ಮುದ್ದಿನ ನಾಯಿಯೊಂದಿಗೆ '777 ಚಾರ್ಲಿ' ಸಿನಿಮಾ ನೋಡಿದ ಜನಾರ್ದನ ರೆಡ್ಡಿ!

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ತಮ್ಮ ಮುದ್ದಿನ ನಾಯಿ ರಾಖಿಯೊಂದಿಗೆ ಬಳ್ಳಾರಿಯ ತಮ್ಮ ನಿವಾಸದಲ್ಲಿನ ಹೋಂ ಥಿಯೇಟರ್‌ನಲ್ಲಿ ಚಾರ್ಲಿ 777 ಸಿನಿಮಾ ವೀಕ್ಷಣೆ ಮಾಡಿದ್ದಾರೆ.

ex minister janardhan reddy watched 777 charlie movie with dog gvd

ಬಳ್ಳಾರಿ (ಜೂ.27): ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ತಮ್ಮ ಮುದ್ದಿನ ನಾಯಿ ರಾಖಿಯೊಂದಿಗೆ ಬಳ್ಳಾರಿಯ ತಮ್ಮ ನಿವಾಸದಲ್ಲಿನ ಹೋಂ ಥಿಯೇಟರ್‌ನಲ್ಲಿ ಚಾರ್ಲಿ 777 ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಸಿನಿಮಾ ವೀಕ್ಷಣೆ ಕುರಿತು ಬರೆದುಕೊಂಡಿರುವ ಜನಾರ್ದನ ರೆಡ್ಡಿ, ‘ನಾನು ಮತ್ತು ನನ್ನ ಕುಟುಂಬ ಸದಸ್ಯರು ಚಾರ್ಲಿ 777 ಸಿನಿಮಾ ವೀಕ್ಷಣೆ ಮಾಡುವಾಗ ನನ್ನ ಜತೆ ರಾಖಿಯೂ ಇತ್ತು. ನಮ್ಮ ಪಕ್ಕದಲ್ಲಿಯೇ ಕುಳಿತು ಸಿನಿಮಾ ವೀಕ್ಷಿಸಿತು. ಚಿತ್ರದಲ್ಲಿ ಚಾರ್ಲಿ ಬರುತ್ತಿದ್ದಂತೆಯೇ ರಾಖಿ ಕಿವಿ ಅರಳಿಸುತ್ತಿತ್ತು. ಅದರ ಪ್ರೀತಿ ಮಮಕಾರ ನನಗೆ ಅರ್ಥವಾಗುತ್ತಿತ್ತು’ ಎಂದಿದ್ದಾರೆ. ‘ಚಾರ್ಲಿಯ ನಟನೆ ಶ್ಲಾಘನೀಯ. 

ನಾಯಕ ರಕ್ಷಿತ್‌ ಶೆಟ್ಟಿಅದ್ಭುತವಾಗಿ ನಟಿಸಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಒಳ್ಳೆಯ ಚಿತ್ರ ನಿರ್ದೇಶಿಸಿರುವ ಕಿರಣ್‌ರಾಜ್‌, ತಮ್ಮ ನಟನೆಯಿಂದ ಎಲ್ಲರನ್ನು ನಕ್ಕು ನಗಿಸುವ ರಾಜ್‌ ಬಿ.ಶೆಟ್ಟಿಹಾಗೂ ಚಿತ್ರತಂಡಕ್ಕೆ ಹೃದಯಪೂರ್ವಕ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದಾರೆ. ಇದೇ ವೇಳೆ ಜನಾರ್ದನ ರೆಡ್ಡಿ ತಮ್ಮ ಕುಟುಂಬ ಸದಸ್ಯರ ಜತೆ ಸಾಕುನಾಯಿ ರಾಖಿಯೊಂದಿಗೆ ಚಾರ್ಲಿ ಸಿನಿಮಾ ವೀಕ್ಷಿಸುತ್ತಿರುವ ವೀಡಿಯೋ ಸಹ ವೈರಲ್‌ ಆಗಿದೆ. ಎಲ್ಲರಿಂದಲೂ ಮೆಚ್ಚುಗೆಯ ಮಾತುಗಳು ಬಂದಿದ್ದು, ಚಾರ್ಲಿ ಸಿನಿಮಾವನ್ನು ಜನರು ಕೊಂಡಾಡಿದ್ದಾರೆ. ಸಿನಿಮಾ ವೀಕ್ಷಣೆ ವೇಳೆ ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮೇ ಜತೆಗಿರುವುದು ವೀಡಿಯೋದಲ್ಲಿ ಕಂಡು ಬರುತ್ತಿದೆ.

777 ಚಾರ್ಲಿ ವೀಕ್ಷಿಸಿದ ರಜಿನಿಕಾಂತ್; ರಕ್ಷಿತ್‌ಗೆ ಕರೆ ಮಾಡಿ ಸೂಪರ್ ಸ್ಟಾರ್ ಹೇಳಿದ್ದೇನು?

