'ದಿಯಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಟ ಪೃಥ್ವಿ ಅಂಬರ್‌ ಗಣೇಶ ಹಬ್ಬದ ಪ್ರಯುಕ್ತ ತಮ್ಮ ಹೊಸ ಸಿನಿಮಾ ಪೋಸ್ಟರ್‌ ಲುಕ್ ರಿವೀಲ್ ಮಾಡಿದ್ದಾರೆ. ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ನಟ ಡಾಲಿ ಧನಂಜಯ್ ಸಾಥ್ ನೀಡಿದ್ದಾರೆ.

'ದಿಯಾ' ಸೂಪ್‌ ಹೃದಯ ಕದ್ದ ಪೃಥ್ವಿ ಅಂಬಾರ್ 'ಜೊತೆ ಜೊತೆಯಲಿ'ಯ ನೀಲ್!

'ಲೈಫ್‌ ಈಸ್‌ ಫುಲ್ ಆಫ್‌ ಸರ್ಪ್ರೈಸ್‌ ಆ್ಯಂಡ್ ಮಿರಾಕಲ್ಸ್.  ನೀವೆಲ್ಲರೂ ಕಾಯುತ್ತಿದ್ದ ಸರ್ಪ್ರೈಸ್‌ ಇಲ್ಲಿದೆ. ದಿಯಾ ಚಿತ್ರದ ನಟ ಪೃಥ್ವಿ ಅವರ ಮುಂದಿನ ಸಿನಿಮಾ ಪೋಸ್ಟರ್‌ ಲುಕ್ ರಿಲೀಸ್‌ ಮಾಡುವುದಕ್ಕೆ ತುಂಬಾನೇ ಸಂತೋಷವಾಗುತ್ತಿದೆ,'  ಎಂದು ಧನಂಜಯ್ ಬರೆದುಕೊಂಡಿದ್ದಾರೆ.

 

'ದಿಯಾ' ಚಿತ್ರದಲ್ಲಿ ಅಭಿನಯಿಸಿದ ನಂತರ ಪೃಥ್ವಿ ನಂತರ ಯಾವ ಸಿನಿಮಾದಲ್ಲೂ ಕಾಣಿಸಿಕೊಳ್ಳಲ್ಲಿಲ್ಲ. ಅದಲ್ಲದೆ ಕಿರುತೆರೆ ಜನಪ್ರಿಯ 'ಜೊತೆ ಜೊತೆಯಲಿ' ಧಾರಾವಾಹಿಯಿಂದ ಹೊರ ಬಂದಿದ್ದರೂ. ಸರ್ ನಿಮ್ಮ ಮುಂದಿನ ಸಿನಿಮಾ ಬಗ್ಗೆ ಅಪ್ಡೇಟ್ ಕೊಡಿ ಎಂದು ಡಿಮ್ಯಾಂಡ್ ಮಾಡುತ್ತಿದ್ದ ಅಭಿಮಾನಿಗಳಿಗೆ ಈಗ ಸರ್ಪ್ರೈಸ್‌ ರಿವೀಲ್ ಮಾಡಿದ್ದಾರೆ.

ಏಕಾಂತದಲ್ಲಿ ರೆಟ್ರೋ ಸಾಂಗ್ ಕೇಳುವ ಖುಷಿ ಇನ್‌ಸ್ಟಾಗ್ರಾಂನಲ್ಲಿ ಎಷ್ಟು ಆ್ಯಕ್ಟೀವ್ ನೋಡಿ!

