ಜೀ ಕನ್ನಡದ 'ಶ್ರಾವಣಿ ಸುಬ್ರಮಣ್ಯ' ಕಾರ್ಯಕ್ರಮಕ್ಕೆ ನಟಿ ಲಲಿತಾಂಜಲಿ ಮತ್ತು ಸೊಸೆ ಚಂದನಾ ಆಗಮಿಸಿದ್ದರು. ತಾಯಿ-ಮಗಳಂತಿರುವ ಇವರು ಒಂದೇ ರೀತಿಯ ಉಡುಗೆ ತೊಟ್ಟಿದ್ದರು. ೩೦ ವರ್ಷಗಳ ಸಿನಿಜೀವನದ ಲಲಿತಾಂಜಲಿ, ಚಂದನಾಗೆ ಸಿನಿಮಾ ಕುಟುಂಬದ ಬೆಂಬಲ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. 故 ಉದಯ್‌ರನ್ನು ಸ್ಮರಿಸಿ ಲಲಿತಾಂಜಲಿ ಭಾವುಕರಾದರು.
ಜೀ ಕನ್ನಡ ವಾಹಿನಿಯಲ್ಲಿ 'ಶ್ರಾವಣಿ ಸುಬ್ರಮಣ್ಯ ಮದುವೆ ಸಂಭ್ರಮ' ಕಾರ್ಯಕ್ರಮದ ಅದ್ಧೂರಿಯಾಗಿ ನಡೆಯುತ್ತಿದೆ. ಈ ಸಂಭ್ರಮಕ್ಕೆ ವಿಶೇಷ ಅತಿಥಿಗಳಾಗಿ ಲಕ್ಷ್ಮಿ ನಿವಾಸ ಚಂದನಾ ಮತ್ತು ಅವರ ಅತ್ತೆ ನಟಿ ಲಲಿತಾಂಜಲಿ ಆಗಮಿಸಿದ್ದರು. ಇಬ್ಬರು ಒಂದೇ ರೀತಿ ಸೀರೆ, ಒಂದೇ ರೀತಿ ಮೇಕಪ್ ಮಾಡಿಕೊಂಡಿದ್ದ ಕಾರಣ ಇವರು ಅಕ್ಕ ತಂಗಿ ಎಂದು ಆಂಗರ್ ಅಕುಲ್ ಬಾಲಾಜಿ ಹೇಳಿದ್ದರೆ, 'ಅತ್ತೆ-ಸೊಸೆ ಮತ್ತು ಫ್ರೆಂಡ್ಸ್‌ಗಿಂತ ನಾವು ತಾಯಿ ಮಗಳು' ಎಂದು ಲಲಿತಾಂಜಲಿ ಹೇಳುತ್ತಾರೆ.
90ರ ದಶಕದಲ್ಲಿ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿದ್ದ ಲಲಿತಾಂಜಲಿ 30 ವರ್ಷಗಳ ಜರ್ನಿಯನ್ನು ಪೂರೈಸಿದ್ದಾರೆ. 'ನಾನು ದೊಡ್ಡ ಪರದೆ ಮೂಲಕವೇ ಲಾಂಚ್ ಆಗಿದ್ದು. ಮೊದಲ ಸಿನಿಮಾ ರಾಘವೇಂದ್ರ ರಾಜ್‌ಕುಮಾರ್‌ರವರ ಜೊತೆ ಚಿರಂಜೀವಿ ಸುಧಾಕರ್ ಅಂತ. ಅದಾದ ಮೇಲೆ ನಂಜುಂಡಿ ಕಲ್ಯಾಣ ಸಿನಿಮಾ' ಎಂದು ಲಲಿತಾಂಜಲಿ ಮಾತನಾಡಿದ್ದಾರೆ.
