ಲವ್ ಮಾಕ್ಟೇಲ್ 3 ದಿಲೀಪ್ ನಟಿಸಿದ ಕೊನೆಯ ಸಿನಿಮಾ. ಪ್ರೀತಿಸಿ ಕೈ ಹಿಡಿದ ಪತ್ನಿ ಶ್ರೀ ವಿದ್ಯಾ , ಇಬ್ಬರೂ ಮುದ್ದಿನ ಮಕ್ಕಳು ಜೊತೆಗೆ ತಮ್ಮ ಕಿರುತೆರೆಯ ದೊಡ್ಡ ಕುಟುಂಬವನ್ನು ಅನಾಥವಾಗಿ ಬಿಟ್ಟು ದಿಲೀಪ್ ಕಣ್ಮರೆ ಆಗಿದ್ದಾರೆ. ರಾಮನಗರ ಬಳಿಯ ಅವರದ್ದೇ ತೋಟದ ಮನೆಯಲ್ಲಿ ದಿಲೀಪ್ ಅಂತ್ಯ ಸಂಸ್ಕಾರ ನೆರವೇರಿದೆ.
ಕನ್ನಡ ಕಿರುತೆರೆಯ ಹಿಟ್ಲರ್ ದಿಲೀಪ್ ರಾಜ್ ವಿಧಿವಶ; ಹೃದಯಾಘಾತಕ್ಕೆ ಬಲಿಯಾದ ಮತ್ತೂಬ್ಬ ಕಲಾವಿದ..!

ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿದ್ದ ನಟ ನಿರ್ಮಾಪಕ ದಿಲೀಪ್ ರಾಜ್ (Dileep Raj) ಇನ್ನೂ ನೆನಪು ಮಾತ್ರ. ಕಿರುತೆರೆಯಲ್ಲಿ ಮಿಸ್ಟರ್ ಪರ್ಪೆಕ್ಟ್ ಅಂತಾನೇ ಮರೆಸಿಕೊಂಡಿದ್ದ ದಿಲೀಪ್ ರಾಜ್ ರನ್ನ ಚಿಕ್ಕವಯಸ್ಸಿನಲ್ಲೇ ವಿಧಿ ಹೃದಯಾಘಾತ ರೂಪದಲ್ಲಿ ಕರೆದೊಯ್ದಿದೆ. ದಿಲೀಪ್ ರಾಜ್ ಅಕಾಲಿಕ ನಿಧಾನಕ್ಕೆ ಚಿತ್ರರಂಗ ಕಿರುತೆರೆ ಕಂಬನಿ ಮಿಡಿದಿದೆ.
ಯೆಸ್ ಸ್ಯಾಂಡಲ್ ವುಡ್ ನ ಚಾಕಲೇಟ್ ಹೀರೋ, ಸಿರಿಯಲ್ ದುನಿಯಾದ ಹಿಟ್ಲರ್, ತನ್ನ ವೃತ್ತಿಪರತೆ ಮತ್ತು ಫರ್ಫೆಕ್ಶನ್ ನಿಂದ ಕಿರುತೆರೆಯ ಮಿಸ್ಟರ್ ಪರ್ಫೆಕ್ಟ್ ಅಂತಾನೇ ಕರೆಸಿಕೊಂಡಿದ್ದ ನಟ. ನಿರ್ಮಾಪಕ ದಿಲೀಪ್ ರಾಜ್ ಇನ್ನಿಲ್ಲ. ಹಿಂದಿನ ದಿನದ ವರೆಗೂ ಸೀರಿಯಲ್ ಸೆಟ್ ನಲ್ಲಿದ್ದ 47 ರ ಹರೆಯದ ದಿಲೀಪ್ ರಾಜ್ ಹೃದಯಾಘಾತದಿಂದ ಏಕಾಏಕಿ ನಿಧನರಾಗಿದ್ದು ಚಿತ್ರರಂಗ ಕಿರುತೆರೆಗೆ ದೊಡ್ಡ ಶಾಕ್ ತಂದಿದೆ.
ನಟರಂಗ ರಂಗಭೂಮಿ ತಂಡದಲ್ಲಿ ನಟನೆಯ ಪಟ್ಟುಗಳನ್ನು ಕಲಿತಿದ್ದ ದಿಲೀಪ್ ರಾಜ್ , ಜನನಿ, ಅರ್ಧಸತ್ಯ ಸೀರಿಯಲ್ ಗಳ ಮೂಲಕ ಕಿರುತೆರೆ ಪಯಣ ಆರಂಭಿಸಿದ್ರು. 2005 ರಲ್ಲಿ ಬಂದ ಬಾಯ್ ಪ್ರೆಂಡ್ ಸಿನಿಮಾ ಮೂಲಕ ನಾಯಕ ನಟ ಆಗಿ ಬಿಗ್ ಸ್ಕ್ರೀನ್ ಗೂ ಎಂಟ್ರಿ ಕೊಟ್ಟಿದ್ದರು.
