Asianet Suvarna News Asianet Suvarna News

ಪುನೀತ್ ಸ್ಥಾನ ಯಾರಿಗೂ ಕೊಡುವುದಿಲ್ಲ, ಈ ಚಿತ್ರಕ್ಕೆ ಬರೆಯವರನ್ನು ಕರೆತರುವುದಿಲ್ಲ: ನಿರ್ದೇಶಕ ಜೇಕಬ್ ವರ್ಗೀಸ್

ಪಿಆರ್‌ಕೆ ಪ್ರೊಡಕ್ಷನ್‌ನಲ್ಲಿ ತಯಾರಾಗಬೇಕಿದ್ದ ಸಿನಿಮಾ ಇದೀಗ ಕನಸಾಗಿ ಉಳಿದುಕೊಂಡಿದೆ. 'ಸವಾರಿ' ನಿರ್ದೇಶಕ ಜೇಕಬ್ ಮನದಾಳದ ಮಾತು....

Director Jacob Verghese says no one can replace actor Puneeth Rajkumar vcs
Author
Bangalore, First Published Nov 7, 2021, 3:32 PM IST
  • Facebook
  • Twitter
  • Whatsapp

'ಸವಾರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ಜೇಕಬ್ ವರ್ಗೀಸ್‌ 'ಪೃಥ್ವಿ' ಚಿತ್ರದ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಮನೆ ಮಾಡಿದರು. ಸುಮಾರು 12 ವರ್ಷಗಳ ನಂತರ ಮತ್ತೆ ಪುನೀತ್‌ ಜೊತೆ ಜೇಕಬ್ ಸಿನಿಮಾ ಮಾಡುವ ತಯಾರಿಯಲ್ಲಿದ್ದರು. 8 ತಿಂಗಳಿಂದ ಚಿತ್ರದ ಬಗ್ಗೆ ಮಾತುಕತೆ ನಡೆಯುತ್ತಿತ್ತು, ಸ್ವತಃ ಪುನೀತ್ ಅವರೇ ನಿರ್ಮಾಣ ಮಾಡುತ್ತಿರುವುದಕ್ಕೆ ಸಂಭ್ರಮದಲ್ಲಿದ್ದರು. ಆದರೀಗ ಪುನೀತ್ ಇಲ್ಲದೆ ನಿರ್ದೇಶಕರು ಮೌನಿಯಾಗಿದ್ದಾರೆ. 

'ಮೂರು ನಾಲ್ಕು ದಿನಗಳಿಂದ ನಾನು ಮೌನಿಯಾಗಿರುವೆ. ಒಪ್ಪಿಕೊಳ್ಳಲಾಗದ ಸತ್ಯವಿದು. ಈಗಲೂ ನೆನಪಿದೆ ಅಕ್ಟೋಬರ್ 29ರಂದು ಆಫೀಸ್‌ನಲ್ಲಿರುವಾಗ ಪುನೀತ್ ಅವರ ವಿಚಾರ ತಿಳಿಯಿತು. ತಕ್ಷಣವೇ ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿದೆ. ಅಲ್ಲಿ ಎಷ್ಟು ಜನರಿದ್ದರು ಅಂದ್ರೆ ಕಬನ್ ಪಾರ್ಕ್‌ ಬಳಿ ಕಾರು ನಿಲ್ಲಿಸಿ ಅಲ್ಲಿಂದ ಆಸ್ಪತ್ರೆಗೆ ನಡೆದುಕೊಂಡು ಹೋದೆ. ನನ್ನ ಜೀವನದಲ್ಲಿ ಇದೇ ಮೊದಲು ಇಷ್ಟು ಎಫೆಕ್ಟ್ ಆಗಿರುವುದು.  ನಾವು ಎಮ್‌ಜಿಆರ್ ಅಥವಾ ಅಣ್ಣಾದೊರೈ ಅವರ ವಿಡಿಯೋಗಳನ್ನು ನಾವು ನೋಡಿದ್ದೀವಿ ಆದನ್ನೇ ಈಗ ನಾವು ಪುನೀತ್ ಅವರ ವಿಚಾರದಲ್ಲಿ ನೋಡಿದ್ದೀವಿ' ಎಂದು ಜೇಕಬ್ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ನಿರ್ದೇಶಕ ಜೇಕಬ್ ವರ್ಗೀಸ್ ಜೊತೆ ಸಿನಿಮಾ ಮಾಡ್ತಿದ್ದಾರೆ ಪುನೀತ್ ರಾಜ್‌ಕುಮಾರ್!

'ಪುನೀತ್ ಅವರ ಬಗ್ಗೆ ಒಂದು ವಿಚಾರ ಹೇಳಲೇಬೇಕು. ಅವರು ಇದುವರೆಗೂ ಮಾಡಿಕೊಂಡು ಬಂದಿರುವ ಜನರ ಸೇವೆ ಹಾಗೂ ಚಾರಿಟಿ ಕೆಲಸಗಳು ಯಾರಿಗೂ ಗೊತ್ತಿಲ್ಲ ನೋಡಿ. ಯಾರೊಂದಿಗೂ ಈ ವಿಚಾರಗಳ ಬಗ್ಗೆ ಚರ್ಚೆ ಮಾಡಿಲ್ಲ ಅವರು ಸಿಂಪಲ್ ಆಗಿ ನಡೆಸಿಕೊಂಡು ಬಂದರು. ಪ್ರಚಾರ ಅಥವಾ ಮೀಡಿಯಾ ಅಟೆನ್ಶನ್ ಎಂದೂ ಕೇಳಲಿಲ್ಲ. ನಾವು 2011ರಲ್ಲಿ ತುಂಬಾ ಫಾರ್ಮಲ್ ರೀತಿಯಲ್ಲಿ ಭೇಟಿಯಾಗಿದ್ದು. ನನ್ನ ಮೊದಲ ಸಿನಿಮಾ ಸವಾರಿ ಹಿಟ್ ಆಗಿತ್ತು ಆದ ರಾಘವೇಂದ್ರ ರಾಜ್‌ಕುಮಾರ್ ಅವರು ಪುನೀತ್‌ಗೆ ಕಥೆ ಕೇಳುತ್ತಿದ್ದರು. ಆಗ ನಾನು ರಿಯಲ್ ಸ್ಟಾರ್ ಪುನೀತ್ ಅವರನ್ನು ಭೇಟಿ ಮಾಡಿದ್ದು' ಎಂದಿದ್ದಾರೆ.

