ವರ್ಕೌಟ್‌, ಸಿನಿಮಾ ತಯಾರಿ

ಲಾಕ್‌ಡೌನ್‌ ದಿನಗಳಲ್ಲಿ ನನ್ನ ದಿನಚರಿಯಲ್ಲಿ ಹೆಚ್ಚೇನು ವ್ಯತ್ಯಾಸ ಆಗಿಲ್ಲ. ಮಾಮೂಲು ಮನೆ ಕೆಲಸ ಇರುತ್ತೆ. ಅದರ ಜತೆಗೆ ವರ್ಕೌಟ್‌ ನಡೀತಿದೆ. ಹಾಗೆಯೇ ಮುಂದಿನ ಸಿನಿಮಾಕ್ಕೂ ರೆಡಿ ಆಗುತ್ತಿದ್ದೇನೆ. ಅದು ಬಿಟ್ಟರೆ ಓದು, ಸಿನಿಮಾ ನೋಡುವುದು ಇದ್ದೇ ಇದೆ.

ಇನ್‌ಸ್ಟಾಗ್ರಾಂ ಬಳಕೆ ಹೆಚ್ಚು

ನಾವು ಅಪ್‌ಡೇಟ್‌ ಆಗೋದಕ್ಕೆ ಆ್ಯಪ್‌ ಬಳಕೆ ಅನಿವಾರ್ಯ. ಟ್ವಿಟ್ಟರ್‌ಗೆ ನಾನಿನ್ನೂ ಎಂಟ್ರಿ ಆಗಿಲ್ಲ. ಇನ್‌ಸ್ಟಾಗ್ರಾಮ್‌ ಬಳಕೆಯೇ ಹೆಚ್ಚು. ಹಾಗೆಯೇ ವಾಟ್ಸಾಪ್‌ ಕೂಡ ಅತೀ ಹೆಚ್ಚು ಬಳಕೆ ಮಾಡುತ್ತೇನೆ. ಇನ್ನು ಇನ್‌ಸ್ಟಾಗ್ರಾಮ್‌ ಹೆಚ್ಚು ಬಳಕೆ ಆಗುವುದು ಫೋಟೋಸ್‌ ಅಪ್‌ಡೇಟ್‌ ಮಾಡೋದಿಕ್ಕೆ. ನಮಗೆ ಇವೆಲ್ಲ ಈಗ ಬೇಕೇ ಬೇಕು. ಸದ್ಯಕ್ಕೆ ಒಂದೊಂದಾಗಿಯೇ ಬಳಕೆ ಮಾಡುತ್ತಿದ್ದೇನೆ. ಮುಂದೆ ಅದು ಹೆಚ್ಚಾಗಬಹುದು.

ಸಿಕ್ರೆ ಇಂತಹ ಹುಡ್ಗಿ ಸಿಗ್ಬೇಕಪ್ಪಾ! 'ದಿಯಾ'ನೋಡಿದ್ರೇನೆ 'ಖುಷಿ'!

ಏಕಾಂತದಲ್ಲಿ ರೆಟ್ರೋ ಸಾಂಗ್‌

ಈ ಸಮಯದಲ್ಲಿ ಹೆಚ್ಚಿನವರು ಬೋರ್‌ ಆಗ್ತಿದೆ. ಒಂಟಿತನ ಕಾಡ್ತಿದೆ ಅಂತೆಲ್ಲ ಹೇಳುತ್ತಾರೆ. ಆದರೆ ಈ ಸಮಯದಲ್ಲೂ ನಾನು ಏಕಾಂಗಿ ಅಂತ ಅನಿಸಿಲ್ಲ. ಹಾಗೆಲ್ಲ ಒಬ್ಬಳೆ ಏಕಾಂತದಲ್ಲಿ ಕೂರುವ ಹುಡುಗಿಯೂ ನಾನಲ್ಲ. ಹಾಗೊಂದು ವೇಳೆ, ಮನೆಯಲ್ಲಿ ಯಾರು ಇಲ್ಲ, ಒಬ್ಬಳೇ ಇದ್ದೇನೆ ಅಂದ್ರೆ ಸಿನಿಮಾ ನೋಡುತ್ತಿರುತ್ತೇನೆ. ರೆಟ್ರೋ ಹಾಡು ಕೇಳುತ್ತಿರುತ್ತೇನೆ.

ಕೊರೋನಾ ಭೀತಿ ಹುಟ್ಟಿಸುತ್ತಿದೆ

ಈ ಸಮಯದಲ್ಲಿ ನನಗೆ ದುಃಖ ಅಥವಾ ಕಣ್ಣೀರು ತರಿಸಿದ ಘಟನೆ ಅಂತ ಯಾವುದು ಇಲ್ಲ. ಆದ್ರೆ ಈಗ ಒಂದ್ರೀತಿ ಭಯ ಶುರುವಾಗಿದೆ. ಕೊರೋನಾ ಹರಡುವ ರೀತಿ ನೋಡಿದ್ರೆ ನಿಜಕ್ಕೂ ಆತಂಕ ಎನಿಸುತ್ತದೆ.

ದಿಯಾ `ಖುಷಿ'ಯಾಗಿ ಮನಸು ತೆರೆದಾಗ

ಲಾಕ್‌ಡೌನ್‌ ಮುಗಿದಿದ್ದೇ ಸಿನಿಮಾದಲ್ಲಿ ಬ್ಯುಸಿ

ನಾನೀಗ ನಕ್ಷೆ ಅಂತ ಒಂದು ಸಿನಿಮಾ ಒಪ್ಪಿಕೊಂಡಿದ್ದೇನೆ. ಲಾಕ್‌ಡೌನ್‌ ಮುಗಿದರೆ ಆ ಸಿನಿಮಾದ ಕೆಲಸ ಶುರುವಾಗಲಿದೆ. ಅದರಲ್ಲೇ ಬ್ಯುಸಿ ಆಗುವ ಸಾಧ್ಯತೆಗಳು ಹೆಚ್ಚಿವೆ. ಸದ್ಯಕ್ಕೆ ಏನು ಅಂತ ಗೊತ್ತಿಲ್ಲ.