ದಿಲೀಪ್ ರಾಜ್ ಪ್ರತಿಭೆಗೆ ತಕ್ಕಂಥ ಪಾತ್ರಗಳು ಸಿನಿರಂಗದಲ್ಲಿ ಸಿಗಲಿಲ್ಲ. ಆದರೇನಂತೆ ಸಿಕ್ಕ ಪಾತ್ರಗಳನ್ನ ದಿಲೀಪ್ ಅಚ್ಚು ಕಟ್ಟಾಗಿ ಮಾಡ್ತಾ ಇದ್ರು.ಪೊಲೀಸ್ ಕ್ವಾಟ್ರಸ್, ಟೋನಿ, ಯು ಟರ್ನ್ ಅಂಬಿ ನಿಂಗ್ ವಯಸ್ಸಾಯ್ತೋ ಸೇರಿದಂತೆ 20 ಕ್ಕೂ ಅಧಿಕ ಚಿತ್ರಗಳಲ್ಲಿ ದಿಲೀಪ್ ತಮ್ಮ ನಟನೆ ಯ ಮೂಲಕ ಗಮನ ಸೆಳೆದಿದ್ದರು.
ಸಾವಿನಲ್ಲೂ ಪುನೀತ್ ಹಿಂಬಾಲಿಸಿದ ಮಿಲನ ನಟ..!
ಹೌದು ದಿಲೀಪ್ ರಾಜ್ ಅಂದ್ರೆ ನೆನಪಿಗೆ ಬರೋದು ಮಿಲನ ಚಿತ್ರದಲ್ಲಿ ಅವರು ಮಾಡಿದ್ದ ನೆಗೆಟಿವ್ ಪಾತ್ರ. ಪುನೀತ್ ಜೊತೆಗೆ ಅಧ್ಭೂತವಾಗಿ ನಟಿಸಿದ ದಿಲೀಪ್ ಸಾವಿನಲ್ಲೂ ಅಪ್ಪುವನ್ನ ಹಿಂಬಾಲಿಸಿದ್ದಾರೆ. ಪುನೀತ್ ರೀತಿಯೇ ಹೃದಯಾಘಾತದಿಂದ 47 ನೆಯ ವಯಸ್ಸಲ್ಲೇ ನಿಧನರಾಗಿದ್ದಾರೆ.
ರಥಸಪ್ತಮಿ ಸೀರಿಯಲ್ ಮೂಲಕ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದ ದಿಲೀಪ್, ಕೆಲ ರಿಯಾಲಿಟಿ ಶೋ ಗಳ ನಿರೂಪಕ ಆಗಿ ಕೂಡ ಕೆಲಸ ಮಾಡಿದ್ರು. ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಲೀಡ್ ರೋಲ್ ಮಾಡುವುದರ ಜೊತೆಗೆ ನಿರ್ಮಾಣ ಸಂಸ್ಥೆ ಕೂಡ ಆರಂಭಿಸಿದ್ದರು. ಸದ್ಯ 'ಕೃಷ್ಣ ರುಕ್ಕು' ಸೇರಿದಂತೆ ಎರಡು ಧಾರಾವಾಹಿಗಳ ನಿರ್ಮಾಣ ಮಾಡ್ತಾ ಇದ್ದ ದಿಲೀಪ್ ಅನೇಕ ಕಿರುತೆರೆ ಕಲಾವಿದರು, ತಂತ್ರಜ್ಞರ ಪಾಲಿಗೆ ಅನ್ನದಾತ ಆಗಿದ್ದರು.
ಲವ್ ಮಾಕ್ಟೇಲ್ 3 ದಿಲೀಪ್ ನಟಿಸಿದ ಕೊನೆಯ ಸಿನಿಮಾ
ಲವ್ ಮಾಕ್ಟೇಲ್ 3 ದಿಲೀಪ್ ನಟಿಸಿದ ಕೊನೆಯ ಸಿನಿಮಾ. ಪ್ರೀತಿಸಿ ಕೈ ಹಿಡಿದ ಪತ್ನಿ ಶ್ರೀ ವಿದ್ಯಾ , ಇಬ್ಬರೂ ಮುದ್ದಿನ ಮಕ್ಕಳು ಜೊತೆಗೆ ತಮ್ಮ ಕಿರುತೆರೆಯ ದೊಡ್ಡ ಕುಟುಂಬವನ್ನು ಅನಾಥವಾಗಿ ಬಿಟ್ಟು ದಿಲೀಪ್ ಕಣ್ಮರೆ ಆಗಿದ್ದಾರೆ. ರಾಮನಗರ ಬಳಿಯ ಅವರದ್ದೇ ತೋಟದ ಮನೆಯಲ್ಲಿ ದಿಲೀಪ್ ಅಂತ್ಯ ಸಂಸ್ಕಾರ ನೆರವೇರಿದೆ. ಚಿರಂಜೀವಿ ಸರ್ಜಾ, ಪುನೀತ್ ರಾಜ್ ಕುಮಾರ್ ಬಳಿಕ ಮತ್ತೊಬ್ಬ ಪ್ರತಿಭಾನ್ವಿತ ನಟ ಚಿಕ್ಕ ವಯಸ್ಸಲ್ಲಿ ಹೃದಯಾಘಾತದಿಂದ ನಿಧನ ಆಗಿರೋದು ಕನ್ನಡ ಕಲಾಲೋಕಕ್ಕೆ ಆಘಾತ ತಂದಿದೆ.
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ..


