮ್ಮೂರಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರವನ್ನು ತೋರಿಸುವ ಹಂಬಲ ನಿರ್ದೇಶಕರಿಗೆ.

director kiran raj to show 777 charlie movie to kasaragod students gvd
Author
Bangalore, First Published Jun 27, 2022, 10:15 PM IST

ಇತ್ತೀಚೆಗೆ ತೆರೆಕಂಡು, ವಿಶ್ವದಾದ್ಯಂತ ಜನಪ್ರಿಯವಾಗುತ್ತಿರುವ ಚಿತ್ರ '777 ಚಾರ್ಲಿ'. ಈ ಚಿತ್ರದ ನಿರ್ದೇಶಕ ಕಿರಣ್ ರಾಜ್ ಕಾಸರಗೋಡಿನವರು. ತಮ್ಮೂರಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರವನ್ನು ತೋರಿಸುವ ಹಂಬಲ ನಿರ್ದೇಶಕರಿಗೆ. ಈ ವಿಷಯವನ್ನು ಕಾಸರಗೋಡಿನ ಡಿಡಿಇ ಅವರಿಗೆ ಕಿರಣ್ ರಾಜ್ ಲಿಖಿತವಾಗಿ ತಿಳಿಸಿದರು. ನಿರ್ದೇಶಕರ ಮನವಿಗೆ ಸ್ಪಂದಿಸಿರುವ ಡಿಡಿಇ ಅವರಿಂದ ಉತ್ತಮ ಸ್ಪಂದನೆ ದೊರಕಿದೆ. 

ಕಾಸರಗೋಡಿನ ಮೆಹಬೂಬ್ ಚಿತ್ರಮಂದಿರದವರು ರಿಯಾಯಿತಿ ದರದಲ್ಲಿ '777ಚಾರ್ಲಿ' ಚಿತ್ರವನ್ನು ತೋರಿಸಲು ಮುಂದಾಗಿದ್ದಾರೆ. 130 ರೂಪಾಯಿ ಟಿಕೇಟ್ ದರವಿದ್ದು, ವಿದ್ಯಾರ್ಥಿಗಳಿಗೆ 80 ರೂಪಾಯಿಗೆ ಟಿಕೇಟ್ ನೀಡಲು ನಿರ್ಧರಿಸಲಾಗಿದೆ. ಮಕ್ಕಳನ್ನು ಚಿತ್ರಮಂದಿರಕ್ಕೆ ಕರೆತರುವ ಅಧ್ಯಾಪಕರಿಗೆ ಉಚಿತ ಪ್ರವೇಶವಿರುತ್ತದೆ. ಈ ವಿಷಯದ ಕುರಿತು ಧನಾತ್ಮಕವಾಗಿ ಸ್ಪಂದಿಸಿರುವ ಡಿಡಿಇ ಹಾಗೂ ಚಿತ್ರಮಂದಿರ ಮಾಲೀಕರಿಗೆ ನಿರ್ದೇಶಕ ಕಿರಣ್ ರಾಜ್ ಧನ್ಯವಾದ ತಿಳಿಸಿದ್ದಾರೆ.

ಮುದ್ದಿನ ನಾಯಿಯೊಂದಿಗೆ '777 ಚಾರ್ಲಿ' ಸಿನಿಮಾ ನೋಡಿದ ಜನಾರ್ದನ ರೆಡ್ಡಿ!

