Asianet Suvarna News Asianet Suvarna News

'ಲೋಕದ ಡೊಂಕ ನೀವೇಕೆ ತಿದ್ದುವಿರಿ..': ದರ್ಶನ್‌ ಕೇಸ್‌ ಬಗ್ಗೆ ಮಾತನಾಡುವುದು ಸರಿಯಲ್ಲ: ಇಂದ್ರಜಿತ್‌ ಲಂಕೇಶ್‌

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ವಿರುದ್ಧ ಪ್ರಕರಣ ದಾಖಲಾಗಿದೆ. ಬಂಧನವೂ ಆಗಿದ್ದು, ತನಿಖೆ ನಡೆಯುತ್ತಿದೆ. ಇಂತಹ ಸಮಯದಲ್ಲಿ ಪ್ರಕರಣ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ​ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ನಟ ದರ್ಶನ್‌ ವಿರುದ್ಧ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದರು. 

Director Indrajit Lankesh Reaction on Actor Darshan Arrest gvd
Author
First Published Jun 13, 2024, 7:22 AM IST

ಶಿವಮೊಗ್ಗ (ಜೂ.13): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ವಿರುದ್ಧ ಪ್ರಕರಣ ದಾಖಲಾಗಿದೆ. ಬಂಧನವೂ ಆಗಿದ್ದು, ತನಿಖೆ ನಡೆಯುತ್ತಿದೆ. ಇಂತಹ ಸಮಯದಲ್ಲಿ ಪ್ರಕರಣ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ​ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ನಟ ದರ್ಶನ್‌ ವಿರುದ್ಧ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಕುರಿತು ಮಾಧ್ಯಮಗಳಲ್ಲಿ ವರದಿ ನೋಡಿದ್ದೇನೆ ಎಂದ ಅವರು, 'ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ. ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೆಯವರ ದುಖಃಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ'ಎಂದು ಬಸವಣ್ಣನವರ ವಚನ ಹೇಳುವ ಮೂಲಕ ಮಾರ್ಮಿಕವಾಗಿ ಉತ್ತರಿಸಿದರು. ಬಳಿಕ, ಈಗ ದರ್ಶನ್​ ವಿಚಾರ ಬೇಡ. ನಮ್ಮ ಅಕ್ಕ ಗೌರಿ ಬಗ್ಗೆ ಮಾತನಾಡೋಣ. ಗೌರಿ ಸಿನಿಮಾ, ಲಂಕೇಶ್​, ಕುವೆಂಪು ಬಗ್ಗೆ ಮಾತನಾಡೋಣ ಎಂದು ಹೇಳಿದರು.

ಜುಲೈನಲ್ಲಿ ತೆರೆಗೆ ಬರಲು ಸಿದ್ಧವಾದ ಗೌರಿ: ಇತ್ತೀಚೆಗಷ್ಟೇ ಟೀಸರ್‌ ಹಾಗೂ ಹಾಡುಗಳಿಂದ ಕ್ರೇಜ್‌ ಹುಟ್ಟಿಸಿರುವ ಇಂದ್ರಜಿತ್‌ ಲಂಕೇಶ್‌ ಅವರ ನಿರ್ದೇಶನ-ನಿರ್ಮಾಣದ ಬಹು ನಿರೀಕ್ಷಿತ ಚಿತ್ರ ಜುಲೈ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದರು. ಈ ಚಿತ್ರಕ್ಕೆ ನನ್ನ ಅಕ್ಕನ ನೆನಪಿಗಾಗಿ ಗೌರಿ ಎಂಬ ಶೀರ್ಷಿಕೆ ಇಡಲಾಗಿದೆ. ಆದರೆ, ಇದು ಗೌರಿ ಜೀವನಾಧಾರಿತ ಚಿತ್ರವಲ್ಲ. ಅವಳ ಆತ್ಮಕತೆಯೂ ಅಲ್ಲ, ಗೌರಿ ಎಂಬುವುದು ಒಂದು ಪಾತ್ರ ಮಾತ್ರ. ಇದು ಕಮರ್ಷಿಯಲ್‌ ಸಿನಿಮಾವಾದರೂ ಉತ್ತಮ ಸಂದೇಶವನ್ನು ನೀಡಲಾಗಿದೆ. 