ಲ್ಯಾಬ್ರಡಾರ್ ನಾಯಿಗೆಲ್ಲಿಲ್ಲದ ಡಿಮ್ಯಾಂಡ್: 777 ಚಾರ್ಲಿ ಹೆಚ್ಚಿನೆಡೆ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಈ ಸಿನಿಮಾ ಹತ್ತಿರತ್ತಿರ 100 ಕೋಟಿ ಕಲೆಕ್ಷನ್ ಮಾಡಿರಬಹುದು ಅಂತ ಅಂದಾಜಿಸಲಾಗಿದೆ. ಆದರೆ ಚಿತ್ರತಂಡ ಈ ವಿಚಾರವಾಗಿ ಕಮಕ್ ಕಿಮಕ್ ಅಂದಿಲ್ಲ. ಆದರೆ ಉತ್ತಮ ಕಲೆಕ್ಷನ್ ಗೆ ಖುಷಿಯಲ್ಲಂತೂ ಇದೆ. ಈ ನಡುವೆ ಸೂಪರ್‌ಸ್ಟಾರ್ ರಜನಿಕಾಂತ್  ಕೂಡ ಚಿತ್ರವನ್ನು ನೋಡಿ ಮೆಚ್ಚಿಕೊಂಡು ರಕ್ಷಿತ್ ಶೆಟ್ಟಿ ಅವರಿಗೆ ಫೋನ್ ಮಾಡಿ ಶುಭಾಶಯ ಹೇಳಿದ್ದಾರೆ. ಚಿತ್ರದ ಮೇಕಿಂಗ್, ಅದರ ಆಧ್ಯಾತ್ಮಿಕ ಧ್ವನಿ ಎಲ್ಲವೂ ಅದ್ಭುತವಾಗಿದೆ ಎಂದಿದ್ದಾರಂತೆ.  ಇದೀಗ ಜನ ಈ ಸಿನಿಮಾದ ಸಂದೇಶವನ್ನು ತಪ್ಪಾಗಿ ಅರ್ಥ ಮಾಡಿಕೊಂಡ ಪರಿಣಾಮ ತಂಡಕ್ಕೆ ಹೊಸ ತಲೆನೋವು ಶುರುವಾಗಿದೆ. 

ನಾನು ನಿಮ್ಮ ಜೊತೆ ನಟಿಸಬೇಕು; ರಕ್ಷಿತ್‌ಗೆ ಸ್ಟಾರ್ ನಟಿಯ ಬೇಡಿಕೆ

ಈ ಚಿತ್ರ ತಂಡ ನಾಯಿಗಳ ಅವೖಜ್ಞಾನಿಕ ಬ್ರೀಡಿಂಗ್ ಬಗ್ಗೆ ಬೆಳಕು ಚೆಲ್ಲಿದ್ದಕ್ಕೆ ರಾಜ್ಯ ಸರ್ಕಾರ ಈ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿತ್ತು. ಆದರೆ ಇದೀಗ ಸಿನಿಮಾ ಏನಾಗಬಾರದು ಅಂದುಕೊಂಡಿತ್ತೋ ಅದು ಹೆಚ್ಚು ಸಾಧ್ಯತೆಯನ್ನು ಹಲವರು ವ್ಯಕ್ತಪಡಿಸಿದ್ದಾರೆ. 777 ಚಾರ್ಲಿ ಸಿನಿಮಾದಲ್ಲಿ ಚಾರ್ಲಿ ಎಂಬ ನಾಯಿಯ ನಟನೆ ನೋಡಿದ ಮೇಲೆ ಜನರಿಗೆ ಚಾರ್ಲಿ ಥರದ್ದೇ ನಾಯಿ ತಮ್ಮ ಮನೆಗೂ ಬೇಕು ಅಂತ ಅನಿಸಲಾರಂಭಿಸಿದೆ. ಹಾಗಾಗಿ ಲ್ಯಾಬ್ ಪಪ್ಪಿಗಳಿಗೆ ದೇಶಾದ್ಯಂತ ವಿಪರೀತ ಬೇಡಿಕೆ ಹುಟ್ಟಿಕೊಂಡಿದೆ. ಈ ಬೇಡಿಕೆ ಪೂರೖಸಲು ಬ್ರೀಡರ್‌ಗಳು ಈ ಚಿತ್ರದಲ್ಲಿ ತಿಳಿಸಿರುವಂತೆ ಅವೖಜ್ಞಾನಿಕ ಬ್ರೀಡಿಂಗ್ ಗೆ ಮೊರೆ ಹೋಗುವ ಸಾಧ್ಯತೆ ಇದೆ. ರಾಷ್ಟ್ರಮಟ್ಟದ ಪತ್ರಿಕೆಗಳು ಈ ವಿಚಾರವನ್ನು ಪ್ರಕಟಿಸಿವೆ. 

Latest Videos
Follow Us:
Download App:
  • android
  • ios