ಕಾಲಿ ರಸ್ತೆಯಲ್ಲಿ ಸ್ಕೂಟರ್‌ ಓಡಿಸುತ್ತಾ ಸಾಗುತ್ತಿರುವ ಪೃಥ್ವಿ ಪೋಸ್ಟರ್‌ ನೆಟ್ಟಿಗರ ಮೆಚ್ಚುಗೆ ಪಡೆದುಕೊಂಡಿದೆ. 'ದೇವಕಿ' ಸಿನಿಮಾ ಖ್ಯಾತಿಯ ಲೋಹಿತ್ ಅವರ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಅರುಣ್‌ ಕುಮಾರ್ ಮತ್ತು ಸಾಬು ಅಲೋಶಿಯಸ್‌ ಜೊತೆಯಾಗಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ ಹಾಗೂ ಕಿಶೋರ್‌ ನರಸಿಂಹಯ್ಯ ನಿರ್ಮಾಣ ಮಾಡುತ್ತಿದ್ದಾರೆ.

 

 
 
 
 
 
 
 
 
 
 
 
 
 

Nimma Ashirvadha namagirali #lifeisbeautiful #pruthviambaar

A post shared by Pruthvi Ambaar (@pruthvi_ambaar_official) on Aug 23, 2020 at 10:42pm PDT

'ಎಮೋಷನ್ಸ್ ಮತ್ತು ರಿಲೇಷನ್‌ ಶಿಪ್‌ ಕಥೆಯುಳ್ಳು ಸಿನಿಮಾ ಇದು. ಬೇರೆ ಭಾಷೆಯಲ್ಲಿ ಈಗಾಗಲೆ ಈ ಟೈಟಲ್‌ ಬಳಸಲಾಗಿದೆ. ಆದರೆ ಇದು ರಿಮೇಕ್‌ ಸಿನಿಮಾ ಅಲ್ಲ,' ಎಂದು ಲೋಹಿತ್ ಹೇಳಿದ್ದಾರೆ.  ಸ್ಕ್ರಿಪ್ಟ್ ಕೆಲಸ ಮುಗಿದಿದ್ದು, ಸೆಪ್ಟೆಂಬರ್‌ನಲ್ಲಿ  ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ.

ಲೈವ್ಲಿ ಹುಡುಗನ ಪಾತ್ರಕ್ಕೆ ದಿಯಾ ಚಿತ್ರದಲ್ಲಿ ಜೀವ ತುಂಬಿದ ನಟನ ಅಭಿನಯ ಹಲವರನ್ನು ಆಕರ್ಷಿಸಿತ್ತು. ಅದರಲ್ಲಿಯೂ ಈ ಚಿತ್ರ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಗಳಿಸಿದ ಜನಮನ್ನಣೆ ಅಷ್ಟಿಷ್ಟಲ್ಲ. 

ಅಲ್ಲದೇ ಪುಷ್ಕರ ಮಲ್ಲಿಕಾರ್ಜುನಯ್ಯ ಅವರ ಜೊತೆಗೂ ಚಿತ್ರ ಮಾಡಲು ಸಿದ್ಧರಾಗಿರುವ ಪೃಥ್ವಿ ಶುಗರ್‌ಲೆಸ್ ಎಂಬ ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ. ಕೆ.ಎಂ.ಶಶಿಧರ ನಿರ್ದೇಶನದ ಈ ಚಿತ್ರದ ಕಥೆ ಸಾಮಾನ್ಯರಿಗೆ ಹತ್ತಿರ ಆಗಿರುವ ಚಿತ್ರಕಥೆಯನ್ನು ಹೊಂದಿದೆ ಎನ್ನಲಾಗುತ್ತಿದೆ. ಶೀಘ್ರದಲ್ಲಿಯೇ ಈ ಚಿತ್ರದ ಚಿತ್ರೀಕರಣವೂ ಆರಂಭವಾಗುವ ನಿರೀಕ್ಷೆಯಿದ್ದು, ಪೃಥ್ವಿ ಎಂಬ ಸಿಂಪಲ್ ನಟ ಚಿತ್ರರಂಗದಲ್ಲಿ ಸಾಕಷ್ಟು ಭರವಸೆ ಮೂಡಿಸುವ ನಟನಾಗಿ ಹೊರ ಹೊಮ್ಮುತ್ತಿರುವುದು ಮಾತ್ರ ಸುಳ್ಳಲ್ಲ.