ಈ ಚಿತ್ರಕ್ಕೆ ನನ್ನ ಸಿನಿಮಾ ಜೀವನದ ಅನುಭವವನ್ನು ಧಾರೆ ಎರೆದಿದ್ದೇನೆ. ಕಷ್ಟಪಟ್ಟು, ಇಷ್ಟಪಟ್ಟು ಸಿನಿಮಾ ಮಾಡಿದ್ದೇನೆ. ಈ ಚಿತ್ರದಲ್ಲಿ ಹಿರಿಯ ನಟರೂ ಇದ್ದಾರೆ. ಜೊತೆಗೆ ಬಹುತೇಕ ಯುವ ಪ್ರತಿಭೆ ಗಳಿಂದಲೇ ಈ ಚಿತ್ರ ಮೂಡಿ ಬಂದಿದೆ. ನಾಯಕನ ಪಾತ್ರದಲ್ಲಿ ನನ್ನ ಮಗ ಸಮರ್ಜಿತ್ ಲಂಕೇಶ್ ಹಾಗೂ ನಾಯಕಿಯ ಪಾತ್ರದಲ್ಲಿ ಕಿರುತೆರೆಯ ನಟಿ ಸಾನ್ಯ ಅಯ್ಯರ್ ಅಭಿನಯಿಸಿದ್ದಾರೆ ಎಂದು ಚಿತ್ರದ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಬುಧವಾರ ಪ್ರೆಸ್‌ಟ್ರಸ್ಟ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇದು ನೈಜ ಘಟನೆಯನ್ನು ಆಧಾರಿಸಿದೆ. ಅಕ್ಕನ ನೆನಪಿನಲ್ಲಿ ಈ ಹೆಸರು ಇಟ್ಟಿದ್ದೇನೆ. ಹಾಗೆ ನೋಡಿದರೆ, ಅಕ್ಕ ಗೌರಿ ಕುರಿತ ಚಲನಚಿತ್ರ ಮಾಡುವುದು ತುಂಬ ಕಷ್ಟ ಎಂದು ಸ್ಪಷ್ಟನೆ ನೀಡಿದರು.

ಹೊಡೆದು ಕೊಂದ ದರ್ಶನ್‌ ಗ್ಯಾಂಗ್‌ನಲ್ಲಿ ಇನ್ನೂ ನಾಲ್ವರು ನಾಪತ್ತೆ: ತೀವ್ರ ತಲಾಶ್‌

ಶಿವಮೊಗ್ಗ ಜಿಲ್ಲೆ ನಮ್ಮ ತವರೂರು. ನಮ್ಮ ಮೂಲ ಬೇರುಗಳು ಇಲ್ಲಿವೆ. ಈ ಜಿಲ್ಲೆಯ ಜನರ ಆಶೀರ್ವಾದ ನನ್ನ ಪುತ್ರ ಮೇಲೆ ಬೇಕಿದೆ. ಅದೇ ಕಾರಣಕ್ಕೆ ಗೌರಿ ಚಿತ್ರದ ಪ್ರಚಾರ ಕಾರ್ಯವನ್ನು ಮೊಟ್ಟ ಮೊದಕ ಬಾರಿಗೆ ಶಿವಮೊಗ್ಗದಿಂದಲೇ ಆರಂಭಿಸುತ್ತಿದ್ದೇವೆ. ಲಂಕೇಶ್ ಅವರಂತಹ ಶ್ರೇಷ್ಟ ಪರ್ತಕರ್ತ, ಲೇಖಕ, ಚಿತ್ರ ನಿರ್ದೇಶಕನನ್ನು ಕೊಟ್ಟ ನೆಲವಿದು. ಅವರ ಪುತ್ರನಾಗಿ ನಾನು ತಂದೆಯವರ ಆಶೀರ್ವಾದ, ಮಾರ್ಗದರ್ಶನದ ಮೂಲಕವೇ ಪತ್ರಕರ್ತನಾಗಿ, ಚಿತ್ರ ನಿರ್ದೇಶಕ ನಾಗಿ, ನಿರ್ಮಾಪಕ ನಾಗಿ ಗುರುತಿಸಿಕೊಂಡಿದ್ದು ನಿಮಗೆಲ್ಲ ಗೊತ್ತಿದೆ. ಅಂತೆಯೇ ನನ್ನ ಪುತ್ರ ಸಮರ್ಜಿತ್ ಕೂಡ ಚಿತ್ರ ರಂಗಕ್ಕೆ ಪ್ರವೇಶಿಸುತ್ತಿದ್ದಾರೆ ಎಂದರು.

Latest Videos
Follow Us:
Download App:
  • android
  • ios