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಬಹುದು:
ರೋಹಿತ್  - 8050884423
ಮೋಹಿತ್ - 6238236114
ಭರತ್ ರಾಜ್ - 8073895340
ರತ್ನಾಕರ್ ಮಲಮೂಲೆ - 9446095543

777 ಚಾರ್ಲಿಗೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಘೋಷಣೆ: ನಟ ರಕ್ಷಿತ್‌ ಶೆಟ್ಟಿಅವರ ‘777 ಚಾರ್ಲಿ’ ಸಿನಿಮಾಗೆ ಜೂ.19ರಿಂದ ಆರು ತಿಂಗಳ ಅವಧಿಗೆ ಅನ್ವಯವಾಗುವಂತೆ ತೆರಿಗೆ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿನಿಮಾ ವೀಕ್ಷಿಸಿ ಭಾವುಕರಾಗಿ ಕಣ್ಣೀರು ಹಾಕಿದ್ದರು. ಇದೀಗ ಸಿನಿಮಾ ನಿರ್ಮಾಪಕರೂ ಆದ ರಕ್ಷಿತ್‌ ಶೆಟ್ಟಿ ಅವರ ಮನವಿ ಮೇರೆಗೆ ಸಿನಿಮಾಗೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ ವಿನಾಯಿತಿ ನೀಡಿ ಆರ್ಥಿಕ ಇಲಾಖೆ ಮೂಲಕ ಆದೇಶ ಹೊರಡಿಸಿದ್ದಾರೆ. 

ಸಿನಿಮಾದಲ್ಲಿ ಇನ್‌ಬ್ರೀಡಿಂಗ್‌ನಿಂದಾಗಿ ಶ್ವಾನಗಳ ಸ್ವಾಸ್ಥ್ಯದ ಮೇಲಾಗುವ ಪರಿಣಾಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಪ್ರಾಣಿ ಹಿಂಸೆಯ ಸೂಕ್ಷ್ಮತೆಗಳನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡಲಾಗಿದೆ. ಇದರ ಜತೆಗೆ ಈ ಚಿತ್ರವು ಬೀದಿ ನಾಯಿಗಳನ್ನು ದತ್ತು ಪಡೆಯುವುದರ ಬಗ್ಗೆ ಸಂದೇಶ ಸಾರಿದೆ. ಹೀಗಾಗಿ ಮುಖ್ಯಮಂತ್ರಿಗಳು ಸಿನಿಮಾ ನಿರ್ಮಾಪಕರ ಮನವಿ ಪರಿಗಣಿಸಿ ಈ ಚಿತ್ರವನ್ನು ತೆರಿಗೆ ಮುಕ್ತಗೊಳಿಸಿದರೆ ದೇಶದ ಇನ್ನಷ್ಟು ಜನರಿಗೆ ಈ ಸಂದೇಶ ತಲುಪಿಸಬಹುದು ಎಂಬ ಕಾರಣಕ್ಕೆ ತೆರಿಗೆ ವಿನಾಯಿತಿ ನೀಡಿರುವುದಾಗಿ ಆರ್ಥಿಕ ಇಲಾಖೆ ಆದೇಶದಲ್ಲಿ ತಿಳಿಸಿದೆ. 

777 ಚಾರ್ಲಿ ವೀಕ್ಷಿಸಿದ ರಜಿನಿಕಾಂತ್; ರಕ್ಷಿತ್‌ಗೆ ಕರೆ ಮಾಡಿ ಸೂಪರ್ ಸ್ಟಾರ್ ಹೇಳಿದ್ದೇನು?

ಇನ್ನು ಈ ಸೌಲಭ್ಯ ಪಡೆಯಲು ಸಿನಿಮಾ ಪ್ರದರ್ಶಕರು ತೆರಿಗೆ ಹೊರತಾದ ದರದಲ್ಲೇ ಟಿಕೆಟ್‌ ಮಾರಾಟ ಮಾಡಬೇಕು. ಜತೆಗೆ ‘ಕರ್ನಾಟಕ ಸರ್ಕಾರದ ಆದೇಶದನ್ವಯ ರಾಜ್ಯ ಜಿಎಸ್‌ಟಿಯನ್ನು ಸಂಗ್ರಹಿಸುವುದಿಲ್ಲ’ ಎಂಬ ಪದಗಳು ಎದ್ದು ಕಾಣುವಂತೆ ಇರಬೇಕು ಎಂಬುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ.

Follow Us:
Download App:
  • android
  • ios