Director Jacob Verghese says no one can replace actor Puneeth Rajkumar vcs

'ಪುನೀತ್ ಅವರು ತಮ್ಮ ತಂದೆ ಅವರ ಹಾದಿಯನ್ನು ಫಾಲೋ ಮಾಡುತ್ತಿದ್ದಾರೆ. 6 ಗಂಟೆಗೆ ಬಿಡುವು ಮಾಡಿಕೊಳ್ಳಿ ಬನ್ನಿ ಅಂದರೆ ಅವರು ಕರೆಕ್ಟ್ 6 ಗಂಟೆಗೆ ಅಲ್ಲಿ ಇರುತ್ತಿದ್ದರು. ನಾಣು ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲೂ ಅದನ್ನೇ ಹೇಳಿರುವೆ ಜೀವನದಲ್ಲಿ ಒಮ್ಮೆ ಆದರೂ ಪುನೀತ್ ಅವರ ಜೊತೆ ಕೆಲಸ ಮಾಡಬೇಕು ಎಂದು. ಪುನೀತ್ ಮಾತ್ರವಲ್ಲದೆ ಅವರ ಸಹೋದರರಿಗೂ ಒಳ್ಳೆಯ ಗುಣಗಳಿಗೆ ಅದಕ್ಕೆ ಕ್ರೆಡಿಟ್ ಅವರ ತಾಯಿ ಪಾರ್ವತಮ್ಮ ರಾಜ್‌ಕುಮಾರ್ ಅವರಿಗೆ ಸಲ್ಲಿಸಬೇಕು. ಗ್ರೇಟ್‌ ಐಕಾನ್, ನಿರ್ಮಾಣ ಸಂಸ್ಥೆ ಹಾಗೂ ಮೂವರು ಸ್ಟಾರ್ ಮಕ್ಕಳನ್ನು ವೃತ್ತಿ ಜೀವದಲ್ಲಿ ಸರಿ ಮಾರ್ಗಕ್ಕೆ ತಂದಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅವರು ನಿಜವಾದ ಐರನ್ ಲೇಡಿ ಅಂದ್ರೆ' ಎಂದು ಜೇಕಬ್ ಮಾತನಾಡಿದ್ದಾರೆ.

ಘಮಘಮ ಚಿತ್ರಾನ್ನ, ಟೆಂಪಲ್ ಸಾರು ಮಾಡುವುದು ಹೇಗೆ..? ಪುನೀತ್ ಹೇಳಿದ್ದಾರೆ ಕೇಳಿ..!

'ನಾವು ಕಳೆದು ಎಂಟು ತಿಂಗಳಿಂದ ಪುನೀತ್ ಅವರ ಸಂಪರ್ಕದಲ್ಲಿದ್ದೀವಿ.  ಚಿತ್ರದ ಬಹುತೇಕ ಮಾತುಕತೆ ನಡೆದಿತ್ತು 2022ರಿಂದ ಆರಂಭಿಸುವ ನಿರ್ಧಾರ ಮಾಡಲಾಗಿತ್ತು. ಅವರೇ ನಿರ್ಮಾಣ ಮಾಡುತ್ತಿರುವ ಕಾರಣ ತುಂಬಾನೇ ಸಂತೋಷದಿಂದ ಇದ್ದರು ಆದರೆ ಒಂದು ದಿನವೂ ಒಬ್ಬ ನಿರ್ಮಾಪಕನಾಗಿ ಪ್ರಶ್ನೆ ಮಾಡಿಲ್ಲ. ಆದರೆ ಸದಾ ಜೊತೆಗಿದ್ದು ಯಾವ ಸಪೋರ್ಟ್ ಬೇಕಿದ್ದರೂ ಕೊಡುವುದಾಗಿ ಹೇಳಿದ್ದರು. ಈಗ ನಾನು ಆ ಸಿನಿಮಾ ಮಾಡುವುದಿಲ್ಲ, ಪುನೀತ್ ಮಾಡಬೇಕಿದ್ದ ಪಾತ್ರ ಇದು ಈ ಪಾತ್ರವನ್ನು ಯಾರಿಗೂ ಕೊಡುವುದಿಲ್ಲ ಯಾರನ್ನೂ ಆ ಸ್ಥಾನಕ್ಕೆ ಕರೆಯುವುದಿಲ್ಲ. ಅವರು ನನ್ನೊಟ್ಟಿಕೆ ಕಳೆದ ಕ್ಷಣ ಸದಾ ನನ್ನ ಜೊತೆಗಿರುತ್ತದೆ' ಎಂದು ಹೇಳಿದ್ದಾರೆ.

Follow Us:
Download App:
  • android
  • ios