ವರಪೂಜೆಗೆ ಅಪರೂಪದ ಕಾಂಬಿನೇಷನ್ ಸೀರೆಯಲ್ಲಿ 'ಲಕ್ಷ್ಮಿ ನಿವಾಸ' ಚಂದನಾ; ಮೇಕಪ್ ಫೋಟೋ ವೈರಲ್
'ಕಲಾವಿದರ ಕುಟುಂಬಕ್ಕೆ ಮದುವೆ ಆಗುತ್ತೀನಿ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಮನೆಯಲ್ಲಿ ಹುಡುಕಲು ಶುರು ಮಾಡಿದಾಗ ಅದೇ ರೀತಿ ಫ್ಯಾಮಿಲಿ ಇಲ್ಲವಾದರೂ ಸಪೋರ್ಟ್ ಮಾಡುವಂತ ಫ್ಯಾಮಿಲಿಗೆ ಹೋಗಬೇಕು ಅನ್ನೋದು ತಲೆಯಲ್ಲಿ ಇತ್ತು. ಆದರೆ ಈ ಫ್ಯಾಮಿಲಿ ಬೋನಸ್ ರೀತಿ ಸಿಕ್ಕಿಬಿಟ್ಟಿದೆ. ಅತ್ತೆಗೆ ಇಂಡಸ್ಟ್ರಿ ಬಗ್ಗೆ ಚೆನ್ನಾಗಿ ಗೊತ್ತಿರುವ ಕಾರಣ ನನಗೆ ಫುಲ್ ಸಪೋರ್ಟ್ ಇದೆ. ನಾನು ಮನೆಗೆ ಲೇಟ್ ಆಗಿ ಬರುತ್ತೀನಿ, ಶೂಟಿಂಗ್ ಇದ್ದಕ್ಕಿದ್ದಂತೆ ಕ್ಯಾನ್ಸಲ್ ಆಯ್ತು ಅಥವಾ ಶೂಟಿಂಗ್ ಶೆಡ್ಯೂಲ್ ಆಯ್ತು ಅಂತ ಅರ್ಥ ಮಾಡಿಸುವ ಅಗತ್ಯ ಬರುವುದಿಲ್ಲ. ಅಯ್ಯೋ ಸಿನಿಮಾ ಶೂಟಿಂಗ್ ಹೀಗೇ ಕಣೋ ಅಂತ ನನ್ನ ಅತ್ತೆ ನನ್ನ ಗಂಡನಿಗೆ ಹೇಳುತ್ತಾರೆ' ಎಂದು ಅತ್ತೆ ಬಗ್ಗೆ ಚಂದನಾ ಹೆಮ್ಮೆಯಿಂದ ಮಾತನಾಡಿದ್ದಾರೆ.
ಅದ್ಧೂರಿಯಾಗಿ ನಡೆಯಿತು ಚಂದನಾ- ಪ್ರತ್ಯಕ್ಷ್ ರಿಸೆಪ್ಶನ್ ; ಲೆಹೆಂಗಾದಲ್ಲಿ ಮಿಂಚಿದ ಚಿನ್ನು ಮರಿ
'ಉದಯ ಅವರು ಇನ್ನಿಲ್ಲ. ಅವರ ಬಗ್ಗೆ ಒಂದು ಪದದಲ್ಲಿ ಮಾತನಾಡಲು ಆಗುವುದಿಲ್ಲ. ಅವರೆಂದರೆ ನನಗೆ ತುಂಬಾ ಇಷ್ಟ. ತುಂಬಾ ಒಳ್ಳೆಯ ಮನಸ್ಸು ಇರುವ ವ್ಯಕ್ತಿ. ತುಂಬಾ ಪ್ರೀತಿ ಮಾಡುವಂತ ವ್ಯಕ್ತಿತ್ವ ಅವರದ್ದು. 7 ಜನ್ಮ ಬಂದರೂ ನನಗೆ ಅಂತ ಗಂಡ ಸಿಗುವುದಿಲ್ಲ. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೀನಿ. ನನ್ನ ಮುಂದಿನ ಜನ್ಮದಲ್ಲೂ ಉದಯ್ ಗಂಡನಾಗಿ ಬರಬೇಕು' ಎಂದು ಲಲಿತಾಂಜಲಿ ಭಾವುಕರಾಗಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಲಕ್ಷ್ಮಿ ನಿವಾಸ' ಚಂದನಾ; ಮದುವೆ ಫೋಟೋ ವೈರಲ್
